ಹಡಗಿಗೆ ತೂತು ಮಾಡಿದನು

ಬಹಳಷ್ಟು ವರ್ಷಗಳ ಹಿಂದೆ ಈ ದೇಶದಿಂದ ವಿದೇಶಕ್ಕೆ ಹೋಗಬೇಕಾದರೆ ಹಡಗಿನಲ್ಲಿ ಮಾತ್ರ ಪ್ರಯಾಣಿಸಬೇಕಾಗಿತ್ತು  ಒಂದು ಸಾರಿ ಎಲ್ಲಾ ಪ್ರಯಾಣಿಕರು ಹಡಗಿನ ಒಳಗೆ ಬಂದರು ಪ್ರತಿಯೊಂದು ಧರ್ಮದವರು ಒಂದೊಂದು  ಕೊಠಡಿಯಲ್ಲಿ ಇರಲು ಆರಂಭಿಸಿದರು ಮುಸಲ್ಮಾನರು ಒಂದು ಕೊಠಡಿಯಲ್ಲಿ ಉಳಿದರು.

ಮತ್ತೊಂದು ಕೊಠಡಿಯಲ್ಲಿ ಹಿಂದುಗಳು ಉಳಿದರು ಇನ್ನೊಂದು ಕೊಠಡಿಯಲ್ಲಿ ಕ್ರೈಸ್ತರು,  ಬೌದ್ಧರು, ಸಿಕ್ಕರು ,ಜೈನರು. ಹೀಗೆ ಒಂದೊಂದು ಧರ್ಮದವರು ಒಂದೊಂದು ಕೊಠಡಿಯಲ್ಲಿ ಉಳಿದರು ಪ್ರತಿಧರ್ಮದವರು ಅವರದೇ ಆದ ಆಚರಣೆಗಳನ್ನು ಆಚರಿಸುತ್ತಿದ್ದರು.

 ಹಿಂದುಗಳು ಬ್ರಹ್ಮ ಮುಹೂರ್ತದಲ್ಲಿ ಎದ್ದು ಜಪ ಮಾಡುವುದು ಪ್ರಾರ್ಥನೆ ಭಜನೆ ಮಾಡುವುದು ಸೂರ್ಯ ಉದಯಿಸುತ್ತಿದ್ದಂತೆ ಸೂರ್ಯ ನಮಸ್ಕಾರ ಮಾಡುವುದು  ಮುಸಲ್ಮಾನರು ಸಮಯಕ್ಕೆ ಸರಿಯಾಗಿ ನಮಾಜ್ ಮಾಡುವುದು ಉಪವಾಸ ಆಚರಿಸುವುದು  ಕ್ರೈಸ್ತರು  ಪ್ರಾರ್ಥನೆ ಮಾಡುವುದು ಹೀಗೆ ಪ್ರತಿಯೊಂದು ಧರ್ಮದವರು ಅವರದೇ ಆದ ರೀತಿಯಲ್ಲಿ  ದೇವರನ್ನು ಧ್ಯಾನಿಸುತ್ತಿದ್ದರು ಪೂಜಿಸುತ್ತಿದ್ದರು.

  ಹಡಗಿನಲ್ಲಿ ಒಬ್ಬ ಕಿಡಿಗೇಡಿ ಇದ್ದನು ಇವನು ಒಂದು ಕಡೆಯಿಂದ ಯಾವ ಯಾವ ಧರ್ಮವಾದವರು ಯಾವ ರೀತಿ ಆಚರಣೆ ಮಾಡುತ್ತಿದ್ದಾರೆ ಎಂದು ಗಮನಿಸಿದನು ಪ್ರತಿಯೊಬ್ಬರು ಅವರದೇ ಆದ ರೀತಿಯಲ್ಲಿ ಆಚರಿಸುತ್ತಿದ್ದಾರೆ ಒಂದು ಧರ್ಮದವರಿಗೆ ಹೇಳಿದ ನೀವು ಮಾಡುತ್ತಿರುವುದು ತಪ್ಪು. ನಾವು ಮಾಡುತ್ತಿರುವುದೇ ಸರಿ ಎಂದು ವಾದ ಮಾಡಿದನು.

 ಬೇರೆ ದರ್ಮದವರು ಇಲ್ಲ ನಾವು ಬಹಳಷ್ಟು ವರ್ಷಗಳ ಕಾಲದಿಂದ ಪಾಲನೆ ಮಾಡುತ್ತಾ ಬಂದಿದ್ದೇವೆ ಇದರಲ್ಲೇ ನಾವು ಸದ್ಗತಿಯನ್ನು ಹೊಂದುತ್ತೇವೆ ಎಂದು ವಿನಯವಾಗಿ ಹೇಳಿದರು ಕಿಡಿಗೇಡಿ ಕೇಳಲಿಲ್ಲ ನಾನು ಮಾಡುವುದೇ ಸರಿ ನನ್ನಂತೆ ನೀವು ಮಾಡಬೇಕು ಎಂದು ವಾದಿಸಿದನು.

 ಬೇರೆ  ಧರ್ಮದವರು ನೀನು ನಿನ್ನ ರೀತಿಯಲ್ಲಿ ಬದುಕು ನಾವು ನಮ್ಮ ರೀತಿಯಲ್ಲಿ ಬದುಕುತ್ತೇವೆ ಎಂದು ಹೇಳಿದರು ಕಿಡಿಗೇಡಿ ಇದ್ದವನು ಯೋಚನೆ ಮಾಡಿದ ಈ ಒಂದು ಧರ್ಮದವರು ನನಗೆ ಇಷ್ಟವಿಲ್ಲ ನಮ್ಮ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಆದ್ದರಿಂದ ಇವರನ್ನು ಏನಾದರೂ ಮಾಡಿ ಗತಿ ಕಾಣಿಸಬೇಕು ಎಂದು ಒಂದು ದುಷ್ಟ ಚಿಂತನೆ ಮಾಡಿದನು.

ಸೂರ್ಯ ಮುಳುಗುವಾಗ ಕೆಂಪು ಸೂರ್ಯನಾಗಿ ಕಾಣುತ್ತಾನೆ ನೋಡಲು ರೋಮಾಂಚನವಾಗುತ್ತದೆ ಹಾಗಾಗಿ ಎಲ್ಲರೂ ಕೋಣೆಯಿಂದ ಹೊರಬಂದು ವೀಕ್ಷಿಸುತ್ತಿರುತ್ತಾರೆ ಆಗ ನಾನು ಆ ಧರ್ಮದವರ ಕೊಠಡಿಗೆ ಒಂದು ತೂತು ಮಾಡಿಬಿಟ್ಟರೆ ಅವರು ಸಾಯುತ್ತಾರೆ ಎಂದು ಯೋಚನೆ ಮಾಡಿ ಎಲ್ಲರೂ ಕೊಠಡಿಯಿಂದ ಹೊರಗೆ ಹೋದಾಗ ಕೊಠಡಿಗೆ ಚಿಕ್ಕದಾದ ತೂತು ಮಾಡುತ್ತಾನೆ.

ಕಿಡಿಗೇಡಿ ಆಲೋಚನೆ ಕೊಠಡಿಗೆ ನಾನು ತೂತನ್ನು ಮಾಡಿದರೆ ಅವರು ಮಾತ್ರ ಸಾಯುತ್ತಾರೆ ಎಂದು ನಂಬಿರುತ್ತಾನೆ ಹಡಗಿನಲ್ಲಿ ನೀರು ಬರಲು ಆರಂಭವಾದರೆ ಇಡೀ ಹಡಗು  ಮುಳುಗುತ್ತದೆ ಎಂಬ ಆಲೋಚನೆ ಅವನಿಗಿಲ್ಲ ಹಡಗು ಎನ್ನುವುದು ಒಂದು ಪ್ರಪಂಚ ವಿದ್ದಂತೆ ದೇಶವಿದ್ದಂತೆ ರಾಜ್ಯವಿದ್ದಂತೆ ಜಿಲ್ಲೆ ಇದ್ದಂತೆ  ಇನ್ನೊಬ್ಬರಿಗೆ ನಾನು ಕೇಡನ್ನು ಮಾಡುತ್ತೇನೆ ಎಂದಾಗ ಆ ಕೇಡು ನನಗೂ ಸಂಭವಿಸುತ್ತದೆ. ನಾನು ಎಲ್ಲರನ್ನೂ ಸಮನಾಗಿ ನೋಡುತ್ತೇನೆಯೇ?

 ವಸ್ತುಗಳನ್ನು ನೋಡಿ ಹೀಯಾಳಿಸಿದನು

ಒಂದು ಹಳ್ಳಿಯಲ್ಲಿ ಒಬ್ಬ ಶ್ರೀಮಂತ ಹಾಗೂ ಇನ್ನೊಬ್ಬ ಬಡವ ಇದ್ದನು ಒಂದು ಸಾರಿ ಸಂತೆಗೆ ಹೋಗಿದ್ದಾಗ ಇಬ್ಬರು ವಸ್ತುಗಳನ್ನು ತರಲಿಕ್ಕೆ ಹೋಗಿದ್ದರು ಶ್ರೀಮಂತನ ಬಹಳಷ್ಟು ದುಬಾರಿಯಾದ ವಸ್ತುಗಳನ್ನು ಖರೀದಿ ಮಾಡಿದನು ಬಡವನು ಸಾಮಾನ್ಯ ವಸ್ತುಗಳನ್ನು ಖರೀದಿ ಮಾಡಿದನು.

ಶ್ರೀಮಂತನು ಬಡವನಿಗೆ ವಸ್ತುಗಳನ್ನು ನೋಡಿ ಹೀಯಾಳಿಸಿದನು ನೋಡು ನಾನು ಬೆಲೆಬಾಳುವ ಸಾಮಾನುಗಳನ್ನು ಖರೀದಿ ಮಾಡಿದ್ದೇನೆ ನೀನು ಸಾಮಾನ್ಯ ವಸ್ತುಗಳನ್ನು ಖರೀದಿ ಮಾಡಿದ್ದೀಯಾ ಎಂದು ಜಂಬ ಕೊಚ್ಚಿಕೊಂಡನು ಬಡವನು ಏನು ಮಾತನಾಡಲಿಲ್ಲ ಮುಖ ಸಪ್ಪಗೆ ಮಾಡಿಕೊಂಡು ನಂತರ ಇಬ್ಬರೂ ಊರಿಗೆ ಬರಬೇಕು ಜೊತೆಯಲ್ಲಿಯೇ ಮಾತನಾಡಿಕೊಂಡು ಬರುತ್ತಿದ್ದರು.

 ದಾರಿಯ ಮಧ್ಯದಲ್ಲಿ ಸಂಚಾರ ಕಡಿಮೆ ಇತ್ತು ಆಗ ಇದ್ದಕ್ಕಿದ್ದ ಹಾಗೆ ದರೋಡೆಕೋರರು ಬಂದರು ಚಾಕು ತೋರಿಸಿ ಇರುವುದೆಲ್ಲವೂ ಕೊಡಬೇಕು ಇಲ್ಲದಿದ್ದರೆ ನಿಮಗೆ ಗ್ರಹಚಾರ ಬಿಡಿಸುತ್ತೇವೆ  ಹೊಡೆಯುತ್ತೇವೆ ಬಡೆಯುತ್ತೇವೆ ಕೊಡಲ್ಲ ಎಂದರೆ ಚೂಪಾದ ಚಾಕುವಿನಿಂದ ಚುಚ್ಚುತ್ತೇವೆ ಎಂದು ಹೆದರಿಸಿದರು.  ಬಡವನು ತನ್ನಲ್ಲಿರುವ ವಸ್ತುಗಳನ್ನು ತೋರಿಸಿದನು ಬಡವನ ವಸ್ತುಗಳು ನೋಡಿ ಈ ವಸ್ತುಗಳಿಂದ ನಮಗೆ ಏನು ಪ್ರಯೋಜನವಿಲ್ಲ ಎಂದು ವಸ್ತುಗಳನ್ನು ಮುಟ್ಟಲಿಲ್ಲ.

ಶ್ರೀಮಂತನ ಚೀಲದಲ್ಲಿ ನೋಡಿದರೂ ಬೆಲೆಬಾಳುವ ವಿಧವಿಧವಾದ ವಸ್ತುಗಳು ಇದ್ದವು ಅದನ್ನೆಲ್ಲವನ್ನು ತೆಗೆದುಕೊಂಡು ಪರಾರಿಯಾದರೂ ಆಗ ಶ್ರೀಮಂತನು ನನ್ನಲ್ಲಿ ಇದ್ದ ಎಲ್ಲಾ ಬೆಲೆಬಾಳುವ ವಸ್ತುಗಳು ದೂಚಿಕೊಂಡು ಹೋದರು ಎಂದು ನಿರಾಶನಾದನು ನಂತರ ಶ್ರೀಮಂತ ಅರ್ಥಮಾಡಿಕೊಂಡನು. ನನ್ನನ್ನು ಯಾರಾದರೂ ಹೀಯಾಳಿಸಿದ್ದಾರೆಯೇ?

 ಏನೇನು ಅಡೆತಡೆಗಳು ಬರಬಹುದು

ಮೌಂಟ್ ಎವರೆಸ್ಟ್ ಅನ್ನು ತೇನ್ ಸಿಂಗ್ ಮತ್ತು ಹಿಲರಿ ಹತ್ತಿದರು ಇದು ಎಲ್ಲರಿಗೂ ತಿಳಿದಿರುವ ವಿಚಾರವೇ ಸುಮಾರು ನಲವತ್ತು ವರ್ಷ ವಯಸ್ಸು ಆಗಿತ್ತು ಆಗ ಸ್ವಾಗತ ಕೋರಲು ಅಭಿನಂದನೆಗಾಗಿ ಬಂದರು. ಅದರಲ್ಲಿ ಒಬ್ಬ ಪತ್ರಕಾರನು ತೇನ್ ಸಿಂಗ್ ರವರನ್ನು ಪ್ರಶ್ನೆ ಕೇಳಿದ ನೀವು ನಲವತ್ತರ ವಯಸ್ಸಿನಲ್ಲಿ ಮಹತ್ಸಾಧನೆ ಮಾಡಿದ್ದೀರಾ ನಿಮ್ಮ ಮನದಾಳದ ಮಾತು ಹೇಳಿ ಮತ್ತು ಮೌಂಟ್ ಎವರೆಸ್ಟ್ ಹತ್ತಬೇಕು ಎಂದು ನಿಮಗೆ ಪ್ರೇರಣೆ ಹೇಗೆ ಬಂತು ಆಗ ತೇನ್ ಸಿಂಗ್ ಅವರು ಮುಗುಳ್ನಗುತ್ತಾ ಹೇಳುತ್ತಾರೆ.

ನನಗೆ 10 ವರ್ಷ ವಯಸ್ಸಾಗಿತ್ತು ಆಗಲೇ ನಾನು ಮೌಂಟ್ ಎವರೆಸ್ಟ್ ಮಾನಸಿಕವಾಗಿ ಹತ್ತಿದ್ದೇನೆ ಆದರೆ ಇಂದು ದೈಹಿಕವಾಗಿ ಹತ್ತಿದ್ದೇನೆ ಎಂದು ಹೇಳಿದರು. ಮುಂದುವರಿಯುತ್ತಾ ನಾವು ಬಡ ಕುಟುಂಬದಲ್ಲಿ ಬೆಳೆದವರು ನಮ್ಮ ಕೆಲಸ ಏನೆಂದರೆ ಮೇಕೆಗಳು ಕುರಿಗಳನ್ನು ಮೇಯಿಸಿಕೊಂಡು ಇರುವುದು ನಮ್ಮ ತಾಯಿ ನನಗೆ ಬೆಟ್ಟದ ಕೆಳಗೆ ತಂದು ಬಿಡುತ್ತಿದ್ದರು ಮತ್ತೆ ಮಧ್ಯಾಹ್ನಕ್ಕೆ ಸ್ವಲ್ಪ ನೀರು ಊಟ ಕೊಡುತ್ತಿದ್ದರು.

 ಇರುವ ಮೇಕೆ ಕುರಿಗಳನ್ನು ಸರಿಯಾಗಿ ಸಾಕಬೇಕಾಗಿತ್ತು ಸಂಜೆಯವರೆಗೆ ನೋಡಿಕೊಳ್ಳಬೇಕಾಗಿತ್ತು ನಂತರ ಹೋಗಬೇಕಾದರೆ ನಮ್ಮ ತಾಯಿಯವರು ಶಿಖರವನ್ನು ತೋರಿಸಿ ಹೇಳುತ್ತಿದ್ದರು.

 ಈ ಶಿಖರ ಯಾರು ಹತ್ತಿಲ್ಲವಂತೆ ಎಂದು ಕೈ ತೋರಿಸಿ ಹೇಳುತ್ತಿದ್ದರು ನಾನು ಆವಾಗ ಚಿಕ್ಕ ಹುಡುಗನಾಗಿದ್ದೆ ಇಡೀ ದಿನ ಹಗಲು ರಾತ್ರಿ ಕುಳಿತುಕೊಂಡು ಏನೇನು ಅಡೆತಡೆಗಳು ಬರಬಹುದು ಯೋಚಿಸುತ್ತಿದ್ದೆ ನಾನು ಹೇಗೆ ಹತ್ತಬೇಕು ಎಂದು ಚಿಂತಿಸುತ್ತಿದ್ದೆ ಕನಸು ಕಾಣುತ್ತಿದ್ದೆ ಅಷ್ಟೇ ಎಂದು ಹೇಳಿದರು.

ತಾಯಿ ಧೈರ್ಯವನ್ನು ತುಂಬಿದರು ಮತ್ತೆ ಇವರು ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು ಇವರು ಬಹಳಷ್ಟು ಸಾರಿ ಸೋತು ನಂತರ ಹತ್ತಿದ್ದಾರೆ.

ಯಾವುದೇ ಹೊಸ ಕೆಲಸ ಮಾಡಲು ಮಾಡಲು ತಂದೆತಾಯಿಗಳು ಸಾಧ್ಯವಾದಷ್ಟು ಮಕ್ಕಳಿಗೆ ಮಹತ್ತರವಾದ ಸಾಧನೆ ಮಾಡಲು ಪ್ರೇರಣೆ ನೀಡಬೇಕು ಅಥವಾ ಪ್ರೋತ್ಸಾಹ ನೀಡಿದರೆ ಖಂಡಿತ ಒಂದಲ್ಲ ಒಂದು ದಿನ ಅವರ ಕನಸು ನನಸು ಮಾಡಿಕೊಳ್ಳುತ್ತಾರೆ. ನನ್ನ ಅಭಿವೃದ್ಧಿಗಾಗಿ ಯಾರು ಉತ್ಸಾಹ ತುಂಬಿದ್ದಾರೆ?

  ಕೆಲಸದಿಂದ ತೆಗೆಯಬೇಡಿ

ಒಂದು ಕಂಪನಿಯಲ್ಲಿ ಹಲವಾರು ಕಾರ್ಮಿಕರು ಕೆಲಸ ಮಾಡಿಕೊಂಡಿರುತ್ತಾರೆ  ಅದರಲ್ಲಿ ಒಂದು ದಿನ ಒಬ್ಬ ಕಾರ್ಮಿಕ ಕುಡಿದು ಬಂದಿರುತ್ತಾನೆ. ಆಗ ಎಲ್ಲಾ ಕಾರ್ಮಿಕರು ಇವನನ್ನು ಬೈದು ಒಂದು ಕಡೆ ನಿಲ್ಲಿಸಿರುತ್ತಾರೆ ತಕ್ಷಣಕ್ಕೆ ಹೊಸದಾಗಿ ನೇಮಕಗೊಂಡಿರುವ ಮ್ಯಾನೇಜರ್ ಅವರು ಬರುತ್ತಾರೆ.

ಕುಡಿದಿರುವ ಕಾರ್ಮಿಕನನ್ನು ನೋಡಿ ನಂತರ ಕುಡುಕ ಕಾರ್ಮಿಕನನ್ನು ತನ್ನ ಕಾರಿನಲ್ಲಿ ಕೂರಿಸಿಕೊಂಡು ನೇರವಾಗಿ ಮನೆಗೆ ಹೋಗಿ ಬಿಡುತ್ತಾರೆ ಮತ್ತೆ ಅವರ ಮನೆಯವರಿಗೆ ಹೇಳುತ್ತಾರೆ ಇವರನ್ನು ಚೆನ್ನಾಗಿ ನೋಡಿಕೊಳ್ಳಿ ಎಂದಾಗ ಮನೆಯಲ್ಲಿ ಹೆಂಡತಿ ಅಳುತ್ತಾರೆ ಮತ್ತು ಹೇಳುತ್ತಾರೆ.

 ದಯವಿಟ್ಟು ಕೆಲಸದಿಂದ ತೆಗೆಯಬೇಡಿ ಆಗ ಮ್ಯಾನೇಜರ್ ಅವರು ಹೇಳುತ್ತಾರೆ ಇವನನ್ನು ಕೆಲಸದಿಂದ ತೆಗೆಯುವುದಿಲ್ಲ ನಾಳೆ ಇವನನ್ನು ಸಹಜವಾಗಿ ಕಳುಹಿಸಿ ಎಂದು ಹೇಳಿ ಪ್ರಶಂಸೆ ಮಾಡಿ ಕಳುಹಿಸುತ್ತಾರೆ ಮತ್ತೆ ಕಂಪನಿಗೆ ಬಂದು ಎಲ್ಲಾ ಕಾರ್ಮಿಕರನ್ನು ಸೇರಿಸಿ ಹೇಳುತ್ತಾರೆ.

 ಇವತ್ತು ಏನೋ ಒಂದು ಸಾರಿ ಗೊತ್ತಿಲ್ಲದೆ ತಪ್ಪು ಮಾಡಿರಬಹುದು ಆದ್ದರಿಂದ ಒಂದು ಸಾರಿ ಇವನನ್ನು ಕ್ಷಮಿಸಿ ನಂತರ ನಾವು ಎಲ್ಲರೂ ಸೇರಿ ಕೆಲಸ ಮಾಡೋಣ ಎಂದು ಹೇಳುತ್ತಾರೆ   ನಂತರ ಇದಕ್ಕೆ ಎಲ್ಲಾ ಕಾರ್ಮಿಕರು ಕುಡಿದ ಕಾರ್ಮಿಕನನ್ನು ಎಲ್ಲರೂ ಒಂದೇ ದೃಷ್ಟಿಯಿಂದ ನೋಡುತ್ತಾರೆ.

 ಕೆಲವು ವರ್ಷಗಳ ನಂತರ ಬೇರೆ ಪಕ್ಷದವರು ಬಂದು ಮ್ಯಾನೇಜರ್ ಅವರನ್ನು ಬದಲಾವಣೆ ಮಾಡಬೇಕೆಂದು ಹೇಳುತ್ತಾರೆ ಆಗ ಕುಡಿದಿದ್ದ ಕಾರ್ಮಿಕನು ನಾಯಕನಾಗಿ ಇರುತ್ತಾನೆ ಆಗ ಈ ನಾಯಕ ಎಲ್ಲರನ್ನು ಹೇಳುತ್ತಾನೆ ಇವರು ನಮಗೆ ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ ಇವರೇ ನಮ್ಮ ಮ್ಯಾನೇಜರ್ ಆಗಿರಲಿ ಎಂದು ಬಹಳಷ್ಟು ಶ್ರಮ ಪಡುತ್ತಾನೆ.

 ನಂತರ ಇದೇ ಮ್ಯಾನೇಜರ್ ಆಯ್ಕೆಯಾಗುತ್ತಾರೆ ಎಂದಿನಂತೆ ಮತ್ತೆ ಕಾರ್ಯ ಮುಂದುವರಿಸಿಕೊಂಡು ಹೋಗುತ್ತಾರೆ ನಮ್ಮ ಅಧೀನದಲ್ಲಿ ಇರುವವರಿಗೆ ನಾವು ಯಾವತ್ತೂ ಒಳ್ಳೆಯವರಾಗಿ ಯೋಚನೆ ಮಾಡಬೇಕು ಇದು ನಮ್ಮ ಬೆಳವಣಿಗೆಗೆ ಮುಖ್ಯ ಕಾರಣವಾಗುತ್ತದೆ ಏನೇ ಬದಲಾವಣೆ ಆಗಬೇಕಾದರೂ ಮೇಲಿಂದ ಕೆಳಗೆ ಬದಲಾವಣೆ ಆಗುತ್ತದೆ ಹೊರತು ಕೆಳಗಿನಂದ ಮೇಲೆ ಬದಲಾವಣೆ ಆಗುವುದಿಲ್ಲ ಉದಾಹರಣೆಗೆ ಒಂದು ಕಂಪನಿಯ ಮಾಲೀಕ ಅಥವಾ ಮ್ಯಾನೇಜರ್ ಚೆನ್ನಾಗಿ ಇದ್ದರೆ ಅವರ ಕೈ ಕೆಳಗೆ ಇರುವ ಎಲ್ಲರೂ ಕೂಡ ಹಾಗೆಯೆ ಚೆನ್ನಾಗಿ ವರ್ತಿಸುತ್ತಾರೆ.

 ಉದಾಹರಣೆಗೆ ಒಂದು ಶಾಲೆಯಲ್ಲಿ ಪ್ರಾಂಶುಪಾಲರು ಚೆನ್ನಾಗಿ ಅವರ ಕರ್ತವ್ಯ ನಿರ್ವಹಿಸುತ್ತಿದ್ದರೆ ಮಕ್ಕಳು ಕೂಡ ಅವರಂತೆಯೇ ಡೂಪ್ಲಿಕೇಟ್ ಆಗಿ ನಕಲುಗಳಾಗಿ ಪರಿವರ್ತನೆ ಆಗುತ್ತಾರೆ. ನಾನು ಸಮಾನತೆಯಿಂದ ವರ್ತಿಸುತ್ತಿದ್ದೇನೆಯೇ?

ಕೈ ಸನ್ನೆಯಿಂದ ಎಚ್ಚರಿಸುತ್ತಿದ್ದರು

ನಾವು ಶಾಲೆಯಲ್ಲಿ ಓದುತ್ತಿದ್ದಾಗ ಸ್ವಾತಂತ್ರ್ಯ ದಿನಾಚರಣೆ ದಿನ ಬಂದಾಗ ಹಲವಾರು ರೀತಿಯಲ್ಲಿ ವಿಭಿನ್ನವಾಗಿ ಆಚರಣೆ ಮಾಡುತ್ತಾರೆ ಹದಿನೈದು ದಿನದ ಮುಂಚಿತವಾಗಿ ಅಭ್ಯಾಸ  ಆರಂಭಿಸುತ್ತೇವೆ ಅದರಲ್ಲಿ ಹಲವಾರು ಕಾರ್ಯಕ್ರಮಗಳು ಹಮ್ಮಿಕೊಳ್ಳುತ್ತಾರೆ ಹಾಡು ಹೇಳುವುದು ನೃತ್ಯ ಸಂಗೀತ ಆಗಿರಬಹುದು ಯೋಗ ಮಾರ್ಚ್ ಫಾಸ್ಟ್ ಹೀಗೆ ಹಲವಾರು ಕಾರ್ಯಕ್ರಮಗಳು ಇದ್ದೇ ಇರುತ್ತವೆ.

ಕಾರ್ಯಕ್ರಮಗಳಲ್ಲಿ ಸಾರೇ ಜಹಾಂಸೆ ಅಚ್ಚಾ ಹಾಡು ಹಾಡಬೇಕಾದರೆ ಗುಂಪಾಗಿ ಎಲ್ಲಾ ವಿದ್ಯಾರ್ಥಿಗಳು ಸೇರಿ ಹಾಡುತ್ತಾರೆ ಇದನ್ನು ಹೇಳಿಕೊಟ್ಟ ಶಿಕ್ಷಕಿ ದೂರದಲ್ಲಿ ನಿಂತು ನಮ್ಮನ್ನು ಸರಿಯಾಗಿ ಬ್ಯಾಲೆನ್ಸ್ ಮಾಡಿ ಎಂದು ಕೈ ಸನ್ನೆಯಿಂದ ಹೇಳುತ್ತಿರುತ್ತಾರೆ.

ನಮ್ಮ ಪಾಡಿಗೆ ನಾವು ಹಾಡುತ್ತೀವಿ ಎಂದರೆ ಅವರು ಒಪ್ಪುವುದಿಲ್ಲ ಎಲ್ಲರ ಧ್ವನಿಯೂ ಸಮತೋಲನದಲ್ಲಿ ಇರಬೇಕು ಬ್ಯಾಲೆನ್ಸ್ ಆಗಿ ಇರಬೇಕು ಕೈ ಸನ್ನೆಯಿಂದ ಎಚ್ಚರಿಸುತ್ತಿದ್ದರು ಒಬ್ಬರು ಜಾಸ್ತಿ ಹೇಳಿದರೆ ಇನ್ನೊಬ್ಬರು ಧ್ವನಿ ಕಡಿಮೆಯಾಗಿಬಿಡುತ್ತದೆ ಗುಂಪಿನಲ್ಲಿದ್ದಾಗ ಎಲ್ಲರ ಧ್ವನಿಯೂ ಸಮವಾಗಿ ಇರಬೇಕು ಆಗಲೇ ಅದು ತುಂಬಾ ಚೆನ್ನಾಗಿ ಮೂಡಿ ಬರುತ್ತದೆ.

ಈ ರೀತಿ ಸಾಮಾನ್ಯವಾಗಿ ಎಲ್ಲರೂ ಅವರವರ ಜೀವನದಲ್ಲಿ ಅನುಭವಿಸುತ್ತಾರೆ ಅಥವಾ ನೋಡಿರುತ್ತಾರೆ ನಾವು ಮಾತನಾಡಬೇಕಾದರೆ ನಮ್ಮ ಮಾತನ್ನೇ ದೊಡ್ಡ ಧ್ವನಿಯಲ್ಲಿ ಮಾತನಾಡುತ್ತೇವೆ.

 ಅದು ಮನೆಯಾಗಿರಬಹುದು ಶಾಲೆ ಕಾಲೇಜು ಅಥವಾ ಕೆಲಸದಲ್ಲಿ ಆಗಿರಬಹುದು ನಮ್ಮದೇ ಜಾಸ್ತಿ ಇದ್ದಾಗ ಇತರರು ನಮ್ಮನ್ನು ದೂರಕ್ಕೆ ಇಡುತ್ತಾ ಬರುತ್ತಾರೆ ಆಗ ನಾವು ಒಂಟಿಯಾಗಿ ಕೊರಗಬೇಕಾಗುತ್ತದೆ ಆದುದರಿಂದ ಎಲ್ಲಾ ಕಡೆಗಳಲ್ಲಿಯೂ ಬ್ಯಾಲೆನ್ಸ್ ಮಾಡಿಕೊಂಡು ಹೋಗೋಣ . ಸಮತೋಲನವೇ  ಬದುಕಿನ ರಹಸ್ಯ. ನಾನು ಎಲ್ಲರೊಂದಿಗೆ ಹೊಂದಿಕೊಳ್ಳುತ್ತೇನೆಯೇ?

Leave a Comment