ಆಶ್ರಮದಲ್ಲಿ ಒಬ್ಬರು ಗುರುಗಳು ಇದ್ದರು ಆ ಆಶ್ರಮಕ್ಕೆ ಹಲವಾರು ಭಕ್ತರು ಬರುತ್ತಿದ್ದರು ಒಂದು ಸಾರಿ ಒಬ್ಬ ಭಕ್ತ ಬಂದು ಹೋಗಿದ್ದನು ನಂತರ ಆಶ್ರಮಕ್ಕೆ ಆಗಾಗ ಕಾಗದಗಳು ಬರುತ್ತಿದ್ದವು ನಾನು ಈಗ ವಿದ್ಯಾರ್ಥಿಯಾಗಿದ್ದೇನೆ ನನಗೆ ಈ ಸಾರಿ ಪಾಸ್ ಆಗಬೇಕು ಚೆನ್ನಾಗಿ ಬರಿದಿದ್ದೇನೆ.
ದಯವಿಟ್ಟು ನನಗೆ ಪಾಸ್ ಆಗುವುದಕ್ಕೆ ಆಶೀರ್ವದಿಸಿ ಮತ್ತೆ ಕೆಲವು ದಿನಗಳ ನಂತರ ನನಗೆ ಒಂದು ಒಂದು ಒಳ್ಳೆಯ ಕೆಲಸ ಸಿಕ್ಕಿದರೆ ಸಾಕು ಅದಕ್ಕೆ ಆಶೀರ್ವಾದ ಮಾಡಿ ಮತ್ತೆ ಕೆಲವು ದಿನಗಳ ನಂತರ ಕಾಗದ ಬಂತು ಅದರಲ್ಲಿ ನನಗೆ ಕೆಲಸವೂ ಸಿಕ್ಕಿದೆ ಆದರೆ ಸಂಬಳ ಕಡಿಮೆಯಿದೆ ಸಂಬಳಕ್ಕೆ ಆಶೀರ್ವಾದ ಮಾಡಿ ನಂತರ ಸಂಬಳವು ಹೆಚ್ಚಾಯಿತು.
ಮನೆಯಲ್ಲಿ ತಾಯಿಯ ಆರೋಗ್ಯ ಚೆನ್ನಾಗಿಲ್ಲ ಅದಕ್ಕೆ ಆಶೀರ್ವದಿಸಿ ಮತ್ತೆ ಕೆಲವು ದಿನಗಳ ನಂತರ ಮನೆಯಲ್ಲಿ ತಾಯಿಯನ್ನು ಯಾರು ನೋಡಿಕೊಳ್ಳಲು ಇಲ್ಲ ನಾನು ಮದುವೆಯಾಗಬೇಕು ಎಂದಿದ್ದೇನೆ ಆಶೀರ್ವದಿಸಿ ನಂತರ ಮದುವೆಯೂ ಆಯಿತು ಮನೆಯಲ್ಲಿ ಸುಖವಾಗಿದ್ದೇನೆ.
ಒಂದು ಮಗು ಬೇಕು ಪ್ರಾರ್ಥನೆ ಮಾಡಿ ನಂತರ ನನ್ನ ಹೆಂಡತಿಗೆ ಒಂದು ಮಗು ಆಗಿದೆ ಮತ್ತೆ ನಮ್ಮ ತಾಯಿಯೂ ತೀರಿಹೋಗಿದ್ದಾರೆ ನಂತರ ನನ್ನ ಹೆಂಡತಿ ಕಾಯಿಲೆಯಿಂದ ತೀರಿ ಹೋದಳು ಮತ್ತೆ ಕೆಲವು ದಿನಗಳ ನಂತರ ನನ್ನ ಮಗುವೂ ಕೂಡ ತೀರಿಹೋಗಿದೆ.
ಈಗ ನನಗೆ ಮಾನಸಿಕ ಸ್ಥಿತಿ ಸರಿಯಾಗಿ ಇಲ್ಲ ಆದುದರಿಂದ ಕೆಲಸವೂ ಸರಿಯಾಗಿ ಮಾಡಲು ಆಗುತ್ತಿಲ್ಲ ಈಗ ನಾನು ಅನಾಥನಾಗಿದ್ದೇನೆ ಎಂದು ಬರೆದಿತ್ತು ಈಗ ಇವನು ಒಬ್ಬನೇ ಉಳಿದುಕೊಂಡಿದ್ದಾನೆ ನಮ್ಮ ಬದುಕಿನಲ್ಲಿಯೂ ಸಹಜವಾಗಿ ಹೀಗೆಯೇ ಆಗುತ್ತದೆ.
ಏನೇನೋ ಇಚ್ಛೆ ಪಡುತ್ತೇವೆ ಅದರಂತೆ ಅದು ಸಿಗುತ್ತದೆ ಮತ್ತೆ ಸ್ವಲ್ಪ ಸಮಯವಿದ್ದು ಮತ್ತೆ ಹೋಗುತ್ತದೆ ಅದೇ ರೀತಿ ಬದುಕಿನಲ್ಲಿ ಕೆಲವುಗಳು ಬರುತ್ತವೆ ಹೋಗುತ್ತವೆ ಇರುವಷ್ಟು ದಿನ ಖುಷಿಯಾಗಿ ನಗುತಾ ನಗುತಾ ಬದುಕೋಣ.
ಭವಿಷ್ಯದಲ್ಲಿ ನಂಬಿಕೆ ಇರಬೇಕು
ನಮ್ಮ ಸ್ನೇಹಿತರು ಒಬ್ಬರು ರಿಯಲ್ ಎಸ್ಟೇಟ್ ನಲ್ಲಿ ನಿವೇಶನಗಳನ್ನು ಮಾರುತ್ತಾರೆ. ಇವರು ಸಕಾರಾತ್ಮಕವಾಗಿಯೇ ವಿಶೇಷವಾದ ವಿಭಿನ್ನವಾದ ರೀತಿಯಲ್ಲಿ ಹೇಳುತ್ತಾರೆ ಇವರು ಹೇಳುವ ರೀತಿಯಿಂದಲೇ ಹಲವಾರು ಜನರು ಸೇಟುಗಳನ್ನು ಖರೀದಿ ಮಾಡುತ್ತಾರೆ.
ಇವರು ಹೇಳುವ ರೀತಿ ನಗರದಿಂದ 15 ಕಿಲೋಮೀಟರ್ ದೂರದಲ್ಲಿ ಇದೆ ಇಂದು ಅಷ್ಟು ಬೆಳವಣಿಗೆ ಆಗಿಲ್ಲ ನಿಜ ಭವಿಷ್ಯದಲ್ಲಿ ನಂಬಿಕೆ ಇರಬೇಕು ನಿಮಗೆ ನಂಬಿಕೆ ಇದ್ದರೆ ಯೋಚನೆ ಮಾಡಿ ನೋಡಿ ಮುಂದಿನ ದಿನಗಳಲ್ಲಿ ಇದು ಉನ್ನತ ಮಟ್ಟದಲ್ಲಿ ಬೆಳೆಯುತ್ತದೆ.
ಏಕೆಂದರೆ ಇದರ ಸುತ್ತಮುತ್ತ ಫ್ಯಾಕ್ಟರಿಗಳು ಇದೆ ಊರಿನಿಂದ ದೂರ ಇರುವುದರಿಂದ ಇಲ್ಲಿ ಒಂದು ಅಕಾಡೆಮಿ ಮಾಡಬಹುದು, ಕ್ಲಬ್ ಮಾಡಬಹುದು, ರೆಸಾರ್ಟ್ ಮಾಡಬಹುದು ಎಂದು ಹೊಸ ಕನಸನ್ನು ಸೃಷ್ಟಿಸಿ ಹೇಳುತ್ತಾರೆ.
ಭವಿಷ್ಯದಲ್ಲಿ ಅಭಿವೃದ್ಧಿಯಾಗುತ್ತದೆ ಎಂದು ನಂಬಿದವರು ಈ ಜಾಗವನ್ನು ಹೆಚ್ಚು ಬೆಲೆ ಕೊಟ್ಟು ಖರೀದಿ ಮಾಡುತ್ತಾರೆ ಭವಿಷ್ಯದಲ್ಲಿ ನಂಬಿಕೆ ಇರುವವರು ಮಾತ್ರ ಬೆಳೆಯುತ್ತಾರೆ ನಾವು ಭವಿಷ್ಯದಲ್ಲಿ ನಂಬಿಕೆ ಇಟ್ಟು ಮುಂದೆ ಸಾಗೋಣ.
ಅಲ್ಲಿಯೇ ಕೆಳಗೆ ಇಳಿಸಿ ಬಿಟ್ಟಿದ್ದೇನೆ
ಒಂದು ಸಾರಿ ಇಬ್ಬರು ಸಂತರು ಬೇರೆ ಊರಿಗೆ ಪ್ರವಾಸಕ್ಕೆಂದು ಹೋಗುತ್ತಿದ್ದರು ಹಳ್ಳಿಯನ್ನು ದಾಟಬೇಕಾದರೆ ದಾರಿಯಲ್ಲಿ ನದಿ ನೀರು ಜುಳು ಜುಳು ಶಬ್ದದಿಂದ ಹರಿದು ಹೋಗುತ್ತಿತ್ತು ನೀರಿನ ಮೇಲೆಯೇ ನಡೆದುಕೊಂಡು ಹೋಗಬೇಕು ಆಗ ಅಲ್ಲಿ ನೋಡಿದರೆ ನೀರಿನಲ್ಲಿ ಬಟ್ಟೆ ನೆನೆಯುತ್ತದೆ ಎಂದು ಒಂದು ಸುಂದರವಾದ ಯುವತಿ ನಿಂತಿದ್ದಳು.
ಹೇಗೆ ನದಿ ದಾಟುವುದು ಎಂದು ಯೋಚನೆ ಮಾಡುತ್ತಿದ್ದಳು ಇದನ್ನು ಅರಿತ ಒಬ್ಬ ಸಂತ ಆ ಯುವತಿಯನ್ನು ಎತ್ತಿಕೊಂಡು ಆ ದಡಕ್ಕೆ ಬಿಟ್ಟರು ನಂತರ ಮುನ್ನಡೆದರು ಮತ್ತೊಬ್ಬ ಸಂತನಿಗೆ ಇವರು ಮಾಡಿದ್ದು ಒಳ್ಳೆಯದಲ್ಲ ಎಂದು ಮನಸ್ಸಿನಲ್ಲಿಯೇ ಕಸಿವಿಸಿಯಾಗುತ್ತಿತ್ತು.
ಏನು ಮಾತನಾಡಿದರೂ ಮಾತನಾಡುತ್ತಿಲ್ಲ ನಂತರ ಸಂತರು ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಕೊನೆಗೆ ಹೇಳಿದರು ನಾವು ಸಂತರು ಒಂದು ಯುವತಿಯನ್ನು ನೋಡಲುಬಾರದು ಮುಟ್ಟಲು ಬಾರದು ಅಂಥದ್ದರಲ್ಲಿ ನೀವು ಅವಳನ್ನು ಎತ್ತಿಕೊಂಡು ಹೋಗಿ ಆ ಕಡೆ ಬಿಟ್ಟರಲ್ಲ ನೀವು ಈ ರೀತಿ ಮಾಡಬಹುದೇ ಎಂದು ಕೇಳಿದ.
ಎತ್ತುಕೊಂಡು ಹೋದ ಸಂತರು ಹೇಳಿದರೂ ಆ ಸುಂದರ ಯುವತಿಯನ್ನು ನಾನು ಅಲ್ಲಿಯೇ ಕೆಳಗೆ ಇಳಿಸಿ ಬಿಟ್ಟಿದ್ದೇನೆ ಆದರೆ ನೀನು ಆ ಸುಂದರವಾದ ಯುವತಿಯನ್ನು ಮನಸ್ಸಿನಲ್ಲಿ ಎತ್ತಿಕೊಂಡೆ ತಿರುಗುತ್ತಿದೆಯಲ್ಲ ಎಂದರು ಹಾಗೆಯೇ ಕೆಲವು ಸಾರಿ ನಾವು ಕೂಡ ಕೆಲವು ಬೇಕಿಲ್ಲದ ವಿಷಯಗಳನ್ನು ಹೊತ್ತಿಕೊಂಡು ಓಡಾಡುತ್ತಿದ್ದೇವೆಯೇ?
ಪ್ರೇಮದ ಹಾದಿ
ಒಂದು ಆಶ್ರಮವಿತ್ತು ಎಲ್ಲರೂ ವಿದ್ಯೆಯನ್ನು ಕಲಿಯಲು ದೂರದ ಹಳ್ಳಿ ಊರುಗಳಿಂದ ಬರುತ್ತಿದ್ದರು ಧ್ಯಾನ, ಪ್ರವಚನ, ಉಪನ್ಯಾಸ, ನಡೆಯುತ್ತಿತ್ತು ಮತ್ತೆ ಅಲ್ಲೇ ಇರಲು ಸುಸಜ್ಜಿತವಾದ ವ್ಯವಸ್ಥೆಯು ಕೂಡ ಇತ್ತು ಕೆಲವು ಒಂದು ವಾರದ ಎರಡು ವಾರದ ಒಂದು ತಿಂಗಳು ತರಬೇತಿಗಳು ಇರುತ್ತಿದ್ದವು ಎರಡು ವಾರದ ತರಬೇತಿಗಾಗಿ ಹಲವಾರು ಜನರು ಬಂದರು ಅದರಲ್ಲಿ ಒಬ್ಬ ಕಳ್ಳನು ಬಂದು ಸೇರಿಕೊಂಡನು.
ದಿನನಿತ್ಯ ಸಂಜೆ ಧ್ಯಾನವಾದ ನಂತರ ಕೆಲವು ವಸ್ತುಗಳು ಕಳ್ಳತನವಾಗಿದ್ದವು ಇದು ಗುರುವಿಗೆ ಹೇಳುವುದು ಒಳ್ಳೆಯದಲ್ಲ ಎಂದು ಹೇಳಲಿಲ್ಲ ಮತ್ತೆ ಮಾರನೇ ದಿನ ನೋಡಿದರೆ ಮತ್ತೆ ಕೆಲವು ವಸ್ತುಗಳು ಕಳ್ಳತನ ವಾಯಿತು ಕೆಲವರಿಗೆ ಧ್ಯಾನ ಮಾಡಲು ಆಸಕ್ತಿಯೇ ಬರಲಿಲ್ಲ ಬರೀ ಕಳುವಾದ ವಸ್ತುಗಳು ನೆನಪಿಗೆ ಬರುತ್ತಿತ್ತು.
ವಿದ್ಯಾಭ್ಯಾಸ ಕಲಿಯಲು ಬಹಳ ತೊಂದರೆಯಾಗುತ್ತಿದೆ ಏಕೆಂದರೆ ಆಶ್ರಮದಲ್ಲೇ ಈ ರೀತಿ ಕಳವು ಆಗುತ್ತಿದೆ ಎಂದು ಬಂದವರಿಗೆ ವೇದನೆಯಾಯಿತು ನಂತರ ಕೆಲವರು ಯಾರೋ ಕದಿಯುತ್ತಿದ್ದಾರೆ ಎಂದು ಕಂಡು ಹಿಡಿದರು ಅವನನ್ನು ನೋಡಿದರೆ ಸಾಮಾನ್ಯ ಮನುಷ್ಯನಂತೆ ಕಾಣುತ್ತಿದ್ದಾನೆ ಆದರೂ ಕಳ್ಳತನ ಮಾತ್ರ ಮಾಡುತ್ತಲೇ ಇದ್ದಾನೆ.
ಒಂದು ಸಾರಿ ನೇರವಾಗಿ ಕಳ್ಳತನ ಮಾಡುತ್ತಿದ್ದನ್ನು ಕಂಡು ಹಿಡಿದು ಅವನಿಗೆ ಹೇಳಿದರು ಇನ್ನು ಮುಂದೆ ನೀನು ಕಳ್ಳತನ ಮಾಡಬಾರದು ಎಂದು ಪ್ರೀತಿಯಿಂದ ಹೇಳಿದರು ನಂತರ ಮತ್ತೆ ಅದೇ ಸ್ಥಿತಿ ಮತ್ತೆ ಕಳ್ಳತನ ಮಾಡುತ್ತಿದ್ದ ಹೀಗೆ 3 ಸರಿ ಕಳ್ಳತನ ಮಾಡಿದ ನಂತರ ತರಬೇತಿಗೆ ಸೇರಿದ ಎಲ್ಲರೂ ಕೂಡ ಗುರುಗಳಿಗೆ ಹೇಳಿದರು.
ನಾವು ಈ ಆಶ್ರಮದಲ್ಲಿ ಇರಬೇಕು ಎಂದರೆ ಕಳ್ಳನಾದ ವ್ಯಕ್ತಿ ಆಚೆ ಹೋಗಬೇಕು ಇಲ್ಲದಿದ್ದರೆ ನಾವು ಹೋಗುತ್ತೇವೆ ಎಂದು ಬರೆದಿದ್ದರು ಇದನ್ನು ಸೂಕ್ಷ್ಮವಾಗಿ ಗಮನಿಸಿದ ಗುರುಗಳು ಎಲ್ಲರೂ ತರಗತಿಗೆ ಹಾಜರಾಗಿದ್ದಾಗ ಹೇಳಿದರು.
ನಿನ್ನೆ ನೀವು ಪತ್ರದ ಮೂಲಕ ಹೇಳಿದ್ದೀರಿ ಕಳ್ಳನನ್ನು ಕಳಿಸಿದರೆ ನಾವು ಇರುತ್ತೇವೆ ಎಂದು ಹೇಳುತ್ತಿದ್ದೀರಾ ನಾನು ಕಳ್ಳನಿಗೆ ನನ್ನ ಆಶ್ರಮದಲ್ಲಿ ಇರಲು ವ್ಯವಸ್ಥೆ ಮಾಡಿದ್ದೇನೆ ನೀವು ಯಾವಾಗ ಬೇಕಾದರು ಹೋಗಬಹುದಾಗಿದೆ ಎಂದು ಗುರುಗಳು ನೇರವಾಗಿ ಹೇಳಿದರು.
ಗುರುಗಳು ಹೇಳಿದ್ದನ್ನು ಕೇಳಿದ ಕಳ್ಳ ಗುರುವಿನ ಬಳಿ ಬಂದು ಕಾಲು ಮುಗಿದು ನಂತರ ಹೇಳಿದ ಇನ್ನು ಮುಂದೆ ನಾನು ಕಳ್ಳತನ ಮಾಡುವುದಿಲ್ಲ ನಂತರ ಕಳ್ಳ ಕಳ್ಳತನ ಮಾಡಲಿಲ್ಲ ಗುರುವಿನ ಮಾತಿಗೆ ಅಷ್ಟು ಬೆಲೆ ಕೊಟ್ಟು ಅದರಂತೆ ಅವನು ಬದುಕಿದನು.
ದೊಡ್ಡ ಗುರುವಾಗಿ ಹೆಸರು ಮಾಡಿದನು ಯಾರನ್ನಾದರೂ ಬದಲಾಯಿಸಬೇಕಾದರೆ ಎರಡು ದಾರಿಗಳಿವೆ ಒಂದು ದಂಡಿಸುವುದು, ಶಿಕ್ಷೆ ಕೊಡುವುದು ಇನ್ನೊಂದು ಪ್ರೇಮದ ಹಾದಿ ಮನಸ್ಸನ್ನು ಬದಲಿಸುವ ದಾರಿ ಪ್ರೇಮದ ಹಾದಿ ಶಾಶ್ವತವಾಗಿ ಬದಲಾಗುತ್ತಾರೆ.
ಬದುಕಿನಲ್ಲಿ ಮರೆಯಲಾರದ ಅನುಭವ
ಒಂದು ಒಳ್ಳೆಯ ಸಂಸಾರ ಗಂಡ ಹೆಂಡತಿ ಇಬ್ಬರು ಮಕ್ಕಳು ಮಕ್ಕಳು ಚೆನ್ನಾಗಿ ಓದಿ ದುಡಿಯುವ ವಯಸ್ಸಿಗೆ ಬಂದರು ಚೆನ್ನಾಗಿ ದುಡಿದರೂ ಮತ್ತೆ ಮಕ್ಕಳಿಗೆ ಒಂದು ಆಸೆಯಾಯಿತು ತಂದೆ ತಾಯಿಗೆ ನಾವು ಏನಾದರೂ ಹೊಸ ರೀತಿಯಲ್ಲಿ ಸಂತೋಷ ಪಡಿಸಬೇಕು ಎಂದು ಯೋಚಿಸಿ ಒಂದು ವಿಶೇಷವಾದ ಮ್ಯೂಸಿಯಂ ಇರುತ್ತದೆ.
ಅಲ್ಲಿ ತಂದೆ ತಾಯಿಗೆ ಕರೆದುಕೊಂಡಿ ಹೋಗಿ ಹೇಳುತ್ತಾರೆ ನಿಮಗೆ ಇವತ್ತು ಒಳ್ಳೆಯ ಅನುಭವ ಆಗುತ್ತದೆ ನಾವು ಐದು ನಿಮಿಷ ಇದ್ದರೆ ಸಾಕು ಉಲ್ಲಾಸಕರವಾದ ಅನುಭವ ಅನುಭವಿಸುತ್ತೀರಾ
.
ಹೇಳಿದರೆ ಅಷ್ಟು ಚೆನ್ನಾಗಿರಲ್ಲ ನೀವು ಇದು ಅನುಭವಿಸಿ ಬರಬೇಕು ಎಂದು ಹೇಳಿ ಮ್ಯೂಸಿಯಂ ಒಳಗೆ ಕಳುಹಿಸಿದರು ಹೆಸರು ಚಮತ್ಕಾರಿ ಕೊಠಡಿ ನೀಲಿ ಕನ್ನಡಕವನ್ನು ಹಾಕಿಕೊಂಡು ನೋಡಬೇಕು ಮಕ್ಕಳ ಒತ್ತಾಯಕ್ಕೆ ಹೋದರು ಚಮತ್ಕಾರಿ ಕೋಣೆಗೆ ಹೋದರು.
ಕನ್ನಡಕವನ್ನು ಪಡೆದು ಕಣ್ಣುಮುಚ್ಚಿ ನಿಂತರು ಇವರಿಗೆ ಯಾವುದೇ ರೀತಿಯ ಒಳ್ಳೆಯ ಅನುಭವ ಆಗಲಿಲ್ಲ ಆಚೆ ಬಂದಾಗ ಮಕ್ಕಳು ಪ್ರೀತಿಯಿಂದ ಕೇಳಿದರು ಅನುಭವ ಹೇಗಿತ್ತು ಎಂದಾಗ ಮುಖದಲ್ಲಿ ನಿರಾಶೆ ಕಂಡಿತು ಅವರ ಮುಖದಲ್ಲಿ ಆ ಅನುಭವ ಪಡೆದಿರಲಿಲ್ಲ ಎಂಬುದು ಮಕ್ಕಳಿಗೆ ಅರ್ಥವಾಯಿತು.
ಕೆಲವು ದಿನಗಳ ನಂತರ ಇನ್ನೊಂದು ಸಾರಿಗೆ ಹತ್ತು ನಿಮಿಷಕ್ಕೆ ನಾವು ಟಿಕೆಟನ್ನು ನಿಮಗೆ ಕೊಡುತ್ತೇವೆ ಎಂದು ಮತ್ತೆ ಅದೇ ರೀತಿ ಹತ್ತು ನಿಮಿಷಕ್ಕೆ ಕಳಿಸಿದರು ಕೋಣೆಯೊಳಗೆ ಹೋಗಿ ಮತ್ತೆ ಕಣ್ಣುಮುಚ್ಚಿ ನಿಂತರು ಇವರಿಗೆ ಸಮಯ ಕಳೆಯುವುದೇ ತುಂಬಾ ಬೇಸರವಾಯಿತು.
ಈ ಸಾರಿಯೂ ಕೂಡ ಮಕ್ಕಳು ನೋಡಿದಾಗ ಒಳ್ಳೆಯ ಅನುಭವ ಸಿಗಲಿಲ್ಲ ಎಂಬುದು ಅರಿತುಕೊಂಡರು ಕೆಲವು ದಿನಗಳ ನಂತರ ಮತ್ತೆ ಹದಿನೈದು ನಿಮಿಷಕ್ಕಾಗಿ ಟಿಕೆಟ್ಟನ್ನು ಪಡೆದು ಕರೆದುಕೊಂಡು ಹೋದರು ಮಕ್ಕಳೆಲ್ಲರೂ ಇದು ಕೊನೆಯ ಪ್ರಯತ್ನವೆಂದು ನಿರ್ಧಾರ ಮಾಡಿದ್ದರು.
ಸರಿ ಮತ್ತೆ ಮಕ್ಕಳಿಗೇಕೆ ಬೇಸರ ಪಡಿಸಬೇಕು ಎಂದು ತಂದೆ ತಾಯಿ ಇಬ್ಬರು ಮತ್ತೆ ಹೋಗಿ ಆ ಕೊಠಡಿಯಲ್ಲಿ ಕನ್ನಡಕ ಹಾಕಿ ನಿಂತರು ಹದಿನೈದು ನಿಮಿಷ ಕಳೆಯುವುದೂ ತುಂಬ ಕಷ್ಟ ಅದಕ್ಕಾಗಿ ಸುಮ್ಮನೆ ಏಕೆ ಕಣ್ಣು ಮುಚ್ಚಬೇಕು ಎಂದು ನಿಧಾನವಾಗಿ ಕಣ್ಣು ತೆರೆದರು.
ಎರಡು ಮೂರು ನಿಮಿಷ ಕಣ್ಣು ಮುಚ್ಚಿದ್ದರಿಂದ ಮುಂದೆ ಎಲ್ಲವೂ ಮಂಕುಮಂಕಾಗಿ ಕಾಣುತ್ತಿತ್ತು ಸ್ವಲ್ಪ ಮುಂದೆ ನೋಡಿದರೆ ಅಲ್ಲೊಂದು ಬಾಗಿಲಿ ನಂತೆ ಕಾಣುತ್ತಿದೆ ಅದಕ್ಕೆ ಎಳೆಯುವುದಕ್ಕೆ ಒಂದು ಹ್ಯಾಂಡಲ್ ನಂತೆ ಇದೆ ಸುಮ್ಮನೆ ಮುಂದೆ ಹೋಗಿ ಆ ಹ್ಯಾಂಡಲ್ಲನ್ನು ನಿಧಾನವಾಗಿ ಎಳೆದರು.
ಎಳೆಯುತ್ತಿದ್ದಂತೆಯೇ ಒಂದು ಕೊಠಡಿ ಕಾಣಿಸಿತು ಅದರ ಒಳಗೆ ಹೋದರು ಅಲ್ಲಿ ಕಣ್ಣುಬಿಟ್ಟು ನೋಡಿದರೆ ನೆತ್ತಿಯ ಮೇಲೆ ಆಕಾಶದಂತೆ ನಕ್ಷತ್ರಗಳು ಮಿನುಗುತ್ತಿವೆ ಒಂದೊಂದು ಗೋಡೆಯು ಬಣ್ಣ ಬಣ್ಣವಾಗಿ ರಂಗು ರಂಗಿನ ಚಿತ್ರಗಳು ಆಕರ್ಷಿಸುತ್ತವೆ ಕನ್ನಡಕ ಹಾಕಿಕೊಂಡು ನೋಡುತ್ತಿದ್ದರೆ ಅದರ ಅನುಭವವೇ ಬೇರೆ ತಂದೆ ತಾಯಿಯರಿಗೆ ನಿಬ್ಬೆರಗಾದರು.
ಈ ರೀತಿಯಾಗಿ ತಮ್ಮ ಬದುಕಿನಲ್ಲೆ ಮೂದಲನೇ ಸಲ ನೋಡಿದರು ಎಲ್ಲವೂ ನೋಡುವುದಕ್ಕೆ ಆನಂದಿಸುವುದಕ್ಕೆ ಒಂದು ಗಂಟೆಯ ಮೇಲೆ ಸಮಯ ತೆಗೆದುಕೊಂಡರು ಅಲ್ಲಿಂದ ಬರುವುದಕ್ಕೆ ಮನಸ್ಸೆ ಆಗುತ್ತಿಲ್ಲ ಆದರೂ ನಿಧಾನವಾಗಿ ಹೊರ ಬಂದರು ಆಚೆ ಕಾಯುತ್ತಿದ್ದ ಮಕ್ಕಳಿಗೆ ಹೇಳಿದರು.
ನಿಜವಾಗಲೂ ಇದು ತುಂಬಾ ಅದ್ಭುತವಾಗಿದೆ ನಂತರ ಮಕ್ಕಳಿಗೆ ಹೇಳಿದರು ನಾವು ಎರಡು ಸಾರಿ ಹೋಗಿದ್ದೀವಿ ಮೊದಲಿನ ಕೋಣೆಯಲ್ಲಿಯೇ ನಿಂತು ಸಮಯವನ್ನು ವ್ಯರ್ಥ ಮಾಡಿದೆವೂ ಈ ಸಾರಿ ಇನ್ನೊಂದು ಬಾಗಿಲನ್ನು ತೆಗೆದುಕೊಂಡು ಹೋದಾಗ ನಮಗೆ ಬದುಕಿನಲ್ಲಿ ಮರೆಯಲಾರದ ಈ ಅನುಭವ ಆಯಿತು ಎಂದು ವ್ಯಕ್ತಪಡಿಸಿದರು.
ಅನುಭವ ಇರುವುದು ಒಳಗಿನ ಕತ್ತಲೆಯಲ್ಲಿ ಎಂದು ನಾವು ಮರೆತು ಆಚೆಯ ಕೊಠಡಿಯಲ್ಲಿ ನಿಂತು ಅವಕಾಶ ಕಳೆದುಕೊಂಡೆವು ಎಂದು ಹೇಳಿದರು. ಹೀಗೆಯೇ ನಮ್ಮ ಬದುಕಿನಲ್ಲಿ ತಂದೆ ತಾಯಿಗಳು, ಗುರುಗಳು, ಏನಾದರೂ ಒಂದು ಸಾಧನೆ ಮಾಡಲಿ ಎಂದು ಟಿಕೇಟನ್ನು ಕೊಟ್ಟು ಕಳುಹಿಸುತ್ತಾರೆ.
ನಾವು ಸರಿಯಾಗಿ ತಲುಪಬೇಕಾದ ಜಾಗಕ್ಕೆ ತಲುಪದೆ ಬೇರೆ ಕಡೆ ಎಲ್ಲೋ ಸಮಯವನ್ನು ವ್ಯರ್ಥವಾಗಿ ಕಳೆದು ಖುಷಿ ಪಡದೆ ನಮ್ಮ ಸಮಯ ವ್ಯರ್ಥ ಗೊಳಿಸಿಕೊಂಡಿದ್ದೇವೆಯೇ? ಆಕಸ್ಮಿಕವಾಗಿ ಅವಕಾಶಗಳು ಸಿಕ್ಕಿದಾಗ ಅನುಭವಿಸೋಣ.