ದಿಂಬಿನ ಕೆಳಗೆ ಹಣ ಇಡುತ್ತಿದ್ದೆ

ಒಬ್ಬ ವಯಸ್ಸಾದವರು ಒಂದು ಊರಿಗೆ ಬಂದು ಊರಿನಲ್ಲಿ ಒಂದು ವಾರದವರೆಗೆ ಇರಬೇಕು ಎಂದು ಒಂದು ಕೊಠಡಿಯನ್ನು ಬಾಡಿಗೆಗೆ ಪಡೆಯುತ್ತಾರೆ ಅಲ್ಲಿಯ ನಿಯಮವೇನೆಂದರೆ ಒಂದು ಕೊಠಡಿಯನ್ನು ಇಬ್ಬರಿಗೆ ಮಾತ್ರ ಕೊಡುತ್ತಾರೆ (ಕಾಮನ್ ಬೆಡ್) ಒಬ್ಬ ಯುವಕ ವಯಸ್ಸಾದವರು ಇಬ್ಬರು ಸೇರಿ ಕೊಠಡಿಯನ್ನು ಬಾಡಿಗೆಗೆ ಪಡೆಯುತ್ತಾರೆ. 

ಇಬ್ಬರು ಕೂಡ ಒಂದೇ ಕೊಠಡಿಯಲ್ಲಿ ಇರುತ್ತಾರೆ. ವಯಸ್ಸಾದವರು ಬೆಳಿಗ್ಗೆ ಎಲ್ಲಾ ಕಡೆ ಓಡಾಡಿಕೊಂಡು ಸಂಜೆ ಆ ಕೊಠಡಿಯಲ್ಲಿ ಬಂದು ಮಲಗುತ್ತಾರೆ ವಯಸ್ಸಾದವರ ಬಳಿ ಹೆಚ್ಚಾಗಿ ಹಣ ಇರುತ್ತೆ ವಯಸ್ಸಾದವರು ಎಣಿಸುತ್ತಿರುತ್ತಾರೆ.

 ಇದನ್ನು ಗಮನಿಸಿದ ಯುವಕನ ಮನದಲ್ಲಿ ಒಂದು ಯೋಚನೆ ಬರುತ್ತೆ ಹೇಗಾದರೂ ಮಾಡಿ ಈ ಹಣವನ್ನು ನಾನು ಕಳ್ಳತನ ಮಾಡಿಕೊಳ್ಳೋಣ ಎಂದು ವಯಸ್ಸಾದವರು ಸ್ನಾನಕ್ಕೆ ಅಥವಾ ಕೊಠಡಿಯ ಹೊರಗೆ ಹೋದಾಗ ಯುವಕನು ವಯಸ್ಸಾದವರ ಸೂಟ್ ಕೇಸ್, ಬ್ಯಾಗ್, ಶರ್ಟ್, ಪ್ಯಾಂಟ್, ಶೂ, ಹಾಸಿಗೆ, ದಿಂಬು, ಇತ್ಯಾದಿಗಳನ್ನೆಲ್ಲ ಪರಿಶೀಲಿಸುತ್ತಾ ಇರುತ್ತಾನೆ.

ಎಷ್ಟೇ ಹುಡುಕಿದರು ಹಣ ಸಿಗಲ್ಲ ಮತ್ತೆ ಸಂಜೆ ಅದೇ ರೀತಿ ವಯಸ್ಸಾದವರು ಹಣ ಎಣಿಸುತ್ತಿರುತ್ತಾರೆ ಹೀಗೆ ಒಂದು ವಾರವೂ ಕಳೆಯುತ್ತಾ ಬರುತ್ತದೆ ಆದರೂ ಆ ಹಣ ವಯಸ್ಸಾದವರಿಂದ ಕದಿಯಲಿಕ್ಕೆ ಸಾದ್ಯವಾಗಿರುವುದಿಲ್ಲ ಕೊನೆಗೆ ಇನ್ನೇನು ವಯಸ್ಸಾದವರು ಕೊಠಡಿಯನ್ನು ಬಿಟ್ಟು ಹೋಗಬೇಕಾದರೆ ಯುವಕನು ವಯಸ್ಸಾದವರಿಗೆ ಬಂದು ಕಾಲು ಮುಗಿದು ಕೇಳುತ್ತಾನೆ.

 ಹಿರಿಯರೇ ನಾನು ಒಂದು ವಾರದಿಂದ ನಿಮ್ಮ ಬಳಿ ಇರುವ ಹಣವನ್ನು ಕದಿಯಲು ಪ್ರಯತ್ನಿಸಿದೆ ಆದರೂ ನಾನು ಕದಿಯಲಿಕ್ಕೆ ಆಗಲಿಲ್ಲ ನೀವು ದಿನನಿತ್ಯ ಎಲ್ಲಿ ಬಚ್ಚಿಡುತ್ತ ಇದ್ದೀರಿ ದಯವಿಟ್ಟು ಹೇಳಿ ಎನ್ನುತ್ತಾನೆ ಆಗ ಆಗ ವಯಸ್ಸಾದವರು ಮುಗುಳ್ ನಗುತ್ತಾ ಹೇಳುತ್ತಾರೆ.

 ಮೊದಲನೇ ದಿನವೇ ನಾನು ನಿನ್ನನ್ನು ನೋಡಿದ ಕೂಡಲೇ ತಿಳಿದುಕೊಂಡೆ ನೀನು ನನ್ನ ಹಣಕ್ಕೆ ಹೊಂಚು ಹೂಡುತ್ತಿದ್ದಿಯಾ ಎಂದು ಅರ್ಥಮಾಡಿಕೊಂಡೆ  ನೀನು ನನ್ನ ಸೂಟ್ ಕೇಸ್, ಬ್ಯಾಗ್, ಚಪ್ಪಲಿ, ಹಾಸಿಗೆ, ದಿಂಬು, ಎಲ್ಲವೂ ಚೆಕ್ ಮಾಡುತ್ತಿದ್ದೆ, ಪರಿಶೀಲಿಸುತ್ತಿದ್ದೆ  ಅಲ್ಲವೇ ಹೌದು ನೋಡು ನಾನು ಎಲ್ಲಿ ಇಡುತ್ತಿದ್ದೆ ಎಂದರೆ ನಿನ್ನ ದಿಂಬಿನ ಕೆಳಗೆ ಹಣ ಇಡುತ್ತಿದ್ದೆ ಎಂದು ಅವನ ಮುಂದೆಯೇ ಯುವಕನ ದಿಂಬನ್ನು ಎತ್ತಿ ತನ್ನ ಹಣವನ್ನು ಎತ್ತಿಕೊಂಡು ಮತ್ತೆ ಎಣಿಸುತ್ತಾರೆ.

ನೀನು ನಿನ್ನ ದಿಂಬು, ನಿನ್ನ ಹಾಸಿಗೆ, ಪರಿಶೀಲಿಸಿದರೆ ಸಾಕಾಗಿತ್ತು ಅದು ಬಿಟ್ಟು ನೀನು ವ್ಯರ್ಥ ಪ್ರಯತ್ನ ಮಾಡಿದೆ ಕಷ್ಟ ಪಟ್ಟೆ ಸಾಮಾನ್ಯವಾಗಿ ಬಹಳಷ್ಟು ಮಂದಿ ಹೀಗೆ ಮಾಡುತ್ತಾರೆ ಎಲ್ಲರೂ ತನ್ನಲ್ಲಿರುವುದನ್ನು ಬಿಟ್ಟು ಬೇರೆ ಎಲ್ಲಿರುವುದನ್ನು ಹುಡುಕಲಿಕ್ಕೆ ಹೋಗುತ್ತಾರೆ ಎಂದು ಹಿರಿಯರು ಹೇಳುತ್ತಾರೆ.

ನನ್ನನ್ನು ನಾನೇ ಅರ್ಥಮಾಡಿಕೊಳ್ಳಲಿಲ್ಲ ಅಂದರೆ ಬೇರೆಯವರನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಮೊಟ್ಟ ಮೊದಲು ತನ್ನ ಬಗ್ಗೆ ತಾನು ತಿಳಿದುಕೊಂಡು ನಂತರ ಬೇರೆಯವರ ಬಗ್ಗೆ ತಿಳಿದುಕೊಳ್ಳೋಣ.

ನನ್ನಲ್ಲೇ ದೋಷವಿತ್ತು

 

ಎರಡು ಇರುವೆಗಳು ಇದ್ದವು ಇವು ತುಂಬಾ ಆತ್ಮೀಯ ಸ್ನೇಹಿತರಾಗಿದ್ದರು ಒಮ್ಮೆ ಜೋರಾಗಿ ಬಿರುಗಾಳಿ ಬಂದಿತು ಇರುವೆಗಳು ಬೇರೆ ಬೇರೆ ಯಾದವು ಒಂದು ಇರುವೆಯು ಬೇವಿನ ಮರದ ಕೆಳಗೆ ಬಿದ್ದಿತು ಇನ್ನೊಂದು ಬೆಲ್ಲದ ಗುಡ್ಡದಲ್ಲಿ ಬಿದ್ದಿತು.

 ನಂತರ ಎರಡೂ ಇರುವೆಗಳು ಅಳತೊಡಗಿದವು ತನ್ನ ಸ್ನೇಹಿತನಿಗಾಗಿ ದಿನ ಇರುವೆ ಚೆನ್ನಾಗಿರಲಿ ಎಂದು ಹಾರೈಸುತಿತ್ತು ಇಂದಲ್ಲ ನಾಳೆ ನನ್ನ ಸ್ನೇಹಿತ ಸಿಕ್ಕೇ ಸಿಗುತ್ತಾನೆ ಎಂಬ ನಂಬಿಕೆ ಇತ್ತು ಅದರಂತೆ ಬದುಕುತ್ತಿದ್ದವು.

ಅಲ್ಲಿ ಇಲ್ಲಿ ಸಿಗಬಹುದು ಎಂದು ಮನಸ್ಸಿನಲ್ಲಿ ಅಂದುಕೊಂಡು ಪ್ರಯಾಣ ಬೆಳೆಸಿತು ಆ ಕಡೆ ಯಿಂದ ಬೆಲ್ಲದ ಇರುವೆ ಈ ಕಡೆಯಿಂದ ಬೇವಿನ ಇರುವೆ ಪರಸ್ಪರ ನೋಡಿದಾಗ ತುಂಬಾ ಹರ್ಷಗೊಂಡವು ಬೆಲ್ಲದ ಇರುವೆ ಚೆನ್ನಾಗಿ ದಷ್ಟಪುಷ್ಟವಾಗಿ ಇತ್ತು ಬೇವಿನ ಇರುವೆ ಒಣಕಲಾಗಿ ಇತ್ತು. ಬೆಲ್ಲದ ಇರುವೆ ಹೇಳಿತು ನೀನು ತುಂಬ ಒಣಕಲಾಗಿದ್ದಿಯಾ ನಡಿ ನನ್ನ ಜೊತೆ ನನ್ನಂತೆ ನೀನು ಚೆನ್ನಾಗಿರು ಎಂದು ಕರೆದುಕೊಂಡು ಬಂತು ಬೇವಿನ ಇರುವೆ ಬಹಳಷ್ಟು ಸಾರಿ ಬೆಲ್ಲ ತಿನ್ನುತ್ತಿದ್ದರು ದಪ್ಪವಾಗಲಿಲ್ಲ ಬೆಲ್ಲದ ಇರುವೆ ಕೇಳಿತು.

 ನೀನು ಯಾಕೆ ಇನ್ನೂ ಸಣಕಲಾಗಿ ಇದೆಯಾ ಎಂದು ಕೇಳಿದಾಗ ಬೇವಿನ ಇರುವೆ ಹೇಳಿತು ಬೆಲ್ಲ ಸಿಹಿಯಾಗಿಲ್ಲ ಕಹಿಯಾಗಿದೆ ಎಂದಾಗ ಬೆಲ್ಲದ ಇರುವೆ ಹೇಳಿತು ಗೆಳೆಯಾ ಬೆಲ್ಲವು ಸಿಹಿಯಾಗಿದೆ ಆದರೆ ನಿನ್ನಲ್ಲೇ ಏನೋ ದೋಷ ಇರಬೇಕು ಎಂದು ಹೇಳಿತು.

 ನಂತರ ಬೆಲ್ಲದ ಇರುವೆ ಕಾರಣ ಏನು ಎಂದು ತಿಳಿದು ಇರುವೆಯ ಬಾಯಿಯನ್ನು ಸೂಕ್ಷ್ಮವಾಗಿ ಗಮನಿಸಿತು ಬಾಯಲಿ ಬೇವಿನಕಡ್ಡಿ ಇತ್ತು ಅದನ್ನು ತೆಗೆಯಿತು ನಂತರ ಕೇಳಿತು ಈಗ ಬೆಲ್ಲ ತಿನ್ನು ಎಂದಾಗ ಬೆಲ್ಲ ತಿಂದರೆ ಸಿಹಿಯಾಗಿತ್ತು ನಂತರ ಆ ಇರುವೆ ದಷ್ಟಪುಷ್ಟವಾಗಿ ಬೆಳೆಯಿತು.

 ನಂತರ ಬೇವಿನ ಇರುವೆ ಕ್ಷಮೆ ಕೇಳಿತ್ತು ನನ್ನಲ್ಲೇ ದೋಷವಿತ್ತು ವಿನಾಕಾರಣ ನಾನು ನಿನ್ನನ್ನು ದೂಷಿಸಿ ಬಿಟ್ಟೆ ಎಂದು ಹೇಳಿತು ಬೆಲ್ಲದ ಇರುವೆ ಹೇಳಿತ್ತು ನಿನ್ನಲ್ಲಿ ಇರುವ ದೋಷ ಅರಿತುಕೊಂಡೆ.

 ಈ ಪಾಠ ಕಲಿತೆ ಇದು ಜೀವನದಲ್ಲಿ ಎಲ್ಲರೂ ಅರ್ಥ ಮಾಡಿಕೊಳ್ಳಬೇಕಾದ ಪಾಠ ಇಂದು ನೀನು ಕಲಿತಿದ್ದೀಯಾ ಎಲ್ಲರ ಬಾಳು ಸಿಹಿಯಾಗಲಿ ಎಂದು ಹಾರೈಸಬೇಕು ಇದು ಬಾಳಿನ ಮಾದರಿ ಎಂದಿತು.

  ಕಾಲು ಎಳೆಯುತ್ತಲೇ ಇರುತ್ತಾರೆ

ಏಡಿಗಳನ್ನು ಸಾಗಾಣೆ ಮಾಡಬೇಕಾದರೆ ಅದಕ್ಕೆ ಟ್ಯಾಂಕರ್ ವಾಹನದಲ್ಲಿ ಸಾಗಣೆ ಮಾಡುತ್ತಾರೆ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಅಥವಾ ಈ ದೇಶದಿಂದ ಬೇರೆ ದೇಶಕ್ಕೆ ಸಾಗಣೆ ಮಾಡಬೇಕಾದರೆ ಏಡಿ ಗಳನ್ನು ಹಿಡಿದು ಟ್ಯಾಂಕರ್ ಒಳಗಡೆ ಹಾಕಿ ನಂತರ ಮುಚ್ಚಳ ಮುಚ್ಚಿ ಟ್ಯಾಂಕರ್ ಚಾಲನೆ ಮಾಡಿಕೊಂಡು ಹೋಗುತ್ತಾರೆ.

 ಒಂದು ಸಾರಿ ವಾಹನದ ಕಂಡಕ್ಟರ್ ಮರೆತು ಏಡಿಗಳು ಇರುವ ಟ್ಯಾಂಕರ್ ನ  ಮುಚ್ಚಳವನ್ನು ಮುಚ್ಚುವುದೇ ಇಲ್ಲ ವಾಹನ ಚಲಿಸುತ್ತಿದ್ದಾಗ ನೆನೆಪಿಸಿಕೊಳ್ಳುತ್ತಾನೆ ನಾನು ಮುಚ್ಚಳವನ್ನು ಮುಚ್ಚಿಲ್ಲಾ ಈಗ ನಾನು ಚಾಲಕನಿಗೆ ಹೇಳಿದರೆ ಚಾಲಕ ನನಗೆ ಬಯ್ಯುತ್ತಾರೆ ಎಂದು ಹೆದರಿಕೊಂಡನು.

 ಕೆಲಸದಿಂದ ತೆಗೆದು ಹಾಕುತ್ತಾರೆ ಎಂದು ಯೋಚಿಸಿ ಕಂಡಕ್ಟರ್ ಮನದಲ್ಲೇ ಭಯಭೀತನಾದನು ಮುಂದೆ ಚಾಲಕ ಎಲ್ಲಿ ನಿಲ್ಲಿಸುತ್ತಾನೋ ಅಲ್ಲಿ ಇಳಿದು ಮೊದಲು ಮುಚ್ಚೋಣ ಎಂದು ಮನದಲ್ಲಿ ಅಂದುಕೊಂಡಿರುತ್ತಾನೆ.

 ಚಾಲಕನು ವಾಹನವನ್ನು ನಿಲ್ಲಿಸಿ ಹೋಟಲ್ ಗೆ ಊಟ ಮಾಡಲಿಕ್ಕೆ ಎಂದು ಹೋದಾಗ ಮೊದಲು ಇಳಿದವನೇ ಹೋಗಿ ಮುಚ್ಚಳವನ್ನು ಮುಚ್ಚುತ್ತಾನೆ ಇದನ್ನು ನೋಡಿದ ಚಾಲಕ ಕಂಡಕ್ಟರ್ ನನ್ನು ಕರೆಯುತ್ತಾನೆ ಆಗ ಕಂಡಕ್ಟರ್ ಭಯಭೀತನಾಗಿ ಹೇಳುತ್ತಾನೆ.

 ನನ್ನನ್ನು ಕ್ಷಮಿಸಿಬಿಡಿ ನಾನು ಮರೆತು ಮುಚ್ಚಳವೇ ಮುಚ್ಚಿರಲಿಲ್ಲ ಆಗ ಚಾಲಕ ನಗುತ್ತಾ ಭಯಪಡಬೇಡ ಅವು ಏಡಿಗಳು ಒಂದು ಏಡಿ ಮೇಲಕ್ಕೆ ಹತ್ತಲು ಪ್ರಯತ್ನಿಸಿದರೆ ನೂರಾರು ಏಡಿಗಳು ಕೆಳಕ್ಕೆ ಎಳೆಯುತ್ತವೆ ಹೀಗೆ ಅವರ ಕೆಲಸ ಮುಂದುವರಿಯುತ್ತಲೇ ಇರುತ್ತದೆ.

 ಯಾವುದೇ ಕಾರಣಕ್ಕೂ ಅವು ಮೇಲೆ ಬರಲಾರವು ಎಂದು ಹೇಳುತ್ತಾನೆ. ನಾವು ನಮ್ಮನ್ನು ಅರ್ಥಮಾಡಿಕೊಂಡು ನಾವು ಸಾಧನೆ ಮಾಡಿ ಮುಂದೆ ಯಶಸ್ವಿಯಾಗಬೇಕು ಎಂದಾಗ? ಹಲವಾರು ಜನರು ನಮ್ಮನ್ನು ಕಾಲು ಎಳೆಯುತ್ತಲೇ ಇರುತ್ತಾರೆ ಅಡ್ಡ ಬರುತ್ತಾರೆ ಸೋಲಿಸುತ್ತಲೇ ಇರುತ್ತಾರೆ ಇವರನ್ನು ನಾವು ನೋಡಿ ಎಚ್ಚರಿಕೆಯಿಂದ ಮುನ್ನಡೆಯೋಣ.

  ಕೆಲಸಕ್ಕೆ ಸೇರಿಸಿಕೊಳ್ಳಲಿಲ್ಲ

 ಒಂದು ಊರಿನಲ್ಲಿ ಒಬ್ಬ ಯುವಕ ಅಂಗಡಿಯಲ್ಲಿ ನಾನು ಕೆಲಸ ಮಾಡುತ್ತೇನೆ ಎಂದು ಕೆಲಸ ಕೇಳುತ್ತಾನೆ ಮಾಲೀಕರು ಒಂದು ಡಬ್ಬವನ್ನು ನೀಡುತ್ತಾರೆ ಇದನ್ನು ಪಕ್ಕದ ಹಳ್ಳಿಯಲ್ಲಿ ಕೊಟ್ಟು ಇನ್ನೊಂದು ಡಬ್ಬವನ್ನು ನೀಡುತ್ತಾರೆ ಅದನ್ನು ತೆಗೆದುಕೊಂಡು ಬಾ ಎಂದು ಹೇಳುತ್ತಾರೆ ಯುವಕ ಮಾಲೀಕರು ಕೊಟ್ಟ ಡಬ್ಬವನ್ನು ಹಿಡಿದುಕೊಂಡು ಹೋಗುತ್ತಿರುತ್ತಾನೆ ನಂತರ ಯುವಕನು ಯೋಚನೆ ಮಾಡುತ್ತಾನೆ.

 ಡಬ್ಬದಲ್ಲಿ ಏನಿರಬಹುದು ಎಂಬ ಕುತೂಹಲ ನಂತರ ಡಬ್ಬವನ್ನು ಬಿಚ್ಚಿ ನೋಡುತ್ತಾನೆ ಡಬ್ಬದಲ್ಲಿ ಜಿಲೇಬಿಗಳು ಇರುತ್ತವೆ ಘಮಘಮ ವಾಸನೆ ಬರುತ್ತಿರುತ್ತದೆ ನಂತರ ಡಬ್ಬವನ್ನು ಮುಚ್ಚಿ ಸ್ವಲ್ಪ ದೂರ ಹೋಗುತ್ತಾನೆ ಮತ್ತೆ ಜಿಲೇಬಿಗಳನ್ನು ಎಣಿಸುತ್ತಾನೆ ಸರಿಯಾಗಿ 15 ಜಿಲೇಬಿಗಳು ಇರುತ್ತವೆ ಆಗ ಜಿಲೇಬಿಯ ಆಚೆ ಇರುವ ಒಂದು ಸುತ್ತನ್ನು ಕಿತ್ತು ತಿಂದು ಹಾಗೆ ಇಟ್ಟು ಮುಂದಿನ ಹಳ್ಳಿ ಬರುತ್ತದೆ ಕೊಡಬೇಕಾದವರಿಗೆ ನೀಡುತ್ತಾನೆ.

ಡಬ್ಬವನ್ನು ಪಡೆದು ಮತ್ತೊಂದು ಡಬ್ಬವನ್ನು ನೀಡುತ್ತಾರೆ ಸ್ವಲ್ಪ ದೂರ ಬಂದ ನಂತರ ಡಬ್ಬದಲ್ಲಿ ಏನಿದೆ ಎಂದು ಬಿಚ್ಚಿ ನೋಡುತ್ತಾನೆ ಅದರಲ್ಲಿ ಲಾಡುಗಳ ಘಮಘಮ ವಾಸನೆ ಬರುತ್ತಿತ್ತು ಮತ್ತು ಒಂದು ಚೀಟಿಯಲ್ಲಿ ಏನೋ ಬರೆದಿರುತ್ತಾರೆ. ಬರೆದಿರುವುದು ಏನೆಂದು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಏನಾದರೂ ಇರಲಿ ಎಂದು ಲಡ್ಡುಗಳಲ್ಲಿ ಸ್ವಲ್ಪ ಸ್ವಲ್ಪವನ್ನು ಕಿತ್ತು ತಿಂದು ಮತ್ತೆ ಲಾಡುಗಳು ಹೇಗೆ ಇದ್ದವು ಹಾಗೆ ಉಂಡೆ ಮಾಡಿಕೊಂಡು ಹೋಗಿ ಮಾಲೀಕರಿಗೆ ನೀಡುತ್ತಾನೆ.

 ಮಾಲೀಕರು ಡಬ್ಬವನ್ನು ಪರಿಶೀಲಿಸುತ್ತಾರೆ ಡಬ್ಬದಲ್ಲಿರುವ ಚೀಟಿಯನ್ನು ಓದಿ ನಂತರ ಯುವಕನನ್ನು ಕೆಲಸಕ್ಕೆ ಸೇರಿಸಿಕೊಳ್ಳುತ್ತಾರೆ ಯುವಕ ಕೇಳುತ್ತಾನೆ ಮಾಲೀಕರೇ ಬಹಳಷ್ಟು ಕೆಲಸಗಾರರು ಬಂದಿದ್ದರು ಅವರಿಗೆ ನೀವು ಕೆಲಸಕ್ಕೆ ಸೇರಿಸಿಕೊಳ್ಳಲಿಲ್ಲ ನನಗೆ ಮಾತ್ರ ನೀವು ಸೇರಿಸಿಕೊಂಡಿದ್ದೀರಲ್ಲ ಏನು ಕಾರಣ ಇರಬಹುದು ಎಂದು ಕೇಳುತ್ತಾನೆ ಆಗ ಮಾಲೀಕರು ವಿವರಿಸುತ್ತಾರೆ.

 ಕೆಲಸ ಕೇಳಿಕೊಂಡು ಬಂದರೆ ನಾನು ನೀಡುವ ಮೊದಲನೇ ಕೆಲಸವೇ ಇದು ನಾನು ಹದಿನೈದು ಜಿಲೇಬಿಗಳನ್ನು ಕೊಡುತ್ತೇನೆ ಆದರೆ ಬಹಳಷ್ಟು ಕೆಲಸಗಾರರು  ಮೂರು ನಾಲ್ಕು ಜಿಲ್ಲೆಗಳನ್ನು ತಿಂದು ಮಿಕ್ಕಿದ್ದು ಅಲ್ಲಿ ಕೊಡುತ್ತಾರೆ ಅವರು ಎಷ್ಟಿದೆ ಎಂದು ಲೆಕ್ಕಹಾಕಿ ಈ ಚೀಟಿಯಲ್ಲಿ ಬರೆದಿರುತ್ತಾರೆ ಮತ್ತೆ ಬರಬೇಕಾದರೂ ಅವರು ಲಾಡುವನ್ನು ಕೊಡುತ್ತಾರೆ.

 ಕೆಲವರು ಒಂದೆರಡು ಲಾಡುಗಳನ್ನು ತಿನ್ನುತ್ತಾರೆ ಅವರಿಗೆ ನಾನು ಕೆಲಸ ಕೊಡುವುದಿಲ್ಲ ಆದರೆ ನೀನು ಏನು ಮಾಡಿದ್ದೀಯಾ? 15 ಜಿಲೇಬಿಗಳನ್ನು ಕೊಟ್ಟಿದ್ದೇನೆ ನೀನು ಆಚೆಯ ಒಂದೊಂದು ಸುತ್ತನ್ನು ತಿಂದಿದ್ದೆಯಾ ಮತ್ತೆ ಬರಬೇಕಾದರೆ ಲಾಡುಗಳಲ್ಲಿ ಸ್ವಲ್ಪ ಸ್ವಲ್ಪವನ್ನು ತಿಂದು ಮತ್ತೆ ಲಾಡುವಿನಂತೆ ಉಂಡೆ ಮಾಡಿಕೊಂಡು ಬಂದಿದ್ದೀಯಾ ಇದು ಸಾಮಾನ್ಯ ಜ್ಞಾನ ತಿಳಿದಿರಬೇಕು ಇಂಥವರು ಮಾತ್ರ ನನಗೆ ಕೆಲಸಕ್ಕೆ ಬೇಕು ಎಂದು ಮಾಲೀಕರು ವಿವರಿಸುತ್ತಾರೆ.

 ದಿನನಿತ್ಯ ಚಪಾತಿ ಪಲ್ಯ

ಹಳ್ಳಿಯಿಂದ ಒಬ್ಬ ಯುವಕ ಬಂದು ಬಾಬಾ ಅವರಿಗೆ ಹೇಳಿದನು ನನಗೆ ಕೆಲಸದಿಂದ ಬೇಸರವಾಗಿದೆ ಏಕೆಂದರೆ ಇವತ್ತು ಇಲ್ಲಿ ನಾಳೆ ಬೇರೆ ಕಡೆ ಹೀಗೆ ತುಂಬಾ ಊರೂರು ಹಳ್ಳಿ ಹಳ್ಳಿಗಳಿಗೆ ಅಲೆಯಬೇಕು ನನಗೆ ಒಂದೇ ರೀತಿಯ ಕೆಲಸ ಇದ್ದರೆ ಚೆನ್ನಾಗಿರುತ್ತದೆ ಎಂದು ತನ್ನ ಸಮಸ್ಯೆಯನ್ನು ಹೇಳಿಕೊಂಡನು.

 ಆಗ ಬಾಬಾ ಅವರು ನೀನು ನನ್ನ ಆಶ್ರಮದಲ್ಲಿ ನಾಲ್ಕು ದಿನ ಇದ್ದರೆ ಇದಕ್ಕೆ ಪರಿಹಾರ ಸಿಗುತ್ತದೆ. ಎಂದು ಹೇಳಿದರು ಆಗ ಯುವಕನು ಪರಿಹಾರಕ್ಕೆ ಏನು ಬೇಕಾದರೂ ಮಾಡಲು ಸಿದ್ಧನಿದ್ದೇನೆ ಎಂದು ಯುವಕ ಹೇಳಿದನು ಬಾಬಾ ಅವರು ಯುವಕನನ್ನು ವಿಶೇಷ ಕೊಠಡಿಯ ವ್ಯವಸ್ಥೆ ಮಾಡಿದರು.

 ಆಶ್ರಮದಲ್ಲಿ ಬೆಳಿಗ್ಗೆ ಮಧ್ಯಾಹ್ನ ಸಂಜೆ ಏನೇನು ಕಾರ್ಯಕ್ರಮಗಳು ನಡೆಯುತ್ತದೆ ಅದಕ್ಕೆ ಬರಬೇಕು ಎಂದು ಆಜ್ಞೆ ಮಾಡಿದರು ಹಾಗೆಯೇ ಯುವಕನಿಗೆ ಒಂದೇ ರೀತಿಯ ಊಟವನ್ನು ಕೊಡಲು ಶುರು ಮಾಡಿದರು.

 ಅಂದರೆ ಬೆಳಿಗ್ಗೆ ಚಪಾತಿ ಪಲ್ಯ ಮಧ್ಯಾಹ್ನ ಚಪಾತಿ ಪಲ್ಯ ರಾತ್ರಿಯು ಚಪಾತಿ ಪಲ್ಯ ಇದರಿಂದ ಬೇಸತ್ತ ಯುವಕನು ಬಾಬಾ ಅವರಿಗೆ ಬಂದು ಹೇಳಿದನು ಬಾಬಾ ಅವರೇ ನನಗೆ ದಿನನಿತ್ಯ ಚಪಾತಿ ಪಲ್ಯ ಇದು ನನಗೆ ತುಂಬಾ ಬೇಸರವಾಗುತ್ತಿದೆ ಎಂದಾಗ ಬಾಬಾ ಅವರು ಹೇಳಿದರು.

 ನಿನಗೂ ಒಂದೇ ರೀತಿಯ ಬದುಕು ಇದ್ದರೆ ಸಂತೋಷ ಸಿಗುತ್ತದೆಯೇ? ಯೋಚನೆ ಮಾಡು ಎಂದು ಹೇಳಿದರು ಆಗ ಯುವಕನು ಅರ್ಥಮಾಡಿಕೊಂಡನು.

Leave a Comment