ಒಂದೇ ಒಂದು ದೀಪ ಬೆಳಗಿಸಿದನು

ಅರಮನೆಯ ಸ್ವಲ್ಪ ದೂರದ ಒಂದು ಆಶ್ರಮದಲ್ಲಿ ಬಾಬಾ ಅವರು ಇದ್ದರು ಬಾಬಾ ಅವರಿಗೆ ನಾಲ್ಕು ಶಿಷ್ಯರು ಬೇಕಾಗಿತ್ತು ಅದಕ್ಕೆ ಬಾಬಾ ಅವರೇ ಆಯ್ಕೆ ಮಾಡಿ ಕೊಳ್ಳುತ್ತಾರೆ ಎಂದು ರಾಜನಿಗೆ ಹೇಳಿದರು.

  ಆಗ ರಾಜನು ನೀವು ಯಾರನ್ನಾದರೂ ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು ಎಂದು ಎಲ್ಲ ಹುಡುಗರನ್ನು ಸೇರಿಸಿದರು ಬಾಬಾ ಅವರು 4 ಹುಡುಗರನ್ನು ಆಯ್ಕೆ ಮಾಡಿ ಮಿಕ್ಕವರನ್ನು ಕಳಿಸಿಬಿಟ್ಟರು.

ಬಾಬಾ ಅವರು 4 ಹುಡುಗರನ್ನು ಕರೆದುಕೊಂಡು ಆಶ್ರಮದತ್ತ ಹೋದರು ಅಲ್ಲಿ ಒಂದು ಚಿಕ್ಕ ಪರೀಕ್ಷೆ ಇಟ್ಟರು ನಿಮ್ಮಲ್ಲಿ ಬುದ್ಧಿವಂತಿಕೆ, ಸೃಜನಶೀಲತೆ, ತಿಳುವಳಿಕೆ, ಚಾಣಾಕ್ಷತೆ, ಯಾವ ಮಟ್ಟದಲ್ಲಿ ಇದೆ ಎಂದು ತಿಳಿದುಕೊಳ್ಳಬೇಕು.

 ಯಾರು ಈ ಪರೀಕ್ಷೆಯಲ್ಲಿ ಗೆಲ್ಲುತ್ತಾರೋ ಅವರನ್ನು ನಾನು ಶಿಷ್ಯನಾಗಿ ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು ನಿಮಗೆ ಒಂದೊಂದು ಕೊಠಡಿಯನ್ನು ಕೊಟ್ಟಿದ್ದೇನೆ ನಾನು ಬರುವವರೆಗೆ ಸಂಜೆಯಾಗುತ್ತದೆ ನಾನು ಬರುವುದಕ್ಕಿಂತ ಮುಂಚೆ ಕೊಠಡಿಯನ್ನು ಪೂರ್ತಿಯಾಗಿ ತುಂಬಬೇಕು ಎಂದು ಹೇಳಿ ಹೊರಟರು.

 ಮೊದಲನೆಯವ ಹುಲ್ಲು ಕಡ್ಡಿಗಳಿಂದ ತುಂಬಿದನು. ಎರಡನೆಯವನು ಸೌದೆಗಳಿಂದ ತುಂಬಿದನು. ಮೂರನೆಯವನು ಆಶ್ರಮದಲ್ಲಿದ್ದ ಎಲ್ಲಾ ಕಸವನ್ನು ತಂದು ಆ ಕೊಠಡಿಯಲ್ಲಿ ತುಂಬಿದನು ಭಯಂಕರ ವಾಸನೆ ಬರುತ್ತಿತ್ತು. ಕತ್ತಲಾಗುತ್ತಿದ್ದಂತೆ ಗುರುಗಳು ಬಂದರು.

 ತಮ್ಮ ತಮ್ಮ ಕೊಠಡಿಗಳ ಮುಂದೆ ನಿಂತಿದ್ದರು 4. ಕೊಠಡಿಗಳನ್ನು ನೋಡಿ ಕೊನೆಯವನನ್ನು ಮಾತ್ರ ಅಪ್ಪಿಕೊಂಡರು ಇವನೇ ನನ್ನ ಶಿಷ್ಯ ಎಂದು ಕೊನೆಯ ಶಿಷ್ಯ ಏನೂ ಮಾಡಲಿಲ್ಲ ಆದರೆ ಮಾಡಿದ್ದು ಇಷ್ಟೇ.

 ಒಂದು ದೀಪ ಬೆಳಗಿಸಿದನು ಹೂವುಗಳಿಂದ ಅಲಂಕರಿಸಿದ ಹೂಗಳಿಂದ ಪರಿಮಳ ಬೀರುತ್ತಿತ್ತು ಕೋಣೆಯು ಬೆಳಕಿನಿಂದ ತುಂಬಿತು ಸೃಜನಶೀಲತೆ ಮತ್ತು ಸಮಯಕ್ಕೆ ತಕ್ಕ ಜಾಣ್ಮೆ ಎಂದರೆ ಇದೇ ಇರಬೇಕು ಅಲ್ಲವೇ.

  ಕೆರಳಿಸುವ ಪ್ರಶ್ನೆಯನ್ನು ಕೇಳುತ್ತಾನೆ?

ಒಬ್ಬ ಹಳ್ಳಿಯ ಅತಿ ಬುದ್ಧಿವಂತ ಮನುಷ್ಯ ಒಂದು ಆಶ್ರಮಕ್ಕೆ ಬಂದನು ಗುರುಗಳು ಪೀಠದ ಮೇಲೆ ಕುಳಿತಿದ್ದರು ದೂರದಿಂದಲೇ ಗುರುಗಳನ್ನು ನೋಡಿ ನಾನು ಆಶ್ರಮಕ್ಕೆ ಬಂದು ಇರುತ್ತೇನೆ ನನ್ನನ್ನು ನೀವು ಸೇರಿಸಿಕೊಳ್ಳಿ ಎಂದು  ಬೇಡಿಕೊಂಡನು ಗುರುಗಳು ಇವನನ್ನು ದೀರ್ಘವಾಗಿ ಯೋಚಿಸಿ ನಂತರ ಹೇಳಿದರು.

 ಈ ಆಶ್ರಮದ ಜೀವನ ತುಂಬಾ ಕಷ್ಟವಾದುದು ನೀನು ಇಲ್ಲಿ ಕಷ್ಟ ಜಾಸ್ತಿ ಪಡಬೇಕಾಗುತ್ತದೆ ನೀನು ಹಳ್ಳಿಯಲ್ಲೇ ಇದ್ದರೆ ಒಳ್ಳೆಯದು ಎಂದು ಹೇಳಿದರು ಇಲ್ಲ ನನಗೆ ಏನೇ ಕಷ್ಟವಾದರೂ ಸರಿ ನಾನು ಯಾವುದೇ ಕೆಲಸ ಬೇಕಾದರೂ ಮಾಡಿಕೊಂಡು ಹೋಗುತ್ತೇನೆ ಎಂದು ಹೇಳಿದನು.

 ಆಗ ಗುರುಗಳು ಇಲ್ಲಿಯ ಕೆಲಸಗಳು ಎಂದರೆ ಬ್ರಾಹ್ಮಿ ಮುಹೂರ್ತದಲ್ಲಿ ಅಂದರೆ 4 ಗಂಟೆಗೆ ಎಳಬೇಕು ನಂತರ ಸ್ನಾನ, ಜಪ, ನಂತರ ಗಿಡಕ್ಕೆ ನೀರು ಹಾಕಿ ನಂತರ ಎಲ್ಲವನ್ನೂ ಅಲಂಕಾರ ಮಾಡಿ ಬರುವ ಭಕ್ತಾದಿಗಳಿಗಾಗಿ ವ್ಯವಸ್ಥೆ ಮಾಡಬೇಕು ನಂತರ ಅವರ ಬೆಳಗಿನ ಉಪಹಾರ ನೋಡಬೇಕು.

 ಮಧ್ಯಾಹ್ನದ ಊಟ ಮತ್ತೆ ಸಂಜೆಯಾಗುತ್ತಿದ್ದಂತೆ ಜನರು ಪ್ರವಚನಕ್ಕೆ ಬರುತ್ತಾರೆ. (ಮ್ಯಾಟ್ ಗಳು) ಜಮಖಾನೆ ಹಾಕಬೇಕು ನಂತರ ಮತ್ತೆ ಮ್ಯಾಟ್ ಗಳನ್ನು ಮುಡಚಬೇಕು ನಂತರ ಊಟಕ್ಕೂ ಬಡಿಸಬೇಕು ನಂತರ ಎಲ್ಲವನ್ನು ಸ್ವಚ್ಚ ಮಾಡಿ ಮಲಗಬೇಕು ಇಷ್ಟನ್ನು ಕೇಳಿದ ಆ ಮಹಾಶಯ ಆಶ್ರಮದ ಜೀವನ ತುಂಬ ಸುಖವಾಗಿರುತ್ತದೆ ಎಂದು ಅಂದುಕೊಂಡಿದ್ದೆ ಇಷ್ಟೆಲ್ಲ ಮಾಡಬೇಕಾ ಎಂದು ನಿರಾಸಕ್ತಿಯಿಂದ ಹೇಳಿದನು. 

ಯೋಚಿಸಿದನು ಸ್ವಲ್ಪ ಸಮಯದ ನಂತರ ನಂತರ ಗುರುಗಳೇ ನೀವು ಇದ್ದೀರಿ ಹಾಗಾದರೆ ನಿಮ್ಮ ಕೆಲಸವೇನು ಶಿಷ್ಯ ನಾಗಲು ಬಂದವನು ಈ ಪ್ರಶ್ನೆ ಕೇಳಬೇಕಾದದ್ದು ಸಹಜ ಬಂದವನು ಎಂತಹ ಕೆರಳಿಸುವ ಪ್ರಶ್ನೆಯನ್ನು ಕೇಳುತ್ತಾನೆ? ಎಂದರೆ ಗುರುಗಳೆ ನಿಮ್ಮ ಕೆಲಸವೇನು ಆಗ ಗುರುಗಳು ಶಾಂತಚಿತ್ತರಾಗಿ ಹೇಳಿದರು.

 ಪೀಠದ ಮೇಲೆ ಕುಳಿತು ಕೊಂಡು ಆಶ್ರಮಕ್ಕೆ ಬರುವ ಭಕ್ತರೊಡನೆ ಮಾತನಾಡುವುದು ಅವರು ತಂದಿರುವ ಫಲಗಳನ್ನು ಕಾಣಿಕೆಗಳನ್ನು ಸ್ವೀಕರಿಸುವುದು ಆಶ್ರಮದ ಹಾಗೂ ಹೂಗುಗಳನ್ನು ನೋಡುವುದು ಇದು ನನ್ನ ಕೆಲಸ ಎಂದರು ಈ ಉತ್ತರ ಕೇಳುತ್ತಿದ್ದಂತೆಯೇ ಈ ಮಹಾಶಯನಿಗೆ ಆಶ್ಚರ್ಯಚಕಿತನಾದ ಏನೋ ಹೊಳೆದಂತೆ ಕರೆಂಟ್ ಪಾಸಾದಂತೆ ಹುಮ್ಮಸ್ಸಿನಿಂದ ಹೇಳಿದ.

 ನನ್ನನ್ನೇ ಪೀಠದ ಮೇಲೆ ಕೂರಿಸಿ ಬಿಡಿ ಎಲ್ಲ ಕೆಲಸವನ್ನು ನಾನು ಮಾಡುತ್ತೇನೆ ಎಂದನು ಇದು ಒಂದು ಕಥೆ ಆದರೆ ಇಂದಿನ ಹಲವು ವಿದ್ಯಾರ್ಥಿಗಳು ಇದೇ ರೀತಿ ಇಷ್ಟಪಡುತ್ತಾರೆ ಸಾಧನೆ ಮಾಡುವುದು ಬೇಡ ಆದರೆ ಫಲಮಾತ್ರ ಬೇಕು ಎನ್ನುತ್ತಾರೆ.

  ಎಲ್ಲರೂ ಅದೇ ತಪ್ಪು ಮಾಡುತ್ತಿದ್ದಾರೆ

ಒಂದು ಸಾರಿ ಹತ್ತು ಕುರುಡರು ಒಂದು ನದಿಯನ್ನು ದಾಟಲು ಪ್ರಯತ್ನಿಸುತ್ತಿದ್ದರು ನದಿಯ ನೀರು ಹರಿದು ಜೋರಾಗಿ ಬರುತ್ತಿರುವುದರಿಂದ ಒಬ್ಬರ ಕೈ ಹಿಡಿದುಕೊಂಡು ನದಿಯನ್ನು ದಾಟಿದರು ದಡ ತಲುಪಿದ ನಂತರ ಇವರಿಗೆ ಒಂದು ಚಿಂತೆ ಬಂತು ನಾವು ಎಷ್ಟು ಜನ ಇದ್ದೇವೆ.

  ನಾವು ಸರಿಯಾಗಿ ಹತ್ತು ಜನ ಇದ್ದೇವೆ ಎಂಬುದಾಗಿ ಎಲ್ಲರಿಗೂ ಸಂದೇಹ ಬಂತು ಅದಕ್ಕಾಗಿ ಎಲ್ಲರನ್ನು ನಿಲ್ಲಿಸಿ ಒಬ್ಬ ಎಣಿಸಿದನು ಆದರೆ 9ಮಾತ್ರ ಲೆಕ್ಕ ಸಿಗುತ್ತಿದೆ ಒಂದು ಸಂಖ್ಯೆ ಕಡಿಮೆ ಬರುತ್ತಿದೆ ಯಾರು ಎಣಿಸುತ್ತಿದ್ದರೂ ಒಬ್ಬ ಮಾತ್ರ ಕಾಣೆಯಾಗಿದ್ದಾನೆಂದು ಅಳುತ್ತಿದ್ದಾರೆ.

 ಕೊನೆಗೆ ಇದನ್ನು ನೋಡಿದ ಒಬ್ಬ ಹಿರಿಯರು ಬಂದರು ಸಮಸ್ಯೆಯನ್ನು ಅರಿತರೂ ನಂತರ ಹೇಳಿದರು ನಿಮ್ಮ ಸಮಸ್ಯೆಯನ್ನು ನಾನು ಪರಿಹರಿಸುತ್ತೇನೆ ಆದರೆ ಒಂದು ನಿಯಮವಿದೆ ಅದು ಏನೆಂದರೆ ನಾನು ಕೋಲಿನಿಂದ ತಲೆಗೆ ಹೊಡೆದಾಗ ಎಷ್ಟು ಏಟು ಬೀಳುತ್ತದೆ ನೀವು ಸಂಖ್ಯೆಯನ್ನು ಹೆಚ್ಚಿಸುತ್ತಾ ಹೋಗಬೇಕು ಎಲ್ಲರನ್ನೂ ನಿಲ್ಲಿಸಿ ಹೊಡೆಯುತ್ತಾ ಬಂದರು.

 ಕೊನೆಯವನು ಹತ್ತು ಎಂದನು ಎಲ್ಲರೂ ಹತ್ತನೇ ಕುರುಡನನ್ನು ಏ ಇಷ್ಟು ಹೊತ್ತು ಎಲ್ಲಿ ಹೋಗಿದ್ದೆ ಎಂದು ಬಾಯಿಗೆ ಬಂದಂತೆ ಬೈದರು ಹತ್ತನೆಯವನು ಹೇಳಿದ ನಾನು ಇಲ್ಲೇ ಇದೆ ಎಂದನು

 ಆದರೆ ಎಲ್ಲರೂ ಮಾಡುತ್ತಿರುವ ಒಂದೇ ತಪ್ಪು ಅದೇನೆಂದರೆ ಎಣಿಸುವವನು ತನ್ನನ್ನು ಏಣಿಸುತ್ತಿರಲಿಲ್ಲ. ಕೆಲವು ಸಾರಿ ಎಲ್ಲರೂ ಅದೇ ತಪ್ಪು ಮಾಡುತ್ತಿದ್ದಾರೆ ಯಾವುದೇ ಕೆಲಸ ಕಾರ್ಯ ಮಾಡಿದರೂ ಸ್ವಲ್ಪ ಜಾಗ್ರತೆ ವಿವೇಚನೆಯಿಂದ ಮಾಡೋಣ.

ನಮ್ಮ ಕೊನೆಯ ಆಸೆ

ಒಂದು ನರಿಯು ಬೆಳಿಗ್ಗೆ ಎದ್ದು ಆಹಾರ ಹುಡುಕಲು ಆರಂಭಿಸಿತು ಎಲ್ಲಿ ನೋಡಿದರೂ ಆಹಾರವೇ ಸಿಗುತ್ತಿಲ್ಲ ಕಂಗಾಲಾಯಿತು ಹೊಟ್ಟೆ ಹಸಿಯುತ್ತಿದೆ ಹಾಗಾಗಿ ಊರಿಗೆ ಹೋಗೋಣ ಎಂದು ಊರಿಗೆ ಬಂತು ಅಲ್ಲಿ ಒಂದು ದೊಡ್ಡ ಮನೆ ಇತ್ತು ಮನೆಯ ಸುತ್ತ ಒಂದು ಸುತ್ತು ಸುತ್ತಿತು ಕೊನೆಯಲ್ಲಿ ನೋಡಿದರೆ ಬಹಳಷ್ಟು ಕೋಳಿಗಳು ಹುಂಜಗಳು ಇವೆ.

 ಇದನ್ನು ನೋಡಿದ ತಕ್ಷಣ ನರಿಗೆ ಬಾಯಲ್ಲಿ ನೀರು ಬಂತು ಬೇಕಾದಷ್ಟು ಕೋಳಿಗಳು ಹುಂಜಗಳು ಇವೆ ಯಾವುದು ಬೇಕಾದರೂ ನಾನು ತಿನ್ನಬಹುದು ಎಂದು ಕೋಳಿ ಹುಂಜಗಳ ಗುಂಪಿನ ಮಧ್ಯೆ ಬಂದು ನರಿ ನಿಂತಿತು ಇದ್ದಕ್ಕಿದ್ದ ಹಾಗೆ ಕೋಳಿಗಳು ಏನು ಮಾಡಬೇಕೆಂದು ತಿಳಿಯಲಿಲ್ಲ ಗಾಬರಿಯಾದವು.

 ಆಗ ನರಿ ಹೇಳಿತು ಈಗ ನಾನು ಯಾರನ್ನು ಬೇಕಾದರೂ ತಿನ್ನಬಹುದು ನೀವೇ ಯಾರಾದರೂ ಮುಂದೆ ಬನ್ನಿ ಎಂದು ನರಿ ಹೇಳಿತು ಬುದ್ಧಿವಂತ ಕೋಳಿಗಳು ನರಿಗೆ ನಮ್ಮ ಕೊನೆಯ ಆಸೆ ಇದೆ ಆ ಆಸೆ ನೀನು ಪೂರೈಸು ಎಂದು ಎಂದು ಕಳಕಳಿಯಿಂದ ಕೇಳಿದವು.

 ಏನು ನಿಮ್ಮ ಆಸೆ ಎಂದು ನರಿಯು ಅಹಂಕಾರದಿಂದ ಕೇಳಿತು ನಾವೆಲ್ಲರೂ ಒಂದು ಸಾರಿ ಪ್ರಾರ್ಥಿಸುತ್ತೇವೆ ಅದಕ್ಕೆ ಅವಕಾಶ ಮಾಡಿಕೊಡು ಎಂದು ಹೇಳಿದವು ಅಷ್ಟೇ ತಾನೇ ನಿಮ್ಮ ಇಷ್ಟದಂತೆ ಆಗಲಿ ಎಂದು ಹೇಳಿತು ಆಗ ಎಲ್ಲಾ ಕೋಳಿಗಳು ಹುಂಜಗಳು ಸೇರಿ ಕು ಕು ಕೂ ಎಂದು ಕೂಗಿದವು ಮನೆಯಲ್ಲಿ ಇದ್ದ ಎಲ್ಲರೂ ಇದ್ದಕ್ಕಿದ್ದ ಹಾಗೆ ಕೋಳಿಗಳು ಏಕೆ ಕೂಗುತ್ತಿವೆ ಎಂದು ಆಚೆ ಬಂದರು ಆಗ ನರಿಯು ಹೇಳದೆ ಕೇಳದೆ ದಿಕ್ಕು ತೋಚದೆ  ಓಡಿಹೋಯಿತು.

  ನನಗಿಂತ ಬುದ್ದಿವಂತರು

ಒಬ್ಬರು ಪ್ರಸಿದ್ಧ ನಾಟಕಕಾರರು ಇದ್ದರು. ಇವರು ನಾಟಕ ಮಾಡಿ ಹೆಚ್ಚು ಪ್ರಸಿದ್ಧಿ ಪಡೆದರು ಹಾಗೂ ಹಣವನ್ನು ಗಳಿಸುತ್ತಿದ್ದರು ಹಾಗೆ ಇದೇ ರೀತಿ ಬೇರೆ ನಾಟಕಕಾರರು ಇದ್ದರು ಅವರು ಹೆಚ್ಚು ಪ್ರಸಿದ್ಧಿ ಪಡೆಯಲಿಲ್ಲ. ಒಬ್ಬ ಸಂದರ್ಶಕರಿಗೆ ಏಕೆ ಇವರು ಇಷ್ಟೊಂದು ಪ್ರಸಿದ್ಧಿ ಆಗುತ್ತಿದ್ದಾರೆ.

 ಇದಕ್ಕೆ ಏನು ಕಾರಣ ತಿಳಿಯಬೇಕು ಎಂದು ಪ್ರಸಿದ್ಧಿ ಪಡೆದ ನಾಟಕಕಾರರನ್ನು ಸಂದರ್ಶಿಸಿದರು ನೀವು ಇಷ್ಟು ಪ್ರಸಿದ್ಧಿ ಯಾಗಿದ್ದೀರಾ ಇದರ ರಹಸ್ಯವೇನು? ಎಂದು ಕೇಳಿದರು.

 ಆಗ ನಾಟಕಕಾರರು ವೇದಿಕೆ ಮೇಲೆ ಹೋದಾಗ ನನ್ನ ಪ್ರೇಕ್ಷಕರಲ್ಲರೂ ನನಗಿಂತ ಬುದ್ಧಿವಂತರು ಅವರು ಸಂತೋಷವಾಗಿರಬೇಕು ಅವರಿಂದ ನಾನು ಮತ್ತಷ್ಟು ಕಲಿಯಬಹುದು ಎಂದು ನಾಟಕವನ್ನು ಪ್ರಾರಂಭಿಸುತ್ತೇನೆ ಎಂದು ಪ್ರಾಮಾಣಿಕವಾಗಿ ಹೇಳಿದರು.

 ಮತ್ತೆ ಸಂದರ್ಶಕರು ಬೇರೆ ನಾಟಕದವರನ್ನು ಸಂದರ್ಶಿಸಿದರು ಆಗ ಅವರು ಹೇಳಿದರು ವೇದಿಕೆಯ ಮೇಲೆ ಹೋದಾಗ ನಾವು ಇಷ್ಟೇ ಯೋಚನೆ ಮಾಡುತ್ತೇವೆ ಮುಂದೆ ಇರುವ ಪ್ರೇಕ್ಷಕರನ್ನು ಮೂರ್ಖರನ್ನಾಗಿ ಮಾಡಿ ನಾವು ಹಣವನ್ನು ಗಳಿಸುತ್ತೇವೆ ಎಂದು ಹೇಳಿದರು ಆಗ ಸಂದರ್ಶಕರು ಅರ್ಥಮಾಡಿಕೊಂಡರು.

ಇನ್ನೊಬ್ಬರನ್ನು ಒಳ್ಳೆಯವರನ್ನಾಗಿ ಗೆಲ್ಲಬಹುದೇ ಹೊರತು ಮೂರ್ಖರನ್ನಾಗಿ ಮಾಡಿ ಬೆಳೆಯಲು ಸಾಧ್ಯವಿಲ್ಲ ಎಂದು ಅರಿತುಕೊಂಡರು ನಾವು ಬೃಹತ್ತಾಗಿ ಬೆಳೆಯಬೇಕಾದರೆ ಇನ್ನೊಬ್ಬರನ್ನು ಬೆಳೆಸಿ ನಾವು ಬೆಳೆಯೋಣ.

Leave a Comment