ಒಬ್ಬ ಪ್ರಾಮಾಣಿಕ ಮನಷ್ಯ ಹೊಸ ಊರಿಗೆ ಬಂದು ಬಸ್ಸಿನಿಂದ ಇಳಿದ ನಂತರ ಸುತ್ತ ನೋಡುತ್ತಿದ್ದಂತೆ ಒಬ್ಬ ಮಹಾಶಯ ಬಾಬು ಎನ್ನುವವನು ಈ ವ್ಯಕ್ತಿಗೆ ನಮಸ್ಕಾರ ಹೇಗಿದ್ದೀರಾ ದಣಿ ಎಂದು ಸಾಲದೆ ಕಾಲಿಗೆ ಬಿದ್ದು ನಮಸ್ಕರಿಸಿದ ನಂತರ ದಣಿ ನಿಮ್ಮನ್ನು ನೋಡಿ ಎಷ್ಟು ದಿನವಾಯಿತು ನೀವು ನಮ್ಮನ್ನು ಮರೆತುಬಿಟ್ಟಿರಾ ನಾನು ನಿಮ್ಮನು ಮರೆಯಲಿಲ್ಲ ಎಂದು ಆಪ್ತನಂತೆ ವರ್ತಿಸಿದ.
ಪ್ರಾಮಾಣಿಕ ವ್ಯಕ್ತಿಗೆ ಸ್ವಲ್ಪ ಗೊಂದಲವಾಯಿತು ಯಾರಿವನು ಈ ಹೊಸ ಊರಿನಲ್ಲಿ ಮತ್ತೆ ಮನದಲಿ ಯೋಚಿಸಿ ನಾನು ಈ ಊರಿಗೆ ಹೊಸಬ ಇರಲಿಬಿಡು ಬಾಬು ಇದ್ದಾನೆ ಅವನ ಜೊತೆಯಲ್ಲಿಯೇ ತನ್ನ ಕೆಲಸಗಳನ್ನು ಮುಗಿಸೋಣ ಕೆಲವು ಕೆಲಸಗಳು ಮಾಡಬೇಕೆಂದು ತಿಳಿಸಿದರು.
ಅದಕ್ಕೆ ನೀವೇಕೆ ಭಯಪಡುತ್ತೀರಿ ನೀವೊಂದು ಮಾಡಿದ ಉಪಕಾರಕ್ಕೆ ಇಂದಿನ ಕೆಲಸ ನಾನು ಮಾಡಲಿಲ್ಲ ಎಂದರೆ ಆ ಭಗವಂತ ಚೆನ್ನಾಗಿ ಇಡಲಾರ ಎಂದು ಅವನೇ ಸಮಯಕ್ಕೆ ಸರಿಯಾಗಿ ಕಾಫಿ, ತಿಂಡಿ. ಊಟದ ಬಿಲ್ಲುಗಳನ್ನು ಅವನೇನೀಡುತ್ತಿದ್ದಾನೆ.
ಪ್ರಾಮಾಣಿಕ ವ್ಯಕ್ತಿಗೆ ಆಶ್ಚರ್ಯವೋ ಆಶ್ಚರ್ಯ ಒಂದು ಕಡೆ ಸಂತೋಷ ಹೀಗೆ ಎಲ್ಲವೂ ಕೆಲಸ ಆಗಿಬಿಟ್ಟರೆ ಸಾಕು ಎಂದು ಆ ವ್ಯಕ್ತಿ ಇವರ ಜೊತೆಯಲ್ಲಿಯೇ ಓಡಾಡಿದ ಕೆಲವು ಕೆಲಸಗಳು ಮಾಡಿದ ನಂತರ ಬಾಬು ಹೇಳುತ್ತಾನೆ.
ಸ್ವಾಮಿ ನೀವು ಹೇಗೂ ಬಂದಿದ್ದೀರಿ ಇಲ್ಲಿ ಒಂದು ಮಂದಿರವಿದೆ ಇದನ್ನು ನೀವು ಒಮ್ಮೆ ದರ್ಶನ ಮಾಡಿದರೆ ನಿಮ್ಮ ಎಲ್ಲಾ ಕೆಲಸಗಳು ಚೆನ್ನಾಗಿ ಆಗುತ್ತವೆ ನೀವು ಮತ್ತೆ ಬರುತ್ತೀರೋ ಇಲ್ಲವೋ ಎಂದಾಗ ನೀನು ಹೇಳುವುದು ಸತ್ಯವೇ ಎಂದಾಗ ಊರಿನ ಮಂದಿರ ದರ್ಶನ ಮಾಡೋಣ ಎಂದು ಹೇಳುತ್ತಾನೆ ಪ್ರಾಮಾಣಿಕ ಮನುಷ್ಯ ಮಂದಿರಕ್ಕೆ ಹೋಗ ಬೇಕಾದರೆ ಎಲ್ಲಾ ಲಗೇಜುಗಳನ್ನು ಆಚೆ ಇಟ್ಟು ಹೋಗಬೇಕು ನೀವೇನು ಭಯಪಡಬೇಡಿ ನಾನು ನೋಡಿಕೊಳ್ಳುತ್ತೇನೆ ಎಂದು ನಂಬಿಕೆ ಹುಟ್ಟಿಸುತ್ತಾನೆ.
ಪ್ರಾಮಾಣಿಕ ಮನುಷ್ಯ ಮಂದಿರದೊಳಗೆ ಹೋಗುತ್ತಾರೆ ಲಗೇಜ್ ಎಲ್ಲವೂ ಕೊಟ್ಟು ನಂತರ ಆಚೆ ಬಂದು ನೋಡುತ್ತಾರೆ ಆಪ್ತ ಬಾಬು ಎನ್ನುವವನು ಅಲ್ಲಿ ಇರುವುದಿಲ್ಲ ಅಕ್ಕ ಪಕ್ಕದವರಿಗೆ ಕೇಳಿದರೆ ಯಾರು ಹೇಳುತ್ತಾರೆ ಯಾರೂ ಕೂಡ ಹೇಳುವುದಿಲ್ಲ.
ಏಕೆಂದರೆ ಆ ಬಾಬು ಇವರಿಗೆ ಮಾತ್ರ ಪರಿಚಯ ಇದ್ದಿದ್ದು ಬೇರೆಯವರಿಗೆ ಯಾರಿಗೂ ಪರಿಚಯ ಇಲ್ಲ ಇದೇ ರೀತಿ ಕೆಲವರು ಇಲ್ಲ ಸಲ್ಲದ ಭರವಸೆಗಳನ್ನು ನೀಡಿ ನಂಬಿಕೆಗಳನ್ನು ಸೃಷ್ಟಿಸಿ ನಂತರ ನಮ್ಮನ್ನು ಗುರುತಿಸುವದಿಲ್ಲ ಕೆಲವು ಸಾರಿ ಅಪರಿಚಿತರು, ಇತರರು ಯಾರೇ ಆಗಲಿ ನಂಬಿಕೆ ಹುಟ್ಟಿಸಿದವರು ನಂತರ ಏನು ಮಾಡುತ್ತಾರೆಂಬುದು ತಿಳಿಯದು ಆದ್ದರಿಂದ ಎಚ್ಚರಿಕೆಯಿಂದ ಇರುವುದು ನಮ್ಮ ಕರ್ತವ್ಯ.
ನಟನೆ ಮಾಡಬೇಕಾಯಿತು
ಒಂದು ಊರಿನಲ್ಲಿ ಶ್ರೀಮಂತರ ಮನೆಯಲ್ಲಿ ಮನೆಯ ಹಿರಿಯರು ತೀರಿಕೊಂಡಿದ್ದರು, ಅನೇಕ ಸಂಭಂದಿಕರು ಸೇರಿದ್ದರು, ಎಲ್ಲರೂ ದುಃಖದಲ್ಲಿ ಮುಳುಗಿದ್ದರು, ಇಬ್ಬರು ಗಂಡು ಮಕ್ಕಳು ಒಬ್ಬ ಮಗಳನ್ನು, ಪತ್ನಿಯನ್ನು ಬಿಟ್ಟು ಅಗಲಿದ್ದರು.
ಜೀವನದಲ್ಲಿ ಕಷ್ಟಪಟ್ಟು ದುಡಿದು ನ್ಯಾಯ ಮಾರ್ಗದಿಂದಲೇ ಸಂಪಾದಿಸಿ ಮಕ್ಕಳೆಲ್ಲರಿಗೂ ಸರಿಯಾಗಿ ಆಸ್ತಿಯನ್ನೂ ಹಂಚಿದರು. ಮಗಳಿಗೂ ಮದುವೆ ಆಗಿತ್ತು ಹಿರಿಯರು ಅನೇಕರಿಗೆ ಸಹಾಯವನ್ನೂ ಮಾಡುತ್ತಿದ್ದರು.
ಒಳ್ಳೆಯ ವ್ಯಕ್ತಿ. ಎಲ್ಲ ಸಿದ್ಧತೆಗಳನ್ನೂ ಮಾಡಿ ಶವಯಾತ್ರೆಗೆ ತಯಾರಾದರು ಇನ್ನೇನು ಶವ ಪೆಟ್ಟಗೆಯನ್ನು ಎತ್ತಬೇಕು ಆಗ ಒಬ್ಬ ವ್ಯಕ್ತಿ ಓಡುತ್ತಾ ಬಂದು, ನಿಲ್ಲಿರಿ ನಿಲ್ಲಿರಿ ನನ್ನದೊಂದು ಕೆಲಸ ಬಾಕಿ ಇದೆ, ಎಂದು ಹೇಳಿದನು.
ಎಲ್ಲರು ಆತಂಕದಲ್ಲಿ ಮುಳುಗಿದರು. ಅದರಲ್ಲಿ ಹಿರಿಯರೊಬ್ಬರು ಮುಂದೆ ಬಂದು ಏನೆಂದು ಕೇಳಿದಾಗ, ಆ ವ್ಯಕ್ತಿಯು ಹೇಳಿದ್ದು ಕೇಳಿ ಎಲ್ಲರೂ ಆಶ್ಚರ್ಯಚಕಿತರಾದರು. ಸತ್ತವರು ನನಗೆ ಹದಿನೈದು ಸಾವಿರ ರೂಪಾಯಿ ಕೊಡುವದಿದೆ, ನನ್ನಿಂದ ಇವರು ಸಾಲಪಡೆದಿದ್ದರು ಎಂದಾಗ, ಗುಸು ಗುಸು, ಪಿಸುಪಿಸು ಆರಂಭವಾಯಿತು.
ಶವ ಎತ್ತೋಣ ಎಂದಾಗ ಅದರ ಬಗ್ಗೆ ಆಮೇಲೆ ನೋಡೋಣ ಹಣದ ಜವಾಬ್ದಾರಿಯನ್ನ ಯಾರಾದರೂ ತೆಗೆದುಕೊಂಡರೆ ಮಾತ್ರ ನಾನು ಶವ ಎತ್ತುವುದಕ್ಕೆ ಅವಕಾಶ ಮಾಡಿಕೊಡುತ್ತೇನೆ ಎಂದು ಹಠ ಹಿಡಿದ.
ಗಂಡು ಮಕ್ಕಳ ಬಳಿ ಬಂದು ವಿಷಯವನ್ನು ತಿಳಿಸಿದಾಗ ಹಣದ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಕೇಳಿದರು. ಆದರೆ ಇಬ್ಬರು ಗಂಡು ಮಕ್ಕಳು ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ದರಿರಲಿಲ್ಲ. ಎಲ್ಲರಿಗೂ ಆತಂಕ ಶುರುವಾಯಿತು.
ಮುಂದೇನು ಮಾಡುವುದು ಎಂದು ಚಿಂತಿಸಿದರು ವಿಷಯ ಹೆಣ್ಣುಮಕ್ಕಳವರಗೂ ತಲುಪಿತು ಇದನ್ನು ಕೇಳಿದ ಒಬ್ಬಳೇ ಮಗಳು ಹೊರಗೆ ಬಂದು, ಇವೂ ನನ್ನ ತಂದೆಯವರೇ ನನಗೆ ಮಾಡಿಸಿದ್ದ ವಡವೆಗಳು ಆಭರಣಗಳು ತೆಗೆದುಕೊಳ್ಳಿ, ಮೊದಲು ಅಂತ್ಯ ಸಂಸ್ಕಾರವನ್ನು ಮುಗಿಸಿ ನನ್ನ ತಂದೆಯವರ ಗೌರವಕ್ಕೆ ಧಕ್ಕೆಯಾಗಬಾರದು ಎಂದು ತನ್ನ ಪೆಟ್ಟಿಗೆಯಲ್ಲಿದ್ದ ವಡವೆಗಳನ್ನೆಲ್ಲಾ ತಂದು ಕೊಟ್ಟು ಕಣ್ಣಿರಿಡುತ್ತಾ ಒಳಗೆ ಹೋದಳು.
ನಂತರ ಅಂತ್ಯಸಂಸ್ಕಾರವನ್ನು ಮುಗಿಸಿ ಬಂದ ನಂತರ ವಡವೆಗಳನ್ನು ಪಡೆದಿದ್ದ ಆ ವ್ಯಕ್ತಿಯು ಒಳಗೆ ಬಂದು, ಒಂದು ಗಂಟನ್ನು ಮಗಳ ಮುಂದಿಟ್ಟು ತೆಗೆದುಕೋ ಮಗಳೆ ನಿನ್ನ ಆಭರಣಗಳು ವಡವೆಗಳು ಮತ್ತು ಈ ಹದಿನೈದು ಸಾವಿರ ರೂಪಾಯಿಗಳು ಎಂದಾಗ ಎಲ್ಲರೂ ಆಶ್ಚರ್ಯಚಕಿತರಾದರು.
ಆಗ ಆ ಬಂದ ವ್ಯಕ್ತಿಯು ಮುಗುಳ್ನಕ್ಕು, ನಿಜವಾಗಿ ಹೇಳಬೇಕೆಂದರೆ, ಅವರು ನನಗೆ ಹಣ ಕೊಡುವುದಿರಲಿಲ್ಲ ನನಗೇ ಅವರು ಕಷ್ಟದಲ್ಲಿದ್ದಾಗ ನನಗೆ ಕೊಟ್ಟಿದ್ದರು, ವಾಪಸ್ಸು ಕೊಡಬೇಕೆಂದಿರುವಾಗಲೇ ಅವರು ತೀರಿಕೊಂಡಿದ್ದರು ಎಂದು ತಿಳಿದು ಓಡಿ ಬಂದೆ.
ಯಾರಿಗೆ ಕೊಡುವುದು ಎಂದು ಗೊಂದಲವಾಯಿತು ಇಷ್ಟು ಜನರಲ್ಲಿ ಅರ್ಹತೆ ಇರುವವರು ಯಾರೆಂದು ಗುರುತಿಸಲು ಈ ನಟನೆ ಮಾಡಬೇಕಾಯಿತು ತಗೂ ಮಗಳೇ ಎಂದು ಹೇಳಿ ಹೊರಟು ಹೋದನು. ಗಂಡು ಮಕ್ಕಳು ಏನೂ ಮಾತಾಡಲಿಲ್ಲ ತಂದೆಯ ಕರ್ಮಗಳಿಗೆ ಮಗಳೇ ಹಣ ಖರ್ಚು ಮಾಡಿ ಉಳಿದ ಹಣವನ್ನು ಅವಳ ಅಮ್ಮನಿಗೆ ಕೊಟ್ಟು ಗಂಡನ ಮನೆಗೆ ಹೊರಟು ಹೋದಳು.
ಬದುಕಿಗೆ ಬಣ್ಣವಿದೆ ಬಣ್ಣಕ್ಕೆ ಬದುಕಿಲ್ಲ
ಒಂದು ಮರದ ಪೋಟೋರೆಯಲ್ಲಿ ಕಾಗೆಯು ವಾಸಮಾಡಿಕೊಂಡಿತ್ತು ಅದರ ಚಿಕ್ಕಮರಿ ಈಗ ತಾನೇ ನಿಧಾನವಾಗಿ ಕಣ್ಣು ಬಿಚ್ಚಿ ನೋಡಿತು. ಮರದ ಪೊಟರೆಯಲ್ಲಿ ರಂಗು ರಂಗಿನ ಹಕ್ಕಿಗಳು ಹಾಡಿ ನಲಿಯುತ್ತಿದ್ದವು, ಅದನ್ನೆಲ್ಲ ಕಂಡ ಮರಿಗೆ ಆಶ್ಚರ್ಯ, ಆನಂದವೇ ಆನಂದ ಸ್ವಲ್ಪ ಸಮಯದ ನಂತರ ತಾಯಿಯ ದೇಹವನ್ನು ತನ್ನ ದೇಹವನ್ನು ನೋಡಿತು ಬರೀ ಕಪ್ಪು ಕಾಗೆ ಮರಿಗೆ ತಡೆಯಲು ಆಗಲಿಲ್ಲ ತಾಯಿಗೆ ಕೇಳಿತು, ಅಮ್ಮಾ ಉಳಿದೆಲ್ಲ ಪಕ್ಷಿಗಳಿಗೆ ಎಂಥ ಮನೋಹರ ಬಣ್ಣವಿದೆ.
ನಮಗೇಕೆ ಈ ಕಪ್ಪು ಬಣ್ಣ? ತಾಯಿ ಕಾಗೆ ಹೇಳಿತು ಬಣ್ಣಕ್ಕಿಂತ ಬದುಕು ತುಂಬಾ ಅಮೂಲ್ಯವಾದದ್ದು ಅದು ಹೇಗೆ ಎಂದು ಮರಿ ಕೇಳಿತು ಆಗ ತಾಯಿ ವಿವರಿಸಿತು.
ಬದುಕಿಗೆ ಬಣ್ಣವಿದೆ ಬಣ್ಣಕ್ಕೆ ಬದುಕಿಲ್ಲ ಕೋಗಿಲೆ ಹಾಡುತ್ತದೆ ನವಿಲು ಕುಣಿಯುತ್ತದೆ, ಗಿಳಿ ಸವಿನುಡಿಯುತ್ತದೆ, ಮೊಲ ಓಡುತ್ತದೆ, ಬದುಕು ಇದ್ದರೆ ತಾನೇ ಈ ಹಾಡು, ಕುಣಿತ ಎಲ್ಲಾ ಆದ್ದರಿಂದ ಬದುಕು ಮಹತ್ವದ್ದೇ ವಿನಾ ಬಣ್ಣವಲ್ಲ ತಾಯಿಯ ಮಾತನ್ನು ಕೇಳಿದ ಕಾಗೆಮರಿಗೆ ಆನಂದವೇ ಆನಂದ ಈಗ ಮರಿಗೆ ಬದುಕಿನ ಬಗ್ಗೆ ತಿಳಿಯಿತ್ತು.
ಕಷ್ಟಕ್ಕೆ ಸಿಲುಕಿ ಕೊಳ್ಳುತ್ತಾರೆ.
ಒಂದು ಸಾರಿ ಒಂದು ಸುಂದರ ಯುವತಿ ದೊಡ್ಡ ಒಂದು ಸೂಟ್ ಕೇಸ್ ಅನ್ನು ಹಿಡಿದು ರೈಲ್ವೇ ಸ್ಟೇಷನ್ ಗೆ ಬಂದಳು. ಟಿಕೆಟ್ಟನ್ನು ರಿಸರ್ವ್ ಮಾಡಿ ಸೂಟ್ ಕೇಸ್ ಅನ್ನು ಎಳೆಯಲಿಕ್ಕೆ ಕಷ್ಟವಾಗುತ್ತಿತ್ತು ಆಗ ಇಬ್ಬರು ಯುವಕರು ಇದ್ದರೂ ಯುವಕರು ಇವಳ ಕಷ್ಟ ನೋಡಿ ಸಹಾಯ ಮಾಡೋಣವೆಂದು ಆ ಸೂಟ್ ಕೇಸ್ ಅನ್ನು ಎತ್ತಿ ರೈಲ್ವೆ ಬೋಗಿಯಲ್ಲಿ ಇಟ್ಟರು.
ನಂತರ ಯುವಕರು ಅಲ್ಲಿಯೇ ಕುಳಿತರು ಯುವತಿ ಏನೋ ಮರೆತಂತೆ ಮತ್ತೆ ರೈಲಿನಿಂದ ಇಳಿದು ಏನೋ ತರಲು ಹೋದಳು ಈ ಯುವಕರು ಯೋಚಿಸಿದರೂ ನಾವೇ ತೆಗೆದುಕೊಂಡು ಬಂದು ಕೊಡಬಹುದಾಗಿತ್ತು ಎಂದು ಮನಸಿನಲ್ಲಿ ಅಂದುಕೊಂಡರು ಆದರೆ ಇನ್ನೇನು ರೈಲು ಹೊರಡುತ್ತಿದೆ.
ಆದರೂ ಆ ಮಹಿಳೆ ಬರಲಿಲ್ಲ ಬರಬಹುದು ಎಂದು ಕಾಯುತ್ತಿದ್ದರು ಆದರೆ ಯುವತಿ ಬರಲೇ ಇಲ್ಲ ಎಲ್ಲಾ ಕಡೆ ನೋಡುತ್ತಾರೆ ಎಲ್ಲ ಬೋಗಿಗಳು ನೋಡುತ್ತಾರೆ ಆದರೆ ಆ ಯುವತಿ ಕಾಣಿಸಲಿಲ್ಲ ಕೊನೆಗೆ ಇಬ್ಬರೂ ಯೋಚನೆ ಮಾಡುತ್ತಾರೆ ಈ ಸೂಟ್ ಕೇಸ್ ನಂದು ನಂದು ಎಂದು ಇಬ್ಬರು ಜಗಳ ವಾಡುತ್ತಾರೆ.
ಕೊನೆಗೆ ಪೊಲೀಸರು ಬಂದು ಸೂಟ್ ಕೇಸ್ ಯಾರದು ಎಂದು ಕೇಳುತ್ತಾರೆ ಮತ್ತೆ ಇದರಲ್ಲಿ ಏನು ಇದೆ ಎಂದು ಕೇಳಿದಾಗ ಇಬ್ಬರೂ ಏನೂ ಹೇಳುವುದಿಲ್ಲ ಆಗ ಪೋಲಿಸರು ಆ ಸೂಟ್ ಕೇಸಿನ ಬೀಗವನ್ನು ಮುರಿದು ನೋಡಿದಾಗ ಅದರಲ್ಲಿ ಒಂದು ಮಗುವಿನ ಶವ ಇರುತ್ತದೆ.
ಆಗ ಇಬ್ಬರನ್ನು ಎಫ್ಐಆರ್ ಮಾಡಿ ಲಾಕಪ್ ನಲ್ಲಿ ಹಾಕಿ ನಂತರ ಕಳ್ಳತನ ಆರೋಪದ ಮೇಲೆ ಜೈಲಿನಲ್ಲಿ ಬಂಧಿಸುತ್ತಾರೆ ಸಿಕ್ಕಿದ ವಸ್ತು ಅಥವಾ ಇತರರ ವಸ್ತುವೂ ನನ್ನದೇ ಎಂದರೆ ಯಾವ ರೀತಿ ಕಷ್ಟಕ್ಕೆ ಸಿಲುಕಿ ಕೊಳ್ಳುತ್ತಾರೆ ಎಂದು ಊಹಿಸಲು ಸಾಧ್ಯವಿಲ್ಲ.
ಆಸೆ ಇರಬೇಕು ಅದು ನಮ್ಮ ವಸ್ತುಗಳ ಮೇಲೆ ಬೇರೆಯವರ ವಸ್ತುವಿನ ಮೇಲೆ ಆಸೆ ಇರಬಾರದು ಇದ್ದರೆ ಅದರ ಫಲಿತಾಂಶವಂತೂ ಅತಿ ಕೆಟ್ಟದಾಗಿರುತ್ತದೆ.
ನೋವು ತಡೆಯಲು ಸಾಧ್ಯವಿಲ್ಲ
ರಾಜನ ಅರಮನೆಯಲ್ಲಿ ಒಂದು ಸಾರಿ ರಾಜನ ಆಸ್ಥಾನದಲ್ಲಿ ಇರುವವನು ಆಕಸ್ಮಿಕವಾಗಿ ಯಾವುದೋ ಕಾರಣಕ್ಕೆ ಚಿಕ್ಕ ತಪ್ಪು ಘಟಿಸಿಬಿಡುತ್ತದೆ ಅಲ್ಲಿಯ ನಿಯಮ ಏನು ಎಂದರೆ ಐವತ್ತು ಮೆಣಸಿಕಾಯಿ ತಿನ್ನಬೇಕು, ಇಲ್ಲ ಐವತ್ತು ಛಡಿ ಏಟು ತಿನ್ನಬೇಕು.
ಇಲ್ಲದಿದ್ದರೆ ನೂರು ಚಿನ್ನದ ನಾಣ್ಯವನ್ನು ತಪ್ಪಿಗಾಗಿ ದಂಡವನ್ನು ಕಟ್ಟಬೇಕು ಇದು ನಿಯಮ ಯಾವುದು ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು ತಪ್ಪು ಮಾಡಿದವನು. ಮೊದಲಿಗೆ ಮೆಣಸಿನಕಾಯಿಯನ್ನು ತಿನ್ನುತ್ತೇನೆ ಎಂದು ತಿನ್ನಲಿಕ್ಕೆ ಶುರು ಮಾಡುತ್ತಾನೆ.
ಹತ್ತು ಮೆಣಸಿನಕಾಯಿ ಕೂಡ ತಿನ್ನಲಿಕೆ ಸಾಧ್ಯವಾಗುವುದಿಲ್ಲ ಆಗ ಅವನು ನನಗೆ ಛಡಿಯೇಟು ಇರಲಿ ಎಂದು ಒಪ್ಪಿಕೊಳ್ಳುತ್ತಾನೆ ಆದರೆ ಛಡಿಯೇಟು ಹದಿನೈದು ಇಪ್ಪತ್ತು ರವರೆಗೆ ಕಷ್ಟಪಟ್ಟು ಸಹಿಸಿಕೊಳ್ಳುತ್ತಾನೆ ಆಮೇಲೆ ಅವನಿಗೆ ಛಡಿ ಏಟು ತಿನ್ನಲು ಸಾಧ್ಯವಾಗುವುದಿಲ್ಲ ನಂತರ ನಾನು ದಂಡವನ್ನೇ ಕಟ್ಟುತ್ತೇನೆ ಎಂದು ಅಲ್ಲಿಂದ ಹೊರಡುತ್ತಾನೆ.
ತಪ್ಪು ಮಾಡಿದ ವ್ಯಕ್ತಿ ಮೊದಲೇ ಯೋಚನೆ ಮಾಡಿ ಅವನು ಮೆಣಸಿಕಾಯಿ ತಿನ್ನಬೇಕಾ, ಛಡಿಯೇಟು, ಅಥವಾ ದಂಡ ಕಟ್ಟಬೇಕು ಎಂದು ತೀರ್ಮಾನಿಸಿ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಮೆಣಸಿನಕಾಯಿ ತಿನ್ನುತ್ತಿದ್ದರೆ ಮಾನಸಿಕವಾಗಿ ಕಷ್ಟವಾಗುತ್ತದೆ.
ಅದೇ ಛಡಿಯೇಟು ತಿನ್ನುತ್ತಿದ್ದರೆ ದೈಹಿಕವಾಗಿ ನೋವಾಗುತ್ತದೆ ದೈಹಿಕವಾಗಿ ಮಾನಸಿಕವಾಗಿ ನೋವಾಗುತ್ತದೆ ದೈಹಿಕವಾಗಿ ಕೂಡ ನೋವು ತಡೆಯಲು ಸಾಧ್ಯವಿಲ್ಲ ಹಾಗೆ ಮಾನಸಿಕವಾದ ನೋವು ಕೂಡ ಅವಶ್ಯಕತೆಗಿಂತ ಹೆಚ್ಚಾಗಿ ನೋವು ತಡೆಯಲು ಸಾಧ್ಯವಿಲ್ಲ ಆಯ್ಕೆಯನ್ನು ನಾವು ಆರಂಭದಲ್ಲೇ ಮಾಡಿಕೊಳ್ಳೋಣ.