ಗೆಲ್ಲಲಿಕ್ಕೆ ತಾಕತ್ತು ಇದೆಯೇ?

ಒಂದು ಸಾರಿ ಒಬ್ಬ ಚಾಣಾಕ್ಷ ಕಳ್ಳ ಒಂದು ಮನೆಯೊಳಗೆ ನುಗ್ಗಿ ತನಗೆ ಬೇಕಾಗುವಂತಹ ಬೆಲೆ ಇರುವಂತಹ ವಸ್ತುಗಳೆಲ್ಲವೂ ಒಂದು ಚೀಲಕ್ಕೆ ಹಾಕುತ್ತಿದ್ದನು ಸುತ್ತ ಎಲ್ಲ ಕಡೆ ನೋಡಿದರೆ ಹಲವಾರು ಪ್ರಶಸ್ತಿಗಳು ಪದಕಗಳು ಇದ್ದವು.

 ಏನಾದರೂ ಇರಲಿ ನನಗೇನು ಎಂದು ಕಳ್ಳ ತನಗೆ ಬೇಕಾದ್ದನ್ನು ಎಲ್ಲಾ ಚೀಲಕ್ಕೆ ಹಾಕಿಕೊಂಡು ಇನ್ನೇನು ಹೊರಡಲು ಸಿದ್ಧನಾದನು ಅಷ್ಟರಲ್ಲಿ ಆ ಮನೆಯವನು ಎದ್ದನು ಕಳ್ಳ ಓಡುತ್ತಿದ್ದಾನೆ ಹಿಂದೆ ಮಾಲೀಕ ಓಡಿ ಬಂದ ಮಾಲೀಕನ ಓಟ ನೋಡಿದರೆ ಕಳ್ಳನಗಿಂತ ವೇಗವಾಗಿ ಓಡಲಾರಂಭಿಸಿದ ಆಗ ಕಳ್ಳ ಕೇಳಿದ ಅಷ್ಟೊಂದು ಜೋರಾಗಿ ನೀವು ಓಡುತ್ತಿದ್ದೀರಲ್ಲ ಎಂದಾಗ ಮನೆಯ ಮಾಲೀಕ  ಹೆಮ್ಮೆಯಿಂದ ಹೇಳಿದ ನಾನು ವಿಶ್ವ ವಿಖ್ಯಾತ ಓಟಗಾರನಾಗಿದ್ದೇನೆ.

 ಮನೆಯಲ್ಲಿ ನೋಡಲಿಲ್ಲವೇ ನನ್ನ ಪ್ರಶಸ್ತಿಗಳು ಎಂದು ಹೇಳಿದ ಹೌದು ನೋಡಿದೆ ಇರಲಿ ಈಗ ನೀವು ಚೆನ್ನಾಗಿ ಓಡುತ್ತಿದ್ದೀರಾ ಈಗ ನಾನು ನಿಮ್ಮ ಹಿಂದೆ ಓಡಿ ಬರುತ್ತೇನೆ ನನ್ನನ್ನು ಏನು ಮಾಡ್ತೀರಾ ಎಂದು ಹಾಸ್ಯವಾಗಿ ಕೇಳಿದನು.

 ಏನು ಮಾಡೋದು ನಿನ್ನನ್ನು ಪೋಲಿಸ್ ಸ್ಟೇಷನ್ನಿಗೆ ಕರೆದುಕೊಂಡು ಹೋಗುತ್ತೀನಿ ಎಂದು ಮಾಲೀಕ ಹೇಳಿದನು ಚಾಣಾಕ್ಷ ಕಳ್ಳ ಹೇಳಿದನು ಹೌದೆ ಹಾಗಾದರೆ ನೀವು ವಿಶ್ವವಿಖ್ಯಾತ ಓಟಗಾರರೇ ಆಗಿದ್ದರೆ ಬಹಳಷ್ಟು ಓಟಗಾರರ ಜೊತೆ ಗೆದ್ದಿದ್ದೀರಿ ಆದರೆ ನನ್ನ ಜೊತೆ ಗೆಲ್ಲಲಿಕ್ಕೆ ತಾಕತ್ತು ಇದೆಯೇ? ಎಂದು ಕೇಳಿದನು.

 ಈ ಮಾತನ್ನು ಕೇಳಿದಾಗ ಓಟಗಾರನಿಗೆ ನನ್ನನ್ನೇ ಸವಾಲನ್ನು ನೀಡುತ್ತಿದ್ದಾನೆ ನನಗೆ ಚಾಲೆಂಜ್ ಅನ್ನು ನೀಡುತ್ತಿದ್ದಾನೆ ನಿನ್ನ ಚಾಲೆಂಜ್ ನನಗೆ ಒಪ್ಪಿಗೆ ಇದೆ ಎಂದು ಕಳ್ಳನಿಗೆ ಹೇಳಿದನು ಹಾಗಾದರೆ ಇಬ್ಬರು ನಾವು ಈಗ ಪೋಲಿಸ್ ಠಾಣೆಗೆ ಹೋಗಬೇಕು ಹೌದು ಎಂದ ಓಟಗಾರ ಹಾಗಾದರೆ ಅಲ್ಲಿಯವರೆಗೆ ಯಾರು ಮೊದಲು ಹೋಗುತ್ತಾರೆ ನೋಡೋಣವೇ ಎಂದು ಹೇಳಿದನು.

 ಓಟಗಾರನು ಆಗಲಿ ಎಂದು ತುಂಬಾ ವೇಗವಾಗಿ ಪೋಲಿಸ್ ಠಾಣೆಯ ಹತ್ತಿರ ಹೋಗಿ ನಿಂತಿದ್ದನು ಕಳ್ಳ ಬುದ್ಧಿವಂತ ಬೇರೆ ದಾರಿ ಹಿಡಿದು ಎಲ್ಲೋ ಮಾಯವಾಗಿದ್ದ ಓಟಗಾರ ಹೆಮ್ಮೆಯಿಂದ ಠಾಣೆ ಹತ್ತಿರ ಹೋಗಿ ಸುತ್ತುತ್ತಿರುತ್ತಾನೆ ಇನ್ನೂ ಬರಲಿಲ್ಲವಲ್ಲ ಕಳ್ಳ ಎಂದು ಆ ಕಡೆ ಈ ಕಡೆ ನೋಡುತ್ತಿರುತ್ತಾನೆ ಇದನ್ನು ಗಮನಿಸಿದ ಪೊಲೀಸ್ ಇನ್ಸ್ ಪೆಕ್ಟರ್ ಸಾಹೇಬರು ಬಂದು ಕೇಳಿದರು.

 ಇಷ್ಟು ಹೊತ್ತಲ್ಲಿ ಇಲ್ಲಿ ಏಕೆ ಇದ್ದೀರಿ ಎಂದು ಕೇಳಿದರು ಆಗ ನಡೆದ ಕಥೆಯನ್ನು ಓಟಗಾರ ಹೇಳಿದನು ಇನ್ಸ್ ಪೆಕ್ಟರ್ ಸಾಹೇಬರು ಹೇಳಿದರು ಎಂಥ ಮೂರ್ಖರು ನೀವು ನಿಮ್ಮ ವಸ್ತುಗಳು ಪಡೆಯುವುದು ಮುಖ್ಯನೋ ಕಳ್ಳನ ಜೊತೆ ಹೋಗಿ ಸ್ಪರ್ಧೆ ಗೆಲ್ಲುವುದು ಮುಖ್ಯವೋ. ಆಗ ನಾನು ಅರ್ಥಮಾಡಿಕೊಳ್ಳಲಿಲ್ಲವಲ್ಲ ಎಂದಾಗ ಕಳ್ಳ ನಿಮಗೆ ಚಳ್ಳೆಹಣ್ಣು ತಿನಿಸಿ ಹೋಗಿದ್ದಾನೆ.

 ಕಳ್ಳ ನಿಮ್ಮಷ್ಟು ವೇಗವಾಗಿ ಓಡದಿದ್ದರೂ ಅವನು ದಡ್ಡನಲ್ಲಎಂದು ಹೇಳಿದರು. ವಿಶ್ವಗಾರ ಊಟಗಾರರು ತಾನು ಮಾಡಿದ ತಪ್ಪನ್ನು ಅರಿತನು ನಾನು ಆಟಗಾರನಂತೆ ಏನಾದರೂ ನಷ್ಟ ಮಾಡಿಕೊಂಡಿದ್ದೇನೆ?

ಜಗತ್ತು ನಮ್ಮನ್ನು ಸೆಳೆದು ಬಿಟ್ಟಿರುತ್ತದೆ

ಬಾಬಾ ಅವರ ಉಪನ್ಯಾಸ ಕೇಳಲಿಕ್ಕೆ ದೂರದೂರದಿಂದ ಬರುತ್ತಿದ್ದರು ಉಪನ್ಯಾಸ ಮೋಕ್ಷ ಪಡೆಯುವುದು ಹೇಗೆ ಎನ್ನುವ ಉಪದೇಶದಿಂದ ಮಾತನಾಡುತ್ತಿದ್ದರು ಈ ಜಗತ್ತು ಒಂದು ಮಾಯೆ ಮಾಯೆ ಎಂದು ತಿಳಿದಿದ್ದರೂ ಅದಕ್ಕೆ ನಾವು ಬಿಡಲು ಸಾಧ್ಯವಾಗುತ್ತಿಲ್ಲ ಇದನ್ನು ಬಿಟ್ಟರೆ ಮೋಕ್ಷ ಪಡೆಯಬಹುದಾಗಿದೆ ಎಂದು ಹೇಳಿದರು.

 ಈ ಉಪನ್ಯಾಸ ಕೇಳಿದ ನಂತರ ಊರಿನ ಹಿರಿಯ ವ್ಯಕ್ತಿಯೊಬ್ಬರು ಬಂದರು ಬಾಬಾ ಅವರೇ ನಿಮ್ಮ ಉಪನ್ಯಾಸ ನಿಜಕ್ಕೂ ಚೆನ್ನಾಗಿದೆ ನಿಮ್ಮ ಉಪನ್ಯಾಸದಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ ಹೇಗೆ ಮೋಕ್ಷ ಪಡೆಯಬೇಕು ಎಂದು ಹೇಳಿ ಕೊಡಿ ಎಂದರು ಒಂದು ಬಲಿತ ತೆಂಗಿನ ಕಾಯಿಯನ್ನು ತರಿಸಿ ಈ ತೆಂಗಿನ ಕಾಯಿಯ ತಿರುಳನ್ನು ನನಗೆ ತೆಗೆದು ಕೊಡಿ ಆದರೆ ಇದಕ್ಕೆ 2ನಿಯಮಗಳು ಇವೆ ಸಿಪ್ಪೆ ಕಾಯಿಯ ತಿರುಳಿಗೆ ಸೇರಿರಬಾರದು.

 ಮತ್ತೆ ತಿರುಳು ಒಂದೆಯಾಗಿರಬೇಕು ಹೋಳಾಗಿರಬಾರದು ಎಂದರು ಇದು ಸಾಧ್ಯವಿಲ್ಲ ಎಂದರು ಗುರುಗಳು ಒಂದು ತೆಂಗಿನ ಕಾಯಿಯನ್ನು ಕೊಟ್ಟು 6 ತಿಂಗಳು ನಿಮ್ಮ ಮನೆಯಲ್ಲಿಯೇ ಇಡಿ ನಂತರ ನಾನು ಬಂದಾಗ ನನಗೆ ಕೊಡಿ ಎಂದು ಬಾಬಾ ಅವರು ಹೊರಟರು.

6 ತಿಂಗಳ ನಂತರ ಬಾಬಾ ಅವರು ಬಂದರು ತೆಂಗಿನಕಾಯಿಯನ್ನು ಕೇಳಿದರು ತೆಂಗಿನ ಕಾಯಿಯನ್ನು ತಂದ ನಂತರ ಈ ತೆಂಗಿನ ಕಾಯಿಯನ್ನು ನೀವೇ ಒಡೆಯಿರಿ ಎಂದು ಹೇಳಿದರು 6 ತಿಂಗಳು ಇಟ್ಟಿದ್ದರಿಂದ ಕೊಬ್ಬರಿಯಾಗಿ ಹೋಗಿತ್ತು ಮತ್ತೆ ಬಾಬಾ ಅವರು ಕೇಳಿದರು.

 ನೀವು ಸಾಧ್ಯವಿಲ್ಲ ಎಂದು ಹೇಳಿದ್ದೀರಲ್ಲ ಈಗ ಹೇಗೆ ಸಾಧ್ಯವಾಗಿದೆ ಈಗ ಕೊಬ್ಬರಿ ಚಿಪ್ಪಿಗೆ ಅಂಟಿಕೊಂಡಿಲ್ಲ ಮತ್ತು 2ಭಾಗವು ಹೋಳಾ ಹೋಳಾಗಿಲ್ಲ ಎಂದು ತೋರಿಸಿದರು ಅಂದರೆ ತೆಂಗಿನಕಾಯಿ 6 ತಿಂಗಳುಗಳ ಕಾಲ ಒಣಗಿದೆ ಇದರಿಂದ ಸಾಧ್ಯವಾಗಿದೆ ಮಾನವನ ಬದುಕು ಕೂಡ ಹೀಗೆಯೇ ಒಳಗೆ ನೀರಿರುವವರೆಗೆ ಹೊರಗಿನ ಚಿಪ್ಪಿಗೆ ಕೊಬ್ಬರಿ ಅಂಟಿಕೊಂಡಿರುತ್ತದೆ.

 ಅದೇ ರೀತಿ ಮಾನವನ ಆಸೆಗಳು ವ್ಯಾಮೋಹಗಳು ಬಾಹ್ಯ ಜಗತ್ತು ನಮ್ಮನ್ನು ಸೆಳೆದು ಬಿಟ್ಟಿರುತ್ತದೆ ಇದಕ್ಕೆ ತಾಳ್ಮೆ ಮುಖ್ಯವಾದುದು ಮನಸ್ಸನ್ನು ಸರಿ ಪಡಿಸಿಕೊಳ್ಳಬೇಕಾದರೆ ಸಹನೆಯಿಂದ ಕೆಲವು ಸಮಯದ ವರೆಗೆ ಕಾಯಲೇಬೇಕು.

 ಮನಸ್ಸಿನಿಂದ ವ್ಯಾಮೋಹಗಳು ಕಡಿಮೆಯಾದಾಗ ಮೋಕ್ಷ ಸಿಗುತ್ತದೆ  ತೆಂಗಿನಕಾಯಿ ಒಣಗಿದಾಗ ಕೊಬ್ಬರಿಯಾಗಿ ಚಿಪ್ಪಿನಿಂದ ಬೇರೆಯಾಗುವಂತೆ ವ್ಯಾಮೋಹಗಳಿಂದ ಬಿಡುಗಡೆ ಹೊಂದೋಣ.

ಇದಕ್ಕಿಂತ ಭಯಾನಕವಾಗಿದೆ

ಒಂದು ಊರಿನಲ್ಲಿ ಸದ್ವಿಚಾರವುಳ್ಳ ಮಹಾರಾಜರು ಇರುತ್ತಾರೆ ಮಹಾರಾಜರಿಗೆ ಅಪ್ಸರೆಯಂತಹ ಸುಂದರಿ  ಮಗಳು ಇರುತ್ತಾಳೆ ಆ ಮಗಳಿಗೆ ಅಹಂಕಾರ ಹಠ ಸ್ವಾರ್ಥ ಎಲ್ಲವೂ ಅತಿ ಹೆಚ್ಚಾಗಿರುತ್ತದೆ ರಾಜಕುಮಾರಿಯ ಕಣ್ಣಿಗೆ ತೊಂದರೆಯಾಗುತ್ತದೆ ಕಣ್ಣು ಊದಿಕೊಂಡಿರುತ್ತದೆ.

 ಹಲವು ವೈದ್ಯರು ಬಂದು ಔಷಧಿ ಹಾಕೋಣವೆಂದರೆ ಯಾರ ಮಾತಿಗೂ ಮುದ್ದಿನ ಮಗಳು ಕೇಳುವುದಿಲ್ಲ ಇಲ್ಲ ಔಷಧಿ ಹಾಕುವುದಕ್ಕೆ ಆಗುವುದಿಲ್ಲ ನಂತರ ಕೈಕಾಲು ಹಿಡಿದುಕೊಂಡರು ಏನೇ ಹೇಳಿದರೂ ಮುದ್ದಿನ ಮಗಳು ಕೇಳುವುದಿಲ್ಲ ನನಗೆ ಕಣ್ಣಿನ ನೋವು ಕಡಿಮೆಯಾದರೆ ಸಾಕು ಎಂದು ಒದ್ದಾಡುತ್ತಿರುತ್ತಾಳೆ.

ಯಾರು ಯಾವ ರೀತಿ ಹೇಳಿದರು ಕೇಳುವುದಿಲ್ಲ ಇದರಿಂದಾಗಿ ತಂದೆಯವರಿಗೆ ಏನು ಮಾಡಬೇಕು ಎಂದು ತಿಳಿಯುವುದಿಲ್ಲ ಚಿಂತೆಗೀಡಾಗುತ್ತಾರೆ ನಂತರ ಕೊನೆಗೆ ಡಂಗೂರ ಬಾರಿಸಿ ಹೇಳುತ್ತಾರೆ ನನ್ನ ಮಗಳ ಕಣ್ಣನ್ನು ಸರಿ ಪಡಿಸಿದರೆ ಅವರಿಗೆ ಒಳ್ಳೆಯ ಬಹುಮಾನ ಕೊಡುತ್ತೇನೆ ಎಂದು ಹೇಳುತ್ತಾರೆ ಆಗ ಒಬ್ಬ ವಯಸ್ಸಾದ ಹಳೆಯ ವೈದ್ಯರು ಬರುತ್ತಾರೆ.

ನಾನು ಸರಿ ಪಡಿಸುತ್ತೇನೆ ಎಂದು ಮೊಟ್ಟ ಮೊದಲು ಬಂದು ರಾಜಕುಮಾರಿಯ ಕಣ್ಣುಗಳನ್ನು ಪರೀಕ್ಷೆ ಮಾಡುತ್ತಾರೆ ನಂತರದಲ್ಲಿ ಹೇಳುತ್ತಾರೆ ಈ ಕಾಯಿಲೆ ಅಂಥದ್ದೇನೂ ಇಲ್ಲ ಆದರೆ ಮುಂದೆ ಬರುವ ಕಾಯಿಲೆ ಇದಕ್ಕಿಂತ ಭಯಾನಕವಾಗಿದೆ ಎಂದು ಭಯ ಹುಟ್ಟಿಸುತ್ತಾರೆ.

 ಆಗ ರಾಜನ ಮಗಳು ಅದು ಯಾವ ಕಾಯಿಲೆ ನೀವು ಹೇಳಿ ಎಂದು ಗೋಗರೆಯುತ್ತಾಳೆ  ಹಿರಿಯ ವೈದ್ಯರು ಹೇಳುವುದೋ ಬೇಡವೋ ಎಂದು ಯೋಚಿಸುತ್ತಿದ್ದೇನೆ ಎಂದಾಗ ಮುದ್ದಿನ ಮಗಳು ನೀವು ಹೇಳಲೇ ಬೇಕು ಎಂದು ಹಠಮಾಡುತ್ತಾಳೆ ಆಗ ಹಿರಿಯ ವೈದ್ಯರು ಹೇಳುತ್ತಾರೆ.

 ನಿನಗೆ ಮೊಲದಂತೆ ಉದ್ದವಾದ ಕಿವಿ ಬೆಳೆಯುತ್ತದೆ ಆಗ ರಾಜಕುಮಾರಿ ಭಯಂಕರ ಚಿಂತೆಯಲ್ಲಿ ಮುಳುಗಿದಳು ಗಾಬರಿಯಾದಳು ರಾಜಕುಮಾರಿ ನನಗೆ ಕಿವಿ ಬೆಳೆದರೆ ಎಲ್ಲರೂ ಹಾಸ್ಯ ಮಾಡುತ್ತಾರೆ ಎಂದು ರಾಜಕುಮಾರಿಯ ಮನಸ್ಥಿತಿ ಕೆಟ್ಟುಹೋಯಿತು.

 ಸ್ವಲ್ಪ ಸ್ವಲ್ಪ ಸಮಯಕ್ಕೆ ಎಲ್ಲಿ ಕಿವಿ ಬೆಳೆಯುತ್ತಿದೆಯೋ ಎಂದು ಕಿವಿ ಮುಟ್ಟಿಕೊಳ್ಳುತ್ತಿದ್ದಳು ಆಗಾಗ ಕನ್ನಡಿಯಲ್ಲಿ ತನ್ನ ಕಿವಿಗಳನ್ನು ನೋಡುತ್ತಿದ್ದಳು. ವೈದ್ಯರು ರಾಜಕುಮಾರಿಯ ಗಮನವನ್ನು ಬೇರೆ ಕಡೆಗೆ ಸೆಳೆದು ರಾಜಕುಮಾರಿಯ ಮನಸ್ಸು ಸದಾ ಕಾಲ ಕಿವಿ ಬೆಳೆಯುತ್ತಿದೆ ಎನ್ನುವುದರ ಬಗ್ಗೆಯೇ ಇತ್ತು.

 ವೈದ್ಯರು ಕಣ್ಣಿಗೆ ಹಾಕಬೇಕಾದ ಔಷಧಿಯನ್ನು ಹಾಕುತ್ತಿದ್ದರು ಆದರೆ ರಾಜಕುಮಾರಿಗೆ ಇದು ತಿಳಿಯಲೇ ಇಲ್ಲ ಮೂರು ದಿನವಾದ ಮೇಲೆ ಕೇಳಿದರು ಕಣ್ಣುನೋವು ಹೇಗಿದೆ ಎಂದಾಗ ನನಗೆ ಕಣ್ಣು ನೋವು ಇಲ್ಲವೇ ಇಲ್ಲ ಎಂದು ರಾಜಕುಮಾರಿ ಹೇಳಿದಳು.

 ಮೊಲದಂತೆ ಉದ್ದವಾದ ಕಿವಿಗಳು ಬೆಳೆಯುತ್ತಿಲ್ಲ ಅದಕ್ಕೆ ಏನು ಮಾಡುವುದು ಎಂದು ಕೇಳಿದಳು ಆಗ ವೈದ್ಯರು ಹೇಳಿದರು ನಿನ್ನ ಗಮನವನ್ನು ಬೇರೆ ಕಡೆಗೆ ಸೆಳೆಯಲು ಈ ರೀತಿ ನಾನು ಹೇಳಿದೆ ನೀನು ಬೇರೆಯದನ್ನು ಯೋಚಿಸುತ್ತಿದೆ ಆ ಸಮಯದಲ್ಲಿ ನಾವು ನಿನಗೆ ಕಣ್ಣಿನಲ್ಲಿ ಔಷಧಿ ಹಾಕುತ್ತಿದ್ದೆ ನಿನಗೆ ತಿಳಿಯಲಿಲ್ಲ ಎಂದು ವಿವರವಾಗಿ ಹೇಳಿದರು.

 ಚಿಕ್ಕ ಕಷ್ಟ ಬಂದರೂ ಅದಕ್ಕಾಗಿ ನರಳುತ್ತೇವೆ ಇದಕ್ಕಿಂತ ದೊಡ್ಡ ಸಮಸ್ಯೆ ಬಂದಾಗ ಇರುವ ಕಷ್ಟವನ್ನು ಮರೆಯುತ್ತೇವೆ ಎಂದು ಹೇಳಿ ನಂತರ ವೈದ್ಯರು ಬಹುಮಾನವನ್ನು ಪಡೆದು ಹೋದರು.

ಬರುವಿಕೆಗಾಗಿ ಕಾಯುತ್ತಿರುತ್ತಾರೆ

ಒಬ್ಬ ಸೈನಿಕ ಶರವೇಗದಿಂದ ಬರುತ್ತಿರಬೇಕಾದರೆ ಬಿರುಗಾಳಿ ಚಂಡ ಮಾರುತ ಮತ್ತೆ ಮಳೆ ಜೋರಾಗಿ ಬರುತ್ತಿರುತ್ತದೆ ಇದರಿಂದಾಗಿ ಒಂದು ದೊಡ್ಡ ಮರ ರಸ್ತೆಯ ಮಧ್ಯದಲ್ಲಿ ಬಿದ್ದಿರುತ್ತದೆ.

 ಯಾರೂ ಕೂಡ ರಸ್ತೆಯಿಂದ ಹೋಗಲಿಕ್ಕೆ ಸಾಧ್ಯವಾಗುತ್ತಿರುವುದಿಲ್ಲ ಬೇರೆ ಸೈನಿಕರು ಆದಷ್ಟು ಅದನ್ನು ತೆಗೆಯಲೇಬೇಕು ಎಂದು ಕಷ್ಟಪಡುತ್ತಿರುತ್ತಾರೆ.

 ಯಾರಾದರೂ ಒಬ್ಬ ಸೈನಿಕ ಬಂದರೂ ಕೂಡ ಇದು ತುಂಬಾ ಸುಲಭವಾಗಿ ಮರವನ್ನು ಪಕ್ಕಕ್ಕೆ ಉರುಳಿಸಬಹುದಿತ್ತು ಎಂದು ಇತರರ ಬರುವಿಕೆಗಾಗಿ ಕಾಯುತ್ತಿರುತ್ತಾರೆ ಆಗ ಒಬ್ಬ ಸೈನಿಕ ಸರಿಯಾದ ಸಮಯಕ್ಕೆ ಬಂದು ಸಹಾಯ ಮಾಡಿ ಮತ್ತೆ ಕೆಲಸವಾದ ನಂತರ ತಾನು ಬಂದಿದ್ದ ಕುದುರೆಯ ಮೇಲೆ ಕುಳಿತು ಹೋದನು.

 ಈ ಸೈನಿಕರೆಲ್ಲರೂ ಸರಿಯಾದ ಸಮಯಕ್ಕೆ ಬಂದು ನಮಗೆ ಸಹಾಯ ಮಾಡಿದ್ದಾನೆ ಎಂದು ಸಂತೋಷ ಪಟ್ಟರು ಸಹಾಯ ಮಾಡಿದವರು ಯಾರು ಎಂದು ನಂತರ ತಿಳಿಯಿತು ಆ ವ್ಯಕ್ತಿ ರಾಷ್ಟ್ರಪತಿ ಜಾರ್ಜ್ ವಾಷಿಂಗ್ಟನ್ ಆಗ ಆ ಸೈನಿಕರಿಗೆ ತುಂಬ ಆನಂದವಾಯಿತು.

 ದೊಡ್ಡ ವ್ಯಕ್ತಿಗಳು ಯಾವಾಗಲೂ ಯಾವುದೇ ರೀತಿಯ ದೊಡ್ಡಸ್ತಿಕೆ ತೋರಿಸಿಕೊಳ್ಳುವುದಿಲ್ಲ ಎಲ್ಲರಂತೆ ಅವರೂ ಕೂಡ ಕೆಲಸ ಮಾಡುತ್ತಾರೆ ಸಾಮಾನ್ಯಂತೆಯೇ ಇರುತ್ತಾರೆ.

ಸ್ನೇಹಕ್ಕಾಗಿ ತ್ಯಾಗ

  

ಒಂದು ಚಿಕ್ಕ ಕುಟುಂಬ ಗಂಡ ಹೆಂಡತಿ ಒಂದು ಮಗು 8 ವರ್ಷದ ಹೆಣ್ಣು ಮಗು ಚೆನ್ನಾಗಿಯೇ ಓದುತ್ತಿದ್ದಳು ತಂದೆ ತಾಯಿ ಕೂಡ ಅಂಥ ಶ್ರೀಮಂತರಲ್ಲ ಅಂಥ ತೀರಾ ಬಡವರು ಅಲ್ಲ ಮಧ್ಯಮದಲ್ಲಿ ಇರುವವರು ಮಗಳು ಏನೇ ಕೇಳಿದರೂ ಕೊಡಿಸುತ್ತಿದ್ದರು.

ಮಗು ಶನಿವಾರ ಶಾಲೆಯಿಂದ ಬಂದು ತನ್ನ ಮಾರ್ಕ್ಸ್ ಕಾರ್ಡನ್ನು ತೋರಿಸಿದಾಗ ಎಲ್ಲರೂ ಸಂತೋಷಪಟ್ಟರು ಮತ್ತೆ ನಿನಗೇನು ಬೇಕು ಎಂದು ಉತ್ಸಾಹದಿಂದ ಕೇಳಿದರು ಆಗ ಮಗು ಹೇಳಿತು ನಾನು ಕೇಳುವುದು ಚಿಕ್ಕ ವಸ್ತುವೇ ಹೆಚ್ಚು ಖರ್ಚು ಇಲ್ಲ ನೀವು ಮಾಡಲೇಬೇಕು ಅದಕ್ಕೆ ತಂದೆ ತಾಯಿ ಆಗಲಿ ಎಂದು ಹೇಳಿದರು.

 ಆಗ ಮಗು ಹೇಳಿತು ಇಲ್ಲ ಇಲ್ಲ ನನಗೆ ಆಣೆ ಮಾಡಬೇಕು ಮಾಡೇ ಮಾಡುತ್ತೇನೆಂದು ಆಗ ಮಾತ್ರ ನಾನು ಒಪ್ಪಿಕೊಳ್ಳುತ್ತೇನೆ ಎಂದು ಹೇಳಿದಳು ಚಿಕ್ಕ ಮಗು ಏನು ಕೇಳಬಹುದು ಎಂದು ಯೋಚಿಸಿ ನಾನು ಕೊಡಿಸುತ್ತೇನೆ ಎಂದು ಭರವಸೆ ನೀಡಿದರು. ನಾಳೆ ಭಾನುವಾರ ಇದೇ ಅಲ್ಲವೆ ಆದ್ದರಿಂದ ನನಗೆ ನಾಳೆ ಬ್ಯೂಟಿ ಪಾರ್ಲರ್ ಗೆ ಕರೆದುಕೊಂಡು ಹೋಗಿ ನನ್ನ ತಲೆಯನ್ನು ಬೋಳಿಸಿ  ಎಂದು ಉತ್ಸಾಹದಿಂದ ಹೇಳಿತು.

 ತಂದೆಗೆ ಕರೆಂಟ್ ಹೊಡೆದಂತೆ ಭಾಸವಾಯಿತು ತಾಯಿ ಇದು ಅಶುಭ ಎಂದು ಹೇಳಿದರು ತಂದೆಯಾದವರು ಬೇಡ ಮಗು ಈ ರೀತಿ ಯಾಕೆ ಕೇಳ್ತೀಯಾ ನಿನಗೆ ಸ್ವಲ್ಪ ದೊಡ್ಡದಾಗಿ ಕೂದಲು ಬಂದಿದೆ ಅದನ್ನು ಏಕೆ ಕತ್ತರಿಸುವುದು ಚೆನ್ನಾಗಿ ಕಾಣಿಸುವುದಿಲ್ಲ ಎಂದು ಸಮಜಾಯಿಷಿ ಹೇಳಿದರು ಏನೇ ಹೇಳಿದರೂ ಕೇಳುವ ಸ್ಥಿತಿಯಲ್ಲಿ ಇಲ್ಲ.

  ಮಗುವೆ ಕೇಳಿತು ನೀವು ಹಲವಾರು ಕತೆಗಳನ್ನು ಹೇಳಿದ್ದೀರಾ ಮಾತಿಗೆ ತಪ್ಪಬಾರದು ನೀವು ಮಾತಿಗೆ ತಪ್ಪುವುದಿಲ್ಲ ಎಂದು ನಾನು ನಿಮ್ಮನ್ನು ಸಂಪೂರ್ಣವಾಗಿ ನಂಬಿದ್ದೇನೆ ಎಂದು ಹೇಳಿ ಆಳಲಿಕ್ಕೆ ಶುರುಮಾಡಿದಳು ತಂದೆ ಹೋಗಲಿ ಬಿಡು ಎಂದು ಭಾನುವಾರದಂದು ತಲೆಬೋಳಿಸಿಕೊಂಡು ಬಂದರು.

 ಹುಡುಗಿ ಸೋಮವಾರ ಬೆಳಿಗ್ಗೆ ಎದ್ದು ಶಾಲೆಗೆ ಹೋಗಲು ಉತ್ಸಾಹದಿಂದ  ತಯಾರಾದಳು ಶಾಲೆಯ ಯೂನಿಫಾರಂ ಹಾಕಿಕೊಂಡು ಹಿಂದೆ ಬ್ಯಾಗ್ ಹಾಕಿಕೊಂಡು ಮತ್ತೆ ಬೋಳುತಲೆ ಈ ಸ್ಥಿತಿ ನೋಡಿದ ತಂದೆಗೆ ಕರುಳು ಹಿಸುಕಿದಂತೆ ಆಯಿತು.

 ತಂದೆಯೇ ಹುಡುಗಿಯನ್ನು ಕರೆದುಕೊಂಡು ಶಾಲೆಯ ಮುಖ್ಯ ದ್ವಾರದ ಹತ್ತಿರ ಮಗುವನ್ನು ಬಿಟ್ಟರು ಮಗು ದಿನನಿತ್ಯದಂತೆ ಶಾಲೆಗೆ ಒಳಗೆ ಹೋಗುತ್ತಿತ್ತು ಅಂದು ಶಾಲೆಗೆ ಹೋಗುತ್ತಿಲ್ಲ ಯಾರನ್ನು ಕಾಯುತ್ತಿರುವ ಹಾಗೆ ನಿಂತಿದ್ದಾಳೆ ಇದನ್ನು ಗಮನಿಸಿದ ತಂದೆ ಏನಿರಬಹುದು ಎಂದು ಮರೆಯಲ್ಲಿ ಸುಮ್ಮನೆ ನಿಂತು ನೋಡುತ್ತಿದ್ದರು.

 ಅಷ್ಟರಲ್ಲಿ ಇನ್ನೊಬ್ಬ ತಂದೆ ಒಂದು ಮಗುವನ್ನು ಕರೆದುಕೊಂಡು ಬಂದರೂ ಆ ಮಗುವು ಕೂಡ ಬೋಳು ತಲೆ ಯುನಿಫಾರ್ಮ್ ಹಾಕಿ ಬ್ಯಾಗು ಹಾಕಿ ಬರುತ್ತಿದೆ ಇವನು ಹುಡುಗ ಹುಡುಗನ ತಂದೆ ಹುಡುಗಿಯನ್ನು ನೋಡಿ ಕಣ್ಣಲ್ಲಿ ನೀರು ಬಂತು ನಂತರ ಕೇಳಿದರು.

 ಎಲ್ಲಿ ನಿಮ್ಮ ತಂದೆ ಎಂದು ಕೇಳಿದರು ಆಗ ತಂದೆಯನ್ನು ತೋರಿಸಿದಳು ಆಗ ಹುಡುಗನ ತಂದೆ ಮಾತನಾಡಿಸಿದರು ಹುಡುಗಿಯ ತಂದೆಗೆ ಇದು ಅರ್ಥವೇ ಆಗಲಿಲ್ಲ ಮತ್ತೆ ನಮ್ಮ ಮಗಳು ಹಟ ಮಾಡಿ ತಲೆ ಬೋಳಿಸಿಕೊಂಡಿದ್ದು ಯಾಕೆ ಎಂದು ಗೊತ್ತಾಗಲಿಲ್ಲ ಈ ಮಾತನ್ನು ಕೇಳಿದ ಹುಡುಗನ ತಂದೆ ಅಳಲು ಶುರು ಮಾಡಿಬಿಟ್ಟರು.

ನನ್ನ ಮಗನೂ ಇದೇ ರೀತಿ ಮಾಡಿದ್ದಾನೆ ಏನು ವಿಶೇಷ ಇರಬಹುದು ಎಂದು ಕೇಳಿದಾಗ ಆಗ ಹೇಳಿದರು 3ವರ್ಷದಿಂದ ರಕ್ತದ ಕ್ಯಾನ್ಸರ್ ಇದೆ ಅವನ ಜೀವನ ಎಷ್ಟು ಎಂಬುದು ಗೊತ್ತಿಲ್ಲ ಕಳೆದ 8ತಿಂಗಳಿನಿಂದ ಕಿಮೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದಾನೆ ತಲೆಯ ಕೂದಲೆಲ್ಲ ಉದುರಿ ಹೋಗಿದೆ.

 ನಿಮ್ಮ ಮಗಳು ನಮ್ಮ ಹುಡುಗ ಒಳ್ಳೆಯ ಸ್ನೇಹಿತರು ಆಗಾಗ ಆಟವಾಡುತ್ತಿರುತ್ತಾರೆ ಆ ಹುಡುಗಿಯೇ ನಮ್ಮ ಮಗನಿಗೆ ಉತ್ಸಾಹ ತುಂಬಿದ್ದಾಳೆ.

 ಮತ್ತೆ ಶಾಲೆಗೆ ನಾನು ಇನ್ನು ಮುಂದೆ ಬರುವುದಿಲ್ಲ ಎಂದಾಗ ಇಲ್ಲ ನೀನು ಶಾಲೆಗೆ ಬಾ ನಾನು ಕೂಡ ಬರುತ್ತೇನೆ ನಿನ್ನ ತಲೆಯಲ್ಲಿ ಕೂದಲು ಇಲ್ಲ ಎಂದಾಗ ನಾನು ಕೂಡ ತಲೆಯ ಕೂದಲನ್ನು ತೆಗೆಸುತ್ತೇನೆ ಸೋಮವಾರ ನೀನು ಬಾ ಗೇಟಿನ ಹತ್ತಿರ ನಾನು ಅದೇ ರೀತಿ ಬಂದರೆ ಶಾಲೆಗೆ ಇಬ್ಬರು ಸೇರಿ ಹೋಗೋಣ ಇಲ್ಲದಿದ್ದರೆ ನೀನು ಮನೆಗೆ ಹೋಗಬಹುದು ಎಂದು ಹೇಳಿದಳು.

 ನಮ್ಮ ಹುಡುಗನಿಗೋಸ್ಕರ ಹುಡುಗಿ ಸ್ನೇಹಕ್ಕಾಗಿ ತ್ಯಾಗ ಮಾಡಿದ್ದಾಳೆ ಎಂದು ಹೇಳಿದರು ಹುಡುಗಿಯ ಯಾಕೆ ತಲೆ ಬೋಳಿಸಿಕೊಂಡಿದ್ದು ಎಂದು ತಂದೆಗೆ ಆಗ ಅರ್ಥವಾಯಿತು ಮಕ್ಕಳಲ್ಲಿ ಇರುವಂತಹ ಪ್ರೀತಿ ತ್ಯಾಗ ತುಂಬಾ ಅತ್ಯಂತ ಅಮೂಲ್ಯವಾದದ್ದು. ಮಕ್ಕಳಲ್ಲಿ ಇರುವ ಸದ್ಗುಣಗಳಿಗೆ ಮತ್ತಷ್ಟು ಉತ್ಸಾಹ ತುಂಬೋಣ.

Leave a Comment