ಒಂದು ಊರಿನಿಂದ ಆಚೆ ಒಂದು ಆಶ್ರಮ ಇರುತ್ತದೆ ಅಲ್ಲಿ ಹಲವಾರು ಶಿಷ್ಯರು ಶಿಕ್ಷಣವನ್ನು ಪಡೆಯುತ್ತಿರುತ್ತಾರೆ ಆ ಊರಿನಲ್ಲಿ ಒಂದು ಹಬ್ಬ ಬರುತ್ತದೆ ಆಗ ಅದರಲ್ಲಿ ಕೆಲವು ಶಿಷ್ಯರು ನಾವು ಊರಿಗೆ ಹೋಗಿ ಬರುತ್ತೇವೆ ಎಂದು ಕೇಳುತ್ತಾರೆ ಆಗ ಗುರುಗಳು ಹೇಳುತ್ತಾರೆ.
ನೀವು ಕಲಿಯಬೇಕಾಗಿರುವುದು ಇನ್ನೂ ಸಾಕಷ್ಟು ವಿದ್ಯೆ ಇದೆ ನಂತರ ನೀವು ಊರಿಗೆ ಹೋಗಬಹುದು ಎಂದು ಹೇಳುತ್ತಾರೆ ಆದರೆ ಶಿಷ್ಯರು ಇಲ್ಲ ನಾವು ಹೋಗಿದ್ದು ಬರುತ್ತೇವೆ ಎಂದು ಕಳಕಳಿಯಾಗಿ ಕೇಳಿಕೊಳ್ಳುತ್ತಾರೆ ಅದಕ್ಕೆ ಗುರುಗಳು ಹೋಗಿಬನ್ನಿ ಎಂದು ಆಶೀರ್ವದಿಸಿ ಕಳಿಸುತ್ತಾರೆ.
ಎಲ್ಲಾ ಶಿಷ್ಯರು ಸೇರಿ ಊರಿಗೆ ಬರುತ್ತಾರೆ ಎಲ್ಲಿಂದ ಬಂದಿದ್ದೀರಿ ಎಂದು ಕೇಳಿದಾಗ ಆಶ್ರಮದಿಂದ ಎಂದು ಹೇಳಿದಾಗ ಇನ್ನಷ್ಟು ಗೌರವಿಸುತ್ತಾರೆ ಶಿಷ್ಯರು ಬಂದಿದ್ದಾರೆ ಎಂದು ಅಲ್ಲಿಯ ರಾಜನಿಗೂ ತಿಳಿಯುತ್ತದೆ ಹಬ್ಬ ಇರುವುದರಿಂದ ಆ ಶಿಷ್ಯರನ್ನೂ ಸ್ವಾಗತಿಸಿ ಬರಮಾಡಿ ಕೊಳ್ಳುತ್ತಾರೆ.
ಶಿಷ್ಯರಿಗೆ ಒಂದು ಬೇರೆ ಕೊಠಡಿ ನೀಡುತ್ತಾರೆ ಮತ್ತು ಶಿಷ್ಯರಿಗೆ ಬೇಕಾದ ಸಕಲ ಸೌಲಭ್ಯವನ್ನು ಒದಗಿಸುತ್ತಾರೆ ಅದ್ದೂರಿಯಾಗಿ ಸಂಭ್ರಮಿಸುತ್ತಾರೆ ಕೊನೆಯ ದಿನವಾದ್ದರಿಂದ ಅಂದಿನ ಊಟ ತುಂಬಾ ಭರ್ಜರಿ ಊಟ ಊಟದ ನಂತರ ಮದ್ಯ ಕುಡಿಯುವುದು ಅಲ್ಲಿಯ ವಾಡಿಕೆ ಆದರೆ ಈ ಶಿಷ್ಯರಿಗೆ ತಿಳಿದಿರುವುದಿಲ್ಲ.
ಶಿಷ್ಯರು ಸಹ ಮದ್ಯವನ್ನು ಕುಡಿಯುತ್ತಾರೆ ನಂತರ ನಶೆ ಏರಿ ಶಿಷ್ಯರು ಕುಣಿದಾಡುತ್ತಾರೆ ನಲಿಯುತ್ತಾರೆ ನೃತ್ಯ ಮಾಡುತ್ತಾರೆ ಬೇಕಾದ ಹಾಗೆ ಅವ್ಯಾಚ ಶಬ್ದಗಳಿಂದ ಬಯ್ಯುತ್ತಾರೆ ತನ್ನ ನಿಯಂತ್ರಣ ಕಳೆದುಕೊಂಡು ತಮ್ಮ ಸಾಮಾನುಗಳನ್ನು ಚಲ್ಲಾಪಿಲ್ಲಿಯಾಗಿ ಬಿಸಾಕುತ್ತಾರೆ.
ಶಿಷ್ಯರ ಮನಸ್ಸು ಹತೋಟಿಯಲ್ಲಿ ಇರುವುದಿಲ್ಲ ನಂತರ ಎದ್ದ ಮೇಲೆ ನೋಡಿದಾಗ ತಾವು ಮಾಡಿದ ವರ್ತನೆಗೆ ನಾಚಿಕೆಯಾಗುತ್ತದೆ ನಾವೆಲ್ಲರೂ ಈ ರೀತಿ ಮಾಡಬಾರದಾಗಿತ್ತು ಎಂದು ಪಶ್ಚಾತ್ತಾಪ ಪಡುತ್ತಾರೆ.
ಚಲ್ಲಾಪಿಲ್ಲಿಯಾಗಿ ಎಸೆದಿದ್ದ ವಸ್ತುಗಳನ್ನು ಸರಿಯಾಗಿ ಜೋಡಿಸಿ ಅಲ್ಲಿಂದ ಹೊರಗೆ ಬರುತ್ತಾರೆ ಆಗ ಗುರುಗಳನ್ನು ನೆನಪಿಸಿಕೊಳ್ಳುತ್ತಾರೆ ಗುರುಗಳು ನಮಗೆ ಹೇಳಿದ್ದರು ಆದರೂ ನಾವು ಅರ್ಥಮಾಡಿಕೊಳ್ಳಲಿಲ್ಲ ವೆಂದು ನಂತರ ಆಶ್ರಮಕ್ಕೆ ಬರುತ್ತಾರೆ.
ಗುರುಗಳು ಶಿಷ್ಯರನ್ನು ಇವರನ್ನು ಸ್ವಾಗತಿಸಿ ಕೇಳುತ್ತಾರೆ ಹೇಗಿತ್ತು ಹಬ್ಬದ ಸಡಗರ ಎಂದಾಗ ಶಿಷ್ಯರು ನಡೆದ ಕಥೆಯಲ್ಲ ಹೇಳುತ್ತಾರೆ ಮತ್ತೆ ನಿಮ್ಮ ಮಾತು ನಾವು ಕೇಳಬೇಕಿತ್ತು ಆದರೆ ಕೇಳಲಿಲ್ಲ ತಪ್ಪು ಮಾಡಿದೆವು ಎಂದು ನಾಚಿಕೆಯಿಂದ ತಲೆ ತಗ್ಗಿಸುತ್ತಾರೆ. ಮುನ್ನೆಚ್ಚರಿಕೆ ನೀಡಿದ್ದರು ತಪ್ಪು ಮಾಡಿ ತಲೆ ತಗ್ಗಿಸಿದ್ದೇನೆಯೇ?
ಸ್ಪಷ್ಟವಾಗಿ ತಿಳಿಸಬೇಕು
ಒಂದು ಊರಿನಲ್ಲಿ ಸಂಸ್ಕಾರವಂತ ರಾಜನಿದ್ದನು ಪ್ರಾಮಾಣಿಕತೆಗೆ ಹೆಸರುವಾಸಿ ಯಾಗಿದ್ದನು ಹಾಗೆಯೇ ಅವರ ರಾಜ್ಯದಲ್ಲಿ ಎಲ್ಲರೂ ಕೂಡ ಕುಶಲದಿಂದ ಇದ್ದರು ಅಕ್ಕ ಪಕ್ಕ ಚಿಕ್ಕ ರಾಜ್ಯದವರು ಇವನನ್ನು ಅಸೂಯೆಪಟ್ಟು ಹೇಗಾದರೂ ಮಾಡಿ ಸೋಲಿಸಬೇಕು ಎಂದು ಚಿಂತೆ ಮಾಡಿ ಒಂದೇ ರೀತಿ ಇರುವ ಚಿನ್ನದ ಮೂರೂ ವಿಗ್ರಹಗಳನ್ನು ಕಳಿಸಿ ಅದರಲ್ಲಿ ಒಂದು ಚೀಟಿಯನ್ನು ಇಟ್ಟಿದ್ಲರು.
ಈ ಮೂರು ವಿಗ್ರಹಗಳು ಒಂದೇ ರೀತಿ ಇದೆ ಆದರೆ ಈ ಮೂರೂ ವಿಗ್ರಹಗಳಲ್ಲೂ ವ್ಯತ್ಯಾಸ ಇದೆ ಏನೂ ವ್ಯತ್ಯಾಸ ಇದೆ ಎಂಬುದನ್ನು ಸರಿಯಾಗಿ ನೀವು ಸ್ಪಷ್ಟವಾಗಿ ತಿಳಿಸಬೇಕು ಇಲ್ಲದಿದ್ದರೆ ನೀವು ಸೋತಂತೆ ಎಂದು ಬರೆದಿರುತ್ತದೆ ಇದನ್ನು ನೋಡಿದಾಗ ರಾಜನಿಗೆ ತಲೆ ಕೆಟ್ಟುಹೋಗುತ್ತದೆ ಸಮಸ್ಯೆ ಹೇಗೆ ಪರಿಹರಿಸಬೇಕು ಎಂದು ರಾತ್ರಿಯೆಲ್ಲಾ ಯೋಚನೆ ಮಾಡಿದಾಗ ರಾಜನಿಗೆ ಬಾಬಾ ಅವರ ನೆನಪಾಗುತ್ತದೆ.
ಸರಿಯಾದ ಪರಿಹಾರ ಬಾಬಾ ಅವರು ಮಾತ್ರ ಪರಿಹರಿಸುತ್ತಾರೆ ಎಂದು ಬಾಬಾ ಅವರ ಬಳಿ ಹೋಗಿ ಕೇಳಿಕೊಳ್ಳುತ್ತಾನೆ ಆಗ ಬಾಬಾ ಅವರು ಬರುತ್ತಾರೆ ಒಂದೊಂದೇ ವಿಗ್ರಹವನ್ನು ಕೂಲಂಕುಷವಾಗಿ ಪರೀಕ್ಷಿಸುತ್ತಾರೆ ಮೂರೂ ವಿಗ್ರಹಗಳಲ್ಲಿ ಎಡಕಿವಿಯಲ್ಲಿ ಒಂದು ಸಣ್ಣ ರಂಧ್ರವಿದೆ ನಂತರ ಒಂದು ಹಿತ್ತಾಳೆಯ ತಂತಿಯ ತರಿಸಿ ಎಡಕಿವಿಯಿಂದ ಹಾಕಿದಾಗ ವಿಗ್ರಹದಿಂದ ಬಾಯಿಗೆ ಬಂತು.
ಎರಡನೆಯ ವಿಗ್ರಹದ ಎಡ ಕಿವಿಯಿಂದ ತಂತಿ ಹಾಕಿದಾಗ ಅದು ನಿಧಾನ ವಾಗಿ ಬಲ ಕಿವಿಯಿಂದ ಬಂತು. ಮೂರನೆಯ ವಿಗ್ರಹ ಕ್ಕೆ ತಂತಿ ಹಾಕಿದಾಗ ಅದು ನಿಧಾನವಾಗಿ ಹೊಕ್ಕಳಿನಿಂದ ಬಂತು. ಇದನ್ನು ನೋಡಿದ ಬಾಬಾ ಅವರು ನಕ್ಕರು ಏಕೆ ಎಂದು ಕೇಳಿದಾಗ ಬಾಬಾ ಅವರು ಹೇಳಿದರು.
ಮೊದಲನೇ ವಿಗ್ರಹ ಸಾಮಾನ್ಯ ಜನರು ಇದ್ದಂತೆ ಕಿವಿಗೆ ಬಿದ್ದ ವಿಷಯವನ್ನು ಮತ್ತೊಬ್ಬರಿಗೆ ಹೇಳದಿದ್ದರೆ ಸಮಾಧಾನ ಇರುವುದಿಲ್ಲ ಯಾರಿಗಾದರೂ ಹೇಳಲೇ ಬೇಕು.
ಎರಡನೆಯ ವಿಗ್ರಹ ಜನರಲ್ಲಿ ಆಸಕ್ತಿ ಇರುವುದಿಲ್ಲ ಅವರಿಗೆ ಏನು ಹೇಳಿದರೂ ಎಡಕಿವಿಯಿಂದ ಕೇಳಿ ಬಲಕಿವಿಯಿಂದ ಬಿಟ್ಟುಬಿಡುತ್ತಾರೆ ಕೇಳಿದ ವಿಷಯದ ಬಗ್ಗೆ ಚಿಂತನೆ ಮಾಡುವುದೇ ಇಲ್ಲ ಮೂರನೇ ವಿಗ್ರಹ ಮಾತ್ರ ತುಂಬ ವಿಶಿಷ್ಟವಾದುದು ಇದು ಅಸಾಮಾನ್ಯ ಜನರೆಂದು ತೋರಿಸುತ್ತದೆ.
ಕೇಳಿದ ವಿಷಯವನ್ನು ಚೆನ್ನಾಗಿ ಅರಿತು ಒಳ್ಳೆಯದು ಕೆಟ್ಟದ್ದು ಏನು ಎಂಬುದನ್ನು ಗ್ರಹಿಸಿ ಆ ವಿಷಯವನ್ನು ತನ್ನಲ್ಲೇ ಇಟ್ಟುಕೊಳ್ಳುತ್ತಾರೆ ಸಮಯ ಬಂದಾಗ ಅದನ್ನು ಉಪಯೋಗಿಸಿಕೊಳ್ಳುತ್ತಾರೆ ಮತ್ತೆ ಇತರರ ರಹಸ್ಯವನ್ನು ಇವರು ಕಾಪಾಡುವವರು ಎಂದು ಹೇಳುತ್ತಾರೆ.
ರಾಜನಿಗೂ ಇವರ ಸಲಹೆ ತುಂಬಾ ಹಿಡಿಸಿತು ನಂತರ ಈ ಉತ್ತರವನ್ನು ಬೇರೆ ರಾಜ್ಯದವರಿಗೆ ಕಳಿಸಿದನು ನಮ್ಮ ಬದುಕಿನಲ್ಲಿಯೂ ಇಂತಹ ಜನರು ಕಣ್ಣು ಮುಂದೆಯೇ ಇರುತ್ತಾರೆ ಪರೀಕ್ಷಿಸಿದ ನಂತರ ನಂಬೋಣ.
ನಿನ್ನ ಸ್ಥಿತಿ ಏನಾಗುತ್ತದೆ
ಒಬ್ಬ ಚತುರ ವ್ಯಾಪಾರಿಯು ಹಳ್ಳಿಯಲ್ಲಿ ಇದ್ದನು ವ್ಯಾಪಾರಿಯು ಬೇರೆ ಬೇರೆ ಹಳ್ಳಿ ಹಳ್ಳಿಗೆ ಹೋಗಿ ಅಲ್ಲಿಂದ ಕೆಲವು ವಸ್ತುಗಳನ್ನು ಖರೀದಿಸಿಕೊಂಡು ಬಂದು ತನ್ನ ಹಳ್ಳಿಯಲ್ಲಿ ಮಾರುತಿದ್ದನು ದೊಡ್ಡ ಊರಿಗೆ ಹೋದರೆ ಅಲ್ಲೂ ಕೂಡ ಏನಾದರೂ ವಸ್ತುಗಳು ಸಿಗಬಹುದು ಎಂದು ಹೋದನು.
ಬೇರೆ ಊರಿಗೆ ಹೋದಾಗ ವ್ಯಾಪಾರಿ ಒಂದು ವಸತಿ ಗೃಹದಲ್ಲಿ ಉಳಿದು ಕೊಳ್ಳುವ ಸಂದರ್ಭಬಂತು ಅಲ್ಲಿ ಒಬ್ಬ ದೊಡ್ಡ ಜೂಜುಕೋರ ಇದ್ದನು ಅವನನ್ನು ಸೋಲಿಸಲು ಯಾರಿಂದಲೂ ಸಾಧ್ಯವಿರಲಿಲ್ಲ ಇಡೀ ಊರಿನಲ್ಲಿ ಪ್ರಸಿದ್ಧನಾಗಿದ್ದನು ಈ ಹೊಸ ವ್ಯಾಪಾರಿಗೆ ಕರೆದನು.
ಬಾ ನನ್ನ ಜೊತೆ ಜೂಜು ಆಡುವ ಎಂದನು ಹೇಗಾದರೂ ಆಗಲಿ ಎಂದು ವ್ಯಾಪಾರಿ ಜೂಜು ಆಡಲು ಆರಂಭಿಸಿದನು ವ್ಯಾಪಾರಿಗೆ ತಕ್ಷಣವೇ ತಿಳಿಯಿತು ಈ ಜೂಜು ಕೋರರು ಗೊತ್ತಿಲ್ಲದಂತೆ ದಾಳವನ್ನು ನುಂಗಿ ಕಳೆದು ಹೋಯಿತು ಎನ್ನುತ್ತಿದ್ದನು ಅಲ್ಲಿಗೆ ಆಟ ಮುಗಿಸಿ ನಾನೇ ಗೆದ್ದೆ ಎಂದು ಹೇಳಿಕೊಳ್ಳುತ್ತಿದ್ದನು.
ಈ ವ್ಯಾಪಾರಿಯು ಒಂದು ಸಾರಿ ಸೋತ ಮತ್ತೆ ಊರಿಗೆ ಬಂದನು ನಂತರ ಈ ವ್ಯಾಪಾರಿಯು ಜೂಜು ಕೋರನನ್ನು ಬುದ್ಧಿ ಕಲಿಸಬೇಕೆಂದು ಇವನೇ ಬೇರೆ ವಾಕರಿಕೆ ಬರುವಂತಹ ದಾಳಗಳನ್ನು ಮಾಡಿಕೊಂಡು ಹೋದನು ಮತ್ತೆ ಆಟ ಆರಂಭಿಸಿದಾಗ ಮತ್ತೆ ದಾಳವನ್ನು ನುಂಗಿಬಿಟ್ಟನು.
ವ್ಯಾಪಾರಿಯು ಹೇಳಿದನು ನೀನು ದಾಳವನ್ನು ನುಂಗುತ್ತಿಯ ಎಂದು ನನಗೆ ಗೊತ್ತಿತ್ತು ನೋಡು ಈಗ ನಿನ್ನ ಸ್ಥಿತಿ ಏನಾಗುತ್ತದೆ ಎಂದನು ಸ್ವಲ್ಪ ಸಮಯದಲ್ಲಿಯೇ ವಾಕರಿಕೆ ವಾಂತಿ ಬಂತು ತಲೆಸುತ್ತುತಾ ಇತ್ತು ನಂತರ ವಾಂತಿ ನಿಲ್ಲಿಸುವ ಔಷಧವನ್ನು ಕೂಡ ವ್ಯಾಪಾರಿ ಜೂಜುಗಾರನಿಗೆ ತಂದಿದ್ದನು.
ಜೂಜುಗಾರನಿಗೆ ಔಷಧವನ್ನು ಕುಡಿಸಿದನು ಜೂಜುಗಾರನಿಗೆ ಅರಿವಾಯಿತು ನಂತರ ಯಾರಿಗೂ ಮೋಸ ಮಾಡುವುದಿಲ್ಲವೆಂದು ಪ್ರಮಾಣ ಮಾಡಿದನು ಕೆಲವರು ಮೋಸ ಮಾಡುವವರು ಇದ್ದೇ ಇರುತ್ತಾರೆ ಅವರಿಗೆ ಸರಿಯಾದ ಸಮಯ ನೋಡಿ ಬುದ್ದಿ ಕಲಿಸುವುದು ಒಳ್ಳೆಯದು ಅಥವಾ ಇವರಿಂದ ದೂರ ಇರುವುದೇ ಇನ್ನೂ ಒಳ್ಳೆಯದು.
ತಲೆಯ ಮೇಲೆ ಇಟ್ಟುಕೊಂಡು
ಒಂದು ಸಾರಿ ಊರಿನ ಮಹಾ ಜಿಪುಣ ಶ್ರೀಮಂತ ಬೇರೆ ಊರಿಗೆ ಹೋಗಬೇಕಾಯಿತು ಆದುದರಿಂದ ಮಹಾ ಜಿಪುಣ ಈ ಸಾರಿಯ ರೈಲಿನಲ್ಲಿ ಹೋಗಬೇಕೆಂದು ನಿಶ್ಚಯಿಸಿದನು ಅದಕ್ಕಾಗಿ ಒಂದು ದಿನ ಗೊತ್ತು ಮಾಡಿ ಮಹಾ ಜಿಪುಣ ತನ್ನ ಜೊತೆಯಲ್ಲಿ ಹೆಚ್ಚು ಸಾಮಾನುಗಳನ್ನು ತೆಗೆದುಕೊಂಡು ರೈಲ್ವೇ ನಿಲ್ದಾಣಕ್ಕೆ ಹೋದನು.
ಆಗ ಅಲ್ಲಿಯ ಕೂಲಿಯವನು ನೋಡಿ ಇಷ್ಟು ಹೆಚ್ಚು ಸಾಮಾನುಗಳು ರೈಲಿನಲ್ಲಿ ಒಯ್ಯಲು ಸಾಧ್ಯವಿಲ್ಲ ಒಬ್ಬ ಮನುಷ್ಯನಿಗೆ ನಲವತ್ತು ಕೆಜಿ ಮಾತ್ರ ಜೊತೆಯಲ್ಲಿ ತೆಗೆದುಕೊಂಡು ಹೋಗಬಹುದು ಅಥವಾ ಇನ್ನೂ ಹೆಚ್ಚು ಸಾಮಾನುಗಳು ಇದ್ದರೆ ಅದನ್ನು ತೂಕ ಹಾಕಿಸಿ ಅದಕ್ಕೆ ಬೇರೆ ಟಿಕೇಟನ್ನು ಪಡೆದು ಪ್ರಯಾಣ ಮಾಡಬಹುದಾಗಿದೆ ಎಂದು ಹೇಳಿದನು.
ಮಹಾ ಜಿಪುಣ ಶ್ರೀಮಂತನು ಎಲ್ಲಾ ಸಾಮಾನುಗಳನ್ನು ತೂಕ ಮಾಡಿದನು ನಲವತ್ತು ಕೆ ಜಿ ಯಷ್ಟು ಇಟ್ಟು ಇನ್ನೊಂದನ್ನು ಬೇರೆ ಚೀಲಕ್ಕೆ ತುಂಬಿದನು ಅಲ್ಲಿಗೆ ಒಂದು ಗಂಟು ಮೂಟೆ ಸೀಟಿನ ಅಕ್ಕಪಕ್ಕ ಇಟ್ಟು ನಂತರ ಮಿಕ್ಕಿದ ಸುಮಾರು ಹದಿನೈದು ಕೆಜಿ ಇರುವ ಒಂದು ಮೂಟೆಯನ್ನು ತಲೆಯ ಮೇಲೆ ಇಟ್ಟುಕೊಂಡು ಪ್ರಯಾಣ ಮುಂದುವರೆಸಿದನು.
ಇತರ ಸಹ ಪ್ರಯಾಣಿಕರು ಕೇಳಿದರು ಏಕೆ ನೀವು ತಲೆಯ ಮೇಲೆ ಗಂಟು ಇಟ್ಟುಕೊಂಡಿದ್ದೀರಿ ಅದು ಕೆಳಗೆ ಇಡಬಹುದಲ್ಲವೇ ಎಂದಾಗ ಮಹಾ ಜಿಪುಣ ಹೇಳಿದನು ಇಲ್ಲ ನಲವತ್ತು ಕೆಜಿ ಮಾತ್ರ ಒಬ್ಬರು ತೆಗೆದುಕೊಂಡು ಹೋಗಬಹುದು ಆದರೆ ಇದು ಹೆಚ್ಚಾಗಿದೆ ಆದ್ದರಿಂದ ನಾನೇ ಇದನ್ನು ಹೊತ್ತುಕೊಂಡಿದ್ದೇನೆ ಎಂದು ಹೇಳಿದನು.
ಮಹಾ ಜಿಪುಣ ಹೇಳಿದ ಮಾತಿಗೆ ಇತರ ಪ್ರಯಾಣಿಕರು ಮನಸಲ್ಲಿ ನಕ್ಕರು ಕೊನೆಗೆ ಚೆಕಿಂಗ್ ಮಾಡುವವನು ಬಂದನು ಮಹಾ ಜಿಪುಣ ಶ್ರೀಮಂತನನ್ನು ಕೇಳಿದರು ಏಕೆ ತಲೆಯ ಮೇಲೆ ಇಟ್ಟುಕೊಂಡಿದ್ದೀರಿ ಮಹಾ ಜಿಪುಣ ಶ್ರೀಮಂತನು ನಾನು ಬಂದಿರುವುದಕ್ಕೆ ಟಿಕೆಟ್ ಇದೆ ನಲವತ್ತು ಕೆಜಿ ಕೆಳಗಡೆ ಇದೆ ಇನ್ನು ಮಿಕ್ಕಿದ್ದು ನನ್ನ ತಲೆಮೇಲೆ ಹೊತ್ತುಕೊಂಡು ಇದ್ದೇನೆ ಎಂದನು.
ಅದಕ್ಕೆ (ಚೆಕಿಂಗ್) ಪರಿಶೀಲಿಸುವವರು ಹೇಳಿದರು ಅಲ್ಲಪಾ ನೀನು ಕೆಳಗಡೆ ಇಟ್ಟರು ಅಥವಾ ತಲೆಯ ಮೇಲೆ ಇಟ್ಟುಕೊಂಡರು ನಿನ್ನ ಬೆನ್ನಿನ ಮೇಲೆ ಇಟ್ಟರೂ ಕೂಡ ನಿನ್ನನ್ನೇ ಹೊತ್ತುಕೊಂಡು ರೈಲು ಹೋಗುತ್ತಿದೆಯಲ್ಲ ಎಂಥ ಮೂರ್ಖತನ ಎಂದು ಹೇಳಿ ಅದಕ್ಕೆ ಪರಿಶೀಲಿಸುವವರು ದಂಡ ಹಾಕಿದರು. ಅತಿ ಜಿಪುಣತನ ಪ್ರದರ್ಶಿಸಿ ನಷ್ಟ ಮಾಡಿಕೊಂಡಿದ್ದೇನೆಯೇ?
ಉಚಿತವಾಗಿ ಸಿಗುತ್ತದೆ
ಚಾಮುಂಡಿ ಬೆಟ್ಟ ಮೈಸೂರಿನಲ್ಲಿ ಇದೆ ನಾವು ಆಗಾಗ ಹೋಗಿ ಬರುತ್ತಿದ್ದೆವು ಬೆಟ್ಟದ ಮೇಲೆ ಹೋದಾಗ ಕಡಲೆಕಾಯಿ ಬಾಳೆಹಣ್ಣುಗಳು ತೆಗೆದುಕೊಂಡು ಹೋಗುತ್ತಿದ್ದೆವು ಏಕೆಂದರೆ ಅಲ್ಲಿ ಕೋತಿಗಳು ಬಂದು ತೆಗೆದುಕೊಳ್ಳುತ್ತಿದ್ದವು.
ಇದು ನೋಡಲಿಕ್ಕೆ ತುಂಬ ಚೆನ್ನಾಗಿದೆ ನಾವು ಪ್ರತಿ ಬಾರಿ ಹೋದಾಗಲೂ ಅಲ್ಪಸ್ವಲ್ಪ ಏನಾದರೂ ತೆಗೆದುಕೊಂಡು ಹೋಗುತ್ತಿದ್ದೆವು ಕೆಲವು ಪ್ರವಾಸಿಗರು ಅಲ್ಪಸ್ವಲ್ಪ ಏನಾದರೂ ಆ ಕೋತಿಗಳಿಗೆ ಕೊಡುತ್ತಲೇ ಇರುತ್ತಾರೆ.
ಈ ಕೋತಿಗಳು ಸಾಮಾನ್ಯವಾಗಿ ಕಾಡಿನಲ್ಲಿ ಹೋಗಿ ಹಣ್ಣು ಹಂಪಲಗಳು ಯಾವುದನ್ನು ಹುಡುಕುವುದಿಲ್ಲ ಏಕೆಂದರೆ ಉಚಿತವಾಗಿ ಸಿಗುತ್ತದೆ ಆದುದರಿಂದ ಕೋತಿಗಳು ಅದೇ ರೀತಿಯ ಅಭ್ಯಾಸವಾಗಿರುತ್ತದೆ ಆದರೆ ಪ್ರವಾಸಿಗರು ಕಡಿಮೆಯಾದಾಗ ಕೋತಿಗಳಿಗೆ ಆಹಾರ ಸಿಗುವುದಿಲ್ಲ.
ಕೋತಿಗಳು ಬೇಡಿಕೊಂಡು ಉಚಿತವಾಗಿ ತಿನ್ನುವ ಅಭ್ಯಾಸವಾದ್ದರಿಂದ ಯಾವುದನ್ನು ಹುಡುಕುವುದಿಲ್ಲ ಸೋಮಾರಿಯಾಗಿ ಕಾಲ ಕಳೆದು ಕಾಲ ಕಳೆಯುತ್ತವೆ. ಕಷ್ಟವೇ ಪಡೆದೆ ಕೂತ ಕಡೆಗೆ ಎಲ್ಲವೂ ಬರಬೇಕು ಎಂದು ಯೋಚಿಸುತ್ತೇನೆಯೇ?