ಒಂದು ಊರಿನಲ್ಲಿ ಒಂದು ಹಳೆಯ ಮನೆ ಇತ್ತು ಆ ಮನೆಯಲ್ಲಿ ಹಲವಾರು ಸಾಕು ಪ್ರಾಣಿಗಳು ಇದ್ದವು ಬೆಕ್ಕು ನಾಯಿ ಇಲಿ ಕಪ್ಪೆ ಇತ್ಯಾದಿ ಇಲಿಮರಿ ತನ್ನ ತಾಯಿಗೆ ಹೇಳಿತು ಅಮ್ಮ ಒಂದು ಬೆಕ್ಕು ಸತ್ತು ಹೋಗಿದೆ.
ಆದುದರಿಂದ ನಾವು ಧೈರ್ಯವಾಗಿ ಓಡಾಡಬಹುದು ಎಂದಿತು ಆಗ ತಾಯಿ ಬೆಕ್ಕು ಸತ್ತು ಹೋಯಿತಾ? ಒಂದೆರಡು ನಿಮಿಷ ನೋಡು ನಂತರ ನನಗೆ ಹೇಳು ಎಂದಿತು ಸ್ವಲ್ಪ ಸಮಯ ತದೇಕ ಚಿತ್ತದಿಂದ ಗಮನಿಸುತ್ತಿತ್ತು ಅಷ್ಟರಲ್ಲಿ ಒಂದು ನಾಯಿಯೂ ಓಡುತ್ತಾ ಬರುತ್ತಿತ್ತು ಆಗ ಮಲಗಿದ ಬೆಕ್ಕು ದಿಕ್ಕು ದೆಸೆ ಇಲ್ಲದೆ ಎದ್ದು ಓಡಿ ಹೋಯಿತು.
ಆಗ ಅಮ್ಮ ಸತ್ತು ಹೋಗಿದೆ ಎಂದು ಹೇಳಿದೆ ಅದು ಸತ್ತು ಹೋಗಿಲ್ಲ ಬೆಕ್ಕು ನಾಟಕ ಮಾಡುತ್ತಿದೆ ಎಂದು ಹೇಳಿತು ತಾಯಿ ನಿರ್ಧಾರ ಮಾಡಬೇಕಾದರೆ ನಾವು ನೋಡಿದ ತಕ್ಷಣ ನಿರ್ಧಾರ ಮಾಡಬಾರದು ಎಂದು ಹೇಳಿತು.
ನಾವು ಕೂಡ ಎಷ್ಟೋ ಸಾರಿ ನಾವು ನೋಡಿದ್ದನ್ನು ಸುಲಭವಾಗಿ ನಂಬುತ್ತೇವೆ ಸ್ವಲ್ಪ ತಾಳ್ಮೆಯಿಂದ ಗ್ರಹಿಸಿ ಸರಿಯಾಗಿ ನೋಡಿ ಗಮನಿಸಿ ನಂತರ ನಿರ್ಧರಿಸೋಣ.
ಕಣ್ಣಿನ ಹತ್ತಿರ ಬರುತ್ತಿದ್ದಂತೆಯೇ
ಒಂದು ಊರಿನಲ್ಲಿ ಪ್ರಸಿದ್ಧ ಬಟ್ಟೆ ಹೊಲಿಯುವವನು ಇದ್ದನು ಒಳ್ಳೆಯ ಕೆಲಸಗಾರ ಮನಸ್ಸಿಗೆ ಒಪ್ಪುವಂತೆ ಚೆನ್ನಾಗಿ ಕೆಲಸ ಮಾಡಿಕೊಡುತ್ತಿದ್ದನು ಇದೇ ರೀತಿ ಇವನು ಪ್ರಸಿದ್ಧನಾಗುತ್ತಿದ್ದಂತೆಯೇ ಕೆಲಸಗಳು ಹೆಚ್ಚಾಗಿ ಬರತೊಡಗಿದವು ಆದರೆ ಕೆಲಸ ಬೇಗ ಮಾಡಿ ಮುಗಿಸುವುದು ಕಷ್ಟವಾಯಿತು.
ಬಟ್ಟೆ ಹೊಲಿಯುವವನು ಚಿಂತಿಸಿದ ಏನಾದರೂ ಮಾಡಿ ಒಂದು ಹೊಲಿಗೆ ಯಂತ್ರವನ್ನು ಕಂಡು ಹಿಡಿಯಬೇಕು ಎಲ್ಲವನ್ನೂ ತಯಾರು ಮಾಡಿದ ಆದರೆ ಸೂಜಿ ಹೇಗೆ ತಯಾರಿಸಬೇಕು ಎಂದು ದಿನನಿತ್ಯ ಚಿಂತಿಸುತ್ತಿದ್ದ ಆದರು ಉಪಾಯ ಹೊಳೆಯುತ್ತಿರಲಿಲ್ಲಒಂದು ಸಾರಿ ಬಟ್ಟೆ ಹೊಲಿಯುವವನಿಗೆ ಕನಸು ಬೀಳುತ್ತದೆ.
ಬಟ್ಟೆ ಹೊಲಿಯುವವನಿಗೆ ಕರೆದುಕೊಂಡು ಆಚೆ ಹಾಕಿ ಎಲ್ಲರೂ ಕೂಡ ಇವನನ್ನು ಬಯ್ಯುತ್ತಾರೆ ಹೀಯಾಳಿಸುತ್ತಾರೆ ಇವನನ್ನು ಮುಗಿಸಿಬಿಡಬೇಕು ಏಕೆಂದರೆ ಇವನು ಇಲ್ಲಿಯವರೆಗೆ ಒಂದು ಯಂತ್ರವನ್ನು ಕಂಡು ಹಿಡಿದಿಲ್ಲ ಎಂದಾಗ ಕೊನೆಗೆ ಒಬ್ಬ ಹೇಳುತ್ತಾನೆ.
ಇವನಿಗೆ ಭರ್ಚಿಯಿಂದ ಸಾಯಿಸಿಬಿಡಿ ಎಂದಾಗ ಅವನು ಹೇಳಿದಂತೆಯೇ ಭರ್ಚಿ ತೆಗೆದು ಚುಚ್ಚಕ್ಕೆ ಬರುತ್ತಾನೆ ಕಣ್ಣಿನ ಹತ್ತಿರ ಬರುತ್ತಿದ್ದಂತೆಯೇ ಇವನಿಗೆ ಅಲ್ಲಿ ಒಂದು ಚಿಕ್ಕ ರಂದ್ರ ಇರುತ್ತದೆ ಇದನ್ನು ನೋಡಿದಾಗ ಬಟ್ಟೆ ಹೊಲಿಯುವವನಿಗೆ ಜ್ಞಾನೋದಯವಾಗುತ್ತದೆ ಗಾಬರಿಯಾಗಿ ಏಳುತ್ತಾನೆ ಆಗ ಅವನಿಗೆ ತಿಳಿಯುತ್ತದೆ.
ಸೂಜಿಯನ್ನು ಗಮನಿಸಿದಾಗ ಸಾಮಾನ್ಯ ಸೂಜಿ ಒಂದು ಕಡೆ ಚೂಪಾಗಿ ಇದ್ದು ಇನ್ನೊಂದು ಕಡೆ ದಾರ ಹಾಕುತ್ತಾರೆ ಅದೇ ಚೂಪಾಗಿರುವ ಪಕ್ಕದಲ್ಲಿ ದಾರ ಹಾಕಿದರೆ ಬೇಗ ಕೆಲಸವಾಗುತ್ತದೆ ಎಂದು ನಂಬಿದ್ದನು.
ನಾನು ನೋಡಿದ್ದು ಕನಸು ಎಂದು ತಕ್ಷಣದಲ್ಲಿ ಅವನಿಗೆ ಒಂದು ಉಪಾಯ ಹೊಳೆಯುತ್ತದೆ ಸೂಚಿಯ ಸ್ವಲ್ಪ ಹಿಂದೆ ಒಂದು ರಂದ್ರ ಮಾಡಿದರೆ ಆ ಯಂತ್ರ ಉಪಯೋಗಿಸಬಹುದು ಎಂದು ಮುಂದೆ ಯಂತ್ರವನ್ನು ತಯಾರಿಸಿ ಪ್ರಸಿದ್ಧಿ ಪಡೆಯುತ್ತಾನೆ ನಾವೂ ಕೂಡ ಅಷ್ಟೆ ಹಗಲು ರಾತ್ರಿ ಚಿಂತನೆ ಮಾಡುತ್ತಿದ್ದರೆ ಹೊಸ ಉಪಾಯಗಳು ಉದ್ಭವವಾಗುತ್ತವೆ ಇದರಿಂದ ಮತ್ತಷ್ಟು ಸಾಧನೆ ಮಾಡಬಹುದಾಗಿದೆ.
ದುರಾಸೆಯ ಪರಿಣಾಮ
ಒಂದು ಊರಿನಲ್ಲಿ ದುರಾಸೆಯ ಒಬ್ಬ ಭಿಕ್ಷುಕ ಇರುತ್ತಾನೆ ಊರಿನ ಹೊರಗೆ ದೊಡ್ಡ ಮರವಿರುತ್ತದೆ ಅಲ್ಲಿ ದಿನನಿತ್ಯ ಭಿಕ್ಷೆ ಬೇಡುತ್ತಿರುತ್ತಾನೆ ಅಲ್ಲಿಗೆ ಒಂದು ಸಾರಿ ರಾಜ ಬರುತ್ತಾನೆ ಭಿಕ್ಷುಕನನ್ನು ನೋಡಿ ಮಾತನಾಡಿಸುತ್ತಾನೆ ಭಿಕ್ಷುಕನಲ್ಲಿ ಇರುವ ದುರಾಸೆಯನ್ನು ಅರ್ಥಮಾಡಿಕೊಳ್ಳುತ್ತಾನೆ.
ರಾಜನಾದವನು ನಾನು ನಿನಗೆ ಚಿನ್ನದ ನಾಣ್ಯಗಳನ್ನು ಕೊಡುತ್ತೇನೆ ನೀನು ಯಾವುದರಲ್ಲಿ ತೆಗೆದುಕೊಳ್ಳುತ್ತೀಯಾ ಎಂದು ಕೇಳುತ್ತಾರೆ ಆಗ ಭಿಕ್ಷುಕನು ತನ್ನ ಅಂಗಿಯನ್ನು ಬಿಚ್ಚಿ ಹಿಡಿದುಕೊಳ್ಳುತ್ತಾನೆ.
ರಾಜರು ಹೇಳುತ್ತಾರೆ ನಾನು ಚಿನ್ನದ ನಾಣ್ಯವನ್ನು ನಿನ್ನ ಅಂಗಿಯಲ್ಲಿ ಹಾಕುತ್ತಿರುತ್ತೇನೆ ನೀನು ಎಲ್ಲಿಯ ವರೆಗೆ ಬೇಡ ಎನ್ನುವುದಿಲ್ಲ ಅಲ್ಲಿಯವರೆಗೂ ಹಾಕುತ್ತಿರುತ್ತೇನೆ ಆದರೆ ಒಂದು ಕಂಡಿಷನ್ ಅದು ಏನೆಂದರೆ ನಾಣ್ಯಗಳು ಕೆಳಗೆ ಬಿದ್ದರೆ ಅದು ನೀನು ತೆಗೆದುಕೊಳ್ಳುವ ಹಾಗಿಲ್ಲ ಎಂದಾಗ ಮೂರ್ಖ ಭಿಕ್ಷುಕನು ಆಗಲಿ ಎನ್ನುತ್ತಾನೆ.
ರಾಜನು ಹೇಳಿದಂತೆ ನಾಣ್ಯಗಳನ್ನು ಅಂಗಿಯ ಮೇಲೆ ಹಾಕುತ್ತಲೇ ಇರುತ್ತಾನೆ ಭಿಕ್ಷುಕ ಸಾಕು ಎನ್ನುವುದಿಲ್ಲ ರಾಜನಾದವನು ನಾಣ್ಯಗಳನ್ನು ಹಾಕುತ್ತಲೇ ಇರುತ್ತಾನೆ ಇದರಿಂದ ಭಾರವಾಗಿ ಅಂಗಿ ಸಮೇತ ಚಿನ್ನದ ನಾಣ್ಯಗಳು ಕೆಳಗೆ ಬೀಳುತ್ತವೆ.
ಆಗ ರಾಜನು ಎಲ್ಲಾ ನಾಣ್ಯಗಳನ್ನು ವಾಪಸ್ ಪಡೆದು ಕೊಳ್ಳುತ್ತಾನೆ ಭಿಕ್ಷುಕ ಮತ್ತೆ ಅದೇ ಸ್ಥಿತಿಯಲ್ಲಿ ಇರುತ್ತಾನೆ ಏಕೆ ಹೀಗೆ ಆಯಿತು ಎಂದರೆ ದುರಾಸೆಯ ಪರಿಣಾಮ ಎಷ್ಟು ತೂಕ ತಡೆದು ತಡೆದುಕೊಳ್ಳುತ್ತದೆಯೋ ಅಷ್ಟಕ್ಕೆ ಸಾಕು ಎನ್ನಬಹುದಿತ್ತು ಆದರೆ ದುರಾಸೆಯಿಂದ ಎಲ್ಲವನ್ನು ಕಳೆದುಕೊಂಡ.
ಇನ್ನೂ ಪರೀಕ್ಷೆ ಮಾಡುತ್ತಿದ್ದಾರೆಯೇ?
ಒಂದು ಊರಿಗೆ ಒಬ್ಬ ಪದವಿ ಪಾಸ್ ಮಾಡಿಕೊಂಡು ಹೋಗುತ್ತಾನೆ ಅವನಿಗೆ ಒಂದು ಕೆಲಸ ಸಿಗುತ್ತದೆ ಕೆಲಸ ಏನು ಎಂದರೆ ನದಿಯ ನೀರನ್ನು ಪ್ರತಿ 2 ಗಂಟೆಗೆ ಒಂದೊಂದು ಸಾರಿ ಚೆಕ್ ಮಾಡಬೇಕು ನಂತರ ಪ್ರಯೋಗ ಶಾಲೆಗೆ ಕಳಿಸಬೇಕು.
ಇದು ಅಲ್ಲಿಯ ನಿಯಮ ಯುವಕನು ಕೂಡ ಅದರಂತೆಯೇ ಎರಡು ಗಂಟೆಗೆ ಸರಿಯಾಗಿ ಪರಿಶೀಲಿಸುತ್ತಾನೆ ಸರಿಯಾದ ಫಲಿತಾಂಶ ಬರುತ್ತಿರುತ್ತದೆ ನಂತರ ಯುವಕ ಯೋಚನೆಮಾಡಿ ಹೇಳುತ್ತಾನೆ ನಾವು ಪ್ರತಿ 2ಗಂಟೆಗೆ ಏಕೆ ಇದನ್ನು ಪರಿಶೀಲಿಸಬೇಕು ಇದು ಯಾಕೋ ಸರಿ ಇಲ್ಲ ಎಂದು ಯೋಚಿಸುತ್ತಾನೆ.
ದಿನಕ್ಕೆ ಒಂದು ಸಾರಿ ಪರಿಶೀಲನೆ ಮಾಡಿದರೆ ಸಾಕು ಎಂಬ ಅನಿಸಿಕೆ ಆದರೆ ಆಫೀಸಿನಲ್ಲಿ ಇರುವವರು ಯಾರೂ ಕೂಡ ಒಪ್ಪುವುದಿಲ್ಲ ಇದು ನಿಯಮ ನಡೆಯಲೇ ಬೇಕು ಎಂದು ಹೇಳುತ್ತಾರೆ ಆಗ ಚಾಣಾಕ್ಷ ಯುವಕ ಯೋಚನೆ ಮಾಡುತ್ತಾನೆ ಇದನ್ನು ಯಾರು ಜಾರಿಗೆ ತಂದವರು ನಾನು ಅವರನ್ನು ಮಾತನಾಡಿಸಿ ಬರುತ್ತೇನೆ ಎಂದು ಅವರ ವಿಳಾಸವನ್ನು ಪಡೆಯುತ್ತಾನೆ.
ಒಂದು ಹಳ್ಳಿಯಲ್ಲಿ ಹಿರಿಯರು ವಾಸವಾಗಿರುತ್ತಾರೆ ಆಗ ಈ ಹೊಸದಾಗಿ ಸೇರಿದವನು ತನ್ನ ಪರಿಚಯ ಮಾಡಿಕೊಂಡು ನೀವು ಪ್ರತಿ ಎರಡು ಗಂಟೆಗೆ ಏಕೆ ನೀರನ್ನು ನೀವು ಪರಿಶೀಲಿಸುತ್ತಿರಿ ಇದಕ್ಕೆ ಕಾರಣವೇನು ಎಂದು ಕೇಳುತ್ತಾನೆ.
ನೀವೇ ತಾನೆ ಜಾರಿಗೆ ತಂದವರು ಎಂದು ಹೇಳಿದಾಗ ಆ ಹಿರಿಯ ವ್ಯಕ್ತಿ ನಗುತ್ತಾರೆ ಮೂರ್ಖರು ಇನ್ನೂ ಪರೀಕ್ಷೆ ಮಾಡುತ್ತಿದ್ದಾರೆಯೇ ಎಂದು ಕೇಳುತ್ತಾರೆ ಅದಕ್ಕೆ ಯುವಕ ಕೇಳುತ್ತಾನೆ ನೀವೇ ತಾನೆ ಅದನ್ನು ಪ್ರಾರಂಭಿಸಿದವರು ಎಂದಾಗ ಹೌದು ನಾನೇ ಇದನ್ನು ಪ್ರಾರಂಭಿಸಿದೆ
ಹಲವಾರು ವರ್ಷಗಳ ಹಿಂದೆ ಒಂದು ಕಂಪೆನಿಯ ಡ್ಯಾಂ ಒಡೆದು ಹೋಗಿ ನೀರಿಗೆ ಆಯಲ್ ಸೇರಿ ಮತ್ತೆ ಕಲುಷಿತ ನೀರು ಸೇರಿ ಬರುತ್ತಿತ್ತು ಆಗ ನಾನು ಪ್ರಾರಂಭಿಸಿದೆ ಜನರು ಒಳ್ಳೆಯ ನೀರು ಕುಡಿಯಬೇಕು ಕಲುಷಿತ ನೀರು ಕುಡಿಯಬಾರದು ಅದಕ್ಕೆ ನಾನು ಹೀಗೆ ಮಾಡಿದೆ ನೀರನ್ನು ತಪಾಸಣೆ ಮಾಡುತ್ತಿದೆ ಎಂದು ಹೇಳಿದನು.
ಹಲವಾರು ವರ್ಷಗಳ ನಂತರ ನಾನು ನಿವೃತ್ತಿಯಾದೆ ನಂತರ ಏನಾಯ್ತು ನನಗೆ ಗೊತ್ತಿಲ್ಲ ಹಿರಿಯರು ನೀರನ್ನು ಪ್ರತಿ ಎರಡು ಗಂಟೆಗೆ ಪರಿಶೀಲನೆ ಮಾಡುತ್ತಿದ್ದೆ ಹೇಳುತ್ತಾರೆ ಯುವಕ ಸರ್ಕಾರದವರು ಇದನ್ನು ಅದೇ ರೀತಿ ಮಾಡುತ್ತಿದ್ದಾರೆ ಎಂದು ಹೇಳಿದನು ಈಗ ಎಲ್ಲವೂ ಅಭಿವೃದ್ಧಿಯಾಗಿದೆ ಒಳ್ಳೆಯ ನದಿಯಾಗಿದೆ ಅದಕ್ಕೆ ಶುದ್ಧೀಕರಿಸಿ ನೀರು ಬಿಡುತ್ತಾರೆ.
ವೈಜ್ಞಾನಿಕವಾಗಿ ವ್ಯವಸ್ಥೆ ಮಾಡಿದ್ದಾರೆ ಆದರೆ ಈಗಲೂ ಸಹ ನೀರನ್ನು ಪರಿಶೀಲನೆ ಮಾಡುತ್ತಲೇ ಇದ್ದಾರಂತೆ ಹೀಗೆ ಕೆಲವು ನಿಯಮಗಳನ್ನು ಈಗಲೂ ಪಾಲಿಸುತ್ತಾ ಬಂದಿದ್ದಾರೆ ವೈಜ್ಞಾನಿಕವಾಗಿ ಪರಿಶೀಲಿಸಿದರೆ ಅರ್ಥವಾಗುತ್ತದೆ. ಯಾವುದೇ ನಿಯಮವಿರಲಿ ವೈಜ್ಞಾನಿಕವಾಗಿ ವಿವೇಚನೆಯಿಂದ ಅರ್ಥಮಾಡಿಕೊಳ್ಳೋಣ.
ಗುಂಡು ಕಲ್ಲಿನ ಸಾಂಬಾರು
ಒಂದು ಸಾರಿ ಬಾಬಾ ಅವರು ಊರಿಂದ ಊರಿಗೆ ಹೋಗಿ ಉಪನ್ಯಾಸಗಳನ್ನು ನೀಡುತ್ತಿರುತ್ತಾರೆ ಆದುದರಿಂದ ಅವರಿಗೆ ಅಲ್ಲಿಯೇ ಊಟದ ವ್ಯವಸ್ಥೆಗಳು ಆಗುತ್ತಿರುತ್ತದೆ ಒಂದು ಊರಿಗೆ ಬರುತ್ತಾರೆ ಅಲ್ಲಿ ಉಪನ್ಯಾಸ ನೀಡುತ್ತಾರೆ.
ಉಪನ್ಯಾಸ ಮುಗಿದ ನಂತರ ಯಾರೂ ಊಟ ತಿಂಡಿ ಕೊಡುವುದಿಲ್ಲ ಇರಲಿಕ್ಕೆ ಒಂದು ಶಾಲೆಯಲ್ಲಿ ಅವಕಾಶ ಮಾಡಿಕೊಡುತ್ತಾರೆ ಊಟ ಇಲ್ಲದೆ ನಾನು ಹೇಗೆ ಇರಬೇಕು ಎಂದು ಚಿಂತಿಸುತ್ತಾರೆ ಏನು ಮಾಡಬೇಕು ಎಂದು ಯೋಚಿಸಿದ ನಂತರ ಬಾಬಾ ಅವರು ಒಂದು ಉಪಾಯವನ್ನು ಕಂಡುಕೊಳ್ಳುತ್ತಾರೆ.
ಒಂದು ದೊಡ್ಡ ಪಾತ್ರೆ ಹಾಗೂ ಗುಂಡು ಕಲ್ಲನ್ನು ತರಿಸಿ ಅದರಲ್ಲಿ ನೀರು ಹಾಕಿ ಕಾಯಿಸುತ್ತಾ ಇರುತ್ತಾರೆ ಇದನ್ನು ನೋಡಿದ ಕೆಲವು ಹಿರಿಯರು ಹೇಳ್ತಾರೆ ಇದು ಏನು ಎಂದು ಕೇಳಿದಾಗ ಬಾಬಾ ಅವರು ಹೇಳುತ್ತಾರೆ ನಾನು ವಿಶೇಷವಾಗಿ ಗುಂಡು ಕಲ್ಲಿನ ಸಾಂಬಾರನ್ನು ಮಾಡುತ್ತಿದ್ದೇನೆ ಅದಕ್ಕೆ ತಾವುಗಳು ಇದಕ್ಕೆ ಏನು ಬೇಕಾದರೂ ಹಾಕಬಹುದು ಎಂದಾಗ ಈ ಮಾತು ಕೇಳಿದ ಎಲ್ಲರೂ ಕೂಡ ವಿಧವಿಧವಾದ ತರಕಾರಿ ಸೊಪ್ಪುಗಳು ಸಾಂಬಾರು ಮಾಡಲಿಕ್ಕೆ ಏನೇನು ಬೇಕು ಅದನ್ನು ತರುತ್ತಾರೆ. ಬಾಬಾ ಅವರು ಎಲ್ಲವನ್ನು ಸಮಪ್ರಮಾಣದಲ್ಲಿ ಹಾಕಿ ವಿಶೇಷ ಗುಂಡುಕಲ್ಲಿನ ಸಾಂಬಾರು ತಯಾರಿಸುತ್ತಾರೆ ಸಾಂಬಾರಿನಿಂದ ಘಮಘಮ ವಾಸನೆ ಬರುತ್ತಿರುತ್ತದೆ.
ಅನ್ನವು ಬೇಕಲ್ಲ ಹಾಗೆ ಇನ್ನೊಂದು ದೊಡ್ಡ ಪಾತ್ರೆಯನ್ನು ತರಿಸಿ ಪಾತ್ರೆಯಲ್ಲಿ ಎಲ್ಲರೂ ಒಂದು ಮುಷ್ಟಿಯಷ್ಟು ಅಕ್ಕಿಯನ್ನು ಹಾಕುತ್ತಾರೆ ನಂತರ ಅನ್ನ ತಯಾರಾಗುತ್ತದೆ ನಂತರ ಗುಂಡು ಕಲ್ಲಿನ ಸಾಂಬಾರಿಗೆ ಮತ್ತು ಅನ್ನಕ್ಕೆ ಪ್ರಾರ್ಥನೆ ಮಾಡಿ ಕೃತಜ್ಞತೆ ಸಲ್ಲಿಸಿ ಊರಿಗೆ ಊರೇ ರುಚಿ ರುಚಿಯಾದ ಊಟ ಮಾಡುತ್ತಾರೆ.
ಬಾಬಾ ಅವರು ಮಾಡಿದ ಉಪಾಯದಿಂದ ಬಾಬಾ ಅವರಿಗೆ ಒಳ್ಳೆಯ ಹೆಸರು ಬರುತ್ತದೆ ಮತ್ತೆ ಊಟವೂ ಸಿಗುತ್ತದೆ ನಂತರ ಊರಿನವರು ಹೊಗಳುತ್ತಾರೆ ಎಲ್ಲರೂ ಸೇರಿ ಒಂದೇ ಸಾರಿ ಊಟ ಮಾಡಿದಾಗ ಸಿಗುವ ಆನಂದ ವರ್ಣಿಸಲು ಸಾಧ್ಯವಿಲ್ಲ. ನನಗೆ ತುಂಬಾ ಹಸಿವಿದ್ದಾಗ ಚಾಲಾಕಿತನದಿಂದ ತೃಪ್ತಿಯಿಂದ ಊಟ ಮಾಡಿದ್ದೇನೆಯೇ.