ನನ್ನ ಬದುಕು ನನ್ನ ಆಯ್ಕೆ?

ಒಂದು ಊರಿನಲ್ಲಿ ಚಾಣಾಕ್ಷ ರಾಜನಿದ್ದನು ಅವನು ಒಂದು ಸಂದೇಶವನ್ನು ಹೊರಡಿಸಿದ ನನಗೆ ಮೂರು ಕೆಲಸದವರು ಬೇಕು ನಾನೇ ಅವರನ್ನು ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಬರೆದಿತ್ತು ಆಗ ಆ ಸಭೆಗೆ ಬೇಕಾದಷ್ಟು ಜನರು ಬಂದರೂ ಅದರಲ್ಲಿ ರಾಜನು ಮೂರು ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಂಡನು.

ಮೂರು ವ್ಯಕ್ತಿಗಳಿಗೆ ಹೇಳಿದ ನೀವು ಒಂದೊಂದು ಬಿದುರಿನ ಕುಕ್ಕೆಯನ್ನು ತೆಗೆದುಕೊಳ್ಳಿ ಮುಂದೆಯೇ ತೋಟ, ಹೊಲ, ಗದ್ದೆ, ಎಲ್ಲವೂ ಇದೆ ಇದರಲ್ಲಿ ನಿಮಗೆ ಹೊರುವಷ್ಟು ಏನು ಬೇಕಾದರೂ ಬಿದುರಿನ ಕುಕ್ಕೆಯಲ್ಲಿ ತುಂಬಿಕೊಂಡು ನಾಳೆ ನನ್ನ ಅರಮನೆಗೆ ಬನ್ನಿ ಎಂದನು.

ನಂತರ ಎಲ್ಲರೂ ಹೊರಟರು ಮೊದಲನೆಯವನು ಪ್ರಾಮಾಣಿಕ ತಿನ್ನುವುದಕ್ಕೆ ಹಣ್ಣುಗಳು ಆಯ್ದುಕೊಂಡನು ಹಣ್ಣುಗಳು ಎಂದರೆ ಇಂದು ತಿನ್ನುವುದಕ್ಕೆ, ನಾಳೆಯೂ ತಿನ್ನಬಹುದು ಮತ್ತೆ ನಾಳಿದ್ದು ಕೂಡ ತಿನ್ನ ಬಹುದಾದಂತಹ ಮಾವಿನ ಹಣ್ಣು ಬಾಳೆಹಣ್ಣು ದಾಳಿಂಬೆ ಸೀಬೆಹಣ್ಣು ಪಪ್ಪಾಯಿ ಹಲವಾರು ವಿಧವಾದ ಹಣ್ಣುಗಳನ್ನು ಬಿದುರಿನ ಕುಕ್ಕೆಯಲ್ಲಿ ತುಂಬಿಸಿದನು.

ಎರಡನೆಯವನು ಕಿಲಾಡಿ ಚಿಂತಿಸಿದ ರಾಜ ಕುಕ್ಕೆಯನ್ನು ಮಾತ್ರ ನೋಡುತ್ತಾನೆ ಸಮಯ ಏಕೆ ವ್ಯರ್ಥಮಾಡಬೇಕು ಮೇಲೆ ಚೆನ್ನಾಗಿದ್ದರೆ ಸಾಕು ಎಂದು ಮೇಲೆ ಮೇಲೆ ಮಾತ್ರ ಒಳ್ಳೆಯ ಹಣ್ಣು ಕೆಳಗೆ ಕೊಳೆತ ಹಣ್ಣಿನಿಂದ ಚಿಕ್ಕಚಿಕ್ಕ ಕಾಯಿಗಳಿಂದ ಅರ್ಧಂಬರ್ಧ ತುಂಬಿದನು.

ಮೂರನೆಯವನು ಅತಿ ಬುದ್ಧಿವಂತ ಮೂಟೆ ತುಂಬಿದರೆ ಸಾಕು ಎಂದವನೇ ಮೊದಲು ಕಸ ಕಡ್ಡಿ ಎಲ್ಲವನ್ನು ತುಂಬಿ ಮೇಲೆ ಮಾತ್ರ ಚೆನ್ನಾಗಿರುವಂತೆ ಹಣ್ಣುಗಳಿಂದ ತುಂಬಿದನು 3 ವ್ಯಕ್ತಿಗಳು ಸಭೆಗೆ ಹಾಜರಾದರು ರಾಜನೂ ಇವರನ್ನು ನೋಡಿ ಈ 3 ವ್ಯಕ್ತಿಗಳನ್ನು 3 ಬೇರೆ ಬೇರೆ ಕೋಣೆಯಲ್ಲಿ 3ದಿನಕ್ಕಾಗಿ ಕೂಡಿ ಹಾಕಿ ಬಿಟ್ಟ 3 ದಿನದವರೆಗೆ ಏನನ್ನೂ ಕೊಡಬಾರದು ಎಂದು ಕೋಣೆಯನ್ನು ನೋಡಿ ಕೊಳ್ಳುವವರಿಗೆ ಆಜ್ಞೆ ಕೊಟ್ಟನು.

  ಮೊದಲನೆಯವನು ಹಣ್ಣುಗಳನ್ನು ತಿಂದು ನೆಮ್ಮದಿಯಾಗಿ 3ದಿನ ಕಳೆದನು. ಎರಡನೆಯವನು ಒಂದು ದಿನ ಇದ್ದು ಮಾರನೆಯ ದಿನ ಸ್ವಲ್ಪ ಅನಾರೋಗ್ಯದಿಂದ ನರಳಿದ. ಮೂರನೆಯವನು ಒಂದು ದಿನ ಬದುಕಿದ ಎರಡನೆಯ ದಿನ ಆರೋಗ್ಯ ಕೆಟ್ಟಿತು ಮೂರನೆ ದಿನ ಸತ್ತು ಹೋದನು.

 ರಾಜ ಮೊದಲನೆಯವನನ್ನು ಆಯ್ಕೆ ಮಾಡಿಕೊಂಡನು ಆಯ್ಕೆಯಾದವನು ನನ್ನ ಬದುಕು ನನ್ನ ಆಯ್ಕೆ ಎಂದು ಹೇಳಿದನು ನಾನು ಏನು ಆಯ್ಕೆ ಆಯ್ಕೆ ಮಾಡಿಕೊಳ್ಳುತ್ತೇನೆಯೋ ಅದೇ ನನ್ನ ಬದುಕು ಆಯ್ಕೆ ಮಾಡಿಕೊಳ್ಳುವಾಗ ಸರಿಯಾದುದ್ದನ್ನೇ ಮಾಡಿಕೊಳ್ಳೋಣ ನನ್ನ ಆಯ್ಕೆಯಂತೆ ನನ್ನ ಬದುಕು ಮುನ್ನಡೆಯುತ್ತದೆ. 

 ಬದುಕಿಗೆ ಪ್ಲಾನ್ ಇದೆಯೇ?

ಇಬ್ಬರು ಸಂತರು ದೇಶ ಸುತ್ತಲೂ ಹೋಗಿದ್ದರು ಇವರು ಒಂದು ನಗರಕ್ಕೆ ಬಂದರು.  ಆ ನಗರವು ತುಂಬಾ ಚೆನ್ನಾಗಿ ಮನೋಹರವಾಗಿ ಇತ್ತು ಮತ್ತೆ ಅಲ್ಲಿಯ ಅರಮನೆಗಳು ಭವ್ಯವಾದ ಕಟ್ಟಡಗಳು, ಉದ್ಯಾನವನಗಳು, ವಿವಿಧ ರೀತಿಯ ರಂಗು ರಂಗಿನ ವಿನೋದ ದೃಶ್ಯಗಳನ್ನು ನೊಡಿದರು.

 ಆಗ ಅದರಲ್ಲಿ ಒಬ್ಬ ಸಂತರು ಮಾತ್ರ ಸ್ವಲ್ಪ ಸಮಯದವರೆಗೆ ಕಾಣಲಿಲ್ಲ ನಂತರ ಮತ್ತೆ ಆ ಸಂತನೊಂದಿಗೆ ಬಂದು ಸೇರಿ ನಗರದ ವೈಭವಗಳನ್ನು ಒಂದೊಂದಾಗಿ ನೋಡುತ್ತಾ ಕಾಲ ಕಳೆಯುತ್ತಿದ್ದರು ಆದರೆ ಒಬ್ಬ ಸಂತರು ಮಾತ್ರ ಆರಾಮಾಗಿದ್ದಾರೆ ಇನ್ನೊಬ್ಬ ಸಂತರು ದಣಿದಿದ್ದರು.

 ಆಗ ಜೊತೆಯಲ್ಲಿದ್ದ ಸಂತರು ಹೇಳಿದರು ನೀವು ಅತ್ತ ಹೊರಟಿದ ಕೂಡಲೇ ಇತ್ತ ನಾನು ಒಂದು ಕೊಠಡಿಯನ್ನು ಪತ್ತೆಹಚ್ಚಿದೆ ಅದನ್ನು ಬಾಡಿಗೆಗೆ ಪಡೆದು ನನ್ನ ಗಂಟುಮೂಟೆ ಅಲ್ಲೇ ಇಟ್ಟು ಬೀಗ ಹಾಕಿ ಮತ್ತೆ ಬಂದು ನಿಮ್ಮ ಜೊತೆ ಸೇರಿ ಸಂತೋಷದಿಂದ ಎಂಜಾಯ್ ಮಾಡುತ್ತಿದ್ದೇನೆ ಎಂದರು.

ಇನ್ನೊಬ್ಬ ಸಂತರು ಸಂಜೆಯಾಗುತ್ತಿದ್ದಂತೆ ತುಂಬ ತಿರುಗಿ ತಿರುಗಿ ದಣಿದಿದ್ದರು ಮೊದಲನೇ ಸಂತರಿಗೆ ಕತ್ತಲಾದ ಮೇಲೆ ಎಲ್ಲಿ ಹೋಗಬೇಕೆಂದು ಮೊದಲೇ ಅರಿತು ಒಂದು ಕೊಠಡಿ ಗೊತ್ತು ಮಾಡಿದರು ಕತ್ತಲಾದ ನಂತರ ಮತ್ತಷ್ಟು ನೆಮ್ಮದಿಯಿಂದ ಇದ್ದರು ಆದರೆ ಇನ್ನೊಬ್ಬ ಸಂತರು ಕತ್ತಲಾದ ಮೇಲೆ ಎಲ್ಲಿ ಹೋಗುವುದೆಂದು ತಡಕಾಡಿದರು ಇದೇ ರೀತಿ ನಾವು ನಮ್ಮ ಗುರಿ ಇದ್ದು ಸಾಧನೆ ಮಾಡಿದರೆ ಗುರಿಯೂ ಸುಲಭವಾಗಿ ತಲುಪಬಹುದು.

ನಾವು ಮೂರು ದಿನಕ್ಕೆ ಪ್ರವಾಸ ಹೋಗಬೇಕಾದರೆ ಏನೆಲ್ಲಾ ಬೇಕೋ ಆ ವಸ್ತುಗಳು ಅಂದರೆ ಸಾಬೂನು, ಬಟ್ಟೆಗಳು,ಪೇಸ್ಟ್, ಬ್ರಶ್, ಟವಲ್ ಎಲ್ಲವೂ ತೆಗೆದುಕೊಂಡು ಹೋಗಿರುತ್ತೇವೆ ಆದರೆ ಅದೇ ನಾವು ಎಷ್ಟು ವರ್ಷ ಬದುಕುತ್ತೇವೆ ಗೊತ್ತಿಲ್ಲ ಅದಕ್ಕೆ ಯಾವುದೇ ರೀತಿಯ ಪ್ಲಾನ್ ಇಲ್ಲದೆ ಇರುವುದು ನಿಜಕ್ಕೂ ವಿಪರ್ಯಾಸ.

ಪ್ರತಿಯೊಬ್ಬರು ವೃದ್ಧಾಪ್ಯವನ್ನು ತಲುಪಲೇಬೇಕು ಮೊದಲೇ ಅದಕ್ಕಾಗಿ ಚಿಂತಿಸಿ ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಂಡು  ಮುಂದಿನ ದಿನಗಳು ಕೂಡ ನೆಮ್ಮದಿಯಾಗಿ ಬದುಕೋಣ.

ಬೃಹತ್ತಾಗಿ ಆಲೋಚನೆ ಮಾಡುತ್ತೇನೆಯೇ?

ಒಬ್ಬ ಸಾಧಾರಣ ಯುವಕ ರಾಜನನ್ನು ಭೇಟಿಯಾಗಬೇಕೆಂದು ಬರುತ್ತಾನೆ ನಂತರ ರಾಜರೇ ಅವನನ್ನು ಭೇಟಿಯಾಗುತ್ತಾರೆ ಯುವಕ ಹೇಳುತ್ತಾನೆ ನನಗೆ ನಮ್ಮ ಗುರುಗಳು ನಿಮ್ಮ ಹತ್ತಿರ ಕೆಲಸಕ್ಕೆ ಕಳುಹಿಸಿದ್ದಾರೆ ಎಂದು ಹೇಳುತ್ತಾನೆ ಆಗ ರಾಜನು ಒಂದು ಸಾರಿ ಯುವಕನನ್ನು ನೋಡುತ್ತಾರೆ ನಂತರ ಮಂತ್ರಿಯನ್ನು ಕರೆದು ಹೇಳುತ್ತಾರೆ.

 ಈ ಯುವಕ ನನಗೆ ಅರ್ಥವಾಗುತ್ತಿಲ್ಲ ಏಕೆ ಎಂದರೆ ಇವನು ನೋಡಲು ಸುಂದರವಾಗಿಯು ಇಲ್ಲ ಹಾಗೆ ಕಷ್ಟ ಪಡುವ ಹಾಗೆಯೂ ಕಾಣಿಸುತ್ತಿಲ್ಲ. ವಿದ್ಯೆಯು ಅಷ್ಟಕಷ್ಟೇ ಬುದ್ಧಿವಂತಿಕೆಯು ಇಲ್ಲ ಗುರುಗಳು ಕಳುಹಿಸಿದ್ದಾರೆ ಏನು ಮಾಡುವುದು ಎಂದಾಗ ಮಂತ್ರಿಯೂ ರಾಜರೇ ನನಗೆ ಸ್ವಲ್ಪ ಸಮಯ ಕೊಡಿ ಕೆಲವು ದಿನಗಳವರೆಗೆ ಇಲ್ಲೇ ಇಟ್ಟುಕೊಳ್ಳೋಣ ನಂತರ ನಾನು ನಿಮಗೆ ತಿಳಿಸುತ್ತೇನೆ ಎಂದು ಹೇಳುತ್ತಾನೆ.

ಎರಡು ದಿನಗಳ ನಂತರ ಮಂತ್ರಿ ಬಂದು ರಾಜನಿಗೆ ಹೇಳುತ್ತಾನೆ ರಾಜರೇ ನೀವು ಹೇಳಿದ ಹಾಗೆ ಯುವಕನಲ್ಲಿ ಯಾವುದೇ ಗುಣ ಇಲ್ಲ ಆದರೆ ಒಂದೇ ಒಂದು ಗುಣ ಇದೆ ಅದು ಏನು ಎಂದರೆ ಬೃಹತ್ಕಾರವಾಗಿ ದೊಡ್ಡದಾಗಿ ಆಲೋಚನೆ ಮಾಡುವ ಶಕ್ತಿ ಇದೆ ಇಂದು ಏನಾಗಿದ್ದೆವು ಅದು ಮುಖ್ಯವಲ್ಲ ಮುಂದೆ ಏನಾಗಬಹುದು ಎನ್ನುವುದು ಮುಖ್ಯ ಈ ರೀತಿ ಈ ಯುವಕ ಬೃಹತ್ತಾಗಿ ಆಲೋಚನೆ ಮಾಡುತ್ತಾನೆ.

ಇವನನ್ನು ನಮ್ಮ ಹತ್ತಿರ ಇಟ್ಟುಕೊಂಡರೆ ನಾವು ಕೂಡ ತುಂಬಾ ಚೆನ್ನಾಗಿ ಅಭಿವೃದ್ಧಿಯಾಗಬಹುದು ಎಂದು ಮಂತ್ರಿ ಹೇಳುತ್ತಾನೆ. ನಂತರ ಕೆಲಸಕ್ಕೆ ಸೇರಿಸಿಕೊಳ್ಳುತ್ತಾರೆ ಸಾಮಾನ್ಯವಾಗಿ ಹಲವರು ಸಾಧಾರಣ ಮಟ್ಟದಲ್ಲಿ ಯೋಚನೆ ಮಾಡುತ್ತಾರೆ ನೀವು ಎಷ್ಟು ಸುಂದರವಾಗಿದ್ದೀರಾ ನಿಮ್ಮ ಆಕಾರ ಎಷ್ಟು ಇದೆ ಎನ್ನುವುದು ಮುಖ್ಯವಲ್ಲ ನಾನು ಎಷ್ಟು ಬೃಹತ್ತಾಗಿ ಆಲೋಚನೆ ಮಾಡುತ್ತೇನೆಯೇ?

ಒಂದು ಕಂಪನಿ ಬೆಳೆದು ನಿಂತಿದೆ ಎಂದರೆ ಅದರ ಹಿಂದೆ ಬೃಹತ್ತಾದ ದೀರ್ಘವಾದ ಆಲೋಚನೆ ಇದ್ದೆ ಇರುತ್ತದೆ ಒಬ್ಬ ವಿದ್ಯಾರ್ಥಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾನೆ ಎಂದರೆ ಅವನು ಪಾಸ್ ಆಗುವುದರ

ಬಗ್ಗೆ ಬೃಹತ್ ಆಗಿ ಆಲೋಚನೆ ಮಾಡಿಯೇ ಇರುತ್ತಾನೆ ಆದ್ದರಿಂದ ಅವನು ಪ್ರಥಮ ದರ್ಜೆಯಲ್ಲಿ ಪಾಸ್ ಆಗುತ್ತಾನೆ.

ನನ್ನ ಆಲೋಚನೆ ಚಿಕ್ಕದಾಗಿದ್ದರೆ ನಾನು ಚಿಕ್ಕದಾಗಿಯೇ ಬೆಳೆಯುತ್ತೇನೆ ನನ್ನ ಆಲೋಚನೆ ಬೃಹತ್ ಆಗಿದ್ದರೆ ನಾನು  ಬೃಹತ್ ಆಗಿ ಬೆಳೆಯಬಹುದು ನಾನು ಯಾವ ಮಟ್ಟದಲ್ಲಿ ಆಲೋಚನೆ ಮಾಡುತ್ತೇನೆ ಹಾಗೆಯೇ ನಾನು ಅಭಿವೃದ್ಧಿಯಾಗುತ್ತೇನೆ ಆದ್ದರಿಂದ ಇನ್ನು ಮುಂದೆ ದೊಡ್ಡದಾಗಿ ಬೃಹತ್ಕಾರವಾಗಿ, ದೀರ್ಘವಾಗಿ ಆಲೋಚನೆ ಮಾಡೋಣ.

ನಿಶ್ಚಿಂತೆಯಿಂದ ಕುಳಿತಿದ್ದನು

ಒಂದು ಊರಿನ ಪದ್ದತಿ ಏನೆಂದರೆ ಆ ಊರಿಗೆ ರಾಜನ ನಾಗಬೇಕಾದರೆ ಒಂದು ವರ್ಷ ಮಾತ್ರ ರಾಜನಾಗಿ ಇರಬೇಕು ಒಂದು ವರ್ಷದ ನಂತರ ಕಾಡಿಗೆ ಕರೆದುಕೊಂಡು ಹೋಗಿ ಬಿಡುತ್ತಿದ್ದರು ಇದು ಅಲ್ಲಿಯ ನಿಯಮ ಹಲವಾರು ರಾಜರು ಬರುತ್ತಿದ್ದರು ಒಂದು ವರ್ಷಗಳ ಕಾಲ ರಾಜರಾಗುತ್ತಿದ್ದರು ನಂತರ ಕಾಡಿಗೆ ಹೋಗುತ್ತಿದ್ದರು.

 ಒಂದು ಸಾರಿ ಒಬ್ಬ ಮುಂದಾಲೋಚನೆ ಇರುವ ಮನುಷ್ಯ ಬರುತ್ತಾನೆ ಅವನು ಕೂಡ ರಾಜನಾಗುತ್ತಾನೆ ಚೆನ್ನಾಗಿ ರಾಜ್ಯಭಾರ ಮಾಡುತ್ತಾನೆ ಯಾವುದೇ ಆತಂಕ, ಕೋಪ, ಇಲ್ಲದೆ ನಿಶ್ಚಿಂತೆಯಿಂದ ನೆಮ್ಮದಿಯಿಂದ ಇರುತ್ತಾನೆ.

ಇದನ್ನು ನೋಡಿದ ಮಂತ್ರಿಗೆ ಗಾಬರಿಯಾಗುತ್ತದೆ ಏಕೆಂದರೆ ಪ್ರತಿಯೊಬ್ಬ ರಾಜನು 10 ತಿಂಗಳು ಆದ ನಂತರದ ದಿನಗಳು ಹೆದರಿಕೆಯಿಂದ ಕಳೆಯುತ್ತಿದ್ದರೂ ಎಷ್ಟೋ ಜನ ಆರೋಗ್ಯ ಕೆಡಿಸಿಕೊಳ್ಳುತ್ತಿದ್ದರೂ ಕೆಲವರು ಮಾನಸಿಕವಾಗಿ ಹಿಂಸೆಗೆ ಒಳಗಾಗುತ್ತಿದ್ದರು ಚಿತ್ರ ವಿಚಿತ್ರವಾಗಿ ವರ್ತಿಸುತ್ತಿದ್ದರು.

 ಮಂತ್ರಿ ಬಂದು ಹೇಳಿದ ನಾಳೆ ನಿಮ್ಮ ಕಡೆಯ ದಿನ ನಾಳೆ ನಿಮ್ಮನ್ನು ಕಾಡಿಗೆ ಬಿಡಬೇಕು ಇದು ನನ್ನ ಕರ್ತವ್ಯ ಎಂದನು ಅದಕ್ಕೆ ರಾಜನು ಮುಗುಳ್ನಗೆಯಿಂದ ಆಗಲಿ ನಾನು ನಾಳೆ 9 ಗಂಟೆಗೆ ತಯಾರಾಗಿರುತ್ತೇನೆ ಎಂದರು.

ಬೆಳಿಗ್ಗೆ 9ಗಂಟೆಗೆ ಅವರಿಗಿಂತ ಮುಂಚೆ ರಾಜನು ಸಿದ್ಧನಾಗಿದ್ದನು ಮಂತ್ರಿ ಬರುತ್ತಿದ್ದಂತೆಯೇ ರಾಜನು ಬಂದನು ಮಂತ್ರಿ ಮತ್ತು ರಾಜ ಹೋಗಲು ಸಿದ್ಧವಾಗಿದ್ದ ಸಾರಥಿಯಲ್ಲಿ ಕರೆದುಕೊಂಡು ಹೋಗಿ ನಂತರ ಒಂದು ದೋಣಿಯಲ್ಲಿ ಕುಳಿತು ತಮ್ಮ ಯಾತ್ರೆಯನ್ನು ಮುಂದು ಮುಂದುವರೆಸಿದರು ಆದರೆ ರಾಜನು ನಿಶ್ಚಿಂತೆಯಿಂದ ಕುಳಿತಿದ್ದನು.

 ಮಂತ್ರಿಗೆ ಮಾತ್ರ ಆತಂಕ, ಒತ್ತಡ, ತಳಮಳ ತಾಳಲಾರದೆ  ರಾಜನಿಗೆ ಕೇಳಿದನು ರಾಜರೇ ನಾನು ಇಲ್ಲಿಯವರೆಗೆ ಎಲ್ಲಾ ರಾಜರಿಗೂ ತಂದು ಬಿಟ್ಟಿದ್ದೇನೆ ಆದರೆ ಅವರೆಲ್ಲರೂ ಒಂದು ತಿಂಗಳು ಎರಡು ತಿಂಗಳು ಇರುವಂತೆಯೇ ಅವರು ತುಂಬಾ ಚಿಂತಿತರಾಗಿ, ಹತಾಶರಾಗಿ. ಕೆಲವು ಸಾರಿ ಅವರನ್ನು ಹಿಡಿದುಕೊಂಡು ಬಲವಂತವಾಗಿ ಬಿಟ್ಟಿದ್ದೇನೆ.

 ನೀವು ಸಂತೋಷದಿಂದ, ಶಾಂತಿಯಿಂದ ಇದ್ದಿರಿ ಇದು ನನಗೆ ಅರ್ಥವಾಗುತ್ತಿಲ್ಲ ಎಂದು ಕೇಳಿದನು. ಆಗ ರಾಜನು ಹೇಳಿದ ಇನ್ನು ಸ್ವಲ್ಪ ದೂರ ಮುಂದೆ ಯಾವುದೇ ರೀತಿಯ ಕಾಡು ಇಲ್ಲ ಅಲ್ಲಿ ಈಗ ಒಂದು ತುಂಬಾ ಒಳ್ಳೆಯ ನಾಡಾಗಿದೆ ಅಲ್ಲಿ ಎಲ್ಲರೂ ಇದ್ದಾರೆ ಈಗ ನಾನು ಆ ನಾಡಿಗೆ ನಾನೇ ಶಾಶ್ವತ ರಾಜ ನಾಗಿದ್ದೇನೆ ಎಂದರು.

ಮತ್ತೆ ನನಗೆ ಈ ಊರಿನ ನಿಯಮ ಗೊತ್ತಿತ್ತು ಒಂದು ವರ್ಷದ ನಂತರ ನನಗೆ ಕಾಡಿಗೆ ಕಳಿಸುತ್ತಾರೆ ಅದಕ್ಕೆ ನಾನು ರಾಜನಾದ ಮೊದಲನೇ ದಿನದಿಂದಲೇ ಕೆಲವು ಕೆಲಸಗಾರರನ್ನು ಕಳಿಸಿ ಅಲ್ಲಿ ನನಗೆ ಶಾಶ್ವತವಾಗಿ ಯಾವ ರೀತಿ ಇರಬೇಕು ಎಂದು ಆಗಲೇ ನಾನು ಚಿಂತನೆ ಮಾಡಿ ಅದರಂತೆ ನಾನು ಪೂರ್ವಸಿದ್ಧತೆ ಮಾಡಿಕೊಂಡು ಬದುಕಿದ್ದೇನೆ

 ನಾನು ಅಲ್ಲಿ ಇದ್ದಿದ್ದು ಒಂದು ವರ್ಷ ಮಾತ್ರ ಇಲ್ಲಿ ನಾನು ಶಾಶ್ವತವಾಗಿ ರಾಜನಾಗಿರುತ್ತೇನೆ ಎಂದನು ಹಾಗೆ ರಾಜ ಇದ್ದನಂತೆ.

 ಇದು ಒಂದು ಕಥೆಯಾದರೂ ವಿದ್ಯಾರ್ಥಿಗಳಿಗೆ ತುಂಬ ಚೆನ್ನಾಗಿ ಸೂಕ್ತವಾಗಿದೆ ಹಲವು ವಿದ್ಯಾರ್ಥಿಗಳು ಪರೀಕ್ಷೆ ಒಂದೆರಡು ಮೂರು ತಿಂಗಳು ಇದ್ದಂತೆ ಹಲವರು ಓದಲು ಹವಣಿಸುತ್ತಾರೆ ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ಕೆಲವರಿಗೆ ಮಾನಸಿಕವಾಗಿ ಹಿಂಸೆ, ತಳಮಳ ಹೆಚ್ಚಾಗಿರುತ್ತದೆ ಕೆಲವರಿಗೆ ದೈಹಿಕವಾಗಿ, ಆರೋಗ್ಯ ಕೆಟ್ಟಿರುತ್ತದೆ.

ಯಾವುದೇ ಶಾಲೆಗೆ ಕಾಲೇಜಿಗೆ ಸೇರಿದರು ಅದಕ್ಕೆ ಮುಂದಿನ ವರ್ಷ ಪರೀಕ್ಷೆ ಇದ್ದೆ ಇರತ್ತದೆ ಎಲ್ಲರಿಗೂ ಇದು ತಿಳಿದ ವಿಷಯ ಆದರೆ ಸೇರಿದ ನಂತರವೇ ಓದನ್ನು ಪ್ರಾರಂಭಿಸಿ ಒಂದು ವರ್ಷಕ್ಕೆ ತಿಂಗಳಿಗೆ ವಾರಕ್ಕೆ ದಿನಕ್ಕೆ ಸರಿಯಾದ ವೇಳಾಪಟ್ಟಿಯನ್ನು ತಯಾರಿಸಿ ವೇಳಾಪಟ್ಟಿಯಂತೆ ಓದುವುದರ ಜೊತೆ ಜೊತೆಗೆ ಚೆನ್ನಾಗಿ ಬರೆಯುವ ಅಭ್ಯಾಸ ಮಾಡಿ ಸುಲಭವಾಗಿ ಪಾಸ್ ಆಗೋಣ.

ಅಪ್ ಡೇಟ್ ಆಗುತ್ತಿರಲೇಬೇಕು

ಒಬ್ಬ ಟೋಪಿವಾಲಾ ಟೋಪಿಯನ್ನು ಮಾರಿಕೊಂಡು ತನ್ನ ಜೀವನವನ್ನು ನಡೆಸುತ್ತಿದ್ದನು ಒಂದು ಸಾರಿ ಟೋಪಿಯನ್ನು ಮಾರಲು ಹೋದಾಗ ತುಂಬಾ ಬಿಸಿಲು ಇದ್ದುದರಿಂದ ಟೋಪಿವಾಲಾ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯೋಣ ಎಂದು ಯೋಚಿಸಿ ಒಂದು ಮರದ ಕೆಳಗೆ ಕುಳಿತುಕೊಂಡನು ಟೋಪಿ ಮಾರುವವನಿಗೆ ನಿದ್ರೆ ಬಂದಿತು.

 ನಿದ್ರೆಯಿಂದ ಎದ್ದು ನೋಡಿದಾಗ ಒಂದು ಟೋಪಿಯೂ ಇರಲಿಲ್ಲ ಎಲ್ಲಾ ಕೋತಿಗಳು ಟೋಪಿಗಳು ಹಾಕಿಕೊಂಡಿದ್ದವು ಬ್ಯಾಗ್ ನೋಡಿದಾಗ ಒಂದು ಟೋಪಿಯೂ ಇರಲಿಲ್ಲ ತನ್ನ ತಲೆಯ ಮೇಲಿದ್ದ ಒಂದು ಟೋಪಿ ಮಾತ್ರ ಇತ್ತು ಸ್ವಲ್ಪ ಹೊತ್ತು ಯೋಚಿಸಿ ಆ ವ್ಯಾಪಾರಿಯು ಆ ಟೋಪಿಯನ್ನು ತೆಗೆದು ಎಡದಿಂದ ಬಲಗೈಗೆ ಬಲದಿಂದ ಎಡಗೈಗೆ ತಲೆಗೆ ಟೋಪಿ ಹಾಕಿದನು ಮತ್ತೆ ಕೈಯಲ್ಲಿ ಹಿಡಿದು ಟೋಪಿ ತಿರುಗಿಸಿದನು ಮತ್ತೆ ತಲೆಗೆ ಹಾಕಿಕೊಂಡನು.

 ಟೋಪಿ ಹಾಕಿಕೊಳ್ಳುವುದು, ತೆಗೆಯುವುದು, ಮಾಡತೊಡಗಿದ ಕೋತಿಗಳು ಸಹ ಅದೇ ರೀತಿ ಅನುಕರಣೆ ಮಾಡತೊಡಗಿದವು. ಆವಾಗ ಟೋಪಿವಾಲನಿಗೆ ತಿಳಿಯಿತು ನಾನು ಏನು ಮಾಡುತ್ತೇನೋ ಅದು ಕೋತಿಗಳು ಸಹ ಮಾಡುತ್ತವೆ ಎಂದು ಅರಿತನು ನಂತರ ತನ್ನ ಟೋಪಿಯನ್ನು ಸ್ವಲ್ಪ ದೂರಕ್ಕೆ ಬಿಸಾಕಿದನು ಆಗ ಎಲ್ಲಾ ಕೋತಿಗಳು ಎಲ್ಲಾ ಟೋಪಿಗಳು ಬಿಸಾಕಿದವು ಒಂದು ಉಪಾಯ ಕಂಡುಕೊಂಡನು.

 ನಂತರ ಎಲ್ಲಾ ಟೋಪಿಗಳನ್ನು ಬ್ಯಾಗಿಗೆ ತುಂಬಿಕೊಂಡು ಬಂದನು ಈ ಘಟನೆಯನ್ನು ತನ್ನ ಮಗನಿಗೆ ತಿಳಿಸಿದ್ದನು ನಂತರ ಕೆಲವು ವರ್ಷಗಳಾದ ನಂತರ  ಟೋಪಿವಾಲನ ಮಗನು ಕೂಡ ಇದೇ ವ್ಯಾಪಾರದಲ್ಲಿ ತೊಡಗಿದನು.

ಮಗನು ಟೋಪಿ ಮಾರಲು ಹೋದಾಗ ವಿಶ್ರಾಂತಿಗಾಗಿ ಮರದ ಕೆಳಗೆ ಕುಳಿತಿದ್ದನು ಅದೇ ರೀತಿ ಇವನಿಗೂ ಅನುಭವವಾಯಿತು ಎಲ್ಲಾ ಟೋಪಿಗಳು ಕೋತಿಗಳು ಹಾಕಿಕೊಂಡಿವೆ ಇವನಿಗೆ ತನ್ನ ತಂದೆಯ ಅನುಭವ ನೆನಪಿಗೆ ಬಂದು ಅದೇ ರೀತಿ ಮಗನು ಮಾಡಿದನು.

 ಇವನು ಟೋಪಿ ಎಸೆದ ನಂತರ ಒಂದು ಕೋತಿ ಕಾಯುತ್ತಿತ್ತು ಆ ಟೋಪಿಯನ್ನು ತಲೆಗೆ ಹಾಕಿಕೊಂಡು ಮರದ ಮೇಲೆ ಕುಳಿತು ಹೇಳಿತು ಅಯ್ಯೋ ಬೆಪ್ಪೆ ಇದು ಇಪ್ಪತ್ತು ವರ್ಷಗಳ ಹಿಂದೆ ಆಗಿತ್ತು.

 ಹೋದ ಸಾರಿ ನಾವು ಮೋಸ ಹೋದೆವು ಆದರೆ ಈಗ ನಾವು ಮೋಸ ಹೋಗಲ್ಲ ಇನ್ನೇನಾದರೂ ಹೊಸ ತಂತ್ರಗಳು ಇದ್ದರೆ ಕಲಿತುಕೊಂಡು ಬಾ ಎಂದು ಕೋತಿ ಹೇಳಿತು ಪ್ರಪಂಚ ಇರುವವರೆಗೂ ಹೊಸತು ಹೊಸತು ಬರುತ್ತಲೇ ಇರುತ್ತದೆ ನಾವು ಹೊಸತನ್ನು ಕಲಿಯಲೇಬೇಕು ಆಗಾಗ ಅಪ್ ಡೇಟ್ ಆಗುತ್ತಿರಲೇಬೇಕು.

ಅಂಬಾಸಿಡರ್ ಕಾರ್ ಅಂದಿನ ಕಾಲಕ್ಕೆ ತುಂಬಾ ಪ್ರಖ್ಯಾತಿ ಪಡೆದಿತ್ತು ಪ್ರಧಾನಮಂತ್ರಿಯವರನ್ನು ಪ್ರಯಾಣ ಮಾಡುವುದಕ್ಕೆ ಅಂಬಾಸಿಟರ್ ಕಾರ್ ನೇ ಬಳಸಿಕೊಳ್ಳುತ್ತಿದ್ದರು ಆದರೆ ಇಂದು ಅದರ ಹೆಸರೇ ಇಲ್ಲ ಮೂಲೆ ಗುಂಪಾಗಿದೆ ಯಾವುದೇ ವಸ್ತು ಈಗ ನಾವು ಖರೀದಿ ಮಾಡಬೇಕಾದರೆ ಈಗಿನ ಕಾಲಕ್ಕೆ ತಕ್ಕಂತೆ ಇದ್ದರೆ ಮಾತ್ರ ಖರೀದಿ ಮಾಡುತ್ತೇವೆ ಹಾಗೆಯೇ ನಾವು ಕೂಡ ಈ ಕಾಲಕ್ಕೆ ತಕ್ಕಂತೆ ಅಪ್ಡೇಟ್ ಆಗಿರಬೇಕು ಇಲ್ಲದಿದ್ದರೆ ನಮ್ಮನ್ನು ಸಹಜವಾಗಿ ಮರೆತುಬಿಡುತ್ತಾರೆ. 

ಸಾಧಾರಣವಾಗಿ ಜಿಂಕೆ ಯಾವಾಗಲೂ ಜಿಂಕೆಗಳ ಜೊತೆಯಲ್ಲೇ ಇರುತ್ತದೆ ಹುಲಿ ಅಟ್ಟಿಸಿಕೊಂಡು ಬಂದಾಗ ಜಿಂಕೆಗಳು ತುಂಬಾ ವೇಗವಾಗಿ ಓಡುತ್ತವೆ ಯಾವ ಜಿಂಕೆ ನಿಧಾನವಾಗಿ ಓಡುತ್ತೋ ಆ ಜಿಂಕೆ ಹುಲಿಗೆ ಆಹಾರವಾಗುತ್ತದೆ ನಾವು ಕೂಡ ಅಷ್ಟೇ ಈ ಪ್ರಪಂಚ ಶರವೇಗದಲ್ಲಿ ಓಡುತ್ತಿದೆ ಹಾಗೆಯೇ ನಾವು ಕೂಡ ಅದೇ ವೇಗದಲ್ಲಿ ಓಡಬೇಕು ಇಲ್ಲದಿದ್ದರೆ ನಾವು ಹಿಂದೆ ಉಳಿದುಬಿಡುತ್ತೇವೆ ಹಾಗಾಗಿ ಸಾಧ್ಯವಾದಷ್ಟು ಅಪ್ಡೇಟ್ ಆಗುತ್ತಿರೋಣ.

ಈ ಕೆಳಗಿನ ಪ್ರಶ್ನೆಗಳಿಗೆ ಪ್ರಾಮಾಣಿಕ ಉತ್ತರವನ್ನು ಬರೆಯಿರಿ.

1) ನನ್ನ ಬದುಕಿನ ಉದ್ದೇಶವೇನು? ಇಂದು ನನಗೆ ಏನು ಅರ್ಥವಾಯಿತು ನನ್ನ ಭಾವನೆಗಳಿಗೆ ಹೇಗೆ ಸ್ಪಂದಿಸಿದೆ, ನಾನು ಹೇಗೆ ವರ್ತಿಸಿದೆನು ಅದರ ಪರಿಣಾಮ ಏನಾಯಿತು? ನಾನು ಹೇಗೆ ವರ್ತಿಸಬಹುದಾಗಿತ್ತು?

2) ನನ್ನ ಪ್ರಬಲವಾದ ಬಯಕೆ ಏನು /ನನ್ನ ಕನಸು ಏನು? ನನ್ನ ಬಯಕೆ/ಕನಸು (SMART) ಸ್ಮಾರ್ಟ್ ಆಗಿ ಇದೆಯೇ? ಉದಾಹರಣೆ ಒಂದು ಕಾರ್ ಖರೀದಿಸಬೇಕು? (Select) ಆಯ್ಕೆ ಯಾವ ಕಂಪೆನಿ, ಯಾವ ಬ್ರಾಂಡ್’, ಯಾವ ಮಾಡೆಲ್, ಯಾವ ಕಲರ್? (Measurable) ಬೆಲೆ ಎಷ್ಟು? (Achievable) ಸಾಧ್ಯವೇ? (Risk) ಈ ಸಾಹಸ, ಈ ರಿಸ್ಕ್ ಪೂರ್ಣಗೊಳಿಸಿದರೆ? (Time Date) ಯಾವ ಸಮಯ ಯಾವ ದಿನಕ್ಕೆ ಖರೀದಿಸುತ್ತೇನೆ?

3) ನನ್ನ ಒಂದು ದಿನದ, ಒಂದು ವಾರದ, ಒಂದು ತಿಂಗಳ, ಒಂದು ವರ್ಷದ, ಗುರಿ ಏನು? ಇಂದು ನಾನು ನನ್ನ ಗುರಿಯ ಮಾರ್ಗದಲ್ಲಿ ಹೋಗುತ್ತಿದ್ದೇನೆಯೇ? ಆ ಗುರಿಗಾಗಿ ಇಂದು ನಾನು ಎಷ್ಟು ಶ್ರಮಿಸಿದೆ? ಅದರ ಫಲಿತಾಂಶ ಏನಾಯಿತು?

4) ನನ್ನ ಆಲೋಚನೆಗಳ ಮೇಲೆ ನನಗೆ ನಿಯಂತ್ರಣ ಇದೆಯೇ? ಇಂದು ನಾನು ಏಕಾಂತದಲ್ಲಿ ಮುಂದಿನ 5/10 ವರ್ಷದಲ್ಲಿ 1) ನನ್ನ ಕುಟುಂಬ ಹೇಗಿರಬೇಕು?  2) ವೈಯಕ್ತಿಕವಾಗಿ 3) ವೃತ್ತಿಯಲ್ಲಿ/ವ್ಯವಹಾರದಲ್ಲಿ 4) ಸಾಮಾಜಿಕವಾಗಿ 5) ಎಷ್ಟು ಪ್ರವಾಸಗಳು ಹೋಗಬೇಕು ಎಂಬ ಸ್ಪಷ್ಟವಾದ ಚಿತ್ರಣ ಇದೆಯೇ /ನನಗೆ ನನ್ನ ಮೇಲೆ ಸಂಪೂರ್ಣ ವಿಶ್ವಾಸ ಇದೆಯೇ? ಇದ್ದರೆ ಅದಕ್ಕೆ ಆಳವಾಗಿ ಆಲೋಚನೆ ಮಾಡಿದ್ದೇನೆಯೇ?

5) ಇಂದು ನಾನು ಹೊಸದಾಗಿ ಏನು ಕೇಳಿದ್ದೇನೆ, ನೋಡಿದ್ದೇನೆ, ಓದಿದ್ದೇನೆ, ಮಾಡಿದ್ದೇನೆ, ಕಲಿತಿದ್ದೇನೆ, ಆಲೋಚನೆ ಮಾಡಿದ್ದೇನೆ?

Leave a Comment