ನಾವು ಕುಗ್ಗಬಾರದು

ಒಂದು ಸಾರಿ ಶಿಕ್ಷಕರು ತನ್ನ ಎಲ್ಲಾ ವಿದ್ಯಾರ್ಥಿಗಳು ಬಂದಾಗ ಒಂದು ಆಟ ಆಡಿಸಿ ಅದರಲ್ಲಿ ಗೆದ್ದರೆ ನಿಮಗೆ ಐನೂರು ರೂಪಾಯಿ ಬಹುಮಾನ ಎಂದು ಹೇಳಿದರು ಅದಕ್ಕಿಂತ ಮುಂಚೆ ನಾನು ಒಂದು ಮಾತು ಹೇಳುವುದಿದೆ ಎಂದು ಒಂದು  ನೋಟನ್ನು ಕೈಗೆ ಎತ್ತಿಕೊಂಡು ನಾಲ್ಕು ಸಾರಿ ಮುದುಡಿಹೇಳಿದರು.

 ಇದರ ಬೆಲೆ ಎಷ್ಟು ಕಸದಲ್ಲಿ ಹಾಕಿದರು ಆಗ ಕೇಳಿದರು ಇದರ ಬೆಲೆಯಷ್ಟು ಕೇಳಿದರು ಐನೂರು ರೂಪಾಯಿಯ ನೋಟನ್ನು ಜೇಬಿಗೆ ಇಟ್ಟರೆ ಅದನ್ನು ಕಾಲಿನಿಂದ ಉಜ್ಜಿದರೆ ಕಾಲಿನಿಂದ ತುಳಿದು ಕೊಂಡು ಹೋದರೂ ಅದರ ಬೆಲೆ ಬದಲಾಗುವುದೇ ಇಲ್ಲ ಎಂದು ಕಸದಲ್ಲಿ ಬಿಸಾಕಿದರು.

 ಅಷ್ಟೆ ಮೌಲ್ಯ ಚರಂಡಿಯಲ್ಲಿ ಹಾಕಿ ತೆಗೆದು ಮತ್ತೆ ಅದನ್ನು ತೊಳೆದ ನಂತರ ಅದರ ಬೆಲೆಯೂ ಅಷ್ಟೇ ಅಲ್ಲವೇ ಎಂದು ಕೇಳುತ್ತಾರೆ ಏನೇ ಮಾಡಿದರು ಇದರ ಬೆಲೆ ಕಳೆದುಕೊಳ್ಳುವುದಿಲ್ಲ ಎಂದರು ಆಗ ಎಲ್ಲಾ ವಿದ್ಯಾರ್ಥಿಗಳು ಹೌದು ಎನ್ನುತ್ತಾರೆ ಕೆಲವು ಸಾರಿ ಆಕಸ್ಮಿಕವಾಗಿ ಏನೋ ಅನಾಹುತಗಳು ನಡೆದು ಬಿಡುತ್ತವೆ ಅದಕ್ಕೆ ಕೊರಗುವುದನ್ನು ಬಿಡಬೇಕು.

 ಮತ್ತೆ ನಮಗೆ ಇತರರು ಒಂದು ಸಾರಿ ತುಳಿಯುತ್ತಾರೆ ಒಂದು ಸಾರಿ ಹಿಂಸಿಸುತ್ತಾರೆ ಅವರಿಗೆ ಬೆಕ್ಕಾದಂತೆ ಕಷ್ಟವು ಕೊಡಬಲ್ಲರು ಹಿಯಾಳಿಸಬಲ್ಲರು ಅಪಹಾಸ್ಯ ಮಾಡಬಹುದು ಆದರೆ ನಾವು ಏನೇ ಆದರೂ ನಾವು ಕುಗ್ಗಬಾರದು ನಮ್ಮ ಮೌಲ್ಯವನ್ನು ನಾವು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬಾರದು.

 ಹೇಗೆ ನೋಟಿನ ಬೆಲೆ ಕಳೆದುಕೊಳ್ಳುವುದಿಲ್ಲವೇ ಹಾಗೆ ನಮ್ಮ ಬೆಲೆ ಯಾವುದೇ ಕಾರಣಕ್ಕೂ ನಾವು ಕಳೆದುಕೊಳ್ಳಬಾರದು ಎಂದು ಹೇಳಿದರು.

  ಮನುಷ್ಯರು ಸಹಜವಾಗಿ ಬದಲಾಗುತ್ತಾರೆ

ಒಂದು ಊರಿನಲ್ಲಿ ಡಂಗುರ ಸಾರಿಕೊಂಡು ಬರುತ್ತಿರುತ್ತಾರೆ ರಾಜನ ಕನಸಿನಲ್ಲಿ ರಾಜನು ಸಿಂಹಾಸನದ ಮೇಲೆ ಕುಳಿತಿದ್ದಾಗ ಸಿಂಹಾಸನವು ಬೀಳುವಂತೆ ಕನಸು ಬಿದ್ದಿದೆ ಇದರ ಅರ್ಥವನ್ನು ಹೇಳಿದರೆ ನೂರು ಚಿನ್ನದ ನಾಣ್ಯ ಬಹುಮಾನ ಸಿಗುತ್ತದೆ ಎಂದು ಡಂಗುರ ಸಾರುತ್ತಿರುತ್ತಾರೆ.

  ಕತ್ತೆ ಕಾಯುವವನು ನನಗೆ ಇದರ ಉತ್ತರ ತಿಳಿದಿದ್ದರೆ ನಾನು ಈ ನಾಣ್ಯವನ್ನು ಪಡೆಯಬಹುದಾಗಿತ್ತು ಎಂದು ಮನದಲ್ಲಿ ಅಂದುಕೊಳ್ಳುತ್ತಾನೆ ಆಗ ಚಿಕ್ಕ ಕತ್ತೆ ಮರಿ ಹೇಳುತ್ತದೆ ಇದು ನನಗೆ ಗೊತ್ತು ಮತ್ತೆ ಬಂದ ಹಣದಲ್ಲಿ ನನಗೆ ಒಳ್ಳೆಯ ಮನೆಯನ್ನು ಕಟ್ಟಿಸು ಎಂದು ಹೇಳಿತು ಅದಕ್ಕೆ ಒಪ್ಪಿದನು.

 ರಾಜನಿಗೆ ಹೇಳಿದನು ನಿಮ್ಮ ಅಕ್ಕ ಪಕ್ಕದವರು ನಿಮ್ಮನ್ನು ಯಾವ ಕ್ಷಣದಲ್ಲಿ ಬೇಕಾದರೂ ನಿಮ್ಮನ್ನು ಕೊಲ್ಲಬಹುದು ಎಚ್ಚರಿಕೆಯಿಂದ ಇರಿ ಈ ವಿಷಯವನ್ನು ಪತ್ತೇದಾರಿಯಿಂದ ತಿಳಿದುಕೊಳ್ಳುತ್ತಾನೆ ಇದು ನಿಜವಾಗಿರುತ್ತದೆ ನಾಣ್ಯವೂ ಸಿಗುತ್ತದೆ ಹಾಗೆಯೇ ಕತ್ತೆಗೆ ಮನೆಯನ್ನು ಕಟ್ಟಿಸುವುದಿಲ್ಲ.

  ಮತ್ತೆ ಕೆಲವು ದಿನಗಳ ನಂತರ ಮತ್ತೆ ಒಂದು ಕನಸು ಅದರಲ್ಲಿ ರಾಜನಿಗೆ ಅನೇಕ ಚಿಕ್ಕ ಚಿಕ್ಕ ಪಕ್ಷಿಗಳು ದೊಡ್ಡ ಪಕ್ಷಿಗಳನ್ನು ಎಲ್ಲವೂ ಬಂದು ಮುತ್ತಿಕೊಂಡಂತೆ ಕನಸು ಕಾಣುತ್ತಾನೆ ಎದ್ದ ನಂತರ ಗಾಬರಿಯಾಗುತ್ತಾನೆ ಮತ್ತೆ ಡಂಗುರ ಸಾರುತ್ತಾರೆ ಇದನ್ನು ಕೇಳಿದ ನಂತರ ಮತ್ತೆ ಕತ್ತೆಯ ಬಳಿ ಹೋದ ನಾನು ನಿನಗೆ ಮನೆ ಕಟ್ಟಿಸುವುದನ್ನು ಮರೆತುಬಿಟ್ಟೆ ಕ್ಷಮಿಸು ಈ ಸಾರಿ ನಾನು ನಿನಗೆ ಮನೆಯನ್ನು ಖಂಡಿತ ಕಟಿಸುತ್ತೇನೆ.

  ಈ ಕನಸಿನ ಅರ್ಥವೇನು ಎಂದು ಕೇಳಿದ ಕತ್ತೆ ಮರಿಯು ಹೇಳಿತ್ತು ರಾಜನಿಗೆ ಈ ಸಾರಿ ಮೂರು ಕಡೆಯಿಂದ ದಾಳಿ ಮಾಡುವ ಸಾಧ್ಯತೆ ಇದೆ ಆದಷ್ಟು ಬೇಗ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿತು.

 ನಂತರ ರಾಜನು ಅಕ್ಕಪಕ್ಕ ಇದ್ದ ಎಲ್ಲಾ ಶತ್ರುಗಳನ್ನು ಸೋಲಿಸಿದ ಇದಕ್ಕೂ 250 ಚಿನ್ನದ ನಾಣ್ಯ ಬಂತು ಕತ್ತೆಗೆ ಮನೆ ಕಟ್ಟಿಸುವುದು ನೆನಪಿಗೆ ಬಂತು ಆದರೆ ಅಷ್ಟೊಂದು ಹಣ ಖರ್ಚು ಮಾಡಬೇಕಲ್ಲಾ ಎಂದು ಚಿಂತಿಸಿ ಆ ಕತ್ತೆಯ ಮರಿಯನ್ನು ಮಾರಿಬಿಡುತ್ತಾನೆ.

.ಕೆಲವು ದಿನಗಳ ನಂತರ ಮತ್ತೆ ರಾಜನಿಗೆ ಒಂದು ಕನಸು ರಾಜನು ಮಲಗಿರಬೇಕಾದರೆ ಕೋಗಿಲೆಯೂ ಬಂದು ಹಾಡು ಹಾಡುತ್ತಿದೆ ಇದಕ್ಕೆ ಉತ್ತರ ಬೇಕಾದರೆ ಮತ್ತೆ ಕತ್ತೆಯ ಮರಿಯೇ ಬೇಕು ಅದಕ್ಕಾಗಿ ಯಾರ ಹತ್ತಿರ ಮಾರಿ ಇರತ್ತಾನೆಯೋ ಅವನಿಗೆ ದುಡ್ಡು ಕೊಟ್ಟು ಮತ್ತೆ ಕತ್ತೆಯನ್ನು ಖರೀದಿಸುತ್ತಾನೆ.

 ಆಗ ಕತ್ತೆ ಕಾಯುವವನು ಕ್ಷಮಿಸು ನಾನು ನಿನಗೆ ದೊಡ್ಡ ಮನೆ ಕಟ್ಟಿಸುತ್ತೇನೆ ಮತ್ತೆ ಕನಸಿನ ಅರ್ಥ ಹೇಳು ಎಂದು ಗೋಗರೆದನು ರಾಜನಿಗೆ ತನ್ನ ರಾಜ್ಯದಲ್ಲಿ ಎಲ್ಲಾ ಕಡೆಗಳಿಂದಲೂ ಒಳ್ಳೆಯದೆ ಆಗುತ್ತದೆ ಈಗ ನಿಶ್ಚಿಂತೆಯಾಗಿ ಇರಬಹುದು ಎಂದು ಹೇಳಿತು ಇದರಿಂದ ಐನೂರು ಚಿನ್ನದ ನಾಣ್ಯ ಬಂತು ಆಗ ಚಿನ್ನದ ನಾಣ್ಯವನ್ನು ತೆಗೆದು ಕೊಂಡು ಹೋಗಿ ಕತ್ತೆಗೆ ಮರಿಗೆ ಹೇಳಿದನು ಈಗ ನಿನಗೆ ಎಂತಹ ಒಳ್ಳೆಯ ಮನೆಯನ್ನು ಬೇಕಾದರು ನಾನು ಕಟ್ಟಿಸಿಕೊಡುತ್ತೇನೆ ಎಂದನು.

 ಅದಕ್ಕೆ ಕತ್ತೆಮರಿ ಹೇಳಿತ್ತು ನನಗೆ ನಿನ್ನ ಹಣದ ಅವಶ್ಯಕತೆಯೂ ಇಲ್ಲ ಮನೆಯ ಅವಶ್ಯಕತೆ ಇಲ್ಲ ನನಗೆ ಗುಡಿಸಿಲೇ ಸಾಕು ಈ ಹಣವೆಲ್ಲವೂ ನೀನೆ ಇಟ್ಟುಕೋ ಎಂದು ಹೇಳಿತು ಆಗ ಕುತೂಹಲದಿಂದ ನನ್ನ ಮೇಲೆ ಕೋಪವೇ? ಎಂದು ಕೇಳಿದನು.

 ಕೋಪವೂ ಇಲ್ಲ ಬೇಸರವಿಲ್ಲ ನೀನು ಮಾಡಿದ ಕೆಲಸದಲ್ಲಿ ನಿಮ್ಮ ತಪ್ಪು ಯಾವುದೇ ಕಾರಣಕ್ಕೂ ಇಲ್ಲ ಏಕೆಂದರೆ ಕಾಲದ ಮಹಿಮೆ ಅದರಂತೆಯೇ ನೀನು ಕೂಡ ಮಾಡಿದ್ದೀಯಾ ಎಂದಿತು ಅದು ಹೇಗೆ ಎಂದು ಕೇಳಿದನು.

 ಆಗ ಕತ್ತೆ ಮರಿ ವಿವರಿಸಿತು 1) ರಾಜನ ಸಿಂಹಾಸನ ಬೀಳುತ್ತಿದೆ ಎಂದಾಗ ನೀನು ನನ್ನನ್ನು ದೂರವಿಟ್ಟೆ.2) ರಾಜನನ್ನು ಯಾರಾದರೂ ಕೊಲ್ಲುತ್ತಾರೆ ಎಂದಾಗ ನೀನು ನನ್ನನ್ನು ಮಾರಿಬಿಟ್ಟೆ 3) ರಾಜ ಸುಖ ಶಾಂತಿಯಿಂದ ಇದ್ದಾರೆ ಎಂದಾಗ ನೀನು ಕೂಡ ಎಲ್ಲರಂತೆಯೇ ಸುಖವಾಗಿ ಶಾಂತಿಯಾಗಿ ಇದ್ದೀಯಾ ಈಗ ನಿನಗೆ ಹೊಟ್ಟೆ ತುಂಬಿದೆ.

 ನಿನ್ನ ಬಳಿ ಬೇಕಾದಷ್ಟು ಹಣ ಐಶ್ವರ್ಯವಿದೆ ಅದಕ್ಕಾಗಿ ಈಗ ನನಗೆ ನೀನು ಕೊಡಲು ಬಂದಿರುವೆ ಎಂದಿತು. ಕಾಲ ಹೇಗೆ ಬದಲಾಗುತ್ತದೆ ಹಾಗೆ ಮನುಷ್ಯರು ಸಹಜವಾಗಿ  ಬದಲಾಗುತ್ತಾರೆ ಎಂದು ಹೇಳಿತು.

  ಸಕ್ಕರೆ ಪುಡಿ ಅದು ವಿಷವಲ್ಲ

ಒಂದು ಒಳ್ಳೆಯ ಸಂಸಾರ ಅದರಲ್ಲಿ ತಂದೆ ತಾಯಿ ಮಗ ಹೊಸದಾಗಿ ಮದುವೆಯಾಗಿರುವ ಸೊಸೆ ಇರುತ್ತಾಳೆ ಒಂದು ವರ್ಷ ಚೆನ್ನಾಗಿಯೇ ಎಲ್ಲರೂ ಹೊಂದಿಕೊಂಡು ಇರುತ್ತಾರೆ ನಂತರ ಅತ್ತೆ ಸೊಸೆಯರು ದಿನನಿತ್ಯ ಜಗಳವಾಡುತ್ತೀರುತ್ತಾರೆ ಗಂಡ ನಿಗಂತೂ ಈಕಡೆ ತಾಯಿಗೂ ಹೇಳಲಾರನು ಆ ಕಡೆ ಹೆಂಡತಿಗೂ ಹೇಳಲಾರದೆ ಒದ್ದಾಡುತ್ತಿರುತ್ತಾನೆ.

 ಇಬ್ಬರಿಗೂ ಹೇಗೆ ಸಮಾಧಾನ ಮಾಡಬೇಕು ಎಂಬ ಚಿಂತೆಯಲ್ಲಿ ಮುಳುಗಿರುತ್ತಾನೆ ದಿನನಿತ್ಯ ಮನೆಗೆ ಹೋದರೆ ಇದೇ ಸಮಸ್ಯೆ ಹಾಗಾಗಿ ತುಂಬಾ ಬೇಸರದಿಂದ ಇರುತ್ತಾನೆ ತನ್ನ ಕಥೆಯನ್ನು ತನ್ನ ಸ್ನೇಹಿತನಿಗೆ ಹೇಳಿದಾಗ ಸ್ನೇಹಿತನು ಧೈರ್ಯ ನೀಡುತ್ತಾನೆ ಇಷ್ಟಕ್ಕೆಲ್ಲ ನೀನು ಏಕೆ ಚಿಂತೆ ಮಾಡುವೆ ನಮ್ಮ ಊರಿನ ಆಚೆ ಒಬ್ಬ ಬಾಬಾ ಅವರು ಇದ್ದಾರೆ ಅವರಿಗೆ ಈ ಸಮಸ್ಯೆ ಹೇಳಿದರೆ ಸಾಕು ಅವರು ಈ ಸಮಸ್ಯೆಯನ್ನು ಪರಿಹಾರ ಮಾಡುತ್ತಾರೆ ಎಂದು ಹೇಳಿದನು.

ಸ್ನೇಹಿತನು ಹೇಳಿದ ನಂತರ ತನ್ನ ಹೆಂಡತಿಯನ್ನು ಕರೆದುಕೊಂಡು ಬಾಬಾ ಬಳಿ ಹೋಗುತ್ತಾರೆ ಬಾಬಾ ಅವರು ಒಬ್ಬೊಬ್ಬರನ್ನೂ ಪ್ರತ್ಯೇಕವಾಗಿ ಮಾತನಾಡುವವರು ಆಗ ಸೊಸೆಯ ಎಲ್ಲಾ ವಿಷಯವನ್ನು ತಿಳಿದುಕೊಳ್ಳುತ್ತಾರೆ ನಂತರ ಇವಳ ಗಂಡನಿಗೆ ಕರೆಯುತ್ತಾರೆ ಮನೆಯಲ್ಲಿ ನಡೆಯುವಂತಹ ಘಟನೆಗಳನ್ನು ಕೇಳಿಕೊಳ್ಳುತ್ತಾರೆ ನಂತರ ಸೊಸೆಯನ್ನು ಕರೆದು ಹೇಳುತ್ತಾರೆ.

 ನೀನು ಹೊಂದಿಕೊಂಡು ಹೋಗಬಹುದಲ್ಲವೇ ಎಂದು ಹೇಳುತ್ತಾರೆ? ಅಷ್ಟಕ್ಕೆ ಸೊಸೆ ರೇಗಿ ಕೂಗಾಡುತ್ತಾಳೆ ನೀವು ನನ್ನನ್ನು ಬುದ್ಧಿ ಹೇಳುತ್ತಿದ್ದೀರಾ? ಎಂದು ಹೇಳುತ್ತಾಳೆ ಆಗ ಬಾಬಾ ಅವರು ಅರ್ಥಮಾಡಿಕೊಳ್ಳುತ್ತಾರೆ ಆಮೇಲೆ ನೋಡು ಇದಕ್ಕೆ ಒಂದು ಪರಿಹಾರ ಇದೆ.

 ಇದು ನಿನಗೆ ಸೂಕ್ತವಾಗುತ್ತದೆ ಎಂದು ತಿಳಿಸುತ್ತಾರೆ ನೋಡು ನಿನಗೆ ಮುಖ್ಯವಾಗಿ ಕಾಡುತ್ತಿರುವ ತೊಂದರೆಯೆಂದರೆ ನಿಮ್ಮ ಅತ್ತೆಯ ತೊಂದರೆ ಸರೀನೆ? ಆಗ ಅವಳು ಹೌದು ಹೌದು ಎನ್ನುತ್ತಾಳೆ ಹಾಗಾದರೆ ನಿಮ್ಮ ಅತ್ತೆಯೇ ಇಲ್ಲದಿದ್ದರೆ ನೀನು ಚೆನ್ನಾಗಿ ಇರಬಹುದು ಅಲ್ಲವೇ? ಎಂದು ಹೇಳಿದಾಗ ಹೌದು ಎನ್ನುತ್ತಾಳೆ.

 ಆಗ ಬಾಬಾ ಅವರು ಹೇಳುತ್ತಾರೆ ನನ್ನ ಹತ್ತಿರ ಒಂದು ವಿಷದ ಪುಡಿ ಇದೆ ವಿಷದ ಪುಡಿಯನ್ನು ದಿನನಿತ್ಯ ಸ್ವಲ್ಪಸ್ವಲ್ಪವೇ ಹಾಕಿದರೆ ಅವರು ಒಂದು ವರ್ಷಕ್ಕೆ ಸಾಯುತ್ತಾರೆ ಈಗಲೇ ಸತ್ತರೆ ಎಲ್ಲರಿಗೂ ಅನುಮಾನ ಬರುತ್ತದೆ ಸೊಸೆಯೇ ಏನದರೂ ಮಾಡಿರಬೇಕು ಎಂಬ ಸಂದೇಹವು ಬರಬಹುದು ನೀನು ದಿನನಿತ್ಯ ಸ್ವಲ್ಪ ಪುಡಿಯನ್ನು ಹಾಕಿದರೆ ಯಾರಿಗೂ ತಿಳಿಯುವುದಿಲ್ಲ ಮತ್ತೆ ಯಾವ ವೈದ್ಯನೂ ಕೂಡ ಇದು ಕಂಡುಹಿಡಿಯಲು ಸಾಧ್ಯವಿಲ್ಲ.

ಈ ಮಾತು ಕೇಳಿದ ಸೊಸೆಗೆ ಸಂತೋಷ ಉಕ್ಕಿ ಬರುತ್ತದೆ ಬಾಬಾ ಅವರು ಪುಡಿಯನ್ನು ಕೊಡುತ್ತಾರೆ ದಿನನಿತ್ಯ ಸ್ವಲ್ಪ ಮಾತ್ರ ಹಾಕಿ ತಿನ್ನಿಸಬೇಕು ಎಂದು ಸೊಸೆಯಾದವಳು ವಿಷವನ್ನು ಬಾಬಾ ಅವರಿಂದ ಪಡೆದಳು ನಂತರ ಬಾಬಾ ಅವರು ಒಂದು ಮಾತು ಹೇಳಿದರು ಇನ್ನು ಮುಂದೆ ನೀನು ಯಾವುದೇ ಕಾರಣಕ್ಕೂ ನಿಮ್ಮ ಅತ್ತೆಯವರೊಂದಿಗೆ ಜಗಳ ಮಾಡಬಾರದು ಹೇಗಿದರು ಅವರು ಸತ್ತೆ ಸಾಯುತ್ತಾರೆ.

 ಆದ್ದರಿಂದ ನೀನು ಅವರು ಹೇಳಿದಂತೆಯೇ ಅವರ ಇಷ್ಟದಂತೆಯೇ ನೀನು ಇರು ಮತ್ತೆ ಅತ್ತೆಯವರಿಗೆ ಈಗಲೇ ವಯಸ್ಸಾಗಿದೆ ಎಷ್ಟು ದಿನ ಇರಬಹುದು ಎಂದು ಹೇಳುತ್ತಾರೆ ಮನೆಗೆ ಬಂದು ಬಾಬಾ ಅವರು ಹೇಳಿದಂತೆಯೇ ದಿನನಿತ್ಯ ಸ್ವಲ್ಪಸ್ವಲ್ಪ ಪುಡಿಯನ್ನು ಹಾಕಿ ತಿನ್ನುವ ಆಹಾರಕ್ಕೆ ಕೊಡುತ್ತಿರುತ್ತಾಳೆ ಮತ್ತೆ ಇವಳು ಪ್ರೀತಿಯಿಂದ ನೋಡಿಕೊಳ್ಳಲು ಆರಂಭಿಸುತ್ತಾಳೆ.

 ಮತ್ತೆ ಅತ್ತೆಯೂ ಕೂಡ ಬದಲಾಗುತ್ತಾರೆ ಏಕೆಂದರೆ ಇವಳ ವರ್ತನೆ ಬದಲಾಗಿದ್ದರಿಂದ ತುಂಬಾ ಚೆನ್ನಾಗಿ ಹೊಂದಿಕೊಂಡು ಇರುತ್ತಾರೆ ಆನಂತರ ಅತ್ತೆಯವರು ಮನೆಯ ಜವಾಬ್ದಾರಿಯ ಕೀ ಗಳೆಲ್ಲವೂ ಸೊಸೆಗೆ ಕೊಡುತ್ತಾರೆ ಇನ್ನು ಮುಂದೆ ನೀನೇ ಇದನ್ನು ಎಲ್ಲಾ ನೋಡಿಕೋ ಎಂದಾಗ ಇಬ್ಬರಲ್ಲೂ ಪರಸ್ಪರ ಪ್ರೀತಿ ಹೆಚ್ಚಾಗ ತೊಡಗುತ್ತದೆ.

 ಹೀಗೆ ಹತ್ತು ತಿಂಗಳಲ್ಲಿ ಇಬ್ಬರೂ ಒಂದಾಗಿ ಬಿಡುತ್ತಾರೆ ಸ್ವಂತ ತಾಯಿ ಮಗಳಂತೆ ಇಬ್ಬರು ಇರಲು ಆರಂಭಿಸುತ್ತಾರೆ ಹನ್ನೊಂದು ತಿಂಗಳು ಆಗುತ್ತಿದ್ದಂತೆಯೇ ಬಾಬಾ ಅವರ ಬಳಿಗೆ ಹೋಗಿ ಕಾಲಿಗೆ ಬಿದ್ದು ಹೇಳುತ್ತಾಳೆ ಬಾಬಾ ಅವರೆ ನಮ್ಮ ಅತ್ತೆಯವರು ನನ್ನ ತಾಯಿ ಇದ್ದಂತೆ ನನಗೆ ತಾಯಿಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಿದ್ದಾರೆ.

 ನಾನು ಇಷ್ಟು ದಿನ ಅವರಿಗೆ ವಿಷ ಹಾಕಿ ಬಿಟ್ಟಿದ್ದೀನಿ ಈಗ ಅವರು ಸಾಯಬಾರದು ಅದಕ್ಕೆ ಏನಾದರೂ ಬದಲಿ ವ್ಯವಸ್ಥೆ ಇದೆಯೇ ಎಂದು ಕಣ್ಣೀರಿಡುತ್ತಾಳೆ ಮತ್ತೆ ಗೋಗರೆಯುತ್ತಾಳೆ ನಂತರ ಬಾಬಾ ಅವರು ಸಾವಧಾನವಾಗಿ ಇದ್ದು ನೀನು ಇನ್ನೇನೋ ಚಿಂತೆ ಪಡುವ ಅವಶ್ಯಕತೆಯಿಲ್ಲ ನಾನು ಕೊಟ್ಟಿದ್ದು ಬರೀ ಪುಡಿ ಸಕ್ಕರೆ ಪುಡಿ ಅದು ವಿಷವಲ್ಲ ಅದು ಸಕ್ಕರೆಪುಡಿ ಆದರೆ ನಿನ್ನಲ್ಲಿರುವ ವಿಷವನ್ನು ಅದು ತೆಗೆದಿದೆ ಎಂದು ಹೇಳಿದರು.

ನಾವು ಇನ್ನೊಬ್ಬರನ್ನು ಹೆಚ್ಚಾಗಿ ಪ್ರೀತಿಸಿದರೆ ಅವರು ಕೂಡ ನಮ್ಮನ್ನು ಪ್ರೀತಿಸುತ್ತಾರೆ ಅಂದರೆ ಬೆಂಕಿಕಡ್ಡಿ ಏನು ಹೇಳುತ್ತದೆಯೆಂದರೆ ನಾನು ಇತರರನ್ನು ಸುಟ್ಟು ಬಿಡುತ್ತೀನಿ ಎಂದರೆ ಮೊದಲು ಬೆಂಕಿಕಡ್ಡಿಯೇ ಸುಟ್ಟು ಹೋಗುತ್ತದೆ ಹಾಗೆಯೇ ನಾವು ಇತರರಿಗೆ ಒಳ್ಳೆಯದನ್ನು ಮಾಡಿದಾಗ ಅದರ ಫಲವು ಒಳ್ಳೆಯದಾಗಿರುತ್ತದೆ ಎಂದು ಹೇಳಿ ಕಳಿಸುತ್ತಾರೆ ನಂತರ ಸೊಸೆಗೆ ಅರ್ಥವಾಗುತ್ತದೆ.

  ತಕ್ಷಣಕ್ಕೆ ಉತ್ತರ ನೀಡಬಾರದು

ಬಾಬಾ ಅವರಿಗೆ ಬೈದರೆ ನಿಂದಿಸಿದರೆ ಅವಮಾನ ಮಾಡಿದರೆ ಅಪಹಾಸ್ಯ ಮಾಡಿದರೆ ಬಾಬಾ ಅವರು ಸಮಯ ಸಿಕ್ಕಿದಾಗ ಇದಕ್ಕೆ ಉತ್ತರ ನೀಡುತ್ತೇನೆ ಎಂದು ಬರುತ್ತಿದ್ದರು ಕೆಲವರು ಹೋಗಿ ಕೇಳುತ್ತಿದ್ದರು ನಂತರ ಉತ್ತರಿಸುತ್ತೇನೆ ಎಂದು ಹೇಳಿದ್ದೀರಿ ಏಕೆ ಉತ್ತರಿಸಲಿಲ್ಲ ಎಂದು ಕೇಳುತ್ತಿದ್ದರು ಇದಕ್ಕೇನು ಉತ್ತರ ಇಲ್ಲ ಎಂದು ಕಳುಹಿಸುತ್ತಿದ್ದರು.

 ಕೆಲವರು ಬೇಕು ಬೇಕು ಎಂದೇ ಉತ್ತರ ಕೇಳುತ್ತಿದ್ದರು ನಾಳೆ ಹೇಳುತ್ತೇನೆ ಎಂದು ಹೇಳುತ್ತಿದ್ದರು ಕೆಲವರು ನಮಗೆ ಉತ್ತರ ಸಿಗಲಿಲ್ಲ ಎಂದು ಹೇಳುತ್ತಿದ್ದರು ಕೆಲವರು ಈ ಉತ್ತರವನ್ನು ನೆನ್ನೆಯೇ ಹೇಳಬಹುದಾಗಿತ್ತು ಏಕೆ ಹೇಳಲಿಲ್ಲ ಎಂದು ಕೇಳುತ್ತಿದ್ದರು.

 ಆಗ ಬಾಬಾ ಅವರು ನನಗೆ ನಮ್ಮ ಉಸ್ತಾದ್ ಅವರ ನಿಯಮ ಪಾಲನೆ ಮಾಡುತ್ತಿದ್ದೇನೆ ಉಸ್ತಾದ್ ಹೇಳುತ್ತಿದ್ದರು ಯಾರಿಗಾದರೂ ಸಿಟ್ಟು ಬಂದಾಗ ಕೋಪ ಬಂದಾಗ ತಕ್ಷಣಕ್ಕೆ ಉತ್ತರ ನೀಡಬಾರದು ಏಕೆಂದರೆ ಯಾವಾಗ ವ್ಯಕ್ತಿ ಕೋಪದಲ್ಲಿ ಸಿಟ್ಟಿನಲ್ಲಿ ಇದ್ದಾಗ ತನ್ನ ಪ್ರಜ್ಞೆ ಕಳೆದುಕೊಂಡಿರುತ್ತಾನೆ ಏನು ಹೇಳಿದರು ಅರ್ಥವಾಗುವುದಿಲ್ಲ ಅವನ ಮನಸ್ಸಿನಲ್ಲಿ ಬರಿ ನಕರಾತ್ಮಕವಾದ ಭಾವನೆಗಳೆ ಇರುತ್ತದೆ.

 ಸ್ವಲ್ಪ ಸಮಯ ಬಿಟ್ಟಾಗ ತಾನೇ ತಾನಾಗಿ ಸಮಾಧಾನವಾಗುತ್ತಾರೆ ನಂತರ ಪ್ರಜ್ಞೆ ಇರುತ್ತದೆ ಆವಾಗ ಅವರಿಗೆ ಏನೇ ಹೇಳಿದರು ಅರ್ಥಮಾಡಿಕೊಳ್ಳುತ್ತಾರೆ ಜಾಗ್ರತಾ ಅವಸ್ಥೆಯಲ್ಲಿ ಇರುತ್ತಾರೆ ಎಂದು ಹೇಳುತ್ತಿದ್ದರು. ಇಂದಿಗೂ ಕೂಡ ಅದೇ ನಿಯಮವನ್ನು ನಾನು ಪಾಲನೆ ಮಾಡುತ್ತಾ ಬಂದಿದ್ದೇನೆ ಎಂದು ಕೇಳಿದವರಿಗೆ ಬಾಬಾ ಅವರು ಉತ್ತರ ನೀಡಿದರು.




  ನಮಗೆ ಜಾಗ್ರತೆ ಇರಲೇಬೇಕು

 ಒಬ್ಬ ದಯಾಳು ರಾಜವಿದ್ದನ್ನು ಅವನು ಏಳು ಜನರಿಗೂ ಒಂದೊಂದು ಕುರಿ ಕೊಟ್ಟು ಒಂದು ತಿಂಗಳ ನಂತರ  ಕುರಿ ಅಷ್ಟೆ ತೂಕ (ಕೆ ಜಿ) ಇರಬೇಕು ಎಂದು ಹೇಳಿದನು ಅದಕ್ಕೆ ತಿನ್ನಲಿಕ್ಕೆ ಬೇಕಾದ ಎಲ್ಲವನ್ನೂ ಕೊಟ್ಟನು ಎಲ್ಲರ ಕುರಿಗಳು ದಷ್ಟಪುಷ್ಟವಾಗಿ ಚೆನ್ನಾಗಿ ಬೆಳೆದವು.

 ತೂಕವು ಸಾಕಷ್ಟು ಹೆಚ್ಚಾಯ್ತು ಆದರೆ ಒಂದು ಕುರಿಯ ತೂಕ ಯಾವುದೇ ಕಾರಣಕ್ಕೂ ವ್ಯತ್ಯಾಸ ಕಾಣಲಿಲ್ಲ ಎಲ್ಲರೂ ಆಶ್ಚರ್ಯ ಚಕಿತರಾದರು.

 ಆ ಕುರಿಯು ಹಾಗೆಯೇ ಇದೆ ಹಾಗೆಯೇ ಇರಲು ಕಾರಣ ಏನಿರಬಹುದು ಎಂದು ಕೇಳಿದರೂ ನಾನು ಮಾಡುತ್ತಿದ್ದದ್ದು ಇಷ್ಟೆ ಕುರಿಗೆ ಏನೇನು ತಿನ್ನಿಸಬೇಕು ಎಲವನ್ನು ತಿನ್ನಿಸುತ್ತಿದೆ.

 ದೂರದಲ್ಲಿ ಹುಲಿಯು ಗರ್ಜಿಸುವ ಶಬ್ದವು ಕೇಳುವಂತೆ ಇಟ್ಟಿದ್ದೆ ಅಷ್ಟೆ ಯಾವಾಗ ಹುಲಿಯ ಗರ್ಜಿಸುವ ಶಬ್ದವು ಕೇಳುತ್ತಿತ್ತು ಕುರಿಯು ಎಚ್ಚರಗೊಂಡು ಇರುತ್ತಿತ್ತು ಮತ್ತೆ ಕುರಿ ಯಾವಾಗಲೂ ಎಚ್ಚರಿಕೆಯಿಂದ ಜಾಗ್ರತೆಯಿಂದ ಇರುತ್ತಿತ್ತು.

 ಏಕೆಂದರೆ ಶಬ್ದವೇ ಬರುತ್ತಿದೆ ಎಂದಾಗ ಹುಲಿ ಯಾವ ಸಮಯದಲ್ಲಿ ಬೇಕಾದರೂ ಬಂದು ತಿನ್ನಬಹುದು ಎಂದು ಕುರಿ ಮಾತ್ರ ಸದಾ ಚಟುವಟಿಕೆಯಿಂದ ಇರುತ್ತಿತ್ತು.

ಕುರಿಗೆ ಹುಲಿಯ ಭಯವು ಒಳಗೆ ಇದ್ದೇ ಇತ್ತು ಆದ್ದರಿಂದ ದಪ್ಪವೂ ಆಗಲಿಲ್ಲ ತೂಕವೂ ಹೆಚ್ಚಾಗಲಿಲ್ಲ ನಮ್ಮ ಬದುಕಿನಲ್ಲಿಯೂ ಅಷ್ಟೆ ನಮಗೆ ಜಾಗ್ರತೆ ಇರಲೇಬೇಕು ಸದಾ ಚಟುವಟಿಕೆಯಿಂದ ಇರೋಣ

Leave a Comment