ಬೇರುಸಮೇತ ಕಿತ್ತು ಹಾಕಿದ

ಒಂದು ಊರಿನಲ್ಲಿ ಶ್ರೀಮಂತರು ಇದ್ದರೂ ಅವರು ಅವರ ಹಳ್ಳಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಹಾಗೆಯೇ ಹಳ್ಳಿ ಜನರು ಕೂಡ ಶ್ರೀಮಂತರನ್ನು ತುಂಬಾ ಗೌರವಿಸುತ್ತಿದ್ದರು ಶ್ರೀಮಂತರಿಗೆ ಒಬ್ಬ ಮಗನೂ ಇದ್ದನ್ನು. ಇವನ ವಯಸ್ಸು ಸುಮಾರು ಹತ್ತರಿಂದ ಹನ್ನೆರಡು ವರ್ಷ ಇರಬಹುದು ಒಂದೇ ಮಗನಾಗಿ ಇರುವುದರಿಂದ ಚೆನ್ನಾಗಿ ಬೆಳೆಸಿದ್ದರೂ ಅತಿ ಮುದ್ದಿನಿಂದ ಬೆಳೆಸಿದರು.

 ಮಗನ ವರ್ತನೆ ಚೆನ್ನಾಗಿರಲಿಲ್ಲ ಕೋಪ, ಸಿಟ್ಟು, ಹೆಚ್ಚಾಗಿತ್ತು ಆದ್ದರಿಂದ ಯಾರು ಗೌರವ ಕೊಡುತ್ತಿರಲಿಲ್ಲ ಆಗ ತಂದೆಯಾದವರಿಗೆ ನೆನಪಾಯ್ತು ಊರಿನ ಆಚೆ ಬಾಬಾ ಇದ್ದಾರೆ ಅವರೊಂದಿಗೆ ಮಾತನಾಡಿದರೆ ನನ್ನ ಮಗ ಸರಿಯಾಗಬಹುದೆಂದು ತಿಳಿದು ಬಾಬಾ ಅವರ ಹತ್ತಿರ ಹೋಗಿ ತಮ್ಮ ಮಗನ ವಿಷಯವನ್ನು ಹೇಳಿದರು.

 ನಂತರ ಬಾಬಾ ಅವರು ಬಂದು ಶ್ರೀಮಂತರ ಹುಡುಗನ ಜೊತೆ ಮಾತಾಡಿದರು ನಂತರ ಆ ಹುಡುಗನನ್ನು ಊರಿನ ಆಚೆ ಇದ್ದ ಬೆಟ್ಟಕ್ಕೆ ಕರೆದುಕೊಂಡು ಹೋದರು ಅಲ್ಲಿಯೂ ಅವನ ಕೆಟ್ಟ ವರ್ತನೆ ಪ್ರದರ್ಶಿಸುತ್ತಲೇ ಇದ್ದ ಆಗ ಬಾಬಾ ಅವರು ಕರೆದು ನೋಡು ಅಲ್ಲಿ ಚಿಕ್ಕ ಚಿಕ್ಕ ಗಿಡಗಳಿವೆ ಆ ಗಿಡಗಳಲ್ಲಿ ತುಂಬಾ ಚೆನ್ನಾಗಿರುವ ಎಲೆಗಳು ಇವೆ ನೋಡು ಎಂದು ತೋರಿಸಿದರು.

 ಇವು ಚೆನ್ನಾಗಿರಬಹುದು ತಿಂದು ನೋಡು ಎಂದು ಹೇಳಿದರು ಹುಡುಗ ಹೇಳಿದಂತೆಯೇ ಕೆಲವು ಎಲೆಗಳನ್ನು ಬಾಯಿಗೆ ಹಾಕಿಕೊಂಡನು ನಾಲ್ಕೈದು ಸಾರಿ ಅಗೆದನು ಆಗ ಹುಡುಗನಿಗೆ ತಿಳಿಯಿತು.

 ಇದು ಬೇವಿನ ಎಲೆಗಳು ಕಹಿ ಎಂದು ನಂತರ ಥೊ, ಥೊ ಎನ್ನುತ್ತಾ ಒಂದೇ ಸಾರಿಗೆ ಉಗಿದು ಬಿಟ್ಟ ಮತ್ತೆ ಬಾಬಾ ಅವರಿಗೆ ಕೇಳಿದ ಏನಾದರೂ ಸಿಹಿ ಇದೆಯೇ ಕಹಿ ಹೋಗುತ್ತಿಲ್ಲ ಎಂದನು.

 ಮೊದಲೇ ಹುಡುಗ ಅವನಿಗೆ ಸಿಟ್ಟು ಬಂತು ನಂತರ ಸಿಹಿಯನು ಸಿಗದಿದ್ದ ಕಾರಣ ಉಕ್ಕಿಬಂದ ಸಿಟ್ಟಿನಿಂದಾಗಿ ಎಲ್ಲಾ ಸಸಿಗಳನ್ನು ಬೇರು ಸಮೇತ ಕಿತ್ತು ಹಾಕಿದ ನಂತರ ಅವುಗಳನ್ನು ಕಾಲಿನಿಂದ ತುಳಿಯುತ್ತಾ ತನ್ನ ಕೋಪವನ್ನು ಕಡಿಮೆ ಮಾಡತೊಡಗಿದ.

 ಇದನ್ನು ನೋಡಿದ ಬಾಬಾ ಅವರು ಹೇಳಿದರು ಏಕೆ ಹೀಗೆ ಮಾಡುತ್ತಿದ್ದೀಯಾ? ಎಂದಾಗ ಹುಡುಗ ಹೇಳಿದ ಚಿಕ್ಕ ಸಸಿಗಳೇ ಇಷ್ಟು ಕಹಿ ಇರಬೇಕಾದರೆ ಈ ಮರಗಳು ದೊಡ್ಡದಾದರೆ ಎಷ್ಟು ಕಷ್ಟ ಎಂದು ಹೇಳಿದನು ಆಗ ಬಾಬಾ ಅವರು ಮುಗುಳ್ನಗುತ್ತಾ ಹೇಳಿದರು ಇಷ್ಟು ಚಿಕ್ಕ ಸಸಿಗಳೇ ಇಷ್ಟು ಕಹಿಯಾಗಿದೆ.

ನೀನು ಯೋಚಿಸಿ ಅದನ್ನು ನಿರ್ನಾಮ ಮಾಡುತ್ತಿದ್ದೀಯಾ ನೀನು ಚಿಕ್ಕ ಹುಡುಗನಾಗಿದ್ದೀಯಾ ನಿನ್ನ ವರ್ತನೆ ಸರಿ ಇಲ್ಲ ಕೋಪ, ಸಿಟ್ಟು, ಅಹಂಕಾರ ಮುಂದೆ ಎಷ್ಟು ದೊಡ್ಡ ಅನಾಹುತ ಆಗಬಹುದಲ್ಲವೇ ಮತ್ತೆ ನಿನ್ನನ್ನು ಮನೆಯಿಂದಲೇ ಕಿತ್ತು ಬಿಸಾಕಿದರೆ ಹೇಗಿರುತ್ತೆ ಎಂದು ಹೇಳಿದರು. ಆಗ ಹುಡುಗನಿಗೆ ಅರ್ಥವಾಯಿತು ಮಕ್ಕಳು ಚಿಕ್ಕವರಾಗಿದ್ದಾಗಲೆ ಅವರನ್ನು ಸರಿಯಾದ ಮಾರ್ಗದರ್ಶನ ನೀಡೋಣ.

  ನಿನ್ನ ತಾಕತ್ತು ತೋರಿಸಬಹುದಲ್ಲ?

ಒಂದು ಕಂಪನಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಬಿದ್ದು ಉರಿಯುತ್ತಿರುತ್ತದೆ ಬೆಂಕಿಯನ್ನು ನಂದಿಸಲು (ಫೈರ್ ಇಂಜಿನ್) ಅಗ್ನಿಶಾಮಕ ದಳ ಬರುತ್ತದೆ, ಆಗ ಉರಿಯುತ್ತಿದ್ದ ಬೆಂಕಿ ಚಿಮ್ಮುವ ನೀರನ್ನು ಹೇಳಿತು. ನೀನು ಎಷ್ಟೊಂದು ಮೃದು ಮತ್ತು ನಿನ್ನಲ್ಲಿಗೆ ಬಂದು ಇಷ್ಟಪಟ್ಟು ಈಜುತ್ತಾರೆ, ಆಟವಾಡುತ್ತಾರೆ, ಆದರೆ ನನ್ನ ಬಳಿ ಯಾರೂ ಬರುವುದಿಲ್ಲ.

 ನನ್ನನ್ನು ನೋಡಿದರೆ ಎಲ್ಲರೂ ಭಯದಿಂದ ಓಡುತ್ತಾರೆ ಮತ್ತು ನನ್ನನ್ನು ಎಲ್ಲರೂ ಬೈಯುತ್ತಾರೆ ಎನ್ನುತ್ತದೆ. ನಿನ್ನಂತೆ ನನ್ನನ್ನೂ ಪ್ರೀತಿಸಲು ಈ ಮಾನವರಿಗೆ ಸಾಧ್ಯವೇ? ಎಂದಾಗ ಇದಕ್ಕೆ ಪ್ರತಿಯಾಗಿ ನೀರು ಹೇಳುತ್ತದೆ ಸುಟ್ಟು ಬೂದಿ ಮಾಡುವ ಕೆಂಪು ಬೆಂಕಿಯೇ ಮೊದಲು ನಿನ್ನನ್ನು ನೀನು ಅರ್ಥಮಾಡಿಕೊಂಡಿಲ್ಲ.

 ಕುತೂಹಲಕ್ಕಾಗಿ ಒಂದು ಪ್ರಶ್ನೆ ಕೇಳುತ್ತೇನೆ, ನೀನು ಒಂದು ಕಿಡಿಯಾಗಿ ಬಂದಿದ್ದು ಅದು ಹೇಗೆ ಬೃಹತ್ ಸ್ವರೂಪವಾಗಿ ಬಿಡುತ್ತೀಯಾ?   ಈ ಮಾತನ್ನು ಕೇಳಿ ಬೆಂಕಿ ಹೆಮ್ಮೆಯಿಂದ ಹೇಳಿತು ಅದೇ ನನ್ನಲ್ಲಿರುವ ತಾಖತ್ತು ಎಂದಿತು.

ನೀರು ಮತ್ತೆ ಮೃದುವಾಗಿ ಹೇಳಿತು ಮಂದಿರದಲ್ಲಿ ಸಾಮಾನ್ಯ ಜ್ಯೋತಿಯಾಗಿ ಏಕೆ ಉರಿಯುತ್ತೀಯಾ, ಅಲ್ಲೂ ನಿನ್ನ ತಾಕತ್ತು ತೋರಿಸಬಹುದಲ್ಲ? ಎಂದಿತು. ಅದಕ್ಕೆ ಬೆಂಕಿ ದೇವರ ಮುಂದೆ ನಾನು ಚಿಕ್ಕವನು, ತಲೆ ಬಗ್ಗಿಸಿಯೇ ಇರಬೇಕು ಎಂದು ಹೇಳಿತು.

ಆಗ ನೀರು ನೋಡಿದೆಯಾ, ಉತ್ತರ ನಿನ್ನಲ್ಲಿಯೇ ಇದೆ ನಿನ್ನ ಶಕ್ತಿ ಎಲ್ಲರಿಗೂ ತಿಳಿದ ವಿಚಾರವೆ, ಆದರೆ ಅದನ್ನ ಮತ್ತೆ ಮತ್ತೆ ಸಾಬೀತು ಪಡಿಸುವ ಅವಶ್ಯಕತೆ ನಿನಗೆ ಬೇಡ. ನೀನು ಮಂದಿರದಲ್ಲಿ ತಲೆ ತಗ್ಗಿಸಿ ನಿಂತಾಗ ದೇವರಿಗೆ ದೀಪವೂ, ಆರತಿಯೂ ಆಗುತ್ತೀಯಾ.

 ಆದ್ದರಿಂದ ಜನ ಅಲ್ಲಿ ನಿನ್ನನ್ನು ಮುಟ್ಟಿ ಭಕ್ತಿಯಿಂದ ನಮಸ್ಕರಿಸುತ್ತಾರೆ. ನಮ್ಮಲ್ಲಿ ಎಷ್ಟೇ ಶಕ್ತಿಗಳಿದ್ದರೂ ನಾವು ಎಲ್ಲಿ ಸಾಮಾನ್ಯರಂತೆ ಇರುತ್ತೇವೊ ಅಲ್ಲಿ ನಮಗೆ ಸಕಲ ಗೌರವ, ಮರ್ಯಾದೆಗಳೂ ಸ್ಥಾನ-ಮಾನಗಳು ಸಿಕ್ಕೇ ಸಿಗುತ್ತವೆ.

ನಮಗೆ ಶಕ್ತಿ ಇದೆ ಎಂದು ಬಲ ಪ್ರದರ್ಶನ ಮಾಡಲು ಹೋದರೆ ಜನರನ್ನು ಹೆದರಿಸಬಹುದೇ ವಿನಃ ನಮ್ಮ ಸ್ಥಾನ-ಮಾನಗಳು ಕಳೆದುಕೊಳ್ಳುತ್ತೇವೆ. ಹೆದರಿಸಿ ಪಡೆಯುವ ಗೌರವವು ಗೌರವವೇ ಅಲ್ಲ ಅಗತ್ಯಕ್ಕಿಂತ ಯಾವುದೆ ಹೆಚ್ಚಾದರೆ ಅಮೃತವೂ ವಿಷವಾಗುವಾಗಬಹುದು

 ನಮ್ಮಲ್ಲಿನ ಅಹಂಕಾರ, ದ್ವೇಷ, ಅಸೂಯೆ, ಪ್ರತಿಷ್ಠೆಗಳೂ ನಮ್ಮ ಸ್ಥಾನ-ಮಾನಗಳನ್ನ ನಾಶ ಮಾಡುತ್ತವೆ ಎಂದು ನೀರು ಹೇಳಿದಾಗ ಬೆಂಕಿಗೆ ಅರಿವಾಗುತ್ತದೆ ತನ್ನಲ್ಲಿನ ತಪ್ಪನ್ನು ತಿಳಿದು ಚಿಕ್ಕ ದೀಪವಾಗಿ ಇರಲು ಬಯಸುತ್ತದೆ.

 ಇಲ್ಲಿ ಬೆಂಕಿಯ ಕೋಪಕ್ಕೂ ನೀರನ್ನು ತಾಳ್ಮೆಗೂ ಹೋಲಿಸಿ ನೋಡಿದಾಗ, ತಾಳ್ಮೆಯೇ ಹೆಚ್ಚು ಅಲ್ಲವೇ ಬೆಂಕಿಯಾಗಿ ಇರಬಹುದು ಮತ್ತು ನೀರಿನಂತೆಯೂ ಇರಬಹುದು ಆಯ್ಕೆ ನಮ್ಮದೇ.

  ಮನುಷ್ಯನಂತೆ ಬಾಯಿ ತೆರೆಯಬೇಡ

ಒಬ್ಬ ಯುವಕನಿಗೆ ದಷ್ಟಪುಷ್ಟವಾದ ದೇಹದಾಡ್ಯ ವಿರುತ್ತದೆ ಅವನು ನಿರುದ್ಯೋಗಿಯಾಗಿ ಇರುತ್ತಾನೆ ಅವನು ಕೆಲಸಕ್ಕಾಗಿ ಅಲೆಯುತ್ತಿರುತ್ತಾನೆ ಯಾವುದೇ ಕೆಲಸವು ಸಿಗುತ್ತಿರುವುದಿಲ್ಲ ಆಗ ಅವನಿಗೆ ದಾರಿಯಲ್ಲಿ ಹೋಗುತ್ತಿದ್ದಂತೆ ಒಂದು ಮೃಗಾಲಯ ಕಾಣುತ್ತದೆ.

 ಯೋಚನೆ ಮಾಡುತ್ತಾನೆ ಇಲ್ಲಿಯಾದರೂ ಏನಾದರೂ ಕೆಲಸ ಸಿಗಬಹುದೆಂದು ಮೃಗಾಲಯಕ್ಕೆ ಹೋಗುತ್ತಾನೆ ನನಗೆ ಕೆಲಸ ಬೇಕಾಗಿದೆ ಯಾವುದಾದರೂ ಸರಿ ಕೆಲಸವನ್ನು ಕೊಡಿ ಎಂದಾಗ ಹಿರಿಯ ಅಧಿಕಾರಿ ಯೋಚನೆ ಮಾಡುತ್ತಾ ಒಂದು ಕೆಲಸ ಇದೆ ಆದರೆ ನೀನು ಮಾಡುತ್ತಿಯೋ ಇಲ್ಲವೋ ಎನ್ನುತ್ತಾರೆ.

ಯುವಕನು ನಾನು ತುಂಬಾ ಕಷ್ಟದಲ್ಲಿದ್ದೇನೆ ನನಗೆ ಯಾವುದೇ ಕೆಲಸ ಕೊಟ್ಟರೂ ನಾನು ಮಾಡೇ ಮಾಡುತ್ತೇನೆ ಎನ್ನುತ್ತಾನೆ ಆಗ ಹಿರಿಯ ಅಧಿಕಾರಿಗಳು ಹೇಳುತ್ತಾರೆ ನಮ್ಮಲ್ಲಿ ಒಂದು ಗೊರಿಲ್ಲ ಸತ್ತು ಹೋಗಿದೆ ಆದ್ದರಿಂದ ಅದರ ನಟನೆಯನ್ನು ನೀನು ಮಾಡುವುದಾದರೆ ನಿನಗೆ ಕೈತುಂಬಾ ಸಂಬಳವೂ ಸಿಗುತ್ತದೆ ಎಂದು ಹೇಳುತ್ತಾರೆ.

 ಮೃಗಾಲಯದಲ್ಲಿ ಗೋರಿಲ್ಲಾನ ಆಟವೇ ಪ್ರೇಕ್ಷಕರ ಮನ ಸೆಳೆಯುತ್ತದೆ ಆದ್ದರಿಂದ ನೀನು ಅವನಂತೆಯೇ ಚೆನ್ನಾಗಿ ಮರ ಹತ್ತುವುದು, ಇಳಿಯುವುದು, ಕೈ ಕೆರೆದುಕೊಳ್ಳುವುದು, ತಲೆ ಕೆರೆದುಕೊಳ್ಳುವುದು, ಧುಮುಕುವುದು, ಉಯ್ಯಾಲೆಯಾಡುವುದು, ಕೊಂಬೆ ಮೇಲೆ ಕುಳಿತುಕೊಳ್ಳುವುದು, ನೇತಾಡುವುದು, ಎದೆ ತಟ್ಟಿ ಕುಣಿಯುವುದು, ನಾನಾ ಚೇಷ್ಟೆಗಳು ಮಾಡುವುದರಿಂದಲೇ ನಮ್ಮ ಮೃಗಾಲಯಕ್ಕೆ ಪೇಕ್ಷಕರು ಹೆಚ್ಚಾಗಿ ಬರುತ್ತಾರೆ ಎಂದು ವಿವರಿಸುತ್ತಾರೆ.

 ಆಗ ಯುವಕನು ಒಪ್ಪಿಕೊಂಡು ಕೆಲವು ದಿನಗಳಲ್ಲಿಯೇ ಈ ಎಲ್ಲಾ ಆಟಗಳು ಕರಗತ ಮಾಡಿಕೊಂಡು ಅದೇ ರೀತಿ ಯುವಕ ನಟನೆ ಮಾಡುತ್ತಿರುತ್ತಾನೆ ಸಾಲದಕ್ಕೆ ಪಕ್ಕದಲ್ಲಿಯೇ ಒಂದು ಹುಲಿ ಇರುವ ಸ್ಥಳ ಮತ್ತು ಅದು ಓಡಾಡಲಿಕ್ಕೆ ಸಾಕಷ್ಟು ಜಾಗವು ಇರುತ್ತದೆ ಗೋರಿಲ್ಲಾ ಆದವನು ನೊಡುವವರು ಏನೇ ಕೊಟ್ಟರು ಅದನ್ನು ಹುಲಿಯ ಮೇಲೆ ಎಸೆಯುವುದು ಜನಗಳ ಮೇಲೆ ಎಸೆಯುವುದು ಹೀಗೆ ನಾನಾ ಚೀಷ್ಟಗಳನ್ನು ಮಾಡುತ್ತಿರುತ್ತಾನೆ.

ಗೊರಿಲ್ಲಾನಾ ಚಿಷ್ಟಗಳನ್ನು ನೋಡಿ ಪ್ರೇಕ್ಷಕರಿಗೆ ತುಂಬಾ ಆನಂದವಾಗುತ್ತದೆ ಇದೇ ರೀತಿ ರಜಾ ದಿನಗಳಲ್ಲಿ ಹೆಚ್ಚು ಪ್ರೇಕ್ಷಕರು ಬರುತ್ತಾರೆ ಇದೇ ರೀತಿ ಆಟದಲ್ಲಿ ಮೈಮರೆತಿದ್ದ ಗೋರಿಲ್ಲ ಮರದ ಕೊನೆಯ ಕೊಂಬೆಗೆ ಹೋಗಿ ಅಲ್ಲಿಯೂ ಇದೇ ರೀತಿ ಮಾಡುತ್ತಾನೆ ಕೊಂಬೆ ಮುರಿದು ಹುಲಿಯ ಪಕ್ಕ ಬೀಳುತ್ತಾನೆ ಆಗ ಯುವಕ ಭಯಭೀತನಾಗಿ ನಡುಗುತ್ತಾನೆ ಯೋಚನೆ ಮಾಡುತ್ತಾನೆ.

 ಇಲ್ಲಿಗೆ ನನ್ನ ಆಯಸ್ಸು ಮುಗಿಯಿತು ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾನೆ ಆಗ ಜೋರಾಗಿ ಗರ್ಜಿಸುತ್ತಾ ಹುಲಿಯು ಹತ್ತಿರ ಬಂದು ಪಿಸುಮಾತಿನಲ್ಲಿ ಹೇಳುತ್ತದೆ ಎಚ್ಚರ ಮನುಷ್ಯನಂತೆ ಬಾಯಿ ತೆರೆಯಬೇಡ ಇಬ್ಬರ ಕೆಲಸವು ಹೋದೀತು.

 ನಮ್ಮ ಕೆಲಸಗಳ ಬಗ್ಗೆ ಹೆಚ್ಚು ಜಾಗೃತ ಇರಬೇಕು  ನಮ್ಮ ಬಗ್ಗೆ ನಮಗೆ ಮುನ್ನೆಚ್ಚರಿಕೆ ಇರಲೇಬೇಕು ಮತ್ತೆ ಇನ್ನೊಬ್ಬರಿಗೆ ಅವಶ್ಯಕತೆಗಿಂತ ಹೆಚ್ಚಾಗಿ ಹೀಯಾಳಿಸುವುದು, ರೇಗಿಸುವುದು, ಎಂದಿಗೂ ಒಳ್ಳೆಯದಲ್ಲ ನಮ್ಮ ಬಗ್ಗೆ ನಮಗೆ ಜಾಗರೂಕತೆ ಇರಲೇಬೇಕು ಯಾವುದೇ ಕೆಲಸ ಮಾಡಿದರು ಎಚ್ಚರದಿಂದ ಮಾಡಬೇಕು ಎಂದು ಹೇಳಿ ನಿಧಾನವಾಗಿ ಮುಂದೆ ಹೋಗುತ್ತದೆ.

  ಬಿಡುಗಡೆ ಮಾಡಿ ಎಂದು ಗೋಗರೆದನು

ಒಬ್ಬ ಮೇಸ್ತ್ರಿ ಇರುತ್ತಾನೆ ಮೇಸ್ತ್ರಿಯ ಕೆಲಸವೇನೆಂದರೆ ಮನೆಗಳನ್ನು ಕಟ್ಟಿಸುವುದು ಅವನು ಇಂಜಿನಿಯರ್ ನ ಬಳಿ ಹಲವಾರು ವರ್ಷಗಳಿಂದ ಕೆಲಸಕ್ಕೆ ಇರುತ್ತಾನೆ ಮಿಸ್ತ್ರಿಗೂ ಐವತ್ತು ವರ್ಷ ಆಗಿರುತ್ತದೆ ಆಗ ಮೇಸ್ತ್ರಿ ಇಂಜಿನಿಯರ್ ಗೆ ಹೇಳುತ್ತಾನೆ ಇನ್ನು ಮುಂದೆ ನಾನು ಕೆಲಸ ಮಾಡುವುದಿಲ್ಲ ನನ್ನನ್ನು ಬಿಡುಗಡೆ ಮಾಡಿ ಎಂದು ಗೋಗರೆದನು.

 ಆಗ ಇಂಜಿನಿಯರ್ ಅವರು ವಿನಮ್ರವಾಗಿ ಕೇಳಿಕೊಳ್ಳುತ್ತಾ ಇಲ್ಲಿವರೆಗೂ ನೀವು ತುಂಬ ಚೆನ್ನಾಗಿ ಕೆಲಸ ಮಾಡಿದ್ದೀರಿ ಇನ್ನೂ ಒಂದೇ ಒಂದು ಮನೆಯನ್ನು ಮಾತ್ರ ನೀವು ಕಟ್ಟಿಸಿ ಕೊಡಿ ಸಾಕು ನಂತರ ನೀವು ಇನ್ನು ಮುಂದೆ ನಿಶ್ಚಿಂತೆಯಿಂದ ಇರಿ ಎಂದು ಹೇಳಿ ಹೊರಟು ಹೋಗುತ್ತಾನೆ.

 ಈ ಮಿಸ್ತ್ರಿ  ತುಂಬಾನೇ ಬೇಸರಿಸಿಕೊಳ್ಳುತ್ತಾನೆ ನಂತರ ಮೇಸ್ತ್ರಿಗೆ ಈ ಕೆಲಸವನ್ನು ಮಾಡಬೇಕಲ್ಲ ಎಂದು ಬೈದುಕೊಂಡು ಕೆಲಸವನ್ನು ಸರಿಯಾಗಿ ಮಾಡುವುದಿಲ್ಲ ಅಂದರೆ 3 ತಿಂಗಳಿಗೆ ಮಾಡಬೇಕಾದ ಕೆಲಸವನ್ನು 6 ತಿಂಗಳಿಗೆ ಮುಗಿಸುತ್ತಾನೆ.

 ಮತ್ತೆ ಕೊನೆಯ ಕೆಲಸ ಆದ್ದರಿಂದ ಆಸಕ್ತಿ ಇಲ್ಲದೆ ಬೇಕಾಬಿಟ್ಟಿಯಾಗಿ ನಿರ್ಲಕ್ಷತೆಯಿಂದ ಮನೆ ನಿರ್ಮಾಣ ಮಾಡುತ್ತಾನೆ ನಂತರ ಮೇಸ್ತ್ರಿಗೆ  ಎಂಜಿನಿಯರ್ ಬಂದು ಕೇಳುತ್ತಾನೆ ಮುಂದಿನ ವಾರ ಗೃಹ ಪ್ರವೇಶವಿದೆ ಬೇಗ ಮುಗಿಸಿ ಎಂದಾಗ ಅದರಂತೆ ಮುಗಿಸುತ್ತಾನೆ ಇಂಜಿನಿಯರ್ ಆದವನು ಈ ಗೃಹ ಪ್ರವೇಶಕ್ಕೆ ಮೇಸ್ತ್ರಿ ಫ್ಯಾಮಿಲಿಗೂ ಹಾಗೂ ಆಮಂತ್ರಣ ನೀಡುತ್ತಾನೆ.

 ಗೃಹ ಪ್ರವೇಶ ಮುಗಿಯುತ್ತಿದ್ದಂತೆಯೇ ಇಂಜಿನಿಯರ್ ಆ ಮನೆಯ ಕೀಯನ್ನು ಮೇಸ್ತ್ರಿಗೆ ಕೊಟ್ಟು ಇನ್ನು ಮುಂದೆ ನೀವು ಕೆಲಸ ಮಾಡಬೇಕಾಗಿಲ್ಲ ಈ ಮನೆ ನನ್ನ ಕಡೆಯಿಂದ ನಿಮಗೆ ಉಡುಗೊರೆಯಾಗಿ ಕೊಟ್ಟಿದ್ದೇನೆ ಎಂದು ಕೊಟ್ಟು ಹೊರಟು ಹೋಗುತ್ತಾನೆ.

  ಮಿಸ್ತ್ರಿ ಯಾದವನು ಮೊದಲಿನಿಂದ ಚೆನ್ನಾಗಿ ಕೆಲಸ ಮಾಡಿ ಕೊನೆಯ ಕೆಲಸ ಅಷ್ಟು ಚೆನ್ನಾಗಿ ಮಾಡಲಿಲ್ಲ ಮತ್ತೆ ಇನ್ನೂ ಚೆನ್ನಾಗಿ ಮಾಡಿದ್ದಿದ್ದರೆ ಆ ಮನೆ ಮಿಸ್ತ್ರಿಗೆ ಸಿಗುತ್ತಿತ್ತು ನಾವು ಯಾವುದೇ ಕೆಲಸ ಮಾಡಿದರೆ ಚೆನ್ನಾಗಿ ಕೆಲಸ ಮಾಡೋಣ ನಮ್ಮ ಮನಸ್ಸಿಗೆ ಹಿಡಿಸಿದಂತೆ ಕೆಲಸ ಮಾಡೋಣ.

  ಈಜು ಬರುತ್ತದೆಯೇ?

ಒಬ್ಬರು ಪಂಡಿತರು ಹೆಚ್ಚಾಗಿ ಓದಿರುತ್ತಾರೆ ಸಾಕಷ್ಟು ಜ್ಞಾನವನ್ನು ಗಳಿಸಿರುತ್ತಾರೆ. ಅನೇಕ ಬಿರುದು ಪ್ರಶಸ್ತಿಗಳು ಪಡೆದಿರುತ್ತಾರೆ ಆದರೆ ಅನುಭವ ಮಾತ್ರ ಸೊನ್ನೆ ಎನ್ನಬಹುದು ಪಂಡಿತರಿಗೆ ಉಪನ್ಯಾಸ ಮಾಡಬೇಕಾಗಿರುವುದರಿಂದ ಸಮುದ್ರಯಾನ ಮಾಡಬೇಕಾದ ಪ್ರಸಂಗ ಬರುತ್ತದೆ ಆಗ ಪಂಡಿತರು  ಸಮುದ್ರಯಾನಕ್ಕೆ ಹೋಗುತ್ತಾರೆ.

ಹಡಗಿನಲ್ಲಿ ಎಲ್ಲರಿಗೂ ಮಾತಾಡಿ ತನ್ನ ಶೌರ್ಯ ತೊರಿಸಿಕೊಳ್ಳಬೇಕೆಂಬ ಹಂಬಲ ಆದರೆ ಇವರಿಗೆ ಯಾರು ಹಿಡಿಸುವುದಿಲ್ಲ ಮತ್ತೆ ಯಾರೂ ಕೂಡ ಗೌರವವು ಕೊಡುವುದಿಲ್ಲ ಕೊನೆಗೆ ಹಡಗಿನ ಚಾಲಕ ನಾವಿಕನ ಬಳಿ ಹೋಗಿ ತನ್ನ ಪರಿಚಯ ಮಾಡಿಕೊಂಡು ಸಾಕಷ್ಟು ಉಪನ್ಯಾಸವನ್ನು ನೀಡುತ್ತಾರೆ.

 ಆ ನಾವಿಕನು ಹುಟ್ಟಿನಿಂದ ಶಾಲೆಗೆ ಹೋಗಿರುವುದಿಲ್ಲ ನಾವಿಕನು ಪಂಡಿತರ ಮಾತನ್ನು ಕೇಳುತ್ತಾನೆ ಆಗ ನಾವಿಕನಿಗೆ ಇತಿಹಾಸ ಗೊತ್ತಿದೆಯೇ ಎಂದು ಕೇಳುತ್ತಾರೆ ನಾವಿಕನು ಇಲ್ಲ ಎನ್ನುತ್ತಾನೆ ನಿನಗೆ ಇತಿಹಾಸ ತಿಳಿದಿಲ್ಲ ಎಂದರೆ ನಿನ್ನ ಜೀವನದ ಇಪ್ಪತ್ತೈದು 25% ಭಾಗ ವ್ಯರ್ಥ ಎನ್ನುತ್ತಾರೆ.

 ಮತ್ತೆ ನಾಳೆ ನಾನು ಸಿಗುತ್ತಾನೆ ಎಂದು ಹೋಗುತ್ತಾರೆ ಮತ್ತೆ ಮಾರನೆಯ ದಿನ ಕೆಲ ಸಮಯ ಮಾತಾಡಿ ಭೂಗೋಳ ಗೊತ್ತಿದೆಯೇ? ಎಂದು ಕೇಳುತ್ತಾರೆ ಅದಕ್ಕೆ ನಾವಿಕ ನನಗೆ ಗೊತ್ತಿಲ್ಲ ಎಂದಾಗ ಭೂಮಿ ಮೇಲೆ ಏನೇನು ಇದೆಯೋ ಅದಕ್ಕೆ ಭೂಗೋಳ ಎನ್ನುತ್ತಾರೆ.

 ಪಂಡಿತರು ಭೂಗೋಳ ಗೊತ್ತಿಲ್ಲ ಅಂದರೆ ನಿನ್ನ ಜೀವನದ ಐವತ್ತು ಭಾಗ 50% ವ್ಯರ್ಥವಾದಂತೆ ಎಂದು ಹೇಳಿ ಹೊರಡುತ್ತಾರೆ ಮತ್ತೆ ಮೂರನೇ ದಿನ ಬಂದು ಸ್ವಲ್ಪ ಮಾತಾಡಿ ಹವಾಮಾನ ಶಾಸ್ತ್ರ ಗೊತ್ತಿದೆಯೇ ಎಂದು ಕೇಳುತ್ತಾರೆ.

 ಅದಕ್ಕೆ ನಾವಿಕ ಗೊತ್ತಿಲ್ಲ ಈ ಪದವನ್ನು ನಾನು ಮೊದಲನೇ ಸಾರಿ ಕೇಳುತ್ತಿದ್ದೇನೆ ಎಂದು ಹೇಳುತ್ತಾನೆ ಆಗ ಪಂಡಿತರು ಸಿಟ್ಟಿನಿಂದ ನಿನಗೆ ಇತಿಹಾಸ ಗೊತ್ತಿಲ್ಲ, ಭೂಗೋಳ ಗೊತ್ತಿಲ್ಲ ಹವಾಮಾನಶಾಸ್ತ್ರ ಗೊತ್ತಿಲ್ಲ ಅಂದರೆ ನೀನು ಇರುವುದೇ ವ್ಯರ್ಥ.

 ಏಕೆಂದರೆ ನಿನಗೆ ಹವಾಮಾನ ಯಾವಾಗ ಹೇಗೆ ಗಾಳಿ ಬದಲಾಗುತ್ತದೆಂದು ಪ್ರತಿಕ್ಷಣವೂ ನಿನಗೆ ಗೊತ್ತಿರಬೇಕು ನೀನು ನಾವಿಕನಾದವನು ಯಾವಾಗ ಹೇಗೆ ಗಾಳಿ ಜಾಸ್ತಿ ಬರುತ್ತದೆ ಇದೆಲ್ಲ ನೀನು ತಿಳಿದುಕೊಳ್ಳಬೇಕಾಗಿರುವುದು ಇದು ನಿನಗೆ ತಿಳಿದಿಲ್ಲವೆಂದರೆ ನಿನ್ನ ಜೀವನ ದ ಎಪ್ಪತ್ತೈದು ಭಾಗ 75% ವ್ಯರ್ಥ ಎಂದು ಕೋಪ ಮಾಡಿಕೊಂಡು ಹೊರಟು ಹೋಗುತ್ತಾರೆ.

 ಆಗ ನಾವಿಕ ಇದ್ದರೂ ಇರಬಹುದು ಎಂದು ಸ್ವಲ್ಪ ಖಿನ್ನನಾಗುತ್ತಾನೆ ಆದರೆ ನಾಲ್ಕನೇ ದಿನ ಒಂದು ಚಮತ್ಕಾರ ವಾಗುತ್ತದೆ ನಾವಿಕ ಪಂಡಿತರನ್ನೇ ಹುಡುಕಿಕೊಂಡು ನಮಸ್ಕರಿಸಿ ಸ್ವಾಮಿ ನಿಮಗೆ ಒಂದು ಪ್ರಶ್ನೆಯನ್ನು ಕೇಳುತ್ತಾನೆ ಎನ್ನುತ್ತಾನೆ.

ಆಗ ಪಂಡಿತರಿಗೆ ಎಲ್ಲಿಲ್ಲದ ಸಂತೋಷ ಈವತ್ತು ಇವನಿಗೆ ಒಂದು ಪ್ರಶ್ನೆಯನ್ನು ಕೇಳುವ ಶಕ್ತಿ ಬಂದಿದೆ ಎಂದರೆ ನನ್ನ ಜೀವನ ಸಾರ್ಥಕ ಎನ್ನುತ್ತಾರೆ ಏನು ನಿನ್ನ ಪ್ರಶ್ನೆ ಎಂದು ಕೇಳುತ್ತಾರೆ ಆಗ ನಾವಿಕ ವಿನಯದಿಂದ ವಿನಮ್ರತೆಯಿಂದ ನಿಮಗೆ ಈಜು ಬರುತ್ತದೆಯೇ ಎನ್ನುತ್ತಾನೆ.

 ಆಗ ಪಂಡಿತರು ನನಗೆ ಈಜು ಬರಲ್ಲ ಎಂದು ಹೇಳುತ್ತಾರೆ ಆಗ ನಾವಿಕ ಹೇಳುತ್ತಾನೆ ನಿಮ್ಮ ಜೀವನ ನೂರಕ್ಕೆ ನೂರು 100% ವ್ಯರ್ಥ ಎನ್ನುತ್ತಾನೆ ಏಕೆ  ಎಂದು ಕೇಳುತ್ತಾರೆ ಆಗ ನಾವಿಕ ಹೇಳುತ್ತಾನೆ ಸ್ವಾಮಿ ಈ ಹಡಗು ಒಂದು ಕಡೆ ತೂತಾಗಿ ಸ್ವಲ್ಪ ಸ್ವಲ್ಪವೇ ನೀರು ಬರುತ್ತಿದೆ.

 ಸ್ವಲ್ಪ ಸಮಯದಲ್ಲಿಯೇ ಹಡಗು ಮುಳುಗಿಬಿಡುತ್ತದೆ ಯಾರಿಗೆ ಈಜು ಬರುತ್ತದೋ ಅವರು ಮಾತ್ರ ಬದುಕುತ್ತಾರೆ ಇಲ್ಲದಿದ್ದರೆ ಇಲ್ಲೆ ಸಾವು ನಿಶ್ಚಿತ ನಿಮಗೆ ಇದನ್ನು ತಿಳಿಸಲಿಕ್ಕೆ ಬಂದೆ ಎಂದು ಹೇಳಿ ಹೊರಟನು. ನಾವು ಎಷ್ಟೇ ಕಲಿತಿದ್ದರೂ ಜೀವನದಲ್ಲಿ ಸಮುದ್ರದಿಂದ ಒಂದು ಬೊಗಸೆ ನೀರನ್ನಷ್ಟೂ ಕಲಿಯಬಹುದು ನಾವು ಕಲಿಯಬೇಕಾದುದು ಸಾಗರದಷ್ಟು ಇದೆ.

Leave a Comment