ಒಂದು ಕಾಡಿನಲ್ಲಿ ಹುಲಿಯು ಬೇಟೆಗಾಗಿ ಅಲೆಯುತ್ತಿರುತ್ತದೆ ಅಂದು ಮಧ್ಯಾಹ್ನವಾದರೂ ಯಾವುದೇ ಬೇಟೆ ಸಿಗುವುದಿಲ್ಲ ನಂತರ ಏನು ಮಾಡುವುದು ಎಂದು ಯೋಚಿಸುತ್ತಾ ಮುಂದೆ ಹೋಗುತ್ತಿರುತ್ತದೆ ಆಗ ಒಂದು ಗೂಳಿ ಕಾಣಿಸುತ್ತದೆ.
ಹುಲಿ ಇದೆ ನನಗೆ ಇವತ್ತಿನ ಬೇಟೆ ಎಂದು ಗೂಳಿಗೆ ಅಟ್ಟಿಸಿಕೊಂಡು ಮಿಂಚಿನಂತೆ ಬರುತ್ತದೆ ಅಷ್ಟರಲ್ಲಿ ಗೂಳಿಯು ಎಚ್ಚೆತ್ತುಕೊಂಡು ಶರವೇಗದಲ್ಲಿ ಓಡುತ್ತದೆ ಮುಂದೆ ಸ್ವಲ್ಪ ಕಿರಿದಾದ ಮಾರ್ಗ ಇರುತ್ತದೆ ಅಲ್ಲಿ ಹೋಗಿ ಅವಿತುಕೊಳ್ಳುತ್ತದೆ ನಂತರ ಬಂದು ಹುಲಿ ನೋಡುತ್ತದೆ.
ಎಲ್ಲಿಯೂ ಕಾಣುತ್ತಿರುವುದಿಲ್ಲ ಆಗ ಗೂಳಿಯು ನಿಶ್ಚಿಂತೆಯಿಂದ ಸ್ವಲ್ಪ ಇಲ್ಲೇ ವಿಶ್ರಾಂತಿ ಪಡೆಯೋಣ ಎಂದು ಯೋಚಿಸುತ್ತದೆ ಅಷ್ಟರಲ್ಲಿ ಅದೇ ಸ್ಥಳದಲ್ಲಿ ಸ್ವಲ್ಪ ದೂರ ಇದ್ದ ಜಿಂಕೆಯು ಗೂಳಿಗೆ ತನ್ನ ಕೊಂಬಿನಿಂದ ತಿವಿಯುತ್ತಿದೆ.
ಆಚೆ ಹೋಗು ಎಂದು ತಿವಿಯುತ್ತಲೇ ಇರುತ್ತದೆ. ಗೂಳಿಯು ಎಷ್ಟೇ ತಿವಿಯುತ್ತಿದ್ದರು ಸಹಿಸಿಕೊಳ್ಳುತ್ತದೆ ಇದನ್ನು ಅರ್ಥಮಾಡಿಕೊಂಡ ಜಿಂಕೆ ಮತ್ತಷ್ಟು ತನ್ನ ಕೊಂಬಿನಿಂದ ತಿವಿಯುತ್ತಲೇ ಇರುತ್ತದೆ ಜಿಂಕೆಗೆ ಅಹಂಕಾರ ಬಂದಿರುತ್ತದೆ.
ನಾನು ಗೂಳಿಯನ್ನೇ ಸೋಲಿಸುತ್ತಿದ್ದೇನೆ ಜಂಬ ಕೊಚ್ಚಿಕೊಳ್ಳುತ್ತಾ ಜಿಂಕೆ ಹೇಳುತ್ತದೆ ಆಗ ಗೂಳಿ ನೀನು ಸಾಕಷ್ಟು ತಿವಿಯುತ್ತಿದ್ದರು ನಾನು ಸಹಿಸಿಕೊಳ್ಳುತ್ತಿದ್ದೇನೆ ಏಕೆಂದರೆ ಹುಲಿ ಆಚೆ ಕಾಯುತ್ತಿದೆ ನಾನು ತೊಂದರೆಯಲ್ಲಿದ್ದೇನೆ ಮತ್ತೆ ನಾನು ನಿನ್ನ ಸ್ಥಳಕ್ಕೆ ಬಂದಿದ್ದೇನೆ.
ನಾನು ನಿನ್ನ ಆಸರೆಯಲ್ಲಿದ್ದೇನೆ ಎನ್ನುವ ಕಾರಣದಿಂದಾಗಿ ಇಲ್ಲದಿದ್ದರೆ ನಾನು ಒಂದು ಸಾರಿ ನಿನಗೆ ತುಳಿದರೆ ಸತ್ತೆ ಹೋಗುತ್ತೀಯಾ ಎಂದು ಗೂಳಿ ಹೇಳುತ್ತದೆ ಪ್ರತಿಯೊಬ್ಬರಿಗೂ ಯಾವುದಾದರೂ ಸಂದರ್ಭದಲ್ಲಿ ಕಷ್ಟ ಬರುತ್ತದೆ ಆವಾಗ ಅವರಿಗೆ ಸಹಾಯ ಮಾಡಬೇಕೆ ಹೊರತು ಅವರನ್ನೇ ಹಿಂಸಿಸಬಾರದು ಎಂದು ಗೂಳಿ ಹೇಳುತ್ತದೆ ಆಗ ಜಿಂಕೆ ಅರ್ಥಮಾಡಿಕೊಳ್ಳುತ್ತದೆ. ನನಗೆ ಯಾರಾದರೂ ನಾನು ತೊಂದರೆಯಲ್ಲಿದ್ದೇನೆ ಎಂದು ಅರಿತು ಸತಾಯಿಸಿದ್ದಾರೆಯೇ?
ಪಲ್ಲಕ್ಕಿಂದ ಶಬ್ದ ಬಂತು
ಇಬ್ಬರು ಮೃದು ಸ್ವಭಾವದ ಪ್ರವಾಸಿಗರು ಪ್ರವಾಸ ಮಾಡುತ್ತಾ ಒಂದು ಹಳ್ಳಿಗೆ ಬಂದು ತಲುಪುತ್ತಾರೆ ತಲುಪುತ್ತಿದ್ದಂತೆಯೇ ಸಂಜೆಯಾಗುತ್ತದೆ ಮತ್ತೆ ಬೇರೆ ಹಳ್ಳಿಗೆ ಹೋಗೋಣ ಎಂದರೆ ತುಂಬಾ ದೂರ ಇರುತ್ತದೆ ಆದುದರಿಂದ ಆ ಹಳ್ಳಿಯಲ್ಲಿಯೇ ಇದ್ದ ಒಂದು ಸಮುದಾಯ ಭವನದಲ್ಲಿ ಉಳಿದುಕೊಳ್ಳಲು ಯೋಚನೆ ಮಾಡುತ್ತಾರೆ.
ಸಮುದಾಯ ಭವನದ ಕಾವಲು ಗಾರರಿಗೆ ಹೇಳುತ್ತಾರೆ ನೋಡಿ ನಾವು ರಾತ್ರಿ ಇದ್ದು ಬೆಳಿಗ್ಗೆ ಇಲ್ಲಿಂದ ಹೊರಟು ಹೋಗುತ್ತೇವೆ. ಆದ್ದರಿಂದ ಈ ರಾತ್ರಿ ಉಳಿದುಕೊಳ್ಳುವುದಕ್ಕೆ ಅವಕಾಶ ಮಾಡಿಕೊಡಿ ಎಂದು ಕೇಳುತ್ತಾರೆ ಆ ಕಾವಲುಗಾರರು ಯಾತ್ರಿಕರ ಬಳಿ ಹಣ ಇದ್ದೇ ಇದೆ ಹೇಗಾದರೂ ಮಾಡಿ ಹಣ ಕದಿಯಬಹುದು ಎಂದು ಆಗಲಿ ನೀವು ನಿಶ್ಚಿಂತೆಯಿಂದ ಇರಬಹುದು ಎಂದು ಹೇಳಿದರು.
ಯಾತ್ರಿಕರಿಗೆ ಒಂದು ಸ್ಥಳವನ್ನು ತೋರಿಸಿ ನೀವು ಇಲ್ಲಿ ಆರಾಮಾಗಿ ಇರಬಹುದು ಎಂದು ಹೇಳಿದರು ಇಬ್ಬರು ಯಾತ್ರಿಕರು ಯೋಚನೆ ಮಾಡಿದರು ನಮ್ಮ ಹತ್ತಿರ ಸ್ವಲ್ಪ ಹಣ ಇದೆ ಯಾರಾದರೂ ಕದ್ದರೆ ನಮಗೆ ಕಷ್ಟವಾಗುತ್ತದೆ ಹಾಗಾಗಿ ನಮ್ಮ ಹಣವನ್ನು. ನಾವು ತಂದಿರುವ ಗ್ರಂಥಗಳಲ್ಲಿ ಅಡಗಿಸೋಣ ಎಂದು ಮಾತನಾಡಿ ಗ್ರಂಥದಲ್ಲಿ ಹಣವನ್ನು ಅಡಗಿಸುತ್ತಾರೆ.
ಈ ಮಾತನ್ನು ಅಲ್ಲಿ ಇರುವ ಕಾವಲುಗಾರರು ಕೇಳಿಸಿಕೊಳ್ಳುತ್ತಾರೆ ಯಾತ್ರಿಕರು ಮಲಗಿದ ನಂತರ ಗ್ರಂಥದಿಂದ ಹಣವನ್ನು ಕಳ್ಳತನ ಮಾಡಿಬಿಡುತ್ತಾರೆ. ಬೆಳಿಗ್ಗೆ ಎದ್ದು ಯಾತ್ರಿಕರು ನಮ್ಮ ಹಣವನ್ನು ಒಂದು ಸಾರಿ ಪರಿಶೀಲಿಸಿಕೊಳ್ಳೋಣ ಎಂದರೆ ಹಣವೇ ಇರುವುದಿಲ್ಲ ಆಗ ಯಾತ್ರಿಕರಿಗೆ ತುಂಬಾ ಬೇಸರವಾಗುತ್ತದೆ.
ಕಾವಲುಗಾರರಿಗೆ ವಿನಯವಾಗಿ ಹೇಳುತ್ತಾರೆ ನೋಡಿ ನಮ್ಮ ಆ ಹಣ ಬಂಡವಾಳದ್ದು ಅದರಲ್ಲಿ ಸ್ವಲ್ಪ ಹಣ ನೀವು ಇಟ್ಟುಕೊಂಡು ಇನ್ನು ಮಿಕ್ಕಿದ್ದು ಹಣವಾದರೂ ನಮಗೆ ನೀಡಿ ಏಕೆಂದರೆ ರಾತ್ರಿ ಇಲ್ಲಿ ಯಾರು ಬಂದಿಲ್ಲ ಆದ್ದರಿಂದ ಆ ಹಣವನ್ನು ನೀವೇ ತೆಗೆದುಕೊಂಡು ಇದ್ದೀರಿ ಎಂದು ಹೇಳುತ್ತಾರೆ ಆದರೆ ಇಬ್ಬರು ಕಾವಲುಗಾರರು ಇಲ್ಲ ಇಲ್ಲ ನಾವು ನಿಮ್ಮ ಹಣವನ್ನು ಕಳ್ಳತನ ಮಾಡಿಲ್ಲ ಎಂದು ಹೇಳಿ ದಬಾಯಿಸುತ್ತಾರೆ.
ಯಾತ್ರಿಕರಿಗೆ ತುಂಬಾ ಬೇಸರವಾಗುತ್ತದೆ ನಂತರ ಹಳ್ಳಿಯ ಹಿರಿಯರಿಗೆ ಹೇಳುತ್ತಾರೆ ಹಳ್ಳಿಯ ಹಿರಿಯರು ಯಾತ್ರಿಕರ ಮಾತುಗಳನ್ನು ಕೇಳಿ ಯಾತ್ರಿಕರಿಗೆ ನ್ಯಾಯ ಒದಗಿಸಲೇಬೇಕು ಇಲ್ಲದಿದ್ದರೆ ನಮ್ಮ ಹಳ್ಳಿಯ ಹೆಸರು ಹಾಳಾಗುತ್ತದೆ ಎಂದು ಯೋಚನೆ ಮಾಡಿ ಯಾತ್ರಿಕರು ಹಾಗೂ ಕಾವಲುಗಾರರನ್ನು ಕರೆಯುತ್ತಾರೆ.
ನಮ್ಮ ಊರಿನಲ್ಲಿ ಒಂದು ನಿಯಮವಿದೆ ನಮ್ಮ ಮಂದಿರದಲ್ಲಿ ಒಂದು ಪಲ್ಲಕ್ಕಿ ಇದೆ, ಆ ಪಲ್ಲಕ್ಕಿಯನ್ನು ಹೊತ್ತುಕೊಂಡು ಒಂದು ಸುತ್ತು ಸುತ್ತಿ ಮತ್ತೆ ಮಂದಿರದಲ್ಲಿ ಇಟ್ಟಾಗ ಅದರಿಂದ ಶಬ್ದ ಬಂದಾಗ ಹಣ ಸಿಗುತ್ತದೆ ಎಂದು ಹೇಳಿದರು ಹಾಗಾಗಿ ಯಾತ್ರಿಕರಿಗೆ ಪಲ್ಲಕ್ಕಿಯನ್ನು ಹೊತ್ತುಕೊಂಡು ಹೋಗಿ ಎಂದು ಹೇಳಿದರು.
ಯಾತ್ರಿಕರು ಪಲ್ಲಕ್ಕಿಯನ್ನು ಹೊತ್ತುಕೊಂಡರು ಪಲ್ಲಕ್ಕಿ ತುಂಬಾ ಭಾರವಾಗಿದೆ ಒಂದು ಸುತ್ತನ್ನು ಸುತ್ತಿದರು ಇಡಬೇಕಾದ ಸಮಯದಲ್ಲಿ ಯಾತ್ರಿಕರು ನಮ್ಮ ಹಣವು ಹೋಯಿತು ಈ ಹಳ್ಳಿಯ ಪದ್ಧತಿ ಏನು ತಿಳಿಯದು ಪಲ್ಲಕ್ಕಿ ಬೇರೆ ತುಂಬಾ ಭಾರವಾಗಿದೆ ಇದನ್ನು ಹೊತ್ತುಕೊಂಡು ಹೋಗಬೇಕಲ್ಲ ಇದು ನಮ್ಮ ಹಣೆಬರ ಎಂದು ಇಬ್ಬರು ಪ್ರವಾಸಿಗರು ಮಾತನಾಡಿಕೊಂಡರು.
ಪಲ್ಲಕ್ಕಿಂದ ಶಬ್ದ ಬಂತು ಆಗ ಯಾತ್ರಿಕರು ಸಂತೋಷ ಪಟ್ಟರು ನಂತರ ಅದೇ ಪಲ್ಲಕ್ಕಿಯನ್ನು ಕಾವಲುಗಾರರು ಹೊತ್ತುಕೊಂಡು ಹೋಗಿ ಬರಲು ಹೇಳಿದರು ಕಾವಲುಗಾರರು ಕೂಡ ಪಲ್ಲಕ್ಕಿಯನ್ನು ಹೊತ್ತು ಕೊಂಡರು.
ಇಬ್ಬರು ಕಾವಲುಗಾರರು ಮಾತನಾಡಿಕೊಂಡರು ನಾವು ಕಳ್ಳತನ ಮಾಡಬಾರದಾಗಿತ್ತು ಕಳ್ಳತನ ಮಾಡಿದ್ದಕ್ಕೆ ಎಷ್ಟು ಬಾರ ಇರುವ ಪಲ್ಲಕ್ಕಿಯನ್ನು ಹೋರಬೇಕಾಗಿದೆ ಎಂದು ಹೇಳಿ ನಂತರ ಪಲ್ಲಕ್ಕಿಯನ್ನು ಇಳಿಸಿದರು ಆಗ ಯಾವುದೇ ರೀತಿಯ ಶಬ್ದ ಬರಲಿಲ್ಲ ನಂತರ ಹಿರಿಯರು ಕಾವಲುಗಾರರನ್ನು ಕರೆದರು ನೀವು ಕಳ್ಳತನ ಮಾಡಿರುವ ಹಣವನ್ನು ಯಾತ್ರಿಕರಿಗೆ ಕೊಟ್ಟು ಕಳುಹಿಸಿ ಎಂದು ಹೇಳಿದರು.
ಕಾವಲುಗಾರರು ನಿಮಗೆ ಹೇಗೆ ತಿಳಿಯಿತು ಎಂದು ಕೇಳಿದರು ಆಗ ಪಲ್ಲಕ್ಕಿಯಲ್ಲಿ ನಾನು ಕುಳಿತಿದ್ದೆ ನೀವು ಹೇಳಿದ ಮಾತನ್ನು ನಾನು ಕೇಳಿಸಿಕೊಂಡಿದ್ದೇನೆ ಎಂದು ಹೇಳಿದರು ನಂತರ ಯಾತ್ರಿಕರ ಹಣವನ್ನು ಕೊಟ್ಟು ಕಳುಹಿಸಿದರು.
ಆಕರ್ಷಿತರಾಗಬೇಡಿ
ಒಂದು ಊರಿನಲ್ಲಿ ಬುದ್ಧಿವಂತ ಯುವಕ ವ್ಯಾಪಾರಿಗಳು ವಾಸವಾಗಿರುತ್ತಾರೆ ಯುವಕರು ಎಲ್ಲರೂ ಸೇರಿ ಯೋಚನೆ ಮಾಡುತ್ತಾರೆ ಇನ್ನಷ್ಟು ನಾವು ಹೆಚ್ಚಾಗಿ ಸಂಪಾದನೆ ಮಾಡಬೇಕಾದರೆ ಬೇರೆ ಊರಿಗೆ ಹೋದರೆ ಸಂಪಾದನೆ ಯಾಗುತ್ತದೆ ಅದಕ್ಕಾಗಿ ಎಲ್ಲರೂ ಸಿದ್ಧತೆ ಮಾಡಿಕೊಂಡು ಹೊರಡುತ್ತಿದ್ದಾಗ ಹಿರಿಯ ಅನುಭವಿ ವ್ಯಾಪಾರಿಯೊಬ್ಬರು ಹೇಳುತ್ತಾರೆ.
ಮುಂದಿನ ಊರಿನಲ್ಲಿ ನಿಮ್ಮ ವ್ಯಾಪಾರ ಚೆನ್ನಾಗಿ ನಡೆಯುತ್ತದೆ ಆದರೆ ಆ ದಾರಿಯಲ್ಲಿ ಅರಣ್ಯ ಇದೆ ಅದನ್ನು ನೀನು ದಾಟಿಹೋಗಬೇಕು ಮತ್ತೆ ಆ ಅರಣ್ಯದಲ್ಲಿ ಹೋಗುತ್ತಿದ್ದಂತೆ ನಿಮಗೆ ಕೆಲವು ಆಕರ್ಷಣೆಗಳು ಸಿಗುತ್ತವೆ ಅದಕ್ಕೆ ನೀವು ಯಾವುದೇ ಕಾರಣಕ್ಕೂ ಆಕರ್ಷಿತರಾಗಬೇಡಿ ಆಗ ಎಲ್ಲಾ ಯುವಕ ವ್ಯಾಪಾರಿಗಳು ನಾವು ಆಕರ್ಷಣೆಗೆ ಒಳಗಾಗದಿದ್ದರೆ ಸಾಕು ಆಗುವುದು ಬೇಡ ಎಂದು ತಿಳಿದು ಹೊರಡುತ್ತಾರೆ.
ಸಂಜೆಯಾದ ನಂತರ ಹೋಗುತ್ತಿದ್ದಾಗ ಒಂದು ಸುಂದರ ಮನೆ ಕಾಣಿಸಿತು ಆ ಮನೆಯ ಮುಂದೆ ಎಲ್ಲಾ ಒಳ್ಳೆಯ ಹೂವುಗಳಿಂದ ಆ ಮನೆಯನ್ನು ಅಲಂಕರಿಸಿದ್ದಾರೆ ನೋಡುವುದಕ್ಕೆ 2 ಕಣ್ಣು ಸಾಲದು ಆ ರೀತಿ ಇದೆ ಆಗ ಅಲ್ಲಿ ಬನ್ನಿ ನೀವು ಇಲ್ಲಿ ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಹೋಗಬಹುದು ಎಂದು ಹೇಳುತ್ತಾರೆ.
ಈ ಕಣ್ಣಿನ ಸೌಂದರ್ಯವನ್ನು ನೋಡಿದ ಯುವಕ ನಾನು ಇಲ್ಲಿಯೇ ವಿಶ್ರಾಂತಿ ಪಡೆದು ಬರುತ್ತೇನೆ ಎಂದು ಒಬ್ಬನು ಅಲ್ಲಿಯೇ ಉಳಿದು ಬಿಡುತ್ತಾನೆ ಉಳಿದ 5 ಯುವಕರು ಮುಂದೆ ಹೋಗುತ್ತಿದ್ದಾಗ ಅಲ್ಲಿ ಒಳ್ಳೆಯ ವಾದ್ಯಗೋಷ್ಟಿ ನಡೆಯುತ್ತದೆ ಸುಂದರ ಯುವತಿಯರು ಸಂಗೀತವನ್ನು ಹಾಡುತ್ತಿದ್ದಾರೆ.
ಈ ರೀತಿ ಸಂಗೀತ ಮೊದಲ ಬಾರಿಗೆ ಕೇಳಿದ್ದರಿಂದ ಒಬ್ಬನು ಅಲ್ಲಿಯೇ ಉಳಿದ ನಂತರ ಇನ್ನೂ ಸ್ವಲ್ಪ ಮುಂದೆ ಹಸಿವು ಶುರುವಾಯಿತು ನಂತರ ಮುಂದೆ ನೋಡುತ್ತಿದ್ದಂತೆಯೇ ಒಂದು ಹೊಟೇಲ್ ಇತ್ತು ಆ ಹೋಟೆಲ್ ನಲ್ಲಿ ತುಂಬಾ ರುಚಿ ರುಚಿಯಾದ ಅಡಿಗೆಗಳು ಹಾಗೂ ಘಮಘಮ ವಾಸನೆ ಬರುತ್ತಿದೆ.
ಈ ಆಕರ್ಷಣೆಗೆ ಒಬ್ಬ ಅಲ್ಲಿಯೇ ಉಳಿದನು ಹಾಗೆಯೇ ಇನ್ನು ಮುಂದೆ ಹೋಗುತ್ತಿದ್ದಾಗ ಸುಗಂಧವನ್ನು ಮಾರುತ್ತಿದ್ದರು ಮೂಸಿದರೆ ಎಂತಹ ವಾಸನೆ ಎಂದರೆ ಮತ್ತು ಭರಿಸುತ್ತಿತ್ತು ಇನ್ನೊಬ್ಬ ಸುಗಂಧಕ್ಕೆ ಪರಿಮಳಕ್ಕೆ ಸೋತುಹೋದ ಹೀಗೆ ಇಬ್ಬರೂ ಸ್ವಲ್ಪ ಮುಂದೆ ಹೋದರು.
ಆಗ ಅದೇ ರೀತಿ ಇನ್ನೊಂದು ಮನೆ ಕಾಣಿಸಿತು ಅಲ್ಲಿ ನೋಡಿದರೆ ಒಂದು ಸುಂದರವಾದ ಯುವತಿ ನಿಂತಿದ್ದಾಳೆ ಈ ರೀತಿಯ ಸುಂದರಿಯನ್ನು ಮೊಟ್ಟ ಮೊದಲ ಬಾರಿಗೆ ಕಂಡನು ಅವಳ ರೂಪಕ್ಕೆ ಮಾರುಹೋದನು. ಸ್ವಲ್ಪ ವಿಶ್ರಾಂತಿ ಪಡೆದು ಹೋಗಿ ಎಂದಾಗ ಒಬ್ಬ ಉಳಿದ ಇಷ್ಟೆಲ್ಲ ಮುಗಿದ ಮೇಲೆ ಒಬ್ಬ ಮಾತ್ರ ಹೋಗಿ ತಲುಪಿದನು ಇವನು ಮಾತ್ರ ಪ್ರಸಿದ್ಧ ವ್ಯಾಪಾರಿಯಾದನು.
ಪಂಚೇಂದ್ರಿಯಗಳು ಕಣ್ಣು ಕಿವಿ ನಾಲಗೆ ಮೂಗು ಮತ್ತು ಚರ್ಮ ಇವುಗಳ ಆಕರ್ಷಣೆ ನಮಗೆ ಸೆಳೆದುಬಿಡುತ್ತದೆ ಹಾಗಾಗಿ ನಾವು ತುಂಬಾ ಎಚ್ಚರಿಕೆಯಿಂದ ಇರಬೇಕು ಇಲ್ಲದಿದ್ದರೆ ನಮ್ಮ ಗುರಿ ತಲುಪಲು ಸಾಧ್ಯವಾಗುವುದಿಲ್ಲ ಪಂಚೇಂದ್ರಿಯಗಳು ಮೀರಿ ಸಾಧನೆ ಮಾಡೋಣ. ನಾನು ಪಂಚೇಂದ್ರಿಯಗಳನ್ನು ಮೀರಿ ಯಾವ ಸಾಧನೆ ಮಾಡಿದ್ದೇನೆ?
ಒಳ್ಳೆಯ ತಂದೆಯಾಗಿ
ಒಂದು ಸಾರಿ ತಂದೆ ಯಾದವರು ಬೆಳಿಗ್ಗೆ ಮಗ ಮಾಡುವ ಕೆಲಸಗಳಿಂದ ಬೇಸರವಾಗಿ ಬೈಯುತ್ತಾರೆ ಬೈಯುವುದಕ್ಕೆ ಕಾರಣ ಸರಿಯಾಗಿ ಬಟ್ಟೆ ಹಾಕಿಕೊಂಡಿರುವುದಿಲ್ಲ ನಂತರ ತಿಂಡಿ ತಿನ್ನಬೇಕಾದರೆ ತನ್ನ ಬಟ್ಟೆಗೆ ಹೆಚ್ಚು ಬೆಣ್ಣೆ ಹಾಗೂ ಸಕ್ಕರೆಯನ್ನು ಹಾಕಿಕೊಂಡಿರುತ್ತಾನೆ.
ಕೈ ತೊಳೆದುಕೋ ಎಂದಾಗ ಕೈ ತೊಳೆದು ತನ್ನ ಕೈಯನ್ನು ಪರದೆಯಿಂದ ಒರೆಸಿಕೊಳ್ಳುತ್ತಾನೆ ನಂತರ ಮನೆಗೆ ಬಂದ ಮೇಲೆ ತನ್ನ ಸ್ನೇಹಿತರ ಜೊತೆ ಆಟ ಮಾಡುತ್ತಿರುತ್ತಾನೆ ಬಟ್ಟೆ ಬದಲಿಸಿ ಇರುವುದಿಲ್ಲ ಒಳ್ಳೆಯ ಬೆಲೆ ಬಾಳುವ ಬಟ್ಟೆಯೊಂದಿಗೆ ಆಟ ಆಡುತ್ತಿರುತ್ತಾನೆ. ನಂತರ ಹಲವಾರು ಸರಿ ಮಾಡಿದ ಕೆಲಸಗಳಿಗೆ ಬಯ್ಯುತ್ತಾರೆ ಮಗನ ವರ್ತನೆಯಿಂದ ಬೇಸರಗೊಂಡಿರುತ್ತಾರೆ.
ತಂದೆಯವರು ಲೈಬ್ರರಿಗೆ ಹೋಗಿ ಪುಸ್ತಕಗಳನ್ನು ಓದಿಕೊಂಡು ರಾತ್ರಿ ಬರುತ್ತಾರೆ ಆಗ ಮಗು ಏನು ಮನಸ್ಸಿನಲ್ಲಿ ಇಟ್ಟುಕೊಳ್ಳದೆ ತಂದೆಗೆ ಹೆಗಲಿನಲ್ಲಿ ಕೈ ಹಾಕಿಕೊಂಡು ಮುತ್ತು ಕೊಟ್ಟು ಹೋಗುತ್ತದೆ. ಆಗ ತಂದೆಯವರಿಗೆ ತುಂಬಾ ಬೇಸರವಾಗುತ್ತದೆ.
ಇಂದು ನಾನು ಮಗನಿಗೆ ಬೆಳಿಗ್ಗೆ ಸಂಜೆ ಬೈದರು ಕೂಡ ನನ್ನ ಮಗ ಮನಸ್ಸಿನಲ್ಲಿ ಇಟ್ಟುಕೊಂಡಿಲ್ಲ ನನ್ನನ್ನು ಶುಭರಾತ್ರಿ ಎಂದು ಹೇಳಿದ್ದಾನೆ ಎಂದು ಹೇಳಿ ಸಂತೋಷ ಪಡುತ್ತಾರೆ ಹಾಗೆ ನಾನು ಮಾಡಿದ್ದು ತಪ್ಪು ಎನ್ನುವ ಅಪರಾಧಿ ಭಾವನೆ ಬರುತ್ತದೆ ನಂತರ ಮಗು ಮಲಗಿರುತ್ತದೆ.
ಮಗನನ್ನು ನೋಡಿ ಇಂದು ನನ್ನಿಂದ ತಪ್ಪಾಗಿದೆ ಇನ್ನು ಮುಂದೆ ನಾನು ಈ ರೀತಿ ತೊಂದರೆ ಕೊಡುವುದಿಲ್ಲ ಎಂದು ಹೇಳಿ ಮಾರನೆಯ ದಿನದಿಂದ ನಾನು ಒಳ್ಳೆಯ ತಂದೆಯಾಗಿ ನಿನ್ನನ್ನು ನೋಡುತ್ತೇನೆ ಎಂದು ಹೇಳಿಕೊಳ್ಳುತ್ತಾರೆ. ಆಗಿದ ತಪ್ಪನ್ನೇ ಯೋಚಿಸಿ ಸಮಯ ವ್ಯರ್ಥ ಮಾಡುವ ಬದಲು ನಂತರ ಸಾಧ್ಯವಾದಷ್ಟು ಆಗದಂತೆ ಎಚ್ಚರಿಕೆ ವಹಿಸೋಣ.
ದಾನದಲ್ಲಿ ಇರುವ ಸುಖ
ಒಂದು ಹಳ್ಳಿಯಲ್ಲಿ ಕೆಲವು ದಯಾಳು ಯುವಕರು ಸೇರಿ ಹಳ್ಳಿಯ ಬುದ್ಧಿವಂತ ಯುವಕರು ಸೇರಿ ಎಲ್ಲಾ ಜನರಿಗೆ ಅನ್ನದಾನ ಮಾಡಬೇಕು ಎಂದು ಯೋಚನೆ ಮಾಡುತ್ತಾರೆ ಎಲ್ಲರೂ ಆಗಲಿ ಎಂದು ಒಪ್ಪಿಕೊಳ್ಳುತ್ತಾರೆ. ಆದರೆ ಅನ್ನದಾನಕ್ಕೆ ಮುಖ್ಯವಾಗಿ ದೇಣಿಗೆ ಬೇಕು ಹೇಗೆ ಅಷ್ಟೊಂದು ದೇಣಿಗೆ ಕೂಡಿಸುವುದು ಎಂದು ಯೋಚಿಸುತ್ತಾರೆ.
ಅಷ್ಟರಲ್ಲಿ ಒಬ್ಬ ಬುದ್ಧಿವಂತ ಯುವಕ ಯೋಚನೆ ಮಾಡುತ್ತಾನೆ ನಮ್ಮ ಊರಿನಲ್ಲಿ ಶ್ರೀಮಂತರಿದ್ದಾರೆ ಅವರು ಮಹಾ ಜಿಪುಣರನ್ನು ಮಾತನಾಡೋಣ ಬನ್ನಿ ಎನ್ನುತ್ತಾನೆ ಶ್ರೀಮಂತ ಜಿಪುಣಗೆ ಹೋಗಿ ಎಲ್ಲಾ ಯುವಕರು ಹೇಳುತ್ತಾರೆ.
ನಾವು ಊರಿಗೆ ಅನ್ನದಾನ ಮಾಡಬೇಕು ಎಂದು ತೀರ್ಮಾನ ಮಾಡಿದ್ದೇವೆ ಅದಕ್ಕಾಗಿ ಹಣ ಬೇಕಾಗಿದೆ ನೀವು ನಮಗೆ ಸಾಲದ ರೂಪದಲ್ಲಿ 500 ರೂಪಾಯಿ ನೀಡಿ ನಂತರ ನಿಮ್ಮ ಹೆಸರು ಬೀದಿ ಬೀದಿಯಲ್ಲಿ ಡಂಗೂರ ಕೊಡೆಸಿ ಹೇಳುತ್ತೇವೆ ನಂತರ ಇತರರು ದೇಣಿಗೆಯನ್ನು ನೀಡುತ್ತಾರೆ ಎಲ್ಲಾ ಹಣ ಒಟ್ಟಾದ ನಂತರ ನಿಮ್ಮ ಹಣವನ್ನು ನಾವು ಮರಳಿ ಕೊಡುತ್ತೇವೆ ಎಂದು ಹೇಳಿದರು.
ನನ್ನ ಹೆಸರು ಬರುತ್ತದೆ ಎಂದು ಯೋಚಿಸಿ ಶ್ರೀಮಂತ ಜಿಪುಣ ಹಣವನ್ನು ಕೊಟ್ಟನು ಮಾರನೆಯ ದಿನವೇ ಊರಿನಲ್ಲಿ ಡಂಗೂರ ಸಾರಿದರು ಶ್ರೀಮಂತರು ದೊಡ್ಡ ದಾನಿಗಳು ಮಹಾದಾನಿಗಳು ಕರುಣಾಮಯಿ ಇವರು ನಮಗೆ 500 ಕೊಟ್ಟಿದ್ದಾರೆ ತಾವುಗಳು ಕೂಡ ದೇಣಿಗೆ ನೀಡಬೇಕಾಗಿ ವಿನಂತಿ ಎಂದು ಕೇಳಿಕೊಂಡರು.
ಹಳ್ಳಿಯವರು ಮಹಾಜೀಪುಣನೆ ದೇಣಿಗೆನೀಡಿದ್ದಾನೆ ಎಂದು ಯೋಚಿಸಿ, ಹಳ್ಳಿಯವರು ಸಾಕಷ್ಟು ಹಣವನ್ನು ನೀಡಿದರು ಯುವಕರು ಮಾತಿನಂತೆ 500 ರೂಪಾಯಿ ಮತ್ತೆ ಕೊಡಲು ಹೋದರು ಆಗ ಶ್ರೀಮಂತ ಜಿಪುಣ ಹೇಳಿದನು ದಾನದಲ್ಲಿ ಇರುವ ಸುಖ ನನಗೆ ಗೊತ್ತೇ ಇರಲಿಲ್ಲ ಹಣ ಕೊಟ್ಟಿದ ನಂತರ ನನಗೆ ತುಂಬಾ ತೃಪ್ತಿ ಆನಂದವಾಗಿದೆ.
ಬಹಳಷ್ಟು ಜನರು ನನಗೆ ದಾನಿ ಮಹಾದಾನಿ ಎಂದು ಹೊಗಳಿದ್ದಾರೆ ಇದರಿಂದ ನನಗೆ ತುಂಬಾ ಗೌರವ ಸಿಕ್ಕಿದೆ ಆದ್ದರಿಂದ ಈ ಹಣ ನನಗೆ ಬೇಡ ಎಂದು ಕಳುಹಿಸುತ್ತಾನೆ.
ಶ್ರೀಮಂತ ಜಿಪುಣ ಕಾರ್ಯಕ್ರಮಕ್ಕೆ ತಾನು ಭಾಗಿಯಾದನು ನಂತರ ಮಹಾಜೀಪುಣನ ಮನಸೇ ಬದಲಾಯಿತು ಜಿಪುಣನಾಗಿದ್ದ ಶ್ರೀಮಂತ ಈಗ ಮಹಾದಾನಿಯಾಗಿ ಹೆಸರು ಪಡೆದನು ನಂತರ ಅದೇ ರೀತಿ ದಾನ ಮಾಡಲು ಆರಂಭಿಸಿದನು.