ಹುಡುಕಿದರೂ ಸಿಗುವುದಿಲ್ಲ

ತಂದೆಗೆ ಮಗು ಪ್ರೀತಿಯಿಂದ ನನಗೆ ಒಂದು ಗೊಂಬೆಯನ್ನು ಕೊಡಿಸಿ ಎಂದಾಗ ತಂದೆ ನನಗೆ ಸಂಬಳ ಬರಲಿ ನಾನು ನಿನಗೆ ಕೊಡಿಸುತ್ತೇನೆ ಎಂದು ಭರವಸೆ ನೀಡುತ್ತಾರೆ ಅದರಂತೆಯೇ ತಂದೆಗೆ ಸಂಬಳ ಬಂದ ನಂತರ ಒಂದು ದೊಡ್ಡ ಆಟದ ವಸ್ತುಗಳು ಇರುವ ಅಂಗಡಿಗೆ ಕರೆದುಕೊಂಡು ಹೋಗುತ್ತಾರೆ.

 ಅಲ್ಲಿ ಹೆಚ್ಚು ಕಡಿಮೆ ನಾಲ್ಕು ಸಾವಿರಕ್ಕಿಂತ ಹೆಚ್ಚು ಅಟಿಕೆಗಳು ಇರುತ್ತವೆ ನಿನಗೆ ಯಾವುದು ಬೇಕೋ ಅದನ್ನು ಆರಿಸಿಕೋ ಎಂದು ಮಗುವನ್ನು ಬಿಟ್ಟು ನನಗೆ ಸ್ವಲ್ಪ ಕೆಲಸವಿದೆ ಮುಗಿಸಿ ಬರುತ್ತೇನೆ ಅಲ್ಲಿಯವರೆಗೂ ನೀನು ಇಲ್ಲಿ ಇರುವ ಆಟಿಕೆಗಳಲ್ಲಿ ನಿನಗೆ ಇಷ್ಟವಾದುದನ್ನು ಆರಿಸಿಕೋ ಎಂದು ಬಿಟ್ಟು ಹೋಗುತ್ತಾರೆ.

ಎಷ್ಟೋ ಸಮಯದ ನಂತರ ತಂದೆಯವರು ಬಂದಾಗ ಕೌಂಟರ್ ಬಳಿ ಬಂದು ಬಿಲ್ಲು ಎಷ್ಟಾಗಿದೆ ಎಂದು ಕೇಳಿದಾಗ ಮಗು ಯಾವುದೂ ಆಟಿಕೆ ಖರೀದಿಸಿಲ್ಲ ಎಂದು ಹೇಳುತ್ತಾರೆ ಆಗ ತಂದೆಗೆ ದಿಗ್ಭ್ರಮೆಯಾಗುತ್ತದೆ ಮಗೂವಿಗೆ ಹೋಗಿ ಕೇಳುತ್ತಾರೆ.

ಪ್ರೀತಿಯ ಮಗಳೇ ನಿನಗೆ ಆಟಿಕೆ ವಸ್ತು ಇಷ್ಟವಾಗಲಿಲ್ಲವೇ ಎಂದಾಗ ಮಗು ಹೇಳುತ್ತೆ ನನಗೆ ಯಾವುದೇ ಒಂದು ಆಟಿಕೆ ಕೂಡಾ ಇಷ್ಟವಾಗಲಿಲ್ಲ ಏಕೆ ಎಂದು ಕೇಳಿದಾಗ ಮಗು ಹೇಳುತ್ತೆ ನನ್ನ ಹತ್ತಿರ ಒಂದು ಚಿಕ್ಕ ಡಬ್ಬ ಇದೆ ಆ ಡಬ್ಬಕ್ಕೆ ನಾನು ಯಾವ ಗೊಂಬೆಗಳು ನೋಡುತ್ತಿದ್ದರು ಅದಕ್ಕೆ ಸರಿ ಹೊಂದುತ್ತಿಲ್ಲ.

 ಸ್ವಲ್ಪ ಚಿಕ್ಕದಾಗುತ್ತಿದೆ ಅಥವಾ ದೊಡ್ಡದಾಗುತ್ತಿದೆ ಇದಕ್ಕೆ ಹೋಲುವಂಥ ಯಾವುದೇ ಒಂದು ಆಟಿಕೆ ಇಲ್ಲ ಎಂದು ಹೇಳುತ್ತಾಳೆ ಆಗ ತಂದೆಯವರು ಹೇಳುತ್ತಾರೆ ಮಗಳೆ ನಾವು ಅಂದುಕೊಂಡಂತೆ ಇರುವ ವಸ್ತು ಇಡೀ ಪ್ರಪಂಚದಲ್ಲಿ ಹುಡುಕಿದರೂ ಸಿಗುವುದಿಲ್ಲ.

 ಆದರೆ ಇರುವುದನ್ನು ನಾವು ಹೊಂದಾಣಿಕೆ ಮಾಡಿಕೊಂಡು ಹೋಗಬೇಕು ನಮ್ಮ ಕಲ್ಪನೆಗೆ ಇರುವಂತದ್ದು ಸಿಗುವುದಿಲ್ಲ ಆದರೆ ಸಿಕ್ಕಿರುವುದನ್ನು ನಮಗೆ ಬೇಕಾದಂತೆ ಅಥವಾ ಬದಲಿಸಿಕೊಂಡು ಹೊಂದಾಣಿಕೆ ಮಾಡಿಕೊಂಡು ಬದುಕಬೇಕು ಎಂದು ಹೇಳುತ್ತಾರೆ

  ಒಂದು ವಾರದಲ್ಲಿ ಸಾಯುವೆ

ಒಂದು ಊರಿನಲ್ಲಿ ಒಂದು ಆಶ್ರಮವಿತ್ತು ಅಲ್ಲೆ ಬಾಬಾ ಅವರು ಇದ್ದರು ದಿನನಿತ್ಯವೂ ಪ್ರವಚನ ನಡೆಯುತ್ತಿತ್ತು ಅದನ್ನು ಕೇಳಿ ಹಲವಾರು ಜನ ತಮ್ಮ ಕಷ್ಟ ನಷ್ಟಗಳನ್ನು ಮರೆಯುತ್ತಿದ್ದರು ಇದನ್ನು ತಿಳಿದಿದ್ದ ಒಬ್ಬ ಶ್ರೀಮಂತನಿಗೆ ನಾನೂ ಕೂಡ ಜ್ಞಾನಿಯಾಗಬೇಕೆಂದು ಎಂದು ಯೋಚಿಸಿ ಬಾಬಾ ಅವರ ಬಳಿಗೆ ಹೋಗಿ ಕಾಲು ಮುಗಿದು ನನ್ನನ್ನು ಜ್ಞಾನೋದಯ ಬರುವಂತೆ ಮಾಡಿ ಎಂದು ಕಳಕಳಿಯಿಂದ ಕೇಳಿದನು.

 ಆಗ ಬಾಬಾ ಅವರು ಜ್ಞಾನೋದಯ ಒಂದೇ ಸಾರಿಗೆ ಬರುವಂತಹದ್ದಲ್ಲ ಅದು ಸ್ವಲ್ಪ ಸ್ವಲ್ಪವಾಗಿ ಬರುವಂತದ್ದು ಶ್ರೀಮಂತ ಇಲ್ಲ ಇಲ್ಲ ನೀವು ನನಗೆ ಒಂದೇ ಸಾರಿಗೆ ಜ್ಞಾನೋದಯವಾಗುವಂತೆ ಮಾಡಲೇಬೇಕು ಎಂದು ಹಟ ಹಿಡಿದನು.

 ಆಗ ದೀರ್ಘವಾಗಿ ಒಂದು ಸಾರಿ ನೋಡಿ ಬಾಬಾ ಅವರು ನೋಡು ನೀನು ತುಂಬಾ ನಿಧಾನವಾಗಿ ಬಂದಿದೀಯಾ ಹಲವು ವರ್ಷಗಳ ಮುಂಚೆ ಬರಬೇಕಾಗಿತ್ತು ಇರಲಿ ಇನ್ನು ನೀನೂ ಒಂದು ವಾರದಲ್ಲಿ ಸಾಯುವೆ ಎಂದು ಹೇಳಿದರು ಅಷ್ಟೆ ಇನ್ನೇನು ಹೇಳಬೇಕೆಂದು ಇದ್ದರು ಆದರೆ ಇದನ್ನು ಕೇಳಿದ ಆ ಶ್ರೀಮಂತ ಬಾಬಾ ಅವರನ್ನು ನಮಸ್ಕರಿಸುವುದನ್ನು ಮರೆತು ಅಲ್ಲಿಂದ ಹುಚ್ಚನಂತೆ ತಲೆಕೆರೆದುಕೊಂಡು ಆತಂಕದಿಂದ ದಿಕ್ಕು ದೆಸೆ ಇಲ್ಲದೆ ಮನೆಗೆ ಹೋದನು.

 ಮೊಟ್ಟಮೊದಲು ಮನೆಗೆ ಹೋದ ಶ್ರೀಮಂತನಿಗೆ ಎದೆ ಬಡಿತ ಹೆಚ್ಚಾಯಿತು ಮನೆಯವರನ್ನು ಚಿಂತೆಗೆ ಈಡು ಮಾಡಿದನು ಯಾರು ಏನು ಸಮಾಧಾನ ಮಾಡಿದರೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ ಸರಿಯಾಗಿ ಊಟ, ನಿದ್ದೆ, ಯಾರೊಂದಿಗೂ ಮಾತುಕತೆ ಇಲ್ಲ ಯಾರು ಏನು ಹೇಳಿದರೂ ಕೇಳುವ ಗೋಜಿಗೆ ಹೋಗಲಿಲ್ಲ.

 ಹೀಗೆ ಆರು ದಿನಗಳು ಕಳೆದನು ನಂತರ ಯೋಚಿಸಿದನು ದೇವರನ್ನು ಸ್ಮರಿಸಿ ಧ್ಯಾನಕ್ಕೆ ಕುಳಿತನು ಯಾವ ಕ್ಷಣದಲ್ಲಿ ಬೇಕಾದರೂ ನನಗೆ ಸಾವು ಬರಬಹುದು ಎಂದು ಇವನ ಮನಸ್ಥಿತಿಯೇ ಬದಲಾಗಿಬಿಟ್ಟಿತು ಹೀಗೆ ಧ್ಯಾನದಲ್ಲೇ ಎರಡು ದಿನ ಕಳೆದುಬಿಟ್ಟವು ಆದರೆ ಇವನಿಗೆ ಸಾವು ಬರಲೇ ಇಲ್ಲ ಆಗ ನಂತರ ಬಾಬಾ ಅವರ ಬಳಿಗೆ ಹೋದನು ಬಾಬಾ ಅವರೇ ನೀವು ನನಗೆ ಹೇಳಿದ್ದೀರಿ ನಾನು ಒಂದು ವಾರದಲ್ಲಿ ಸಾಯುತ್ತೇನೆ ಎಂದು ಆದರೆ ನಾನು ಸಾಯಲಿಲ್ಲವಲ್ಲ ಎಂದನು.

 ಅದಕ್ಕೆ ಬಾಬಾ ಅವರು ಹೇಳಿದರು ನೀನು ಒಂದು ವಾರದಲ್ಲಿ ಏನಾದರೂ ಕೆಟ್ಟ ಕೆಲಸಗಳು ಮಾಡಿದ್ದೀಯಾ ಎಂದರು ಶ್ರೀಮಂತ ಹೇಳಿದ ಇಲ್ಲ ನಾನು ಒಂದು ಕೆಟ್ಟ ಯೋಚನೆಯೂ ಮಾಡಿಲ್ಲ ಸಾವು ನನ್ನ ಕಣ್ಣಿನ ಮುಂದೆ ಇರಬೇಕಾದರೆ ನಾನು ಹೇಗೆ ಯೋಚನೆ ಮಾಡಲಿ ಎಂದು ಹೇಳಿದನು.

  ಆಗ ಬಾಬಾ ಇದೆ ಸಾರ್ಥಕ ಜೀವನ ನಡೆಸಲು ಬೇಕಾದ ಅತ್ಯಅಮೂಲ್ಯ ಪಾಠ ಎಂದು ಹೇಳಿದರು. ಶ್ರೀಮಂತನು ಈಗ ಬದುಕಿನ ಒಂದು ಪಾಠವನ್ನು ಅರ್ಥಮಾಡಿಕೊಂಡನು ಇದು ಎಲ್ಲರಿಗೂ ಅನ್ವಯವಾಗುತ್ತದೆ.

 ನಾವು ಕೂಡ ಅಷ್ಟೆ ಬದುಕಿದರೆ ನಮಗೆ ಇಂದೇ ಕೊನೆಯ ದಿನ ಇದೆಯೆಂದು ಬದುಕಿದ್ದಾಗ ನಮ್ಮಲ್ಲೂ ಕೆಟ್ಟ ಯೋಚನೆಗಳು ಕೆಟ್ಟ ವಿಚಾರಗಳು ಬರುವುದಿಲ್ಲ ನಮ್ಮ ಮನಸ್ಸು ಯಾವಾಗಲೂ ನಿರ್ಮಲವಾಗಿರುವಂತೆ ಎಚ್ಚರಿಕೆ ವಹಿಸೋಣ.

ಬೇರೆ ಕಡೆ ಎಲ್ಲಾದರೂ ಬೇಡಿಕೋಳಿ

ಒಂದು ಊರಿನಲ್ಲಿ ಶ್ರೀಮಂತ ಕುಟುಂಬವಿತ್ತು ಶ್ರೀಮಂತನು ತನ್ನ ಮಗನಿಗೆ ಅದ್ಧೂರಿಯಾಗಿ ಮದುವೆ ಮಾಡಿಕೊಂಡು ಬಂದಿದ್ದರು ಮನೆಯಲ್ಲಿ ಚೆನ್ನಾಗಿ ಹೊಂದಿಕೊಂಡು ಎಲ್ಲರೂ ಸುಖವಾಗಿ ಬಾಳುತ್ತಿದ್ದರು ಶ್ರೀಮಂತನು ಒಂದು ಹಬ್ಬದ ದಿನದಂದು ರಾಜಾನ್ನ ಭೋಜನವನ್ನು ಬಿಸಿಬಿಸಿಯಾಗಿ ಊಟವನ್ನು ತಿನ್ನುತ್ತಿದ್ದಾರೆ ಘಮಘಮ ವಾಸನೆ ಬರುತ್ತಿದೆ.

 ಆಗ ಮನೆಯ ಆಚೆ ಒಂದು ಭಿಕ್ಷುಕಿ ಬಂದು ಅಮ್ಮಾ ನನಗೆ ತುಂಬಾ ಹೊಟ್ಟೆ ಹಸಿಯುತ್ತಿದೆ ಏನಾದರೂ ಸ್ವಲ್ಪ ಊಟ ಕೊಡಿ ಎಂದು ಬೇಡಿದಳು ಸೊಸೆ ಬಂದು ಆಚೆ ನೋಡಿದಾಗ ಇವಳ ಸ್ಥಿತಿಯು ಹಸಿದಿರುವುದು ಮುಖದಲ್ಲಿ ಎದ್ದು ಕಾಣುತ್ತಿತ್ತು

ಮಾವನಿಗೆ ನೋಡಿದರೆ ಮಾವ ಊಟದಲ್ಲಿ ರುಚಿ ಕಂಡು ಊಟದಲ್ಲಿ ಮುಳುಗಿದ್ದಾರೆ.

 ಹಾಗೆಂದು ಸೊಸೆ ತಾನೆ ತೆಗೆದುಕೊಂಡಿ ಹೋಗಿ ಕೊಡುವ ಅಧಿಕಾರವೂ ಇಲ್ಲ ಏಕೆಂದರೆ ಹೊಸದಾಗಿ ಮದುವೆ ಆಗಿದ್ದಾಳೆ ಭಿಕ್ಷುಕಿಯೋ ಕೂಡ ಮಾಲೀಕರು ಭಕ್ಷ ಭೋಜನ  ತಿನ್ನುತ್ತಿರುವುದನ್ನು ಕಣ್ಣಾರೆ ನೋಡುತ್ತಿದ್ದಾಳೆ ಮತ್ತೆ ಭಿಕ್ಷುಕಿ ಅಮ್ಮ ಏನಾದರೂ ಸ್ವಲ್ಪ ಊಟ ನೀಡಿ ನಿಮಗೆ ಧರ್ಮ ಬರುತ್ತದೆ ಎಂದು ಅಂಗಲಾಚಿದಳು.

 ಸೊಸೆಗೆ ಯಾವುದೇ ಕಾರಣಕ್ಕೂ ತಡೆಯಲು ಸಾಧ್ಯವಾಗಲಿಲ್ಲ ಆಗ ಸೊಸೆಯಾದವಳು ಹೇಳಿದಳು ನಿನ್ನೆ ಮೊನ್ನೆಯ ತಂಗಳು ಊಟ ತಿನ್ನುತ್ತಿದ್ದಾರೆ ತಂಗಳು ಹಳಿಸಿದ್ದು ಇತರರಿಗೆ ಕೊಡಬಾರದು ಮತ್ತೆ ಇಲ್ಲಿ ಯಾರಿಗೂ ಕೇಳಿಸುವುದಿಲ್ಲ ಆದ್ದರಿಂದ ನೀವು ಮುಂದೆ ಹೋಗಿ ಬೇರೆ ಕಡೆ ಎಲ್ಲಾದರೂ ಬೇಡಿಕೋಳಿ ಎಂದಳು.

 ಈ ಮಾತನ್ನು ಕೇಳಿ ಮಾವ ಕೆಂಡಮಂಡಲವಾದರೂ ನಾನು ಹಳಸಿದ ಅನ್ನ ತಿನ್ನುತ್ತಿದ್ದೀನಾ ನನ್ನನ್ನು ಅವಮಾನ ಮಾಡುತ್ತಿದ್ದೀಯಾ ಮತ್ತೆ ಕಿವುಡ ಎಂದು ಬೇರೆ ಹೇಳಿದ್ದೆಲ್ಲಾ ನಿನಗೆಷ್ಟು ಕೊಬ್ಬು ಎಂದು ರೇಗಾಡಿದರು.

 ಎಲ್ಲವನ್ನೂ ಕೇಳಿಸಿಕೊಂಡ ನಂತರ ಸೊಸೆ ವಿನಮ್ರವಾಗಿ ನೀವು ಈಗ ತಿನ್ನುತ್ತಿರುವ ಅನ್ನ ನಿಮ್ಮ ತಂದೆ, ತಾತಂದಿರು ಸಂಪಾದನೆ ಮಾಡಿಟ್ಟು ಹೋಗಿದ್ದು ಅಲ್ಲವೇ ಎಂದಳು ಹಾಗಾದರೆ ಈ ಎಲ್ಲ ಆಸ್ತಿಯೂ ತಂಗಳು ಅಲ್ಲವೇ ಇದರಲ್ಲಿ ನೀವು ಏನನ್ನು ಗಳಿಸಿದ್ದೀರಾ ಎಂದು ಕೇಳಿದಳು.

ನಂತರ ನಮಗೆ ಏನೂ ಇಲ್ಲವೆಂದರೆ ಯಾರಿಗೂ ಏನೂ ಕೊಡುವುದು ಬೇಡ ನಮಗೆ ಸಾಕಷ್ಟು ಇದೆ ನಮ್ಮ ಅಜ್ಜ ಅಜ್ಜಿಯಂದಿರು ಬೇಕಾದಷ್ಟು ಬಿಟ್ಟು ಹೋಗಿದ್ದಾರೆ ಅಲ್ಲವೇ ಎಂದು ಹೇಳಿದಳು ಹಾಗಾಗಿ ನಾವು ಊಟ ಮಾಡುತ್ತಿರುವುದು ತಂಗಳೇ ಅಲ್ಲವೇ ಎಂದು ಹೇಳಿದಳು.

 ಆಗ ಮಾವನಿಗೆ ಅರ್ಥವಾಯಿತು ಮತ್ತೆ ಒಬ್ಬ ಭಿಕ್ಷುಕಿ ಬಂದು ಊಟ ನೀಡಿ ಎಂದು ಕೇಳುತ್ತಿದ್ದರು ನೀವು ಕೊಡುತ್ತಿಲ್ಲ ಅದಕ್ಕೆ ನಾನು ನಿಮ್ಮನ್ನು ಕುರುಡರು, ಕಿವುಡರು ಎಂದು ಹೇಳಿದೆ ಎಂದು ವಿವರಿಸಿದಳು ಭಯಂಕರವಾಗಿ ಕೋಪಗೊಂಡಿದ್ದ ಶ್ರೀಮಂತನು ನಿಧಾನವಾಗಿ ಹೇಳಿದ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿದನು ನಂತರ ಬೆಣ್ಣೆಯಂತೆ ಕರಗಿದನು.

 ನೀನು ಹೇಳಿದ್ದು ಕೂಡ ಸರಿಯಾಗಿದೆ ನಾನು ಎಲ್ಲೋ ಎಡವಿದೆ ಎಂದು ನಂತರ ಊಟ ಮಾಡುವುದನ್ನು ಬಿಟ್ಟು ಮತ್ತೆ ಆ ಭಿಕ್ಷುಕಿಯನ್ನು ಕರೆದು ಹೊಟ್ಟೆ ತುಂಬ ಊಟ ಮಾಡಿಸಿ ಕಳಿಸಿದ್ದರು.

 ಕೆಲವು ಸಾರಿ ಯಾರೋ ಏನೋ ಕಷ್ಟಗಳು ಎಂದು ಕೇಳಿದಾಗ ನಾವು ಕೇಳಿಸಿಕೊಳ್ಳುವುದೇ ಇಲ್ಲ ನಮಗೆ ಕಷ್ಟ ಬಂದಾಗ ಇತರರು ಕೂಡ ನಮ್ಮ ಕಷ್ಟ ಹಾಗೆ ಕೇಳಿಸಿಕೊಳ್ಳುವುದಿಲ್ಲ ದಾನಗಳಲ್ಲಿ ಅತಿ ಶ್ರೇಷ್ಠವಾದ ದಾನ ಅನ್ನದಾನ ಸದಾ ನೆನಪಿನಲ್ಲಿಡೋಣ ಆದ್ದರಿಂದ ನಮಗೆ ಎಷ್ಟು ಸಾಧ್ಯವೋ ಅಷ್ಟನ್ನು ನಾವು ಅಲ್ಪಸ್ವಲ್ಪದಾನ ಮಾಡುತ್ತಿರೋಣ.

  ಕೋಪದಿಂದ ಕೆಂಡವಾಗಿರುತ್ತೀರಿ

ಒಬ್ಬ ಕೋಪಿಷ್ಟ ಪಂಡಿತರು ಇರುತ್ತಾರೆ ಅವರು ಹಲವಾರು ವಿದ್ಯೆಗಳನ್ನು ಕಲಿತು ಸಕಲ ಶಾಸ್ತ್ರಗಳಲ್ಲಿ ಪರಿಣಿತಿ ಪಡೆದಿರುತ್ತಾರೆ ಒಂದು ದಿನ ಪಂಡಿತರು ಗಂಗಾ ನದಿಯಲ್ಲಿ ಸ್ನಾನ ಮಾಡಲೆಂದು ಹೋದರು ಅದೇ ಸಮಯಕ್ಕೆ ಒಬ್ಬ ದಲಿತ ವರ್ಗಕ್ಕೆ ಸೇರಿದ ಒಬ್ಬ ಚರ್ಮದ ವ್ಯಾಪಾರಿ ತನ್ನ ಒಣಗಿದ ಚರ್ಮಗಳನ್ನು ನೀರಿನಲ್ಲಿ ನೆನೆಹಾಕಲು ಆ ನದಿಗೆ ಬಂದನು.

ಚರ್ಮದ ವ್ಯಾಪಾರಿ ಚರ್ಮಗಳನ್ನು ನೆನೆಸಿ ತೊಳೆದು ಒಂದು ಕಡೆ ಇಡುತ್ತಿದ್ದನು ಹಾಗೆ ಅದೇ ದಾರಿಯಲ್ಲಿ ಈ ಪಂಡಿತರು ಕೂಡ ಹೋಗಬೇಕಾದರೆ ಆಕಸ್ಮಿಕವಾಗಿ ಆ ಚರ್ಮ ತೊಳೆಯುತ್ತಿರುವಾಗ ನೀರಿನ ಎರಡು ಹನಿಗಳು ಈ ಪಂಡಿತರ ಮೇಲೆ ಬಿದ್ದವು ಪಂಡಿತರು ಆಗ ವಿಶ್ವರೂಪ ತಾಳಿ ಸಿಟ್ಟಿನಿಂದ ಹೇಳಿದರು.

 ಎಲೈ ಚಿಕ್ಕ ಮನುಷ್ಯನೇ ನೀನು ಮಾಡಿದ ಅಪರಾಧ ಏನು ಗೊತ್ತೆ ಎಂದರು ಚರ್ಮದ ವ್ಯಾಪರಿಯು ಗಾಬರಿಯಿಂದ ನಡುಗುತ್ತಾ ನಾನು ಏನು ಮಾಡಿದೆ ಎಂದು ವಿನಮ್ರವಾಗಿ ಕೇಳಿದನ್ನು ಆಗ ಪಂಡಿತರು ನೀನು ನಾಶವಾಗಿ ಹೋಗು ಎಂದು ಶಾಪ ಹಾಕಿದರು.

 ಏಕೆ ನನಗೆ ಈ ರೀತಿ ಶಾಪ ಹಾಕಿದಿರಿ ಎಂದು ಹೇಳಿದರೆ ನಿನ್ನಿಂದ ನಾನು ಅಶುದ್ಧ ನಾದೆ ಮತ್ತೆ ನಾನು ಮತ್ತೆ ಸ್ನಾನ ಮಾಡಬೇಕು ನನ್ನ ಮಡಿಯೆಲ್ಲವೂ ಹೋಯಿತು ಎಲವೋ ಪಾಪಿ ಎಂದು ಬೈದರು ಆಗ ಚರ್ಮದ ವ್ಯಾಪಾರಿಯು ವಿನಮ್ರವಾಗಿ ಹೇಳಿದ ನಾನು ತಪ್ಪು ಮಾಡಿದ್ದರೆ ಕ್ಷಮೆ ಇರಲಿ.

 ಪಂಡಿತರೇ ಈ ಚರ್ಮಗಳಿಂದ ಉದುರಿದ ನೀರಿನ ಹನಿಗಳು ನಿಮ್ಮ ಶರೀರದ ಮಡಿ ಹಾಳಾಗಿದೆ ಎಂದರೆ ಈಗ ನಾನೇ ಸ್ನಾನ ಮಾಡಿ  ಸ್ವಚ್ಛವಾಗಬೇಕಿದೆ  ಏಕೆಂದರೆ ಕೋಪ ಅನ್ನುವುದು ತುಂಬಾ ಕೀಳು ಮಟ್ಟದು ಬೆಂಕಿ ಇದ್ದಂತೆ ಬೆಂಕಿಯನ್ನು ಯಾರು ಹಿಡಿದಿರತ್ತಾರೂ ಅವರಿಗೂ ಯಾರ ಮೇಲೆ ಹಾಕುತ್ತಾರೂ ಅವರಿಗೂ ಸುಡುತ್ತದೆ.

ಕೋಪದ ಛಾಯೆ ನನ್ನ ಮೇಲೆ ಬಿದ್ದಿದೆ ಎಂದರೆ ನಾನೇ ಮೊದಲು ಸ್ನಾನ ಮಾಡಿ ಪರಿಶುದ್ಧನಾಗುತ್ತೇನೆ ಮತ್ತೆ ನಿಮ್ಮನ್ನು ನೋಡಿದರೆ ತುಂಬಾ ಓದಿ ಪಾರಂಗತ ಮಾಡಿದ ವಿದ್ವಾಂಸರಂತೆಯೇ ಕಾಣುತ್ತಿದ್ದೀರಿ.

 ಕೋಪವನ್ನು ಹೇಗೆ ಹಿಡಿತದಲ್ಲಿ ಇರಬೇಕು ಎಂದು ತಾವು ಕಲಿತಿರುವವರು ಹಾಗೆ ಇತರರಿಗೆ ಕಲಿಸುವವರು ನೀವೇ ಕೋಪದಿಂದ ಕೆಂಡವಾಗಿರುತ್ತೀರಿ ನೀವೇ ಹೀಗೆ ವರ್ತಿಸಿದರೆ ನಿಮ್ಮ ಬಳಿಬರುವ ಶಿಷ್ಯಂದಿರು ಏನು ಕಲಿಯುತ್ತಾರೆ ಎಂದು ಹೇಳಿದನು ಆಗ ಪಂಡಿತರಿಗೆ  ಪಂಡಿತರು ನಾಚಿಕೆಯಿಂದ ತಲೆ ಬಗ್ಗಿಸಿದರು ನಾನು ಕೋಪ ಮಾಡಿಕೊಳ್ಳಬಾರದು ಎಂದು ಅರ್ಥಮಾಡಿಕೊಂಡರು.

ಪ್ರಪಂಚದಿಂದ ಬಿಡುಗಡೆ ಹೊಂದೋಣ

ಒಬ್ಬ ಹಿರಿಯ ವ್ಯಕ್ತಿ ಹಲವಾರು ವರ್ಷಗಳಿಂದ ಪ್ರಾರ್ಥನಾ ಮಂದಿರಕ್ಕೆ ಬರುತ್ತಿದ್ದರು. ಈ ಹಿರಿಯ ವ್ಯಕ್ತಿಗೆ ನೂರು ವರ್ಷ ತುಂಬಿತು ಅದಕ್ಕಾಗಿ ಶತಾಯುಷಿ ಎಂದು ಎಲ್ಲಾ ಮಂದಿರದವರು ಸೇರಿ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಿದರು ಹಿರಿಯ ವ್ಯಕ್ತಿ ಜನ್ಮ ದಿನದ ಆಚರಣೆಯ ನಂತರ ಮಂದಿರಕ್ಕೆ ಬರುವುದನ್ನೇ ನಿಲ್ಲಿಸಿದರು.

 ಏಕೆ ಬರುತ್ತಿಲ್ಲ ಎಂದು ಕೆಲವರು ಯೋಚನೆ ಮಾಡಿದರು ನಾಲ್ಕು ವಾರಗಳು ಕಳೆದರು ಬರಲಿಲ್ಲ ಆಗ ಹಿರಿಯ ವ್ಯಕ್ತಿಯನ್ನು ಹೋಗಿ ವಿಚಾರಿಸಿದರು ಹಿರಿಯರೇ ನಿಮ್ಮ ಆರೋಗ್ಯ ಹೇಗಿದೆ ಎಂದಾಗ ಆ ವ್ಯಕ್ತಿ ನನ್ನ ಆರೋಗ್ಯ ಚೆನ್ನಾಗಿದೆ ಎಂದು ಸ್ವಲ್ಪ ಗಟ್ಟಿಯಾಗಿ ಹೇಳಿದರು.

 ಏಕೆ ಹೀಗೆ ಹೇಳುತ್ತಿದ್ದಾರೆ ಎಂದು ವಿನಮ್ರವಾಗಿ ಕೇಳಿದಾಗ ಹಿರಿಯ ವ್ಯಕ್ತಿ ಹೇಳಿದರು ನಾನು ಸುಮಾರು 60 ವರ್ಷದ ನಂತರದಿಂದ ದಿನನಿತ್ಯ ಮಂದಿರಕ್ಕೆ ಪ್ರಾರ್ಥನೆಗಾಗಿ ಬರುತ್ತಿದ್ದೇನೆ ನಾನು ಪ್ರಾರ್ಥನೆಗೆ ಬರುತ್ತಿದ್ದ ಉದ್ದೇಶ ಏನೆಂದರೆ ಆದಷ್ಟು ಬೇಗ ಈ ಪ್ರಪಂಚದಿಂದ ಬಿಡುಗಡೆ ಹೊಂದೋಣ.

ನನ್ನನ್ನು ದೇವರು ಕರೆದುಕೊಳ್ಳಲಿ ಎಂದು ಆದರೆ 80 90 100 ವರ್ಷವಾದರೂ ನನಗೆ ದೇವರು ಕರೆದುಕೊಳ್ಳುತ್ತಿಲ್ಲ ಆದುದರಿಂದ ನಾನು ಪ್ರಾರ್ಥನೆಗೆ ಬರುತ್ತಿಲ್ಲ ಎಂದು ಅವರ ಮನಸ್ಸಿನಲ್ಲಿ ಕಾಡುತ್ತಿದ್ದ ದುಃಖವನ್ನು ವ್ಯಕ್ತಪಡಿಸಿದರು ಮತ್ತೆ ಸಮಾಧಾನ ಮಾಡಿಕೊಂಡು ಈಗ ನೀವು ಹುಡುಕಿಕೊಂಡು ಬಂದ ಮೇಲೆ ನನಗೆ  ಮರಣ ಹುಡುಕಿಕೊಂಡು ಬರಬಹುದು ಎಂದು ಸಮಾಧಾನದಿಂದ ಹೇಳಿದರು.

Leave a Comment