ಒಂದು ಮೋಟಾರ್ ಕಂಪೆನಿಯವರು ಒಂದು ಸಂದರ್ಶನವನ್ನು ಏರ್ಪಡಿಸಿದ್ದರು ಕಂಪನಿಯವರ ನಿಯಮ ಏನೆಂದರೆ ಯಾರು ಸಂದರ್ಶನಕ್ಕೆ ಬರುತ್ತಾರೋ ಅವರಿಗೆ ಕಾರನ್ನು ಆ ಕಂಪೆನಿಯವರೇ ಕಳುಹಿಸುತ್ತಾರೆ ಇಬ್ಬರು ಯುವಕರು ಕಂಪನಿಗೆ (ಸೆಲೆಕ್ಟ್) ಆಯ್ಕೆ ಯಾಗುತ್ತಾರೆ.
ಆಯ್ಕೆಯಾದವರು ಆಟೊ ಇಂಜಿನಿಯರಿಂಗ್ ಅಧ್ಯಯನ ಮಾಡಿರುತ್ತಾರೆ ಇವರ ಮನೆಯ ಹತ್ತಿರ ಸರಿಯಾದ ಸಮಯಕ್ಕೆ ಕಾರುಗಳು ಬರುತ್ತದೆ ಕಾರಿನಲ್ಲಿ ಕೂರಿಸಿಕೊಂಡು ಕಂಪೆನಿಗೆ ಹೋಗುತ್ತಿರಬೇಕಾದರೆ ಕಾರ್ ಕೆಟ್ಟುಹೋಗುತ್ತದೆ ಮಧ್ಯದಲ್ಲಿಯೇ ನಿಲ್ಲುತ್ತದೆ ಒಬ್ಬ ಯುವಕನು ಸರಿಯಾದ ಸಮಯಕ್ಕೆ ಹೋಗಬೇಕು ಏನು ಮಾಡುವುದು ಎಂದು ಯೋಚಿಸಿ ಕಂಗಾಲಾಗುತ್ತಾನೆ ಕೆಳಗೆ ಇಳಿದು ಯೋಚಿಸುತ್ತ ಆಕಡೆ ಈಕಡೆ ನೋಡಿ ಸಹಾಯ ಕೇಳುತ್ತಿರುತ್ತಾನೆ.
ಅದೇ ಇನ್ನೊಬ್ಬ ಕಾರು ಕೆಟ್ಟು ಹೋಗಿದ್ದಾಗ ಕೆಳಗೆ ಇಳಿಯುತ್ತಾನೆ ಚಾಲಕನಿಗೆ ಹೇಳುತ್ತಾನೆ ನನಗೆ ಅವಕಾಶ ಕೊಟ್ಟರೆ ನಾನು ಈ ಕಾರನ್ನು ಸಾಧ್ಯವಾದರೆ ಸರಿ ಮಾಡಬಲ್ಲೆ ದಯವಿಟ್ಟು ನನಗೆ ಅವಕಾಶ ಕೊಡಿ ಎಂದು ವಿನಮ್ರತೆಯಿಂದ ಹೇಳಿದಾಗ ಚಾಲಕ ಆಗಬಹುದು ಎಂದು ಹೇಳುತ್ತಾನೆ.
ಒಂದು ಕಡೆಯಿಂದ ಪರಿಶೀಲಿಸುತ್ತಾನೆ ನಂತರ ಯುವಕನು ಬ್ಯಾನೆಟ್ ತೆಗೆದು ನೋಡಿದಾಗ ಚಿಕ್ಕ ಒಂದು ದೋಷವಿರುತ್ತದೆ ಆ ದೋಷವನ್ನು ಸರಿಪಡಿಸುತ್ತಾನೆ ಮತ್ತೆ ಎಂದಿನಂತೆ ಕಾರ್ ಸ್ಟಾರ್ಟ್ ಆಗುತ್ತದೆ ನಂತರ ಸ್ವಲ್ಪ ಸಮಯದ ನಂತರ ಹೋಗಿಕಂಪೆನಿಗೆ ಸೇರುತ್ತಾನೆ.
ಮೊದಲನೆಯವನು ಹೇಳುತ್ತಾನೆ ನಾನು ಸಂದರ್ಶನಕ್ಕೆ ತಡವಾಗಿ ಬಂದೆ ಏಕೆಂದರೆ ನಿಮ್ಮ ಕಾರು ಕೆಟ್ಟು ನಿಂತು ಹೋಗಿದೆ ಎಂದು ದೂಷಿಸಿದ ಇನ್ನೊಬ್ಬ ಯುವಕ ಹೇಳಿದ ಸರ್ ಕ್ಷಮಿಸಿ ನಾನು ಬರಲು ತಡವಾಯಿತು ಏಕೆಂದರೆ ಕಾರು ದಾರಿಯ ಮಧ್ಯದಲ್ಲಿ ಕೆಟ್ಟಿತು ಅದನ್ನು ನೋಡಿ ಅದರ ದೋಷವನ್ನು ಕಂಡುಹಿಡಿದ ನಂತರ ಅದನ್ನು ಸರಿ ಮಾಡಿ ಬರುವುದರಲ್ಲಿ ಸ್ವಲ್ಪ ಸಮಯವಾಯಿತು ಎಂದು ವಿನಮ್ರತೆಯಿಂದ ಹೇಳುತ್ತಾನೆ.
ಆಗ ಕಾರ್ ಕಂಪನಿಯವರು ಎರಡನೆಯವನನ್ನು ಈ ಇಂಟರ್ವ್ಯೂನಲ್ಲಿ ಪಾಸಾಗಿದ್ದೀಯಾ ಏಕೆಂದರೆ ನಾವೇ ಉದ್ದೇಶಪೂರ್ವಕವಾಗಿ ಈ ಕಾರನ್ನು ನಿಲ್ಲುವಂತೆ ಮಾಡಿದ್ದೀವಿ ಅದನ್ನು ಸರಿ ಮಾಡಿಕೊಂಡು ಬಂದಿದ್ದೀಯಾ ಇಂಥಾ ಯುವಕರೇ ನಮಗೆ ಬೇಕಾಗಿರುವುದು ಎಂದು ಯುವಕನನ್ನು ನೇರವಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಓದುವುದರ ಜೊತೆ ಜೊತೆಗೆ ಕೌಶಲ್ಯಗಳನ್ನು ಕಲಿಯುತ್ತಿರೋಣ.
ಅದೃಷ್ಟವು ಕಳೆದುಹೋಗುತ್ತದೆ
ಒಬ್ಬ ಕಿರಿಕಿರಿ ಮನುಷ್ಯ ಇದ್ದನು ಅವನು ಬೆಳಿಗ್ಗೆ ಏಳುತ್ತಿದ್ದಂತೆಯೇ ಇಂದಿನ ದಿನ ಚೆನ್ನಾಗಿಲ್ಲ ತಿಂಡಿ ಮಾಡಿದಾಗ ತಿಂಡಿ ಚೆನ್ನಾಗಿಲ್ಲ ಬಸ್ ಬರಲು ಲೇಟಾದರೆ ಬಸ್ ಸಮಯಕ್ಕೆ ಸರಿಯಾಗಿ ಬರುವುದಿಲ್ಲ ಹೋಟೆಲಿಗೆ ಊಟಕ್ಕೆ ಹೋದರೆ ತರುವವನು ಸ್ವಲ್ಪ ನಿಧಾನ ಮಾಡಿದರೆ ಅದಕ್ಕೂ ಬೈಯುವುದು ಎಲ್ಲೇ ಹೋದರೂ ಕಿರಿಕಿರಿ ಎಲ್ಲಿಯೂ ಒಳ್ಳೆಯದು ಆಗುತ್ತಿಲ್ಲ ಎಂದು ಗುಣಗುತಿದ್ದನು.
ಪ್ರತಿಯೊಂದರಲ್ಲೂ ನಕಾರಾತ್ಮಕ ಭಾವನೆ ನೋಡುತ್ತಿದ್ದನು ಇವನ ಮನಸ್ಸಿಗೆ ಒಂದು ವಿಚಿತ್ರ ಯೋಚನೆ ಬಂತು ನಾನು ಸತ್ತರೆ ಅಲ್ಲಿ ಚೆನ್ನಾಗಿ ಇರಬಹುದು ಎಂದು ಯೋಚಿಸಿದನು ನಂತರ ಮಲಗಿದನು.
ಸಾಯಲೇ ಬೇಕೆಂದು ನಿರ್ಧರಿಸಿ ಯಾವುದು ಒಳ್ಳೆಯ ದಾರಿ ಎಂದು ಹುಡುಕಿ ಕೊನೆಗೆ ರೈಲಿಗೆ ಸಿಕ್ಕಿ ಸತ್ತರೆ ಒಳ್ಳೆಯದು ಎಂದು ರೈಲಿಗೆ ಕತ್ತನ್ನು ಇಟ್ಟನು ರೈಲು ಈತನ ಮೇಲೆ ಹೋಯಿತು ಇವನು ಸತ್ತನು ನಂತರ ದೊಡ್ಡ ಅರಮನೆಯಲಿ ಹೋಗುತ್ತಿದಂತೆ ಇಬ್ಬರು ಇವನ್ನು ತಡೆದು ಹಿಡಿದರು ಸ್ವಲ್ಪ ಹೊತ್ತು ಕಾಯಬೇಕು ನಂತರ ಹೋಗಬೇಕು ಎಂದಾಗ ಆಗಲಿ ಎಂದು ನಿಂತು ಕೊಂಡಿದ್ದನು.
ಹಾಗೆಯೇ ಪಕ್ಕದಲ್ಲಿ ನೋಡಿದರೆ ಇವನಂತೆಯೇ ಒಬ್ಬ ನಿಂತುಕೊಂಡಿದ್ದಾನೆ ಇವನು ಯಾರಿರಬಹುದು ಎಂದು ಕೇಳಿದನು ನಂತರ ತನ್ನ ಪರಿಚಯವನ್ನು ಹೇಳಿದನು ಮತ್ತೆ ಪ್ರಪಂಚದ ಜೀವನ ಸಾಕು ಅಲ್ಲಿ ಇರುವುದು ಬೇಡ ಎಂದು ನಾನು ಸ್ವರ್ಗದಲ್ಲಿ ಸುಖವಾಗಿ ಇರೋಣ ಎಂದು ಬಂದಿದ್ದೇನೆ ಎಂದು ಹೇಳಿದನು.
ಇವನಂತೆಯೇ ಇರುವ ವ್ಯಕ್ತಿ ನಗುತ್ತಾ ಹೇಳಿದನು ನಾನು ಯಾರು ಗೊತ್ತಾ ಎಂದಾಗ ನನಗೆ ಗೊತ್ತಿಲ್ಲ ಎನ್ನುತ್ತಾನೆ ನಾನು ದುರಾದೃಷ್ಟ ಇಲ್ಲಿಯೂ ನೀನು ಖುಷಿಯಾಗಿ ಇರಬಾರದು ಎಂದು ಬಂದಿದ್ದೇನೆ ನೀನು ಎಲ್ಲಿಯೇ ಹೋದರೂ ನಿನಗೆ ನಾನು ಖುಷಿಯನ್ನು ಕೊಡುವುದಿಲ್ಲ ಬರೀ ಸಂಕಟವನ್ನೇ ತರುತ್ತೇನೆ ಎನ್ನುತ್ತಾನೆ. ಮನುಷ್ಯ ಹೇಳುತ್ತಾನೆ ನೀನು ಇಲ್ಲಿ ಯಾಕೆ ಬಂದೆ ಎಂದಾಗ ನೀನು ಎಲ್ಲರನ್ನೂ ಬರೀ ಬೈಯುವುದರಲ್ಲೇ ಕಾಲ ಕಳೆದಿದ್ದೀಯಾ ನೀನು ಇರುವವರೆಗೂ ನಾನು ಕಾಡುತ್ತಿರುತ್ತೇನೆ ಎಂದಾಗ ಬೇಡ ಬೇಡ ಎಂದು ಹೇಳುತ್ತಾನೆ.
ನಾನು ನಿನ್ನನ್ನು ಬಿಡುವುದಿಲ್ಲ ನಿನ್ನಿಂದ ನಾನು ಹೇಗೆ ತಪ್ಪಿಸಿಕೊಳ್ಳಬಹುದು ಏನಾದರೂ ಉಪಾಯ ಇದೆಯೇ ಎಂದು ಕೇಳುತ್ತಾನೆ ಒಂದು ಮಾತು ಸದಾ ನೆನಪಿನಲ್ಲಿಡು ದುರಾದೃಷ್ಟ ಎಂದು ಹೇಳಬೇಡ ಆಗ ಇರುವ ಅದೃಷ್ಟವು ಕಳೆದುಹೋಗುತ್ತದೆ.
ಏನೇ ಆದರೂ ಒಳ್ಳೆಯದೇ ಆಯಿತು ಎಂದು ಯೋಚಿಸಿ ಏನೇ ಸಿಕ್ಕಿದರು ಕೃತಜ್ಞತೆ ಸಲ್ಲಿಸು ಆಗ ನಿನಗೆ ಒಳ್ಳೆಯದೇ ಆಗುತ್ತದೆ ಇಲ್ಲ ಅಂದರೆ ನಾನು ನಿನಗೆ ಕಾಡಲು ಬರುತ್ತೇನೆ ಎನ್ನುತ್ತಾನೆ ಗಾಬರಿಯಿಂದ ಏಳುತ್ತಾನೆ ಆಗ ನೋಡಿದರೆ ಅದು ಕನಸು ಆಗ ಕಿರಿಕಿರಿ ಮನುಷ್ಯನಿಗೆ ಅರ್ಥವಾಗುತ್ತದೆ.
ಏನೇ ಆದರೂ ಒಳ್ಳೆಯದಕ್ಕೆ ಆಗುತ್ತದೆ ಎಂದು ನಂತರ ಬದುಕಲಿಕ್ಕೆ ಆರಂಭಿಸಿದನು. ಎಲ್ಲವೂ ಸ್ವೀಕರಿಸುವ ಮನೋಭಾವನೆ ಬೆಳೆಸಿಕೊಳ್ಳೋಣ.
ನಾನು ತೀರ್ಮಾನ ಮಾಡಿಬಿಟ್ಟಿದ್ದೇನೆ
ಒಂದು ಸಂಸಾರ ಅದರಲ್ಲಿ ಗಂಡ ಹೆಂಡತಿ ಇಬ್ಬರು ಮಕ್ಕಳು ಇದ್ದರು ಮಕ್ಕಳು ಮದುವೆಯಾದ ನಂತರ ಬೇರೆಯಾದರು ಗಂಡ ಹೆಂಡತಿ ಮಾತ್ರ ಇಬ್ಬರು ಜೀವನ ನಡೆಸಿದರು ಗಂಡ ಹೆಂಡತಿ ಮಕ್ಕಳು ಬಿಟ್ಟು ಹೋದರು ಎಂದು ಕೊರಗಲಿಲ್ಲ.
ಗಂಡ ಹೆಂಡತಿ ಇಬ್ಬರೇ ಚೆನ್ನಾಗಿ ಅನ್ಯೂನ್ಯವಾಗಿ ಬದುಕಿದರು ಕೆಲವು ವರ್ಷ ಬದುಕಿದ ನಂತರ ಹೆಂಡತಿ ಯಾವುದೋ ಕಾಯಿಲೆಗೆ ತುತ್ತಾಗಿ ತೀರಿ ಹೋದರು ಇದರಿಂದಾಗಿ ಹಿರಿಯರಿಗೆ ತುಂಬಾ ನೋವುಂಟಾಯಿತು ನಂತರ ಅವರು ಒಂದು ವೃದ್ಧಾಶ್ರಮಕ್ಕೆ ಸೇರಿಕೊಳ್ಳೋಣ ಎಂದು ಬಂದರು.
ಸೇರಲು ಬಂದಾಗ ವೃದ್ಧಾಶ್ರಮದ ಕೆಲವು ನೀತಿ ನಿಯಮಗಳು ತಿಳಿಸುತ್ತಾರೆ ನಿಮಗೆ ಒಂದು ಕೋಣೆ ಇರುತ್ತದೆ ನಿಮಗೆ ಇಷ್ಟು ಅವಕಾಶ ಇರುತ್ತದೆ ಇಷ್ಟಿಷ್ಟು ಊಟತಿಂಡಿ ಇರುತ್ತದೆ ಎಷ್ಟೆಷ್ಟು ಸ್ವಾತಂತ್ರ್ಯ ಇರುತ್ತದೆ ಎಂದು ವಿವರಿಸುತ್ತಾರೆ ಆ ವ್ಯಕ್ತಿಯು ಎಲ್ಲವೂ ಚೆನ್ನಾಗಿದೆ ವ್ಯವಸ್ಥಿತವಾಗಿದೆ ಶುಚಿಯಾಗಿದೆ ಎಂದು ಉತ್ಸಾಹದಿಂದ ಹೇಳುತ್ತಾರೆ.
ಇದನ್ನು ಕೇಳಿದ ವೃದ್ಧಾಶ್ರಮದ ಮ್ಯಾನೇಜರ್ ಅವರು ನೀವು ನಮ್ಮ ಆಶ್ರಮ ನೋಡಿಯೇ ಇಲ್ಲ ಎಲ್ಲವೂ ಚೆನ್ನಾಗಿದೆ ಎಂದು ಹೇಳುತ್ತಿದ್ದೀರಿ ಹೇಗೆ ಎಂದಾಗ ಹಿರಿಯರು ಹೇಳುತ್ತಾರೆ ನಾನು ವೃದ್ಧಾಶ್ರಮಕ್ಕೆ ಬಂದಿದ್ದೇನೆ ನಾನು ಹೊಂದಿಕೊಂಡು ಬದುಕುತ್ತೇನೆ ಎಂದು ನನ್ನ ಮನಸ್ಸಿನಲ್ಲಿ ತೀರ್ಮಾನಿಸಿದ್ದೇನೆ.
ವೃದ್ಧಾಶ್ರಮದ ವಸ್ತುಗಳು ಹೇಗಿದೆ ಎನ್ನುವುದು ಕಾರಣವಲ್ಲ ನನ್ನ ಮನಸ್ಸು ಹೇಗೆ ಹೊಂದಿಸಿಕೊಳ್ಳುತ್ತೇನೆ ಎನ್ನುವುದು ಬಹಳ ಮುಖ್ಯ ಎಂದು ಹೇಳಿದರು ನನ್ನ ಮನಸನ್ನು ಇಲ್ಲಿ ಇರಲೇ ಬೇಕೆಂದು ಹೊಂದಿಸಿ ಕೊಂಡು ಬಿಟ್ಟಿದ್ದೇನೆ ಅದು ಹೇಗಾದರೂ ಇರಲಿ ನಾನು ಹೊಂದಿಕೊಂಡು ಹೋಗುತ್ತೇನೆ ಎಂದು ಹೇಳಿದರು.
ಸಹಜವಾಗಿ 2ಆಯ್ಕೆಗಳು ಇರುತ್ತವೆ ಒಂದು ಇಲ್ಲದೆ ಇರುವುದನ್ನು ನೋಡಿ ಚಿಂತೆ ಮಾಡುವುದು ಕೊರಗುವುದು ಮತ್ತೊಂದು ನಮಗೆಷ್ಟು ಸಿಕ್ಕಿದೆಯೋ ಅಷ್ಟಕ್ಕೆ ಕೃತಜ್ಞತೆ ಸಲ್ಲಿಸಿ ನಗುನಗುತ್ತಾ ಬದುಕೋಣ.
ನೀರನ್ನು ಬೆರೆಸಿದರೆ
ಹಾಲಿಗೆ ಸ್ವಲ್ಪ ನೀರನ್ನು ಬೆರೆಸಿದರೆ ಹಾಲು ತೆಳ್ಳಗಾಗುತ್ತದೆ ನೀರನ್ನು ಬೇರೆ ಮಾಡಬೇಕು ಎಂದರೆ ಬೇರೆ ಮಾಡಲು ಸಾಧ್ಯವಿಲ್ಲ ಅದು ಕೂಡ ಹಾಲಾಗಿರುತ್ತದೆ ಅದೇ ಒಳ್ಳೆಯ ಹಾಲಿಗೆ ಸ್ವಲ್ಪ ಮೊಸರು ಹಾಕಿ ಹೆಪ್ಪು ಹಾಕಿದರೆ ಇರುವ ಎಲ್ಲಾ ಹಾಲು ಮೊಸರಾಗುತ್ತದೆ.
ಮೊಸರಾದ ನಂತರ ಮೊಸರನ್ನು ಚೆನ್ನಾಗಿ ಕಡೆದರೆ ಬೆಣ್ಣೆ ಬರುತ್ತದೆ ಬೆಣ್ಣೆಯನ್ನು ನೀರಿನಲ್ಲಿಟ್ಟರೆ ಆಗ ಬೆಣ್ಣೆಯು ನೀರಿನೊಂದಿಗೆ ಬೆರೆತು ಕೊಳ್ಳುವುದಿಲ್ಲ ನೀರಿನ ಮೇಲೆ ತೇಲಾಡುತ್ತಿರುತ್ತದೆ ಬೆಣ್ಣೆ ನೀರಿನಲ್ಲಿಯೇ ಇದ್ದರೂ ಪ್ರತ್ಯೇಕವಾಗಿ ಉಳಿಯುತ್ತದೆ.
ಪ್ರಪಂಚದಲ್ಲಿ ಇದ್ದರೂ ಪ್ರಪಂಚಕ್ಕೆ ಅಂಟಿಕೊಳ್ಳದೆ ಪ್ರತ್ಯೇಕವಾಗಿ ಬದುಕೋಣ.
ಗುರುಗಳಿಗೆ ತಲೆ ತಿರುಗುತ್ತದೆ
ಒಬ್ಬ ಅತಿ ಬುದ್ಧಿವಂತ ಯುವಕ ಹಲವಾರು ಗುರುಗಳನ್ನು ನೋಡಿ ಸಂಶೋಧನೆ ಮಾಡಿ ನಂತರ ಒಬ್ಬ ಗುರುಗಳ ಹತ್ತಿರ ಹೋಗಿ ನೀವೇ ನನ್ನ ಗುರು ಎಂದು ನಾನು ತೀರ್ಮಾನ ಮಾಡಿದ್ದೇನೆ ಎಂದು ಹೇಳುತ್ತಾನೆ ಈ ಮಾತನ್ನು ಕೇಳಿದ ಗುರುಗಳಿಗೆ ತಲೆ ತಿರುಗುತ್ತದೆ ಮೊದಲ ಬಾರಿಗೆ ಈ ರೀತಿ ಕೇಳಿದ್ದೇನೆ ಅಪರೂಪದ ಶಿಷ್ಯ ಬಂದಿದ್ದಾನೆ ಎಂದು ಶಿಷ್ಯನನ್ನು ವಿಶೇಷವಾಗಿ ಗ್ರಹಿಸುತ್ತಾರೆ.
ಶಿಷ್ಯನನ್ನು ಗಮನಿಸಿದ ನಂತರ ನೀನು ಎಲ್ಲರನ್ನೂ ಸಂಶೋಧನೆ ಮಾಡಿ ನನ್ನ ಹತ್ತಿರ ಬಂದಿದ್ದೀಯಾ ನೀನು ನನಗೆ ನಂಬಿದ್ದೀಯಾ ಅಂದರೆ ನಾನು ನಿನಗೆ ನಂಬಬೇಕಲ್ಲ ಅದಕ್ಕೆ ಒಂದು ದಿನ ನಾನು ಹೇಳಿದಂತೆ ನೀನು ಕೇಳಬೇಕು ಆಗ ನಾನು ನಿನ್ನನ್ನು ನಂಬುತ್ತೇನೆ ನಂತರ ಶಿಷ್ಯನಾಗಿ ಸ್ವೀಕರಿಸುತ್ತೇನೆ ಎಂದು ಹೇಳುತ್ತಾರೆ.
ಆಗ ಶಿಷ್ಯ ಆದವನು ಆಗಲಿ ಎಂದು ಹೇಳುತ್ತಾನೆ ಗುರುಗಳು ನಾನು ಏನು ಹೇಳುತ್ತೇನೆ ಅದನ್ನು ಮಾತ್ರ ಮಾಡಬೇಕು ಮತ್ತೆ ಅದು ಯಾಕೆ? ಇದು ಯಾಕೆ? ಎಂದು ಕೇಳಬಾರದು ಎಂದು ಎಚ್ಚರಿಕೆ ನೀಡುತ್ತಾರೆ ಯುವಕ ಆಗಲಿ ಎಂದು ಹೇಳುತ್ತಾನೆ ಆಗ ಗುರುಗಳು ಬಾವಿಯ ಬಳಿ ಒಂದು ಬಕೆಟ್ ಇದೆ ಅದರಲ್ಲಿ ನೀರನ್ನು ತಂದು ಗಿಡಗಳಿಗೆ ಹಾಕು ಎಂದು ಹೇಳುತ್ತಾರೆ.
ಬಕೆಟ್ ತಳದಲ್ಲಿ ತೂತುಗಳು ಇರುತ್ತವೆ ನೀರು ತರುತ್ತಿದ್ದಂತೆಯೇ ಖಾಲಿಯಾಗಿರುತ್ತದೆ ನಂತರ ಶಿಷ್ಯನು ಹೋಗಿ ಹೇಳುತ್ತಾನೆ ಈ ಬಕೆಟ್ನಲ್ಲಿ ತೂತುಗಳಿವೆ ನೀರು ತುಂಬಿ ಹಾಕಲಿಕ್ಕೆ ಸಾಧ್ಯವೇ ಇಲ್ಲ ಆಗ ಗುರುಗಳು ನಾನು ಹೇಳಿದಂತೆ ನೀನು ಕೆಲಸ ಮಾಡಲು ಆಗುತ್ತಿಲ್ಲ ನಾನೇ ಬೇಕು ಎಂದು ಹೇಳುತ್ತಿದ್ದೀಯಾ ನನ್ನ ಮಾತು ನೀನು ನಂಬಲಿಕ್ಕೆ ತಯಾರಿಲ್ಲ ಅಂದಮೇಲೆ ನೀನು ನನ್ನ ಆಶ್ರಮದಿಂದ ಹೋಗಬಹುದು ಎಂದು ಕಳುಹಿಸುತ್ತಾರೆ. ನಮ್ಮ ಇಚ್ಛೆಯಂತೆ ಇತರರು ಹೊಂದಿಕೊಳ್ಳಲಾರರು ಇತರರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬದುಕೋಣ.