ಮೂರ್ಖರನ್ನೇ ಹುಡುಕುತ್ತಾರೆ

ಒಬ್ಬ  ಮೂರ್ಖ ರಾಜನು ಮಂತ್ರಿಗೆ ಹೇಳುತ್ತಾನೆ ಒಂದು ತಿಂಗಳಲ್ಲಿ 4 ಮೂರ್ಖರನ್ನು ಕರೆದುಕೊಂಡು ಬರಬೇಕು ಎಂದು ಆಜ್ಞೆ ಮಾಡುತ್ತಾನೆ ಅದಕ್ಕೆ ಮಂತ್ರಿ ಒಪ್ಪಿಕೊಂಡು ಒಂದು ತಿಂಗಳು ಕಳೆಯುತ್ತಿದ್ದಂತೆಯೇ ಇಬ್ಬರೂ ಮೂರ್ಖರನ್ನು ದರ್ಬಾರಿಗೆ ಕರೆದುಕೊಂಡು ಬರುತ್ತಾನೆ.

  ರಾಜನು ಕೋಪದಿಂದ ಬರೀ ಎರಡು ಮೂರ್ಖರೇ ಇದ್ದಾರೆ ಎಂದು ಗದರಿಸುತ್ತಾನೆ ಆಗ ಮಂತ್ರಿ ನಾನು ವಿವರವಾಗಿ ಹೇಳುತ್ತೇನೆ ಒಬ್ಬ ಮನುಷ್ಯನನ್ನು ತೂರಿಸಿ ಇವನು ಮೊದಲನೆಯ ಮೂರ್ಖ ಏಕೆಂದರೆ ಕುದುರೆ ಗಾಡಿಯಲ್ಲಿ ಪ್ರಯಾಣ ಮಾಡುತ್ತಿರಬೇಕಾದರೆ ತನ್ನ ಲಗೇಜುಗಳನ್ನು ತಾನೇ ಹೊತ್ತುಕೊಂಡೂ ಇದ್ದನು.

 ಇವನ ಅನಿಸಿಕೆ ಏನೆಂದರೆ ನನ್ನ ಭಾರ ನಾನೇ ಹೊತ್ತುಕೊಂಡಿದ್ದೇನೆ ಕುದುರೆಗೆ ಭಾರ ಹಾಕುತ್ತಿಲ್ಲ ಎಂದು ಇವನು ತಿಳಿದಿದ್ದಾನೆ. (ಸಾಮಾನ್ಯವಾಗಿ ಆಗುವ ಕೆಲಸಗಳನ್ನು ನಾನು ಮಾಡುತ್ತೇನೆ ನಾನು ಮಾಡಿದ್ದೇ ಸರಿ ಹಾಗೂ ಅನಾವಶ್ಯಕವಾಗಿ ಇತರರ ಹೊರೆಗಳನ್ನು ತಾನೆ ಹೊರುವವನು) ಮತ್ತೊಂದು ವ್ಯಕ್ತಿಯನ್ನು ತೋರಿಸಿ ಇವನೇ ಎರಡನೇ ಮೂರ್ಖ.

ಇವನು ತನ್ನ ಮನೆಯ ಮೇಲೆ ಚೆನ್ನಾಗಿರುವ ಹುಲ್ಲು ಬೆಳೆದಿದೆ ಅದಕ್ಕೆ ತನ್ನ ಕುರಿಯನ್ನು ಏಣಿಯ ಮೇಲೆ ಹೋಗು ಒಳ್ಳೆಯ ಹುಲ್ಲು ತಿನ್ನು ಎಂದು ಬಲವಂತ ಮಾಡುತ್ತಿದ್ದಾನೆ (ಬೇರೆ ಯಾರೋ ಸಾಧನೆ ಮಾಡಿರುತ್ತಾರೆ ಅದಕ್ಕಾಗಿ ನೀವು ಅದೇ ರೀತಿ ಸಾಧನೆ ಮಾಡಬೇಕು ಎಂದು ಒತ್ತಾಯಿಸುವವರು)

ಮೂರನೇ ಮೂರ್ಖ ನಾನೇ ಏಕೆಂದರೆ ನನಗೆ ಹಲವಾರು ಕೆಲಸಗಳು ಇದ್ದವು ಅದು ಬಿಟ್ಟು ಒಂದು ತಿಂಗಳು ನಾನು ವ್ಯರ್ಥ ಮಾಡಿಕೊಂಡಿದ್ದೇನೆ (ಯಾರೋ ಹೇಳಿದರು ಅಥವಾ ಅವರ ಗೌರವಕ್ಕೆ ಮರುಳಾಗಿ ಸರಿ ತಪ್ಪು ಯೋಚಿಸದೆ ಸುಮ್ಮನೆ ಸಮಯ ವ್ಯರ್ಥ ಮಾಡಿಕೊಳ್ಳುವುದು)

ರಾಜನು ನಾಲ್ಕನೆಯ ಮೂರ್ಖ ಯಾರು ಎಂದು ಕೇಳುತ್ತಾನೆ ಆಗ ಮಂತ್ರಿಯು ಸ್ವಲ್ಪ ಸಮಯ ತಡೆದು ದಯವಿಟ್ಟು ನನ್ನನ್ನು ಕ್ಷಮಿಸಬೇಕು ನೀವೇ ಆ ನಾಲ್ಕನೆಯ ಮೂರ್ಖರು ಎನ್ನುತ್ತಾನೆ ಏಕೆಂದರೆ ನಮ್ಮ ರಾಜ್ಯದಲ್ಲಿ ಎಲ್ಲರ ಯೋಗಕ್ಷೇಮವನ್ನು ನೋಡಿ ಕೊಳ್ಳಬೇಕಾದವರು ನೀವೇ ನಿಮಗೆ ಬುದ್ಧಿವಂತರು ಬೇಕಾಗಿದ್ದಾರೆ ವಿನಃ ಮೂರ್ಖರು ಬೇಕಾಗಿಲ್ಲ.

 ನೀವು ಬುದ್ಧಿವಂತರನ್ನು ಹುಡುಕಿಸುವ ಬದಲು ಮೂರ್ಖರನ್ನು ಹುಡುಕು ಎಂದು ಎಂದು ಹೇಳಿದ್ದೀರಿ (ಮೂರ್ಖರು ಯಾವಾಗಲೂ ಮೂರ್ಖರನ್ನೇ ಹುಡುಕುತ್ತಾರೆ ನಾನು ಹೇಳಿದಂತೆ ನಡೆಯಬೇಕು ಏನೆ ಹೇಳಿದರು ಕೇಳಿಕೊಂಡು ಇರಬೇಕು ಎನ್ನುವ ಮಾಲೀಕರು ಅಥವಾ ನಾಯಕರು) ಇದನ್ನು ನಾವು ಅರ್ಥ ಮಾಡಿಕೊಂಡು ಯಾರ ಜೊತೆ ಹೇಗಿರಬೇಕು ಎಂದು ನಮ್ಮ ಅಮೂಲ್ಯ ಸಮಯವನ್ನು ಒಳ್ಳೆಯ ಸಾಧನೆಗಾಗಿ ಉಪಯೋಗಿಸೋಣ.

ನಮ್ಮ ಹುಡುಗ ಮೂರ್ಖ

ಒಬ್ಬ ತರಲೆ ಮಾಲಿಕನು ಚಿಲ್ಲರೆ ಅಂಗಡಿಯನ್ನು ಇಟ್ಟುಕೊಂಡು ಇರುತ್ತಾನೆ ತನ್ನ ಸಹಾಯಕ್ಕಾಗಿ ಒಂದು ಹುಡುಗನನ್ನು ನೇಮಿಸಿಕೊಂಡಿರುತ್ತಾನೆ ಯಾರೇ ಗ್ರಾಹಕರು ಬಂದರೂ ನಮ್ಮ ಹುಡುಗ ಮೂರ್ಖ ಎಂದು ಕಿವಿಯಲ್ಲಿ ಹೇಳುತ್ತಾನೆ.

 ಗ್ರಾಹಕರು ನೀವು ಹೇಗೆ ಮೂರ್ಖ ಎಂದು ಹೇಳುತ್ತೀರಿ ಎಂದು ಹೇಳಿದಾಗ ನೀವು ಒಂದು ಕೈಯಲ್ಲಿ 5 ರೂಪಾಯಿಯ ನೋಟು ಹಾಗೂ ಐವತ್ತು ರೂಪಾಯಿಯ ನೋಟನ್ನು ಇಟ್ಟಿದ್ದರೆ ಅವನು ಬರೀ 5ರೂಪಾಯಿಯನ್ನು ಮಾತ್ರ ತೆಗೆದುಕೊಳ್ಳುತ್ತಾನೆ ಎಂದು ಮಾಲೀಕ ಹಾಸ್ಯವಾಗಿ ಹೇಳುತ್ತಾನೆ.

 ಮಾಲೀಕನು ಹೇಳಿದಂತೆ ಗ್ರಾಹಕ ತನ್ನ ಕೈಯಲ್ಲಿ ಐವತ್ತು ಹಾಗೂ 5 ರೂಪಾಯಿಯ ನೋಟನ್ನು ಇಟ್ಟರೆ ಹುಡುಗ 5 ರೂಪಾಯಿಯ ನೋಟನ್ನು ತೆಗೆದುಕೊಳ್ಳುತ್ತಾನೆ ಹೀಗೆ ಎಲ್ಲರಿಗೂ ಮಾಲೀಕ ಹೇಳುತ್ತಿರುತ್ತಾನೆ.

 ಒಬ್ಬ ಸಾತ್ವಿಕ ಸ್ವಭಾವದ ಗ್ರಾಹಕನಿಗೆ ಸಂದೇಹ ಉಂಟಾಗುತ್ತದೆ ಆದರೂ ಅವನು ಹೇಳಿದಂತೆ ಕೈಯಲ್ಲಿ ಐವತ್ತು ರೂಪಾಯಿಯ ನೋಟು ಹಾಗೂ 5 ರೂಪಾಯಿಯ ನೋಟನ್ನು ಇಟ್ಟಾಗ ಹುಡುಗ 5 ರೂಪಾಯಿಯ ನೋಟನ್ನು ಮಾತ್ರ ತೆಗೆದುಕೊಳ್ಳುತ್ತಾನೆ ನಂತರ ಗ್ರಾಹಕನಿಗೆ ಸಂದೇಹ ಆದರೂ ಏನೇ ಆಗಲಿ ಕೆಲಸ ಮುಗಿದ ನಂತರ ಹುಡುಗನಿಗೆ ಮಾತನಾಡಿಸಲೇಬೇಕು ಎಂದು ಹುಡುಗನು ಕೆಲಸ ಮುಗಿಸಿ ಬಂದ ನಂತರ ಕೇಳುತ್ತಾರೆ.

 ನೀನು ನನ್ನ ಪ್ರಕಾರ ಬುದ್ದಿವಂತನೇ ನಿಮ್ಮ ಮಾಲೀಕರು ನಿನಗೆ ಮೂರ್ಖ ಎನ್ನುತ್ತಾರೆ ಇದರಿಂದ ನಿನಗೆ ಏನು ಪ್ರಯೋಜನ ಎಂದು ಕೇಳುತ್ತಾರೆ ಆಗ ಹುಡುಗ ವಿನಮ್ರವಾಗಿ ಹೇಳುತ್ತಾನೆ ಸ್ವಾಮಿ ನಾನು 5 ರೂಪಾಯಿ ತೆಗೆದುಕೊಂಡಾಗ ಅದು ನನಗೆ ಬಕ್ಷೀಷ್ ಆಗಿ ಸಿಗುತ್ತದೆ.

ನಾನು ಐವತ್ತು ರೂ ತೆಗೆದುಕೊಂಡರೆ ನೀವು ಕೂಡ ಆವತ್ತೇ ಬುದ್ಧಿವಂತ ಎಂದು ಮತ್ತೆ ಹಣವನ್ನು ಕೊಡುವುದಿಲ್ಲ ಅಲ್ಲವೇ ಎನ್ನುತ್ತಾನೆ ಮತ್ತೆ ನಾನು ಮೂರ್ಖನಾಗಿ ಇರುವುದರಿಂದ ನನಗೆ ಸರಿಯಾದ ಸಂಬಳವೂ ಬರುತ್ತಿದೆ ಇದರಿಂದ ನನ್ನ ಜೀವನ ಹೇಗೋ ನಡೆಯುತ್ತಿದೆ.

 ನಾನು ಬುದ್ಧಿವಂತ ಎಂದು ತೋರಿಸಿಕೊಂಡರೆ ಆವತ್ತೇ ನನ್ನನ್ನು ಕೆಲಸದಿಂದ ತೆಗೆಯಬಹುದು ಆದ್ದರಿಂದ ನಾನು ಹೀಗೇ ಇದ್ದರೆ ಒಳ್ಳೆಯದು ಎಂದು ಹೇಳಿ ಹೊರಟು ಹೋಗುತ್ತಾನೆ ನಾವು ಕೆಲಸ ಮಾಡುವ ಉದ್ಯೋಗಿಯಾಗಿದ್ದರೆ ಅಥವಾ ನಮ್ಮ ಕೆಲಸ ಆಗುವವರೆಗೂ ಹುಡುಗನಂತೆ ಇದ್ದರೆ ಒಳ್ಳೆಯದಲ್ಲವೇ ನನಗೆ ಎಲ್ಲಾ ತಿಳಿದು ಏನು ಗೊತ್ತಿಲ್ಲದಂತೆ ನಟಿಸಿದ್ದೇನೆಯೇ?

ಶಬ್ದ ಬರುತ್ತಿಲ್ಲ

 

ಒಬ್ಬ ಸಂಸ್ಕಾರವಂತ ರಾಜನಿರುತ್ತಾನೆ ಅವನು ತುಂಬಾ ಚೆನ್ನಾಗಿ ರಾಜ್ಯವನ್ನು ಆಳುತಿರುತ್ತಾನೆ ರಾಜನಿಗೆ ಐವತ್ತು ವರ್ಷದ ಸಮಯದಲ್ಲಿ ರಾಜನಿಗೆ ಒಂದು ಕಾಯಿಲೆ ಬರುತ್ತದೆ ಆ ಕಾಯಿಲೆ ಏನೂ ಮಾಡಿದರು ವಾಸಿಯಾಗುತ್ತಿರುವುದಿಲ್ಲ ಆಗ ವೈದ್ಯರನ್ನು ಕರೆಸುತ್ತಾನೆ ಆಗ ವೈದ್ಯರು ಹೇಳುತ್ತಾರೆ.

 ನಿಮಗೆ ಚರ್ಮದ ಕಾಯಿಲೆ ಇದೆ ನಿಮಗೆ ಈಗ ಕಾಣಿಸಿಕೊಂಡಿದೆ ಅದಕ್ಕೆ ನೀವು ಅರಿಶಿನ ಮತ್ತೆ ಕೆಲವು ಎಲೆಗಳನ್ನು ಅರೆದು ದೇಹಕ್ಕೆ ಲೇಪಿಸಿದರೆ ಕೆಲವು ದಿನಗಳ ನಂತರ ವಾಸಿಯಾಗುತ್ತದೆ ಎಂದು ಸಲಹೆ ನೀಡುತ್ತಾರೆ.

 ವೈದ್ಯರು ಹೇಳಿದಂತೆ ಈ ಕೆಲಸವನ್ನು ಕೆಲವು ಸೇವಕಿಯರಿಗೆ ಹೇಳುತ್ತಾರೆ ಸೇವಕಿಯರು ಬಂದು ಮಸಾಜ್ ಮಾಡಲು ಆರಂಭಿಸುತ್ತಾರೆ ಆದರೆ ಮಸಾಜ್ ಮಾಡುತ್ತಿದ್ದಾಗ ಬಳೆಗಳ ಶಬ್ದವು ಹೆಚ್ಚಾಗಿ ಬರುತ್ತಿರುತ್ತವೆ ಆಗ ರಾಜನಿಗೆ ಸ್ವಲ್ಪ ಮುಜುಗರವಾಗುತ್ತದೆ ಮತ್ತೆ ಬಳೆಗಳ ಶಬ್ದದಿಂದ ಕಿರಿಕಿರಿ ಉಂಟಾಗುತ್ತದೆ ಆಗ ರಾಜನು ಹೇಳುತ್ತಾನೆ.

 ನನಗೆ ಮಸಾಜ್ ಮಾಡಿ ಆದರೆ ಎಲ್ಲಾ ಬಳೆಗಳನ್ನು ತೆಗೆದು ಬಿಡಿ ಎಂದು ಹೇಳಿದಾಗ ಅದರಲ್ಲಿ ಮುಖ್ಯ ಸೇವಕಿಯೂ ಹೀಗೆ ಹೇಳುತ್ತಾಳೆ ನಾವೆಲ್ಲ ಮುತ್ತೈದೆಯರು ಎಲ್ಲಾ ಬಳೆಯನ್ನೂ ತೆಗೆಯಲು ಸಾಧ್ಯವಿಲ್ಲ ಒಂದೊಂದೇ ಬಳೆ ಇಟ್ಟುಕೊಂಡು ಇನ್ನು ಮಿಕ್ಕಿದ್ದು ತೆಗೆದುಬಿಡೋಣ ಎಂದು ಎಲ್ಲಾ ಸೇವಕಿಯರು ಒಂದು ಬಳೆಯನ್ನು ಉಳಿಸಿಕೊಂಡು ಮಿಕ್ಕಿದ್ದ ಬಳೆಗಳನ್ನು ತೆಗೆದುಬಿಡುತ್ತಾರೆ ಮತ್ತೆ ಮಸಾಜ್ ಮಾಡಲು ಶುರು ಮಾಡುತ್ತಾರೆ.

ರಾಜನು ಹಾಯಾಗಿ ನಿದ್ರೆಗೆ ಜಾರುತ್ತಾನೆ ಆದರೆ ಇವರು ಮಸಾಜ್ ಮಾಡುತ್ತಲೇ ಇರುತ್ತಾರೆ ಎದ್ದು ಕಣ್ಣು ಬಿಟ್ಟು ನೋಡಿದಾಗ ಶಬ್ದ ಬರುತ್ತಿರುವುವುದಿಲ್ಲ ಮಸಾಜ್ ಮಾಡುತ್ತಲೇ ಇರುತ್ತಾರೆ ಆಗ ರಾಜನಿಗೆ ಅರಿವಾಗುತ್ತದೆ.

 ಒಂದೇ ಬಳೆ ಇದೆ ಇದ್ದರೆ ಶಬ್ದ ಬರುತ್ತಿಲ್ಲ ಹಲವಾರು ಬಳೆಗಳು ಇದ್ದಾಗ ಶಬ್ದ ಬರುತ್ತದೆ ಅಂದರೆ ಒಂದೇ ಒಂದು ಗುರಿಯನ್ನು ಇಟ್ಟು ಅದರಂತೆ ನಾವು ಮುನ್ನಡೆದರೆ ನಾವು ಯಶಸ್ವಿ ಆಗಬಹುದು ಎಂದು ರಾಜನು ಅರಿತುಕೊಳ್ಳುತ್ತಾನೆ ಆರೋಗ್ಯ ಸುಧಾರಿಸಿದ ನಂತರ ಒಂದೊಂದೇ ಗುರಿಯನ್ನು ತಲುಪುತ್ತಾನೆ.ನಾನು ಒಂದೇ ಗುರಿಯ ಬಗ್ಗೆ ಕೇಂದ್ರೀಕರಿಸಿದ್ದೇನೆಯೇ?

ನಾನು ಅಷ್ಟೇ ಕೊಡುತ್ತಿದ್ದೆ

ಒಬ್ಬ ಬಡ ಮನುಷ್ಯನು ಹಳ್ಳಿಯಲ್ಲಿ ಇದ್ದು ಕೆಲಸ ಮಾಡಿದ ನಂತರ ಇನ್ನಷ್ಟು ಅಭಿವೃದ್ಧಿ ಆಗಬೇಕೆಂದು ನಗರಕ್ಕೆ ಬಂದು ಒಂದು ಬಹಳಷ್ಟು ನೌಕರಿಗಳನ್ನು ಮಾಡಿದ ನಂತರ ತನ್ನದೇ ಸ್ವಂತ ಬೇಕರಿಯನ್ನು ತೆರೆದನು ಅಲ್ಲಿ ಚೆನ್ನಾಗಿ ಕಷ್ಟಪಟ್ಟು ದುಡಿದು ಅಭಿವೃದ್ಧಿಯಾದನು.

 ಸಾಕಷ್ಟು ಗಳಿಸಿದ ನಂತರ ತನ್ನ ಹಳ್ಳಿಯ ನೆನಪಾಗುತ್ತದೆ ಆದ್ದರಿಂದ ನನ್ನ ಹಳ್ಳಿಯನ್ನು ನೊಡಬಹುದು ಮತ್ತೆ ನನ್ನ ಸ್ನೇಹಿತರಿಗೆ ಮಾತನಾಡಿಸಿ ಬರೋಣವೆಂದು ಹಳ್ಳಿಗೆ ಬಂದು ಎಲ್ಲರನ್ನು ಮಾತನಾಡಿಸುತ್ತಾನೆ ಆದರೆ ಇವನ ಎಲ್ಲಾ ಸ್ನೇಹಿತರು ಹಾಗೆ ಇರುತ್ತಾರೆ ಅದರಲ್ಲಿ ಇಬ್ಬರು ಮೂವರು ಮಾತ್ರ ಸ್ವಲ್ಪ ಉನ್ನತಿ ಪಡೆದಿರುತ್ತಾರೆ.

 ಬಹಳಷ್ಟು ಸ್ನೇಹಿತರಲ್ಲಿಒಬ್ಬ ಸ್ನೇಹಿತ ಮಾತ್ರ ಹಾಲು ಮಾರುವವನು ಅಭಿವೃದ್ಧಿಯಾಗಿರುತ್ತಾರೆ ಬೇಕರಿಯವನು ತುಂಬಾ ಸ್ಪೆಷಲ್ ಆಗಿ ಬಿಸ್ಕೆಟ್ ತಯಾರಿಸಿರುತ್ತಾನೆ ಬೇಕರಿಯವನ ಪರಿಣಿತಿ ನೈಪುಣ್ಯತೆ ಎಂದರೆ ವಿಶಿಷ್ಟವಾಗಿ ರುಚಿಯಾದ  ಬಿಸ್ಕೆಟ್ ತಯಾರಿಸುವುದು ಅದೇ ಬಿಸ್ಕೆಟ್ ಎಲ್ಲರಿಗೂ ಹೋಗಿ ಹಂಚುತ್ತಾನೆಎಲ್ಲರೂ ತಿಂದು ಸಂತೋಷಪಡುತ್ತಾರೆ.

 ಬೇಕರಿಯವನಿಗೆ ಮೊಸರು ಬೇಕಾಗಿರುತ್ತದೆ ಅದಕ್ಕೆ ಬೇಕರಿಯವನು ಹಾಲು ಮಾರುವವನ ಬಳಿ ಮಾತನಾಡಿಕೊಳ್ಳುತ್ತಾನೆ ನೀನು ಚೆನ್ನಾಗಿ ಬೆಳೆದಿದ್ದೀಯಾ ದಿನನಿತ್ಯ ನನಗೆ ಮೊಸರು ಬೇಕು ನೀನು ಎಲ್ಲರಿಗೂ ಸ್ವಲ್ಪ ಸ್ವಲ್ಪ ಮೊಸರು ಕೊಡುತ್ತಿದ್ದೀಯಾ ನನಗೆ ಒಟ್ಟಾಗಿ ಕೊಡು ನಿನಗೂ ಸುಲಭವಾಗುತ್ತದೆ ಎಂದು ಹೇಳುತ್ತಾನೆ.

 ನೀನು ಮೊಸರು ಕೊಟ್ಟರೆ ನಾನು ನಿನಗೆ ನನ್ನ ಬಿಸ್ಕೆಟ್ ಗಳನ್ನು ಕೊಡುತ್ತೇನೆ ನೀನು ಕೂಡ ಬಿಸ್ಕೆಟ್ಟನ್ನು ಮಾರಬಹುದು ನಿನಗೂ ಲಾಭ ನನಗೂ ಲಾಭ ಎಂದು ವಿವರಿಸಿ ಹೇಳಿದಾಗ ಇಬ್ಬರು ಒಪ್ಪಿಕೊಂಡು ದಿನನಿತ್ಯ ಅದರಂತೆ ಐದು ಕೆ ಜಿ ಮೊಸರು ಕೊಟ್ಟರೆ ಬೇಕರಿಯವನು 5 ಕೆ ಜಿ ಬಿಸ್ಕೆಟ್ ಕೊಡುವುದು ಈ ರೀತಿ ಒಪ್ಪಂದವಾಗಿರುತ್ತದೆ ಹಾಗೆ ಕೆಲವು ತಿಂಗಳುಗಳು ನಡೆಯುತ್ತದೆ.

 ಕೆಲವು ತಿಂಗಳಗಳ ನಂತರ 4 ಕೆಜಿ ಮೊಸರು ಮಾತ್ರ ಬಂದಿರುತ್ತದೆ ಇದನ್ನು ನೋಡಿದ ಬೇಕರಿಯವನು ಕೆಂಡಮಂಡಲವಾಗುತ್ತಾನೆ ಕೋಪಿಸಿಕೊಂಡು ನೇರವಾಗಿ ಹಳ್ಳಿಗೆ ಬಂದು ಪಂಚಾಯಿತಿ ಸೇರಿಸಿ ನನ್ನ ಸ್ನೇಹಿತ ನನಗೆ ಮೋಸ ಮಾಡುತ್ತಿದ್ದಾನೆ ನೋಡಿ ನಾನು 5 ಕೆಜಿ ಬಿಸ್ಕೆಟ್ ಕೊಟ್ಟೆ ಇವನು 4ಕೆ ಜಿ ಮೊಸರು ಕೊಡುತ್ತಿದ್ದಾನೆ ಎಂದು ಹೇಳುತ್ತಾನೆ.

 ಆಗ ಸಭೆಯ ಮುಖ್ಯಸ್ಥರೂ ಹಾಲು ಮಾರುವವನನ್ನು ಕರೆತರಲು ಹೇಳುತ್ತಾರೆ ಹಾಗೆ ಇವನ ತಕ್ಕಡಿ ತೆಗೆದುಕೊಂಡು ಬರುವಂತೆ ಹೇಳುತ್ತಾರೆ ಹಾಲು ಮಾಡುವವನು ಗಾಬರಿಯಾಗಿ ಹಾಗೆ ಆ ತಂದಿದ್ದ ಬಿಸ್ಕೆಟ್ ಡಬ್ಬವನ್ನು ಜೊತೆಗೆ ತರುತ್ತಾನೆ.

ಪಂಚಾಯಿತಿಯವರು ಹಾಲು ಮಾರುವವನಿಗೆ ಕೇಳುತ್ತಾರೆ ನೋಡಪ್ಪ ನೀನು ಈ ರೀತಿ ಏಕೆ ಮೋಸ ಮಾಡುತ್ತೀಯಾ ಈ ರೀತಿ ನೀನು ಮೋಸ ಮಾಡುತ್ತಿದರೆ ನಮ್ಮ ಹಳ್ಳಿಯ ಹೆಸರು ಏನಾಗಬೇಕು ಎಂದು ಹೇಳಿದಾಗ ಹಾಲು ಮಾರುವವನು ಗೊಂದಲಕ್ಕೆ ಸಿಲುಕಿಕೊಳ್ಳುತ್ತಾನೆ ನಂತರ ಹಾಲು ಮಾರುವವನು ಹೇಳುತ್ತಾನೆ ಸ್ವಾಮಿ ನಾನು ಇಲ್ಲಿಯವರೆಗೆ ಅವನು ಏನು ಒಂದು ಬಾಕ್ಸ್ ನಲ್ಲಿ ಕಳಿಸುತ್ತಿದ್ದನು ಅಷ್ಟನ್ನು ತೂಕ ಮಾಡಿ ನಾನು ಅಷ್ಟೇ  ಮೊಸರನ್ನು ಕೊಟ್ಟಿದ್ದೇನೆ ಎಂದು ಪ್ರಾಮಾಣಿಕವಾಗಿ ಹೇಳುತ್ತಾನೆ.

ಎಲ್ಲರೂ ನೋಡುತ್ತಿದ್ದಂತೆ ತಕ್ಕಡಿಯಲ್ಲಿ ಅವನು ಕಳಿಸಿದ ಬಿಸ್ಕೆಟ್ ನೋಡಿದರೆ ನಾಲಕ್ಕೇ ಕೆ ಜಿ ಇರುತ್ತದೆ ಅದರ ಬದಲಾಗಿ ಹಾಲು ಮಾರುವವನು ಯಾವುದೇ ರೀತಿಯ ತೂಕದ ಬಟ್ಟುಗಳು ಇವನ ಹತ್ತಿರ ಇರುವುದಿಲ್ಲ ಸ್ವಾಮಿ ನಾನು ಅವನು ಎಷ್ಟು ಕೊಡುತ್ತಿದ್ದನೂ ನಾನು ಅಷ್ಟೇ ಕೊಡುತ್ತಿದ್ದೆ ಎಂದು ಅಲ್ಲೆ ತೂಕ ಮಾಡಿ ತೋರಿಸುತ್ತಾನೆ.

ಸ್ವಾಮಿ ನನ್ನ ಹತ್ತಿರ ತೂಕ ಮಾಡುವುದಕ್ಕೆ ಬಟ್ಟುಗಳು ಇಲ್ಲ ಬೇಕರಿಯವನು ಕೊಡುತ್ತಿದ್ದ (ಡಬ್ಬ) ಬಾಕ್ಸ್ ಅನ್ನು ಒಂದು ಕಡೆ ಇಟ್ಟು ಅಷ್ಟೇ ತೂಕದ ಮೊಸರು ನೀಡುತ್ತಿದ್ದೆ ಎಂದಾಗ ಬೇಕರಿಯವನಿಗೆ ಎಲ್ಲರೂ ಸೇರಿ ಬೈಯ್ದು ಕಳಿಸುತ್ತಾರೆ ನಾವು ಮಾಡಿದ್ದು ನಮಗೆ ಹಿಂತಿರುಗಿ ಬರುತ್ತದೆ ಆಕಾಶಕ್ಕೆ ತಲೆಮಾಡಿ ಉಗಿದರೆ ಅದು ನಮ್ಮ ಮೇಲೆ ಬೀಳುತ್ತೆ ಹೊರತು ಬೇರೆಯವರ ಮೇಲಲ್ಲ.

ವಿಶೇಷವಾದ ಹುಟ್ಟು ಹಬ್ಬದ ಕೊಡುಗೆ

 

ಒಂದು ಸಾರಿ ಗಂಡ ಹೆಂಡತಿಗೆ ಹುಟ್ಟುಹಬ್ಬದ ಉಡುಗೊರೆ ಹೊಸ ರೀತಿಯಲ್ಲಿ ಕೊಡಬೇಕೆಂದು ವಿಚಾರ ಮಾಡಿದನು ಮದುವೆಯಾಗಿ ಸುಮಾರು ಹದಿನೈದು ವರ್ಷಗಳು ಕಳೆದಿದ್ದವು ಒಂದೆರಡು ಸಾರಿ ಹುಟ್ಟುಹಬ್ಬಕ್ಕೆ ಉಡುಗೊರೆ ಕೊಟ್ಟಿದ್ದೇನೆ ಹೊರತು ಎಲ್ಲಾ ಹುಟ್ಟು ಹುಟ್ಟು ಹಬ್ಬಗಳಿಗೆ ಕೊಡಿಸಿರಲಿಲ್ಲ ಅದಕ್ಕಾಗಿ ಈ ಬರುವ ಹುಟ್ಟು ಹಬ್ಬವು ಸ್ಪೆಷಲ್ ಆಗಿ ನೀಡಬೇಕು ಎಂದು ಹೆಂಡತಿಗೆ ಹೇಳಿದ.

 ಇವತ್ತು ಹುಟ್ಟು ಹಬ್ಬದ ದಿನ ನಾವು ಆಚೆ ಹೋಗಿದ್ದು ಬರೋಣ ಎಂದು ಕರೆದುಕೊಂಡು ಬಂದನು ಎಲ್ಲಿಗೆ ಹೋಗುತ್ತಿದ್ದೀರಿ ಎಂದು ಕೇಳಿದಾಗ ಗಂಡನಾದವನು ಏನೂ ಹೇಳಲಿಲ್ಲ ನಂತರ ಒಂದು ದೊಡ್ಡ ಬಿಲ್ಡಿಂಗ್ ಇತ್ತು ಅದರಲ್ಲಿ ಕರೆದುಕೊಂಡು ಹೋದನು.

 ಅಲ್ಲಿ ನೋಡಿದರೆ ಹೋಟೆಲ್ ನ ಹೆಸರು ಇತ್ತು ಅದಕ್ಕೆ ಹೆಂಡತಿ ತಿಳಿದುಕೊಂಡಳು ಇವತ್ತು ನನಗೆ ಹೋಟೆಲ್ ನಲ್ಲಿ ಊಟ ಮಾಡಿಸಬಹುದು ಎಂದು ಹೆಂಡತಿ ಬೇಡ ಮನೆಗೆ ಹೋಗೋಣ ಎಂದು ಒತ್ತಾಯ ಮಾಡಿದಾಗ ಪಾರ್ಸಲ್ ಬೇಕಾದರೆ ತೆಗೆದುಕೊಳ್ಳಿ ಎಂದು ಹೇಳಿದಳು ನಂತರ ಬಿಲ್ಡಿಂಗ್ ನ ಒಳಗಡೆ ಹೋದಾಗ ಹೆಂಡತಿಗೆ ಆಶ್ಚರ್ಯ ಕರೆಂಟ್ ಇರುವುದಿಲ್ಲ ಸಂಪೂರ್ಣ ಕತ್ತಲೆಯಿಂದ ಕವಿದಿರುತ್ತದೆ.

 ಸ್ವಾಗತ ಸುಸ್ವಾಗತ ಸುಜಾತರವರಿಗೆ ಮೆನಿ ಮೆನಿ ಹ್ಯಾಪಿ ರಿಟರ್ನ್ಸ್ ಆಫ್ ದ ಡೇ ಹುಟ್ಟು ಹಬ್ಬದ ಶುಭಾಶಯಗಳು ಎಂದು ಹೇಳುತ್ತಾರೆ ಹೆಂಡತಿ ನಿಬ್ಬೆರಗಾದಳು. ಒಂದು ಸೀಟಿನಲ್ಲಿ ಕುಳಿತುಕೊಂಡರು ನಂತರ ಒಳ್ಳೆಯ ಸುಮಧುರ ಸಂಗೀತ ಹಾಡುಗಳು ಶುರುವಾದವು.

ಹೆಂಡತಿಗೆ ಯಾವ ಹಾಡು ಇಷ್ಟವಿತ್ತೋ ಅದೇ ಹಾಡು ಬಂತು ಎಂಜಾಯ್ ಮಾಡಿದರು ಕತ್ತಲಲ್ಲಿ ಹೇಗೆ ಊಟ ಮಾಡುವುದು ಎಂದಾಗ ಸ್ವಲ್ಪ ಇರು ಎಂದು ಗಂಡ ಹೇಳಿದನು ನಂತರ ದೀಪ ಮಿಂಚಿನಂತೆ ಬೆಳಗಿತು ಎಲ್ಲರೂ ಒಂದೇ ದೊಡ್ಡ ರೌಂಡ್ ಟೇಬಲ್ ನಲ್ಲಿ ಕುಳಿತಿದ್ದಾರೆ ಆ ಟೇಬಲ್ ನಲ್ಲಿ ಎಲ್ಲರೂ ಅಂಧರು ಇದ್ದರು.

 ಎಲ್ಲರೂ ಸೇರಿ ಊಟ ಮಾಡಿದರು ನಂತರ ಹೆಂಡತಿಯ ಕೈಯಿಂದ ಎಲ್ಲರಿಗೂ ಒಂದೊಂದು ಉಡುಗೊರೆಯನ್ನು ಕೊಟ್ಟು ಬಂದರು ಆಗ ಹೆಂಡತಿಗೆ ಕಣ್ಣಿನಲ್ಲಿ ನೀರು ಬಂತು ಅಲ್ಲಿಯ ಅಂಧರು ಕೂಡ ತುಂಬಾ ಸಂತೋಷಪಟ್ಟರು ಈ ಹುಟ್ಟು ಹಬ್ಬದ ಸಂದರ್ಭವನ್ನು ಹೆಂಡತಿಯಾದವಳು ಸಾಯುವವರೆಗೂ ಮರೆಯಲಿಲ್ಲಈ ರೀತಿಯಾಗಿಯೂ ವಿಶೇಷವಾದ ಹುಟ್ಟು ಹಬ್ಬದ ಕೊಡುಗೆಯನ್ನು ನಾವು ಕೂಡ ನೀಡಬಹುದಲ್ಲವೇ. ಹುಟ್ಟು ಹಬ್ಬದ ಆಚರಣೆ ವಿಶೇಷವಾಗಿ ಆಚರಿಸಿದ್ದೇನೆಯೇ?

Leave a Comment