ಒಂದು ಆಶ್ರಮಕ್ಕೆ ಧ್ಯಾನವನ್ನು ಕಲಿಯಲಿಕ್ಕೆ ಹಲವಾರು ಯುವಕರು ಬಂದರು ಗುರುಗಳು ಯುವಕರನ್ನು ಪ್ರೀತಿಯಿಂದ ಬರಮಾಡಿಕೊಂಡು ಆಶ್ರಮದ ನಿಯಮಗಳನ್ನು ತಿಳಿಸಿದರು ನಂತರ ಒಂದು ಕೋಣೆಯಲ್ಲಿ 4ಜನರು ಮಾತ್ರ ಧ್ಯಾನ ಮಾಡಬೇಕು.
4 ಯುವಕರಲ್ಲಿ ಯಾರು ಕೂಡ ಮಾತನಾಡಬಾರದು ಮೊದಲು 7 ದಿನಗಳು ಮೌನವಾಗಿ ಇರಬೇಕು ಎಂದು ಹೇಳಿದರು ಅದರಂತೆಯೇ 4 ಯುವಕರು ಒಂದು ಕೊಠಡಿಯಲ್ಲಿ ಧ್ಯಾನಕ್ಕೆ ಕುಳಿತರು. 4 ಯುವಕರು ಪ್ರತಿಜ್ಞೆಮಾಡಿ ಚೌಕಾಕಾರದ ರೀತಿಯಲ್ಲಿ ಕುಳಿತುಕೊಂಡರು ಅದರಂತೆಯೇ ಮೌನವಾಗಿ ಇದ್ದರು 2 ದಿನಗಳು ಆದ ನಂತರ ಇವರು ಮೌನದಲ್ಲಿ ಚೆನ್ನಾಗಿ ಸಾಧನೆ ಮಾಡಿದರು ಸ್ವಲ್ಪ ಸ್ವಲ್ಪವಾಗಿ ಧ್ಯಾನ ಏನೆಂದು ಅರಿವು ಆಗತೊಡಗಿತು.
ಮೂರನೇ ದಿನ ಸಂಜೆಯಾದ ನಂತರ ಕತ್ತಲೆ ಆಗುತ್ತಾ ಬರುತ್ತಿತ್ತು ಆದರೆ ದೀಪದಲ್ಲಿ ಎಣ್ಣೆ ಕಡಿಮೆ ಯಾಗುತ್ತಾ ಹೋಯಿತು ಇನ್ನು ಸ್ವಲ್ಪ ಹೊತ್ತಿನಲ್ಲಿ ಎಣ್ಣೆ ಹಾಕದಿದ್ದರೆ ದೀಪವೂ ಆರಿ ಹೋಗುತ್ತದೆ ಈ ಸ್ಥಿತಿಗೆ ಬಂತು ಮೊದಲನೆಯ ಯುವಕ ಗಮನಿಸಿ ಧ್ವನಿ ಏರಿಸಿ ಆಶ್ರಮ ನೋಡಿಕೊಳ್ಳುವವನನ್ನು ಜೋರಾಗಿ ಕೂಗಿ ಹೇಳಿದ ದೀಪದಲ್ಲಿ ಎಣ್ಣೆ ಮುಗಿಯುತ್ತ ಬರುತ್ತಿದೆ ಬೇಗ ತಂದು ಎಣ್ಣೆ ಹಾಕು ಎಂದು ಹೇಳಿದನು.
ಹೇಳಿದ ನಂತರ ಕಣ್ಣು ಬಿಚ್ಚಿ ನೋಡಿದಾಗ ಅವನಿಗೆ ತಿಳಿಯಿತು ನನ್ನ ಮೌನ ಮುರಿದೆ ಎಂದು ಅರಿತನು ಎದುರುಗಡೆ ಎರಡನೆಯವನು ಇವನನ್ನೇ ಭಯಂಕರವಾಗಿ ನೋಡಿದ ಮತ್ತೆ ಮೊದಲನೆಯವನು ಎರಡನೆಯವನಿಗೆ ಕೋಪ ಬರುವ ರೀತಿಯಲ್ಲಿ ಹೇಳಿದ.
ನಾವು ಎಲ್ಲರೂ ಮೌನವಾಗಿ ಇರಬೇಕೆಂದು ಪ್ರತಿಜ್ಞೆ ಮಾಡಿದ್ದೇವೆ ನೀನು ಪ್ರತಿಜ್ಞೆಯನ್ನು ಮರೆತುಬಿಟ್ಟಿದ್ದೀಯಾ. ತಪ್ಪು ಮಾಡಿದರೆ ಅವರಿಗೆ ಸರಿಯಾದ ರೀತಿಯಲ್ಲಿ ಹೇಳುವುದು ನನ್ನ ಕರ್ತವ್ಯ ಎಂದು ಹೇಳಿದನು ಎರಡನೆಯವನು ಮೌನ ಮುರಿದನು.
ಮೂರನೆಯವನು ಹೇಳಿದ ಅವನು ತಪ್ಪು ಮಾಡಿದ ಆ ತಪ್ಪು ನೀನೇಕೆ ಎತ್ತಿ ತೋರಿಸಿದೆ ನಿನ್ನ ಮೌನವು ಹೋಯಿತು ಎಂದು ಮೂರನೆಯವನು ಹೇಳಿದ.
ನಾಲ್ಕನೆಯವನು ನಗು ನಗುತ್ತಾ ಹೇಳಿದ ನೀವೆಲ್ಲರೂ ಮೌನ ಮುರಿದಿದ್ದೀರಿ ನಾನು ಒಬ್ಬನೇ ಮೌನ ವ್ರತವನ್ನು ಪಾಲಿಸುತ್ತಿದ್ದೇನೆ ಎಂದು ಕೂಗಿ ಹೇಳಿದ ಈ ರೀತಿಯಾಗಿ ತಾನೂ ಕೂಡ ಮೌನ ಮುರಿದನು ನಂತರ 4ಯುವಕರಿಗೆ ನಾಚಿಕೆಯಾಯಿತು. ಮೊದಲನೆಯವನು ಗೊತ್ತಿಲ್ಲದೆ ಮಾಡಿದ ಎರಡನೆಯ.
ವನು ಮೊದಲನೆಯವನಿಗೆ ಬೈದನು ನಾನೇ ಸರಿ ಎಂದು ತೋರಿಸಿಕೊಳ್ಳುವವನು ಎರಡನೆಯವನು ನಾನೇ ಬುದ್ಧಿವಂತ ಎಂದು ಹೇಳಿಕೊಳ್ಳುವುದು ಮೂರನೆಯವನು ಇಬ್ಬರಿಗೂ ಉಪನ್ಯಾಸ ಕೊಡುವವನು ಇತರರಿಗೆ ಬುದ್ಧಿ ಹೇಳುವವರು. ನಾಲ್ಕನೆಯವನು ಇತರರಿಗಿಂತ ನಾನೇ ಶ್ರೇಷ್ಠ ಎಂದು ಹೊಗಳಿಕೊಳ್ಳುವವನು. ನಾನೇ ಶ್ರೇಷ್ಠ ಎಂದು ಪ್ರದರ್ಶಿಸಿ ನಾನೇ ದಡ್ಡನಾಗಿದ್ದೇನೆಯೇ?
ವಿಚಿತ್ರ ವ್ಯಾಪಾರಿ
ಒಬ್ಬ ವಿಚಿತ್ರ ವ್ಯಾಪಾರಿ ಇದ್ದನು ವ್ಯಾಪಾರಿಯು ಕಾಲಕ್ಕೆ ತಕ್ಕಂತೆ ಹಣ್ಣು ಹಂಪಲುಗಳನ್ನು ಮಾರುತಿದ್ದನು ಒಬ್ಬರಿಗೆ ಕಡಿಮೆ ಬೆಲೆಯಲ್ಲಿ ಇನ್ನೊಬ್ಬರಿಗೆ ಹೆಚ್ಚು ಬೆಲೆಯಲ್ಲಿ ಕೆಲವರಿಗೆ ಉಚಿತವಾಗಿ ಕೊಟ್ಟು ಕಳುಹಿಸುತ್ತಿದ್ದನು ಯಾರೇ ಹೋಗಿ ಹಣ್ಣು ಕೇಳಿದರೆ ನಿಮಗೆ ಎಷ್ಟು ಬೇಕು? ಏಕೆ ಬೇಕು? ಎಂದು ಕೇಳುತ್ತಿದ್ದನು ನಂತರ ಹಣ್ಣು ಮಾರುತಿದ್ದನು.
ಒಂದು ಸಾರಿ ಸರ್ಕಾರಿ ವ್ಯಕ್ತಿ ಹೋಗಿ ನನಗೆ ಹಣ್ಣು ಕೊಡಿ ಎಂದು ಕೇಳಿದನು ಅದಕ್ಕೆ ಆ ವ್ಯಾಪಾರಿ ನಿಮಗೆ ಏತಕ್ಕೆ ಬೇಕು ಎಷ್ಟು ಬೇಕು ಎಂದು ವಿವರ ಕೇಳಿದನು ಆಗ ವಿಚಿತ್ರ ವ್ಯಾಪಾರಿ ಹೇಳಿದ 10 ಸೇಬುಗಳು ತೆಗೆದುಕೊಂಡರೆ ಬೇರೆ ಬೆಲೆ 50 ತೆಗೆದುಕೊಂಡರೆ ಬೇರೆ ಬೆಲೆ 100 ತೆಗೆದುಕೊಂಡರೆ ಬೇರೆ ಬೆಲೆ.
ವೃದ್ಧಾಶ್ರಮಕ್ಕೆ ನೀವು ಕೊಡುತ್ತಿದ್ದಾರೆ ಅದಕ್ಕೆ ಬೇರೆ ಬೆಲೆ ಸರ್ಕಾರಿ ಶಾಲೆ ಮಕ್ಕಳಿಗೆ ನೀಡುತ್ತಿದ್ದರೆ ಬೇರೆ ಬೆಲೆ, ಖಾಸಗಿ ಶಾಲಾ ಮಕ್ಕಳಿಗೆ ಕೊಡಬೇಕಾದರೆ ಬೇರೆ ಬೆಲೆ, ಮನೆಗೆ ತಿನ್ನಲಿಕ್ಕೆ ಬೇಕಾದರೆ ಬೇರೆ ಬೆಲೆ ಎಂದು ಹೇಳಿದನು.
ಸರ್ಕಾರಿ ವ್ಯಕ್ತಿ ಕೇಳಿದನು ನಿನಗೆ ಅದೆಲ್ಲ ಏಕೆ ನಾನು ಏತಕ್ಕಾದರೂ ಖರೀದಿಸುತ್ತೇನೆ ಎಂದು ಹೇಳಿದನು. ಆಗ ವಿಚಿತ್ರ ವ್ಯಾಪಾರಿ ಹೇಳಿದನು. ನೋಡಿ ಸಾರ್ ಒಂದೇ ಕಂಬದಿಂದಲೇ ಮನೆಗೆ ಕರೆಂಟ್ ಬರುತ್ತದೆ. ಮನೆಗೆ ಬಂದರೆ ಒಂದು ಬೆಲೆ ಅದೇ ಅಂಗಡಿಗೆ ಬೇರೆ ಬೆಲೆ. ಫ್ಯಾಕ್ಟರಿ ಅಥವಾ ಕಂಪನಿಗೆ ಆದರೆ ಮತ್ತೊಂದು ಬೆಲೆ ಯಾಕೆ? ಎಲ್ಲವೂ ಒಂದೇ ಕರೆಂಟ್ ತಾನೇ ಎಂದು ಹೇಳುತ್ತಾನೆ.
ಅದೇ ರೀತಿ ಗ್ಯಾಸ್ ಗು ಹೀಗೆ ಇದೆ ಮನೆಗೆ ಒಂದು ರೀತಿ ಅದೇ ಹೋಟೆಲ್ಗೆ ಆದರೆ ಬೇರೆ ಬೆಲೆ ಇದೆ ಹೋಗಲಿ ಟ್ಯಾಕ್ಸ್ ಅಲ್ಲು ಅದೇ ರೀತಿ ಇದೆ ಇದಕ್ಕೆ ಬೇರೆ ಟ್ಯಾಕ್ಸ್ ಅದಕ್ಕೆ ಬೇರೆ ಟ್ಯಾಕ್ಸ್ ಅಲ್ಲವೇ ಎಂದು ಕೇಳುತ್ತಾನೆ.
ಇವನ ಮಾತನ್ನು ಕೇಳಿದ ಸರ್ಕಾರಿ ವ್ಯಕ್ತಿ ಏನು ಮಾತನಾಡದೆ ಸುಮ್ಮನಾಗುತ್ತಾನೆ ಕೆಲವೊಂದು ವಿಷಯಗಳು ವಿಚಿತ್ರವಾಗಿ ಕಂಡರೂ ಅದರಲ್ಲಿ ಕೂಡ ಸತ್ಯ ಅಡಗಿರುತ್ತದೆ.
ಒಂದು ದಿನದ ಚಿಂತೆಯನ್ನು
ಬಹಳಷ್ಟು ವರ್ಷಗಳ ಹಿಂದೆ ಒಂದು ಸಾರಿ ಯುದ್ಧವಾಯಿತು ಆ ಯುದ್ಧದಲ್ಲಿ ಹಲವಾರು ಜನರು ಸತ್ತರು ಹಲವಾರು ಜನರಿಗೆ ಪೆಟ್ಟಾಯಿತು ಆಗ ಅದರಲ್ಲಿ ಒಬ್ಬ ನಾಯಕನ ಸ್ನೇಹಿತನು ಸತ್ತಿದ್ದನು ಆಗ ಮಿಕ್ಕಿದವರಲ್ಲಿ ಆತ್ಮವಿಶ್ವಾಸ ಕಡಮೆಯಾಗುತ್ತಿತ್ತು.
ನಾಯಕನಾದವನು ಸಾಂತ್ವನ ಹೇಳುವ ಬದಲು ಮತ್ತೆ ನಾಯಕ ಆಜ್ಞೆಯನ್ನು ನೀಡಿದ ನಾಳೆ ಬೆಳಿಗ್ಗೆ 9 ಗಂಟೆಗೆ ಎಲ್ಲರೂ ಸೇರಬೇಕು ಮತ್ತು ಯೂನಿಫಾರ್ಮ್ ನೊಂದಿಗೆ ಎಂದು ಹೇಳಿದಾಗ ಎಲ್ಲರೂ ಅವನ ಮುಂದೆ ಹೌದು ಎಂದರು.
ನಾಳೆ ಮತ್ತೆ ಕಮಾಂಡರ್ ಬರುತ್ತಿದ್ದಾರೆ ಎಂದಾಗ ಎಲ್ಲಾ ಸೈನಿಕರೂ ಶಿಸ್ತಾಗಿ ಇರಬೇಕು ಎಂದು ಹೇಳಿದನು ಆಗ ಎಲ್ಲ ಸೈನಿಕರು ಬೈದುಕೊಂಡು ಕೆಲಸ ಮಾಡುತ್ತಿದ್ದರು ಇವನಿಗೆ ಕರುಣೆಯೇ ಇಲ್ಲ ಕಠೋರ ಹೃದಯವುಳ್ಳವನು ನಾಳೆಯ ತಯಾರಿಗಾಗಿ ತಮ್ಮ ಶೂಗಳು, ಬೆಲ್ಟುಗಳು, ಯೂನಿಫಾರಂಗಳು, ಇಸ್ತ್ರಿ ಮಾಡಿ ಕೊಳ್ಳುತ್ತಿದ್ದರು ಎಲ್ಲಾ ಕೆಲಸಗಳು ಬೈಯುತ್ತಲೇ ಶಾಪ ಹಾಕುತ್ತಲೇ ಮಾಡುತ್ತಿದ್ದರು.
ಮಾರನೆ ದಿನ ಬೆಳಿಗ್ಗೆಯೇ ಬಂದು ಸಭೆಯನ್ನು ಸೇರಿದರು ನಂತರ ಎಲ್ಲರ ಜೊತೆ ಇವರು ಕೂಡ ಸೇರಿಕೊಂಡು ಸ್ನೇಹಿತನ ಸಾವಿನ ದುಃಖವನ್ನು ಹೇಳಿದರು ಮತ್ತು ನಾಯಕರು ಹೇಳಿದರು ನಿಮಗೆ ನನ್ನ ಮೇಲೆ ಕೋಪವಿದೆ ನಾನು ಒಪ್ಪುತ್ತೇನೆ.
ನಾನು ಯಾಕೆ ಹೀಗೆ ಮಾಡಿದೆ ಎಂದರೆ ಎಲ್ಲರೂ ದುಃಖದಲ್ಲಿ ಇದ್ದೀರಾ ನಾನು ಮತ್ತೆ ನಿಮಗೆ ಸಾಂತ್ವನ ಹೇಳಿದರೆ ಮತ್ತಷ್ಟು ದುಃಖ ಇಮ್ಮಡಿಯಾಗುತ್ತದೆ ಅದಕ್ಕೆ ಈ ರೀತಿ ನಿಮಗೆ ಆಜ್ಞೆ ಕೊಟ್ಟೆ ನನ್ನನ್ನ ಬೈಯ್ಯುತ್ತೀರಿ ಆದರೆ ನಿಮ್ಮ ಮನಸ್ಸು ಬೇರೆ ಕಡೆಗೆ ಡೈವರ್ಟ್ ಆಗಿರಲಿ ಎಂದು ಈ ರೀತಿ ಮಾಡಿದೆ ಎಂದು ಹೇಳಿದರು.
ನಾಯಕನು ಕೂಡ ಸ್ವಲ್ಪ ಹೊತ್ತು ಸೈನಿಕರ ದುಃಖದಲ್ಲಿ ಭಾಗಿಯಾದರು ನಾನು ನಿಮಗೆ ಆಜ್ಞೆ ಕೊಟ್ಟಿದ್ದಕ್ಕಾಗಿ ಒಂದು ದಿನದ ಚಿಂತೆಯನ್ನು ನೀವು ಮರೆತಿದ್ದೀರಿ ಎಂದು ಹೇಳಿದರು ಬನ್ನಿ ಎಲ್ಲರೂ ಹೋಗಿ ಹುತಾತ್ಮರಿಗೆ ಗೌರವವನ್ನು ಸಲ್ಲಿಸಿ ಬರೋಣ ಎಂದು ಎಲ್ಲರೂ ಸೇರಿ ಗೌರವ ಸಲ್ಲಿಸಿದರು.
ಸಭೆಗೆ ಬರಲೇ ಇಲ್ಲ
ಕಲಾತ್ಮಕ ರಾಜ ಒಂದು ಸಾರಿ ವಾಯು ವಿಹಾರಕ್ಕಾಗಿ ಹೋಗುತ್ತಿರುತ್ತಾನೆ ನಂತರ ಹಾಗೆ ಊರಿನ ಆಚೆ ಹೋಗುತ್ತಿದ್ದಾಗ ಮಧುರವಾದ ಇಂಪಾದ ಸಂಗೀತ ಕೇಳಿ ಬರುತ್ತಿರುತ್ತದೆ ಈ ರಾಜನಿಗೆ ಸಂಗೀತ ಎಂದರೆ ಎಲ್ಲಿಲ್ಲದ ಹುಚ್ಚು ಆದ್ದರಿಂದ ಹಾಡು ಎಲ್ಲಿಂದ ಬರುತ್ತಿದೆ ಹಾಗೆ ಹುಡುಕಿ ಕೊಂಡು ಹೋಗೋಣ ಎಂದು ಹೋದನು.
ಆ ಸಮಯವು ಮುಸ್ಸಂಜೆಯಾಗಿರುತ್ತದೆ ಕಾಡಿನ ಸುಂದರ ಹೂವುಗಳು ಅಲ್ಲಿಯ ವಾತಾವರಣ ಎಲ್ಲವೂ ಮಂತ್ರ ಮುಗ್ಧನಾಗಿ ಮಾಡಿದವು ನಂತರ ಶಬ್ದವನ್ನು ಕೇಳಿ ಕೊಂಡು ಹೋದನು ಅಲ್ಲಿ ನೋಡಿದರೆ ಒಂದು ಮರದ ಕೆಳಗೆ ಕುಳಿತುಕೊಂಡು ಒಬ್ಬ ಮಹಾನ್ ಸಂಗೀತಗಾರರು ಕಣ್ಣು ಮುಚ್ಚಿಕೊಂಡು ತಲ್ಲೀನರಾಗಿ ಹಾಡನ್ನು ಹಾಡುತ್ತಿರುತ್ತಾರೆ.
ರಾಜನಾದವನು ಸಂಗೀತಗಾರ ಸ್ವಲ್ಪ ದೂರದಲ್ಲಿ ಕುಳಿತು ಸಂಗೀತವನ್ನು ಆಲಿಸಿದ ಈ ರೀತಿಯ ಸಂಗೀತ ರಾಜನಾದವನು ಜೀವನದಲ್ಲಿಯೇ ಎಂದೂ ಕೇಳಿರಲಿಲ್ಲ ನಂತರ ಸಂಗೀತಗಾರ ಕಣ್ಣು ತೆರೆದು ನೋಡಿದರೂ ಮಹಾರಾಜ ಕೇಳುತ್ತಿದ್ದಾರೆ.
ಮಹಾರಾಜರು ಸಂಗೀತಗಾರರಿಗೆ ನಿಮ್ಮ ಸಂಗೀತ ನಿಜಕ್ಕೂ ತುಂಬಾ ಅದ್ಭುತವಾಗಿದೆ ಎಂದು ಹೊಗಳಿದರು ಮತ್ತೆ ಒಂದು ಕೋರಿಕೆಯನ್ನು ಹೇಳಿದರು ಸಂಗೀತಗಾರರೆ ನೀವು ಒಂದೇ ಒಂದು ಸಾರಿ ನಮ್ಮ ಅರಮನೆಯಲ್ಲಿ ಬಂದು ಸಂಗೀತವನ್ನು ಹಾಡಿ ನನ್ನ ಅರಮನೆಯಲ್ಲಿ ಸಂಗೀತ ಪ್ರಿಯರು ಬಹಳಷ್ಟು ಜನ ಇದ್ದಾರೆ.
ಎಲ್ಲರು ಇಂಪಾದ ಸಂಗೀತ ಕೇಳಲಿ ಎನ್ನುವುದೆ ನನ್ನ ಆಸೆ ಎಂದು ಬೇಡಿಕೊಂಡರು ಸಂಗೀತಗಾರರು ಸ್ವಲ್ಪ ಯೋಚನೆ ಮಾಡಿ ಹೇಳಿದರು ಆಗಬಹುದು ಆದರೆ ನನ್ನದು ಒಂದು ನಿಯಮ (ಕಂಡಿಷನ್) ಇದೆ ನಾನು ನಿಮ್ಮ ಅರಮನೆಯಲ್ಲಿ ಹಾಡಬೇಕಾದರೆ ಯಾರು ಮಲಗಬಾರದು ಮಲಗಿದರೆ ಬೇರೆ ಸೈನಿಕರು ಕತ್ತಿಯನ್ನು ಹಿಡಿದು ಸಿದ್ಧವಾಗಿ ನಿಂತಿರಬೇಕು.
ಯಾರು ಮಲಗುತ್ತಾರೋ ಅವರನ್ನು ತಲೆ ಕತ್ತರಿಸಬೇಕು ಈ ಕಂಡಿಷನ್ ಇದ್ದರೆ ಮಾತ್ರ ನಾನು ಹಾಡುತ್ತೇನೆ ಇಲ್ಲದಿದ್ದರೆ ಇಲ್ಲ ಮತ್ತೆ ಈ ನಿಯಮ ಎಲ್ಲರಿಗೂ ಅನ್ವಯವಾಗುತ್ತದೆ ಎಂದು ಹೇಳಿದರು ಅದಕ್ಕೆ ರಾಜರು ಕೊಂಚ ಯೋಚಿಸಿ ಆಗಬಹುದು ಎಂದು ಒಪ್ಪಿಕೊಂಡರು ನಂತರ ಇದೇ ವಿಷಯವನ್ನು ಅರಮನೆಯಲ್ಲಿ ಎಲ್ಲರಿಗು ತಿಳಿಸಿದರು.
ಕೇಳಿದ ಎಷ್ಟೋ ಸೈನಿಕರು ಸಂಗೀತ ಸಭೆಗೆ ಬರಲೇ ಇಲ್ಲ ಮತ್ತೆ ಕೆಲವರು ಸ್ವಲ್ಪ ದೈರ್ಯ ಮಾಡಿ ಬಂದರು ನಿದ್ದೆ ಬಂದರೆ ಆಚೆ ಬರಬಹುದು ಕೆಲವು ಜನ ಎದ್ದು ಹೊರಟು ಹೋದರು ಕೆಲವರು ಏನಾಗುತ್ತದೆ ಆಗಲಿಯೆಂದು ಎಂದು ಧೈರ್ಯದಿಂದ ಸಭೆಗೆ ಬಂದರು ಸಂಗೀತಗಾರರು ಸಂಗೀತ ಆರಂಭಿಸಿದಂತೆ ಸಂಗೀತ ಪ್ರಿಯರು ಮೈಮರೆತರು.
ಮೊಟ್ಟಮೊದಲು ರಾಜರೇ ಮೈಮರೆತು ಸ್ವಲ್ಪ ಹೊತ್ತಿನ ನಂತರ ಎದ್ದರು ಬೇರೆ ಸೈನಿಕರು ನೋಡಿದರೆ ಎಲ್ಲರೂ ಸಂಗೀತದಲ್ಲಿ ತಲ್ಲೀನರಾಗಿದ್ದಾರೆ ಇದನ್ನು ನೋಡಿ ಗಾಬರಿಯಾಗಿ ಸಂಗೀತಗಾರರಿಗೆ ಹೇಳಿದರು ಏನು ಮಾಡಬೇಕು ಎಂದಾಗ ಸಂಗೀತಗಾರರು ಮುಗುಳ್ನಗುತ್ತ ಹೇಳಿದರು.
ನಾನು ಇಲ್ಲಿ ಎಷ್ಟು ಜನ ಸೇರಿದ್ದೀರೋ ಅವರಿಗೆ ಮಾತ್ರ ನಾನು ಹಾಡಲು ಇಷ್ಟ ಪಡುತ್ತೇನೆ ಏಕೆಂದರೆ ಸಾವಿನ ಭಯ ಇದ್ದೂ ಕೂಡ ಅವರು ಬಂದಿದ್ದಾರೆ ಎಂದರೆ ಅವರಿಗಾಗಿಯೇ ನನ್ನ ಸಂಗೀತ ಎಂದು ಹೇಳಿದರು ಇವರನ್ನೇ ನಾನು ಸಂತೃಪ್ತಿ ಪಡಿಸಬೇಕು ಎನ್ನುವ ಉದ್ದೇಶದಿಂದ ಹೀಗೆ ಹೇಳಿದೆ ಎಂದು ಸಂಗೀತಗಾರರು ಹೇಳಿದರು.
ಹೇಳುವ ಹಕ್ಕು ನಿನಗೆ ಇಲ್ಲ
ಒಂದು ಕಾಡಿನಲ್ಲಿ ಒಂದು ಮರದ ಕೆಳಗೆ ಹಲವಾರು ಪಾರಿವಾಳಗಳು ವಾಸವಾಗಿರುತ್ತವೆ ಪಾರಿವಾಳಗಳು ಆಹಾರ ತರಲಿಕ್ಕೆ ಹೋಗಬೇಕಾದರೆ ಮರದ ಮೂರು ಸುತ್ತು ಸುತ್ತಿ ನಂತರ ಆಹಾರ ಹುಡುಕಲು ಹೋಗುತ್ತಿದ್ದವು ಇದು ಪಾರಿವಾಳಗಳ ಸಂಪ್ರದಾಯ ನಂತರ ಒಂದು ಬೇರೆ ಪಕ್ಷಿ ಬಂದು ಮರದ ಮೇಲೆ ಕುಳಿತುಕೊಂಡಿತು.
ಪ್ರತಿಯೊಂದು ಪಾರಿವಾಳವು ಹೊರಗೆ ಹೋಗಬೇಕಾದರೆ ಮರದ ಮೂರು ಸುತ್ತು ಸುತ್ತಿ ಹೋಗುತ್ತಿತ್ತು ಇದನ್ನು ನೋಡಿದ ಹೊಸ ಪಕ್ಷಿಗೆ ಕುತೂಹಲ ಉಂಟಾಯಿತು ಎಲ್ಲಾ ಪಾರಿವಾಳ ಗಳು ಏಕೆ ಮರವನ್ನು ಸುತ್ತು ಹಾಕಿ ಹೋಗುತ್ತಿದೆ ಎಂದು ಕೇಳಿದಾಗ ಒಂದು ಪರಿವಾಳ ಹೇಳಿತು ಇದು ನಮ್ಮ ಸಂಪ್ರದಾಯ ಎಲ್ಲಾ ಪಾರಿವಾಳಗಳು ಹೀಗೆ ಮಾಡುತ್ತವೆ ಎಂದು ಹೇಳಿತು.
ಹೊಸದಾಗಿ ಬಂದ ಪಕ್ಷಿ ಹೇಳಿತು ಹೀಗೆ ಮಾಡುವುದು ಸರಿಯಲ್ಲ ಎಂದು ಹೇಳಿತು ಆಗ ಪಾರಿವಾಳಗಳಿಗೆ ಕೋಪ ಬಂತು ಹೊಸ ಪಕ್ಷಿಯನ್ನು ಬೈಯುತ್ತಿದ್ದವು ಅಷ್ಟರಲ್ಲಿ ಹಿರಿಯ ಪಾರಿವಾಳ ಬಂದು ಹೊಸ ಪಕ್ಷಿಗೆ ನಿಮ್ಮ ಸಂಪ್ರದಾಯ ಏನಿದೆಯೋ ಅದು ನಮಗೆ ತಿಳಿಯದು ಆದರೆ ಬಹಳಷ್ಟು ವರ್ಷಗಳಿಂದ ನಮ್ಮ ಸಂಪ್ರದಾಯವನ್ನು ಪಾಲಿಸುತ್ತಿದ್ದೇವೆ.
ಇನ್ನೊಬ್ಬರ ಸಂಪ್ರದಾಯವನ್ನು ನಾವು ಎಂದಿಗೂ ತಪ್ಪು ಎಂದು ಹೇಳುವ ಹಕ್ಕು ನಿನಗೆ ಇಲ್ಲ ಇನ್ನೊಬ್ಬರ ಸಂಪ್ರದಾಯವನ್ನು ಅರಿತುಕೊಳ್ಳಬೇಕು ನಮ್ಮ ಸಂಪ್ರದಾಯವನ್ನು ಪ್ರೀತಿಸಬೇಕು ಎಂದು ಹೇಳಿತು ಆಗ ಹೊಸ ಪಕ್ಷಿ ಅರ್ಥಮಾಡಿಕೊಂಡಿತು ಈಗಲೂ ಬಹಳಷ್ಟು ಸಂಪ್ರದಾಯಗಳು ಇವೆ ಅವುಗಳನ್ನು ಅರ್ಥ ಮಾಡಿಕೊಂಡು ಅವರ ಜೊತೆ ಪ್ರೀತಿಯಿಂದ ಬದುಕೋಣ. ಎಲ್ಲಾ ಸಂಪ್ರದಾಯಗಳ ಬಗ್ಗೆ ನಾನು ಎಷ್ಟು ಅರ್ಥ ಮಾಡಿಕೊಂಡಿದ್ದೇನೆ?