ನೀರಿನಲ್ಲಿ ಮುಳುಗುತ್ತಿದ್ದೇನೆ ಕಾಪಾಡಿ

ಪಂಡಿತರು ದಿನನಿತ್ಯ ನದಿಗೆ ಹೋಗಿ ಸ್ನಾನ ಮಾಡಿ ಧ್ಯಾನ ಮಾಡಿ ಬರುತ್ತಿದ್ದರು ದಿನನಿತ್ಯದಂತೆ ಸ್ನಾನ ಮಾಡಲು ಹೋದಾಗ ಅಲ್ಲಿ ಒಬ್ಬ ವ್ಯಕ್ತಿ ಮಲಗಿದ್ದನು ಅವನ ಪಕ್ಕದಲ್ಲಿ ಒಂದು ಮಧ್ಯದ ಬಾಟಲ್ ಇತ್ತು ಇದನ್ನು ನೋಡಿದ ಪಂಡಿತರು ನಾಚಿಕೆಗೇಡಿನ ಕೆಲಸ ಎಂದು ಬಯ್ಯುತ್ತಾ ಮುಂದೆ ಹೋಗಿ ಸ್ನಾನ ಮಾಡಿ ಧ್ಯಾನಕ್ಕೆ ಕುಳಿತರು.

 ಸ್ವಲ್ಪ ಸಮಯದಲ್ಲಿಯೇ ಜೋರಾಗಿ ಕಿರಿಚುವ ಶಬ್ದ ಬಂತು ನೀರಿನಲ್ಲಿ ಮುಳುಗುತ್ತಿದ್ದೇನೆ ಕಾಪಾಡಿ ಕಾಪಾಡಿ ಎಂದಾಗ ಪಂಡಿತರು ನಿಧಾನವಾಗಿ ಕಣ್ಣು ಬಿಟ್ಟು ನೋಡಿದರು ಒಬ್ಬ ವ್ಯಕ್ತಿ ನೀರಿನಲ್ಲಿ ಮುಳುಗುತ್ತಿದ್ದಾನೆ ಏನು ಮಾಡುವುದು ಎಂದು ಯೋಚನೆ ಮಾಡುತ್ತಿದ್ದರು.

 ಅಷ್ಟರಲ್ಲಿ ಒಬ್ಬನು ನೀರಿನಲ್ಲಿ ಮುಳುಗುತ್ತಿದ್ದ ವ್ಯಕ್ತಿಯನ್ನು ನೀರಿನಿಂದ ಕಾಪಾಡಿ ದಡಕ್ಕೆ ತಂದು ಕೂರಿಸಿದರು ಇದನ್ನು ನೋಡಿದ ಪಂಡಿತರಿಗೆ ಬೇಸರವಾಯಿತು ಏಕೆಂದರೆ ನಾನು ಆ ವ್ಯಕ್ತಿಯನ್ನು ತಪ್ಪಾಗಿ ತಿಳಿದುಕೊಂಡೆ ಎಂದು ನಂತರ ಹೋಗಿ ಆ ವ್ಯಕ್ತಿಯನ್ನು ವಿಚಾರಿಸಿದರು.

 ಪಂಡಿತರು ನಿನ್ನನ್ನು ಕುಡುಕ ಎಂದು ಅರ್ಥ ಮಾಡಿಕೊಂಡಿದ್ದೆ ಎಂದು ಹೇಳಿದಾಗ ಆ ವ್ಯಕ್ತಿ ಹೇಳಿದನು ಪಂಡಿತರೆ ನಾನು ಕಳೆದ ಒಂದು ವಾರದಿಂದ ಬೇರೆ ಊರಿನಲ್ಲಿ ಕೆಲಸ ಮಾಡಿ ದಣಿದು ಬರುತ್ತಿದ್ದೆ.

ನಮ್ಮ ಮಾಲೀಕರು ದಾರಿಯಲ್ಲಿ ಬಾಯಾರಿಕೆ ಹಸಿವು ಆಗಬಹುದು ಎಂದು ಸ್ವಲ್ಪ ಬುತ್ತಿ ಹಾಗೂ ನೀರನ್ನು ಯಾವುದೋ ಬಾಟಲಿನಲ್ಲಿ ನೀರು ಕೊಟ್ಟರು ಅದನ್ನು ನಾನು ಜೊತೆಗಿಟ್ಟು ಕೊಂಡು ಬಂದೆ ನಂತರ ಅವರು ಹೇಳಿದಂತೆ ನನ್ನ ಊರಿಗೆ ಬರುತ್ತಿದ್ದಂತೆ ಆಯಾಸವು ಹೆಚ್ಚಾಯಿತು ಹಸಿವು ಹೆಚ್ಚಾಯಿತು ಆದ್ದರಿಂದ ತಂದಿದ್ದ ಬುತ್ತಿಯನ್ನು ತಿಂದು ಸ್ವಲ್ಪ ನೀರನ್ನು ಕುಡಿದು ಕುಳಿತುಕೊಂಡೆ.

 ಬೆಳಗಿನ ಜಾವ ಆದ್ದರಿಂದ ತಂಪಾದ ಗಾಳಿ ಬಂತು ಹಾಗೆ ನಿದ್ದೆಗೆ ಜಾರಿದೆ ಎಂದು ಹೇಳಿದನು ಆಗ ಪಂಡಿತರು ಇನ್ನು ಮುಂದೆ ನಾನು ಸರಿಯಾಗಿ ಗ್ರಹಿಸದೆ ಏನು ಹೇಳಬಾರದು ಎಂದು ಅರ್ಥ ಮಾಡಿಕೊಂಡರು ಕೆಲವು ಸಲ ನೋಡಿದ್ದು ಕೇಳಿದ್ದು ಎರಡು ಸುಳ್ಳಾಗಬಹುದು ಅದಕ್ಕೆ ಸರಿಯಾಗಿ ವಿಮರ್ಶೆ ಮಾಡಿ ನಿರ್ಧರಿಸೋಣ.

 ನಿನ್ನ ಆಟ ತೋರಿಸು

ಒಂದು ಸಾರಿ ಸರ್ಕಸ್ ನಿಂದ ಒಂದು ಸಿಂಹವು ತಪ್ಪಿಸಿಕೊಂಡು ಓಡುತ್ತಾ ಓಡುತ್ತಾ ಗಿಡಗಳ ಒಳಗೆ ಹೋಗಿ ಅಡಗಿಕೊಂಡಿರುತ್ತದೆ ಏನೇ ಮಾಡಿದರೂ ಸಿಂಹ ಆಚೆಗೆ ಬರುತ್ತಿರುವುದಿಲ್ಲ ಸಿಂಹ ಗಿಡಗಳ ಮಧ್ಯದಲ್ಲಿಯೇ ಇದೆ ಎಂದು ಖಚಿತಪಡಿಸಿಕೊಂಡು ಸರ್ಕಸ್ ನವರನ್ನು ಕರದು ಹೇಳುತ್ತಾರೆ.

 ನಿಮಗೆ ನಾವು ಒಂದು ದಿನದ ಅವಕಾಶವನ್ನು ಕೊಡುತ್ತೇನೆ ಅಷ್ಟೊರೊಳಗೆ ನೀವು ಆ ಸಿಂಹವನ್ನು ನೀವು ಕರೆದುಕೊಳ್ಳಿ ಇಲ್ಲದಿದ್ದರೆ ಗುಂಡಿಕ್ಕಿ ಕೊಲ್ಲಬೇಕು ಇಲ್ಲದಿದ್ದರೆ ಎಲ್ಲರಿಗೂ ತೊಂದರೆಯಾಗುತ್ತದೆ ಎಂದು ಹೇಳುತ್ತಾರೆ ಆಗ ಸರ್ಕಸ್ಸಿನವರಿಗೆ ಏನು ಮಾಡಬೇಕೆಂದು ತೋಚುವುದಿಲ್ಲ.

 ಸರ್ಕಸ್ಸಿನವರು ಸ್ವಲ್ಪ ಸಮಯ ಯೋಚಿಸುತ್ತಾರೆ ನಂತರ ಇವರಿಗೆ ಒಂದು ಉಪಾಯ ಬರುತ್ತದೆ ಸರ್ಕಸ್ ನಲ್ಲಿ ಇರುವ ಕೆಲವರು ತಮಟೆ ಬಾರಿಸುವರು ಆಟಕ್ಕೆ ಯಾರು ಬೇಕೋ ಅವರನ್ನು ಕರೆಸಿ ಆ ಗಿಡಗಳ ಮುಂದೆಯೇ ಸರ್ಕಸ್ಸನ್ನು ಆರಂಭಿಸುತ್ತಾರೆ.

ಈ ಸರ್ಕಸ್ಸನ್ನು ನೋಡಲು ಕೂಡ ಕೆಲವರು ಬಂದು ನೋಡುತ್ತಿರುತ್ತಾರೆ ಆಗ ಸರಿಯಾಗಿ ಅವರು ಹೇಳುತ್ತಾರೆ ಈಗ ನಿನ್ನ ಸಮಯ ಬಂದಿದೆ ನೀನು ಬಂದು ನಿನ್ನ ಆಟ ತೋರಿಸು ಎಂದಾಗ ಆ ಸಿಂಹವು ಮರೆತು ಅದರ ಆಟ ತೋರಿಸುತ್ತದೆ.

ಆಟ ಮುಗಿಸಿದ ನಂತರ ಸಿಂಹವು ತನ್ನ ಅಭ್ಯಾಸಬಲದಂತೆ ಪಂಜರದ ಒಳಗೆ ಹೋಗಿ ಕುಳಿತುಕೊಳ್ಳುತ್ತದೆ ಆಗ ಎಲ್ಲರೂ ಕೂಡ ಆ ಸರ್ಕಸ್ಸಿನವರಿಗೆ ಗೌರವಿಸುತ್ತಾರೆ.

 ಅಭ್ಯಾಸಗಳು ಒಳ್ಳೆಯದಿದ್ದರೂ ಸರಿ ಅಭ್ಯಾಸಗಳು ಕೆಟ್ಟದಿದ್ದರೂ ಅಭ್ಯಾಸಗಳೇ ಒಳ್ಳೆಯ ಅಭ್ಯಾಸಗಳಿಂದ ಅದೃಷ್ಟವೇ ಬದಲಾಗುತ್ತದೆ ಒಳ್ಳೆಯ ಅಭ್ಯಾಸಗಳನ್ನು ರೂಡಿಸಿಕೊಳ್ಳೋಣ.

 ಶಕ್ತಿ ಕಡಿಮೆ ಇತ್ತು

ಒಂದು ಕಾಗೆ ನದಿಯ ತೀರದಲ್ಲಿ ಆಹಾರ ಹುಡುಕುತ್ತಿತ್ತು ಅಂದು ಅದಕ್ಕೆ ಯಾವುದೇ ರೀತಿಯ ಆಹಾರವು ಸಿಗುತ್ತಿರಲಿಲ್ಲ ಕೊನೆಗೆ ಒಂದು ಚಿಪ್ಪು ಕಾಣಿಸಿತು ಕಾಗೆ ಅದಕ್ಕೆ ಕುಕ್ಕಿತು ಎಸೆಯಿತು ಏನೇ ಮಾಡಿದರು ಹುಳುವು ಈಚೆಗೆ ಬರುತ್ತಿರಲಿಲ್ಲ.

 ಕಾಗೆ ಇಷ್ಟೊಂದು ಪ್ರಯತ್ನ ಮಾಡುತ್ತಿರುವುದನ್ನು ನೋಡಿ ಇನ್ನೊಂದು ಹದ್ದು ಹೇಳಿತು ನೀನು ಹೀಗೆ ಎಷ್ಟೇ ಪ್ರಯತ್ನ ಪಟ್ಟರೂ ಹುಳು ಆಚೆಗೆ ಬರುವುದಿಲ್ಲ ಇದಕ್ಕೆ ಒಂದು ಉಪಾಯವಿದೆ.

 ಈ ಚಿಪ್ಪನ್ನು ಕೊಕ್ಕಿನಲ್ಲಿ ಹಿಡಿದುಕೊಂಡು ಮೇಲಕ್ಕೆ ಹೋಗಿ ಬಂಡೆಯ ಮೇಲೆ ಬೀಳಿಸು ಸಾಕು ಚಿಪ್ಪು ತಾನಾಗೇ ಒಡೆದುಹೋಗುತ್ತದೆ ಹುಳು ಈಚೆಗೆ ಬರುತ್ತದೆ ಅದನ್ನು ನೀನು ತಿನ್ನಬಹುದು ಎಂದಿತು.

ಕಾಗೆ ಅದೇ ರೀತಿಯಲ್ಲಿ ತೆಗೆದುಕೊಂಡು ಹಾರಿತು ಮೇಲಿನಿಂದ ಬಿಟ್ಟಿತು  ಚಿಪ್ಪು ಹೊಡೆಯಿತು ಹುಳವು ಆಚೆ ಬಂತು ಆದರೆ ಹುಳ ಸಿಕ್ಕಿದ್ದು ಹದ್ದಿಗೆ ಮಾತ್ರ ನಂತರ ಕಾಗೆಯೂ ಪರಿತಪಿಸಿತ್ತು.

 ಕಾಗೆಗೆ ಯಾವುದು ಸರಿ ಯಾವುದು ತಪ್ಪು ಎಂದು ಯೋಚನೆಯ ಮಾಡುವ ಶಕ್ತಿ ಕಡಿಮೆ ಇತ್ತು ಹಾಗಾಗಿ ಕಪ್ಪೆ ಕಷ್ಟಪಟ್ಟಿದ್ದು ಹದ್ದಿನ ಪಾಲಾಯಿತು ನಾನು ಬಹಳಷ್ಟು ಕಷ್ಟಪಟ್ಟಿದ್ದು ಬೇರೆಯವರ ಪಾಲಾಗಿದ್ದೆಯೇ? ಮುಂದಾಲೋಚನೆ ಯೊಂದಿಗೆ ಕೆಲಸ ಆರಂಭಿಸೋಣ.

ಸಮಯವು ಉಳಿಯುತ್ತದೆ

ಒಬ್ಬ ಹುಡುಗ ಹತ್ತು ವರ್ಷದವನಾಗಿರುತ್ತಾನೆ ಇವನಿಗೆ ಚಿಕ್ಕ ತಂಗಿ ತಮ್ಮ ಇರುತ್ತಾರೆ ಮನೆಯಲ್ಲಿ ತುಂಬಾ ಬಡತನ ಒಂದು ಸಾರಿ ಸಿಕ್ಕರೆ ಇನ್ನೊಂದು ಸಾರಿ ಊಟ ಸಿಗುತ್ತೆ ಎನ್ನುವ ಗ್ಯಾರಂಟಿ ಇರುವುದಿಲ್ಲ ಹೀಗೆ ಇದ್ದಾಗ ನಾನು ಏನು ಮಾಡಬಹುದು ಎಂದು ಯೋಚಿಸಿದಾಗ ಹುಡುಗನಿಗೆ ಕಂಡದ್ದು ದಿನಪತ್ರಿಕೆ ಬೆಳಿಗ್ಗೆ ಎಲ್ಲರೂ ದಿನಪತ್ರಿಕೆಯನ್ನು ಹಾಕುತ್ತಿರುತ್ತಾರೆ.

ನಾನೂ ಕೂಡ ದಿನಪತ್ರಿಕೆ ಹಾಕುತ್ತೇನೆ ಎಂದು ಪತ್ರಿಕೆಯವರನ್ನು ಕೇಳಿದಾಗ ಪತ್ರಿಕೆಯವರು ಪತ್ರಿಕೆ ಹಂಚುವುದಕ್ಕೆ ಸೈಕಲ್ ಬೇಕು ಏಕೆಂದರೆ ದೂರದೂರ ಮನೆಗಳು ಇರುತ್ತವೆ ಎಂದು ಹೇಳುತ್ತಾರೆ ಆಗ ಹುಡುಗ ಚಾಲಾಕಿತನದಿಂದ ಹೇಳುತ್ತಾನೆ ಹತ್ತಿರದಲ್ಲಿ ಇರುವಷ್ಟು ಕೊಡಿ ನಾನು ಹಾಕುತ್ತೇನೆ ಬಂದ ದುಡ್ಡಿನಲ್ಲಿ ನಾನು ಸೈಕಲ್ಲನ್ನು ಖರೀದಿಸುತ್ತೇನೆ ಎಂದು ಹೇಳುತ್ತಾನೆ.

 ಕೆಲವು ದಿನ ನಡೆದುಕೊಂಡು ದಿನಪತ್ರಿಕೆ ಹಂಚುತ್ತಾನೆ ನಂತರ ಒಂದು ಸೈಕಲನ್ನು ಖರೀದಿಸುತ್ತಾನೆ ಮತ್ತೆ ಹೊಸ ರೀತಿಯಲ್ಲಿ ಯೋಚಿಸುತ್ತಾನೆ ಸಾಕಷ್ಟು ಚಿಲ್ಲರೆ ಹಣವನ್ನು ಇವನೇ ಇಟ್ಟುಕೊಳ್ಳುತ್ತಾನೆ ಮನೆಮನೆಗೆ ಹೋಗಿ ದಿನನಿತ್ಯ ನೀಡುತ್ತಾನೆ ಚಿಲ್ಲರೆಯ ತುಂಬ ಅಭಾವ ಹೆಚ್ಚಾಗಿರುತ್ತದೆ ಅದಕ್ಕೆ ಈ ಹುಡುಗ ಚಿಲ್ಲರೆ ಇಲ್ಲದಿದ್ದರೆ ನಾಳೆ ಕೊಡಿ ಎಂದು ಹೇಳಿ ಹೊರಟು ಹೋಗುತ್ತಾನೆ.

ಸಾಕಷ್ಟು ಚಿಲ್ಲರೆಯನ್ನು  ಹುಡುಗನೇ ಇಟ್ಟುಕೊಂಡಿರುತ್ತಾನೆ ಇದರಿಂದಾಗಿ ಇವನಿಗೆ ಕೆಲಸವು ತುಂಬಾ ಸುಲಭವಾಗುತ್ತದೆ ನಂತರ ಹೇಳುತ್ತಾನೆ ನಾನು ಹತ್ತು ದಿನಗಳು ದಿನಪತ್ರಿಕೆ ಹಾಕುತ್ತೇನೆ ನಂತರ ಹಣವನ್ನು ಪಡೆದುಕೊಳ್ಳುತ್ತೇನೆ ಹತ್ತು ದಿನಗಳ ನಂತರ ಒಂದೇ ಸಾರಿ ಹೋಗಿ ಹಣವನ್ನು ಪಡೆಯುತ್ತಾನೆ.

ಕೆಲವು ದಿನಗಳ  ನಂತರ ಇವನು ತಿಂಗಳಿಗೆ ಒಂದು ಸಾರಿ ನೀವು ಹಣ ಕೊಟ್ಟರೆ ಸಾಕು ಅದಕ್ಕಾಗಿ ನಾನು ನಿಮ್ಮ ಮನೆಗೆ ಮೊದಲೇ ದಿನಪತ್ರಿಕೆ ಹಾಕಿರುತ್ತೇನೆ ಎಂದು ಹೇಳುತ್ತಾನೆ ಇದಕ್ಕೆ ಎಲ್ಲರೂ ಒಪ್ಪುತ್ತಾರೆ ಈ ರೀತಿ ಮಾಡಿದ್ದರಿಂದ ಇವನು ಒಳ್ಳೆಯ ಪ್ರಸಿದ್ಧಿಯಾಗುತ್ತಾನೆ.

 ಬೇರೆ ದಿನಗಳಲ್ಲಿ ಎಲ್ಲರಿಗೂ ಪೇಪರನ್ನು ತಲುಪಿಸಿ ಒಂದು ದಿನ ಮಾತ್ರ  ದಿನಪತ್ರಿಕೆಯ ಹಣವನ್ನು ಹೋಗಿ ಪಡೆಯುತ್ತಾನೆ ಇದರಿಂದ ಸಮಯವೂ ಉಳಿಯುತ್ತದೆ ಅಂದರೆ ಇಲ್ಲಿ ಹುಡುಗನಾದವನು ಸೃಜನಶೀಲತೆಯಿಂದ ಯೋಚಿಸಿದ ಇದಾದ ನಂತರವೇ ತಿಂಗಳಿಗೆ ಬಿಲ್ಲು ಪದ್ದತಿ ಬಂತೆಂದೂ ಹೇಳುತ್ತಾರೆ.

 ಎಂತಹ ಕಷ್ಟದ ಪರಿಸ್ಥಿತಿ ಬಂದರೂ ಕೂಡ ಧೈರ್ಯವಿದ್ದರೆ ಸಾಕು ಹೊಸದಾಗಿ ಯೋಚನೆ ಮಾಡಿದರೆ ಸಾಕು ಹೇಗೆ ಬೇಕಾದರೂ ಬೆಳೆಯಬಹುದು.

ಸುಲಭವಾಗಿ ಕಲಿಯಬಹುದು

ಒಂದು ಕಂಪನಿಯಲ್ಲಿ ಇಪ್ಪತ್ತು ಜನರನ್ನು ಆಯ್ಕೆ ಮಾಡುತ್ತಾರೆ ಹತ್ತು ಜನಕ್ಕೆ ಒಂದು ತಂಡದಂತೆ ಅವರು ಒಂದು ಹೊಸ ಚೈನೀಸ್ ಭಾಷೆಯನ್ನು ಕಲಿಯಬೇಕು ಅದಕ್ಕಾಗಿ ಕಂಪನಿಯವರು ಆ ಭಾಷೆಯಲ್ಲಿ ಪ್ರವೀಣರಾದ ಕೋಚ್ ಗಳನ್ನು ನೇಮಿಸುತ್ತಾರೆ.

 2 ತಂಡಗಳನ್ನು ಗಮನಿಸಿದಾಗ ಎರಡೂ ತಂಡದವರು ಕೂಡ ಸಮಾನ ಬುದ್ದಿವಂತರು ಆದರೆ ತರಬೇತಿ ಆದ ನಂತರ ನೋಡಿದಾಗ ಒಂದು ತಂಡದಲ್ಲಿ ತುಂಬಾ ಚೆನ್ನಾಗಿ ಕಲಿತಿರುತ್ತಾರೆ ಇನ್ನೊಂದು ತಂಡದಲ್ಲಿ ಅಷ್ಟೇನೂ ಚೆನ್ನಾಗಿ ಕಲಿತಿರುವುದಿಲ್ಲ ಇದಕ್ಕೆ ಕಾರಣ ಏನು ಎಂದು ಹುಡುಕಿದಾಗ ಮೊದಲನೆಯ ತಂಡದ ವಿದ್ಯಾರ್ಥಿಗಳು ಮೊದಲ ದಿನ ತರಗತಿಯನ್ನು ಆರಂಭಿಸಿದಾಗ ಕಲಿಸುವವರು ಹೇಳುತ್ತಾರೆ.

 ಅತ್ಯಂತ ಕಠಿಣ ಭಾಷೆ ಎಂದರೆ ಚೈನೀಸ್ ಭಾಷೆ ಇದನ್ನು ಕಲಿಯುವುದು ಬಹಳ ಕಷ್ಟ ಆದರೂ ನಾವು ಕಲಿಯುತ್ತಾ ಹೋಗೋಣ ಮತ್ತೆ ಇದಕ್ಕೆ ನನಗೆ ಕೊಟ್ಟಿರುವ ಸಮಯ ತುಂಬಾ ಕಡಿಮೆ ಆದುದರಿಂದ ಎಷ್ಟು ಸಾಧ್ಯವಾಗುತ್ತದೋ ಅಷ್ಟನು ಮಾತ್ರ ನಾನು ಕಲಿಸುತ್ತೇನೆ.

 ಈ ಮಾತುಗಳನ್ನು ಕೇಳಿದ ವಿದ್ಯಾರ್ಥಿಗಳು ಈ ಭಾಷೆ ನಾವು ಕಲಿಯುವುದು ಕಷ್ಟ ಎಂದು ಕೈಬಿಡುತ್ತಾರೆ ಬರೀ ತರಬೇತಿಯನ್ನು ಮುಗಿಸುತ್ತಾರೆ ಅಷ್ಟೆ ನಂತರ ಎರಡನೇ ತಂಡದ ಶಿಕ್ಷಕರು ಮೊದಲನೇ ದಿನವೇ ಹೀಗೆ ಹೇಳುತ್ತಾರೆ ಎಲ್ಲಾ ಭಾಷೆಗಳಲ್ಲಿ ಚೈನೀಸ್ ಭಾಷೆ ತುಂಬಾ ಸುಲಭವಾಗಿದ್ದು ಚೀನಾದವರು ಎಲ್ಲಿ ಬೇಕಾದರೂ ನಮಗೆ ಸಿಗುತ್ತಾರೆ.

 ಈ ಭಾಷೆ ತುಂಬ ಸುಂದರ ಹಾಗೂ ಸರಳವಾದ ಭಾಷೆ ಈ ಭಾಷೆ ಹೇಳಿಕೊಡಬೇಕು ಎಂದರೆ ನನಗೆ ಒಂದು ಅವಕಾಶ ಸಿಕ್ಕಿದೆ ತುಂಬ ಸುಲಭವಾಗಿರುವಂತ ಭಾಷೆಯಿದು ತುಂಬ ಚೆನ್ನಾಗಿ ನಾವು ಸುಲಭವಾಗಿ ಕಲಿಯಬಹುದು ಎಂದು ಹೇಳುತ್ತಾರೆ.

 ಸರಿಯಾಗಿ ಈ ಭಾಷೆ ಕಲಿಯಬೇಕು ಎಂದರೆ ನಾವು 2 ವಾರಗಳಲ್ಲಿ 3 ವಾರಗಳಲ್ಲಿ ಅರ್ಥಮಾಡಿಕೊಳ್ಳಬಹುದು ಸಾಕಷ್ಟು ನಾವು ಕಲಿಯಬಹುದು ನಮಗೆ ಒಂದು ತಿಂಗಳು ಇದೆ ಅಂದಮೇಲೆ ನಾವು ಇದರಲ್ಲಿ ಪರಿಣಿತಿಯನ್ನು ಪಡೆಯಬಹುದು ಎಂದು ಉತ್ಸಾಹ ತುಂಬುತ್ತಾರೆ.

ತರಗತಿಯನ್ನು ಆರಂಭಿಸಿದರು ಮೊದಲ ಬಾರಿಗೆ ನಾವು ಎರಡು ಮೂರು ವಾಕ್ಯಗಳು ಕಲಿತರೆ ಸಾಕು ನಮಸ್ಕಾರ ಹೇಗಿದ್ದೀರಿ ನಿಮ್ಮ ಹೆಸರೇನು ಊಟ ಆಯಿತೇ ತಿಂಡಿ ಆಯಿತೇ ಎಲ್ಲಿಂದ ಬಂದಿದ್ದೀರಿ ಎಲ್ಲಿಗೆ ಹೋಗುತ್ತೀರಿ ನಿಮ್ಮ ಪರಿಚಯ ನಮಗೆ ಹೇಳಿ ಈ ರೀತಿ ನಾವು ಕಲಿಯುತ್ತಾ ಹೋಗೋಣ ಎಂದು ಉತ್ಸಾಹ ತುಂಬಿದರು.

 ಎರಡನೇ ತಂಡದವರು ತುಂಬಾ ಚೆನ್ನಾಗಿ ಕಲಿತರು ಮೊದಲನೆಯ ತರಬೇತಿಯಲ್ಲಿ ನಕರಾತ್ಮಕವಾಗಿ ಇತ್ತು ಅದೇ ಎರಡನೆಯ ತಂಡದಲ್ಲಿ ಸಕಾರಾತ್ಮಕ ವಾತಾವರಣ ಇತ್ತು ಹೀಗಾಗಿ ಅವರು ತುಂಬ ಚೆನ್ನಾಗಿ ಕಲಿತರು.

Leave a Comment