ಒಂದು ಸಾರಿ ಒಂದು ಮತ್ಸರವುಳ್ಳ ಹೆಂಗಸು ಊರಿನ ಉತ್ಸವಕ್ಕೆ ಬರುತ್ತಾಳೆ ಈಗ ಫೋಟೋಗಳು ಇವೆ ಆದರೆ ಹಿಂದಿನ ಕಾಲದಲ್ಲಿ ಭಾವಚಿತ್ರಗಳು ಬೇಕು ಎಂದರೆ ಅವರಿಗೆ ಒಂದು ಕಡೆ ಕೂರಿಸಿ ಅವರು ಹೇಗಿದ್ದರೂ ಅದೇ ರೀತಿ ಭಾವ ಚಿತ್ರಗಳನ್ನು ಚಿತ್ರಿಸುತ್ತಿದ್ದರು.
ಈ ಹೆಂಗಸು ನನ್ನ ಚಿತ್ರವನ್ನು ಚಿತ್ರಿಸಿ ಎಂದು ಹೇಳಿದಳು ಅದಕ್ಕೆ ಚಿತ್ರ ಬಿಡಿಸುವವನು ಚೆನ್ನಾಗಿ ಚಿತ್ರಿಸಿದನು ನಂತರ ಹೆಂಗಸು ನನ್ನ ಕೊರಳಿಗೆ ಒಂದು ಮುತ್ತಿನ ಹಾರವನ್ನು, ಕಿವಿಗೆ ಓಲೆ ಮತ್ತು ಬೆರಳಿನಲ್ಲಿ ಉಂಗುರವನ್ನು ಚಿತ್ರಿಸಿ ಎಂದು ಕೇಳಿಕೊಂಡಳು ಚಿತ್ರ ಬಿಡಿಸುವವನು ನೀವು ಒಡವೆಗಳು ಹಾಕಿಕೊಂಡಿಲ್ಲ ವಲ್ಲ ಎಂದು ಕೇಳಿದನು.
ಆಗ ಹೆಂಗಸು ನನಗೆ ಕ್ಯಾನ್ಸರ್ ಇದೆ ಇನ್ನು ನಾನು 8ತಿಂಗಳಲ್ಲಿ ಅಥವ 4ತಿಂಗಳಲ್ಲಿ ಸಾಯುವುದು ಖಚಿತ ನನ್ನ ಗಂಡನಾದವನು ಇನ್ನೊಂದು ಮದುವೆ ಮಾಡಿಕೊಳ್ಳುವುದು ಖಚಿತ ನಾನು ಸತ್ತ ಮೇಲೆ ಇನ್ನೊಂದು ಮದುವೆ ಆಗೇ ಆಗುತ್ತದೆ ಆಗ ಚಿತ್ರ ಬಿಡಿಸುವವನಿಗೆ ಗೊಂದಲ ವಾಯಿತು.
ಚಿತ್ರ ಬಿಡಿಸುವವನು ಕೇಳಿದ ಈ ಆಭರಣಕ್ಕೂ ಅದಕ್ಕೂ ಏನು ಸಂಬಂಧ ಎಂದು ಕೇಳಿದನು ಆಗ ಹೆಂಗಸು ಹೇಳಿದಳು ಹೆಣ್ಣಿನ ಮನಸ್ಸು ಅರ್ಥಮಾಡಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ ನನ್ನ ಗಂಡ ಹಾಗೂ ಮದುವೆಯಾದ ಹೆಂಡತಿ ನನ್ನ ಭಾವಚಿತ್ರವನ್ನು ನೋಡಬೇಕು ಎನ್ನುವುದೇ ನನ್ನ ಆಸೆ.
ಈ ಚಿತ್ರ ನೋಡಿದಾಗ ಮದುವೆಯಾಗಿ ಬಂದ ಹೆಣ್ಣು ಆ ಮುತ್ತಿನ ಹಾರ ಉಂಗುರ ಒಡವೆ ಎಲ್ಲವೂ ಎಲ್ಲಿ ಹೋಯಿತು ಎಂದು ಕೇಳುತ್ತಾಳೆ ಅವಳು ಗಂಡನನ್ನು ಪೀಡಿಸುತ್ತಾಳೆ ನಾನು ಹೇಗೋ ಸಾಯುತ್ತಿದ್ದೇನೆ ಆದರೆ ಮದುವೆಯಾದ ಮೇಲೆ ಒಡವೆಗಳು ಎಲ್ಲಿ ಹೋದವು ಎಂದು ಇಬ್ಬರು ಜಗಳವಾಡಲಿ ಅವಳು ನನ್ನ ಗಂಡನನ್ನು ಪೀಡಿಸುತ್ತಾಳೆ ಅದೇ ನನಗೆ ಸಂತೋಷ ಎಂದು ಹೇಳಿದಳು.
ಬಹಳಷ್ಟು ಹೆಂಡತಿಯರು ತನ್ನ ಗಂಡನಿಗೆ ಸಾಯುವವರೆಗೂ ನಾನು ಹೇಳಿದಂತೆ ಕೇಳಬೇಕು ನನ್ನ ಹಿಡಿತದಲ್ಲಿ ಇಟ್ಟುಕೊಳ್ಳಬೇಕು ಹಾಗೆ ಕೆಲವು ಗಂಡಂದಿರು ಕೂಡ ಅಷ್ಟೆ ನನ್ನ ಹೆಂಡತಿಯಾದವಳು ನಾನು ಹೇಳಿದಂತೆ ಕೇಳಿಕೊಂಡು ಇರಬೇಕು ಎಂದು ಇಡೀ ಜೀವನವೇ ತಾನೆ ಹೆಚ್ಚು ತಾನೆ ಹೆಚ್ಚು ಎಂದು ಜಗಳ ಮಾಡುತ್ತಿರುತ್ತಾರೆ.
ಇಬ್ಬರೂ ಅರ್ಥಮಾಡಿಕೊಳ್ಳುವುದಿಲ್ಲ ಕೆಲವರು ಇತರರಿಗೆ ಸರಿಪಡಿಸಬೇಕು ಎಂಬುದರಲ್ಲೇ ಕಳೆದುಹೋಗುತ್ತಾರೆ ಮೂರ್ಖ ಹೆಂಡತಿ ತನ್ನ ಗಂಡನನ್ನು ಗುಲಾಮನನ್ನಾಗಿ ಮಾಡಿಕೊಂಡು ಕೊನೆಗೆ ಹೆಂಡತಿ ಗುಲಾಮಳಾಗುತ್ತಾಳೆ ಬುದ್ಧಿವಂತೆ ಹೆಂಡತಿ ತನ್ನ ಗಂಡನನ್ನು ರಾಜನನ್ನಾಗಿ ಮಾಡಿ ತಾನು ರಾಣಿಯಂತೆ ಬದುಕುತ್ತಾಳೆ ಇರುವ ಬದುಕನ್ನು ಸರಿಪಡಿಸಿಕೊಂಡು ತೃಪ್ತಿಯಿಂದ ಬದುಕೋಣ.
ಹಾಳೆ ಎಷ್ಟು ತೂಕವಿದೆಯೋ
ಒಂದು ಊರಿನಲ್ಲಿ ಒಬ್ಬ ಸಂಸಾರಿ ಇರುತಾನೆ ಹಲವಾರು ದಿನಗಳಿಂದ ವ್ಯಾಪಾರ ತುಂಬಾ ಕಡಿಮೆ ನಡೆಯುತ್ತಿರುತ್ತದೆ ಮನೆಗೆ ಹಣ ಕೊಡಲು ಸಾಧ್ಯವಾಗುವುದಿಲ್ಲ ಮನೆಯಲ್ಲಿ ಅಡುಗೆ ಮಾಡುವ ಪದಾರ್ಥಗಳು ಮುಗಿದಿರುತ್ತದೆ
ತರಕಾರಿ ಅಕ್ಕಿ ಹೆಂಡತಿಯಾದವಳು ಹೇಳುತ್ತಾಳೆ ಮಕ್ಕಳು ಬೆಳಿಗ್ಗೆಯಿಂದ ಹಸಿದುಕೊಂಡಿದ್ದಾರೆ ಏನಾದರೂ ಮಾಡಿ ಮಕ್ಕಳಿಗಾದರೂ ಸ್ವಲ್ಪ ಅಕ್ಕಿ ಬೆಳೆಯನ್ನು ತೆಗೆದುಕೊಂಡು ಬನ್ನಿ ಎಂದು ಅಳುತ್ತಾಳೆ.
ಗಂಡನಿಗೆ ತುಂಬಾ ಬೇಸರವಾಗುತ್ತದೆ ಏನಾದರೂ ಮಾಡಿ ಪಡೆದುಕೊಂಡು ಬರುತ್ತೇನೆ ಎಂದು ಊರಿನ ದೊಡ್ಡ ಅಂಗಡಿಗೆ ಹೋಗುತ್ತಾನೆ ಅಂಗಡಿ ಮಾಲಿಕರಿಗೆ ಮನೆಯಲ್ಲಿ ಬೆಳಿಗ್ಗೆಯಿಂದ ಮಕ್ಕಳು ಊಟ ಮಾಡಿಲ್ಲ ಹಾಗಾಗಿ ದಯವಿಟ್ಟು ಅಕ್ಕಿ ಬೆಳೆ ಕೊಡಿ, ನಾನು ಕೆಲವೇ ದಿನಗಳಲ್ಲಿ ನಿಮ್ಮ ಸಾಲವನ್ನು ತೀರಿಸುತ್ತೇನೆ ಪರಿಪರಿಯಾಗಿ ಬೇಡಿಕೊಳ್ಳುತ್ತಾನೆ ಅಂಗಡಿಗೆ ಮಾಲೀಕ ಒಪ್ಪುವುದಿಲ್ಲ.
ನಾನು ಯಾರಿಗೂ ಸಾಲ ನೀಡುವುದಿಲ್ಲ ಎಂದು ಮಾಲಿಕ ಹೇಳುತ್ತಾನೆ ಸಂಸಾರಿಗೆ ಕಣ್ಣಲ್ಲಿ ನೀರು ಬರುತ್ತದೆ ಏಕೆಂದರೆ ಮಕ್ಕಳು ಹೆಂಡತಿ ಊಟ ಮಾಡಿರುವುದಿಲ್ಲ ಹಸುವಿನಿಂದ ಬಳಲುತ್ತಿರುತ್ತಾನೆ ಸಂಸಾರಿ ಅಂಗಡಿಯ ಮೂಲೆಯಲ್ಲಿ ಕುಳಿತುಕೊಂಡು ಅಳುತ್ತಿರುತ್ತಾನೆ.
ಸ್ವಲ್ಪ ಸಮಯದ ನಂತರ ಮತ್ತೆ ಮಾಲೀಕನಿಗೆ ಕೇಳುತ್ತಾನೆ ಮಾಲೀಕನಿಗೆ ಕೋಪ ಬಂದು ಇಲ್ಲಿಂದ ಹೇಗಾದರೂ ಮಾಡಿ ಕಳಿಸಬೇಕು ಎಂದು ಒಂದು ಉಪಾಯವನ್ನು ಮಾಡುತ್ತಾನೆ ಒಂದು ಹಾಳೆಯಲ್ಲಿ ಹಾಳೆ ಎಷ್ಟು ತೂಕವಿದೆಯೋ ಅಷ್ಟು ಮಾತ್ರ ಏನಾದರೂ ಕೊಟ್ಟು ಕಳಿಸು ಎಂದು ಬರೆಯುತ್ತಾನೆ ನಂತರ ಸಂಸಾರಿಗೆ ಹೇಳುತ್ತಾನೆ.
ಈ ಹಾಳೆಯನ್ನು ಪಕ್ಕದ ಮಳಿಗೆಯವರಿಗೆ ಕೊಡು ಅವನು ಕೊಡುತ್ತಾನೆ ಎಂದು ಹೇಳಿ ಕಳಿಸುತ್ತಾನೆ ತೂಕ ಮಾಡುವವನು ಹಾಳೆಯನ್ನು ನೋಡುತ್ತಾನೆ ಹಾಳೆ ಎಷ್ಟು ಇದೆ ಅಷ್ಟು ತೂಕ ಮಾಡಿ ಕೊಡು ಎಂದು ಬರೆದಿರುತ್ತಾರೆ ಮತ್ತೆ ತೂಕ ಮಾಡುವವನು ಮಾಲೀಕನಿಗೆ ಹೇಳುತ್ತಾನೆ ಮಾಲೀಕ ಸನ್ನೆಯಲ್ಲಿ ಹೇಳುತ್ತಾನೆ.
ತಕಡಿಯ ಒಂದು ಕಡೆ ಹಾಳೆಯನ್ನು ಇಡುತ್ತಾನೆ ಅಕ್ಕಿ ತರಲು ಹೋದಾಗ ಗಾಳಿಗೆ ಹಾಳೆಯು ನೀರಿನಲ್ಲಿ ಬೀಳುತ್ತದೆ ಮತ್ತೆ ಹಾಳೆಯನ್ನು ತೆಗೆದು ನೋಡಿದಾಗ ಏನು ಅರ್ಥವಾಗುವುದಿಲ್ಲ ಆಗ ಎಷ್ಟುಬೇಕು ಎಂದು ಸಂಸಾರಿಗೆ ಕೇಳುತ್ತಾನೆ ಸಂಸಾರಿ ಮನೆಯಲ್ಲಿ ಯಾವ ಪದಾರ್ಥಗಳು ಇಲ್ಲ ಆ ಹಾಳೆಯಲ್ಲಿ ಏನು ಬರೆದಿದ್ದಾರೆ ಅದನ್ನು ಕೊಡಿ ಎಂದು ಕೈ ಮುಗಿದು ಕೇಳುತ್ತಾನೆ.
ತೂಕ ಮಾಡುವವನಿಗೆ ಗೊಂದಲವಾಗುತ್ತದೆ ಸಂಸಾರಿಗೆ ನೋಡಿ ಅವನು ಎಷ್ಟು ಹೊತ್ತುಕೊಂಡು ಹೋಗುತ್ತಾನೆ ಅಷ್ಟು ವಸ್ತುಗಳು ಒಂದು ಮೂಟೆಯಲ್ಲಿ ಹಾಕಿ ಕಟ್ಟಿಕೊಡುತ್ತಾನೆ ಅಚಲವಾದ ನಂಬಿಕೆ ಇದ್ದು ಇತರರಿಗೆ ಒಳ್ಳೆಯದಾಗಲಿ ಎನ್ನುವ ಉದ್ದೇಶವಿದ್ದಾಗ ಯಾವ ಕಡೆಯಿಂದ ಹೇಗಾದರೂ ಬಂದೆ ಬರುತ್ತದೆ ನಂಬಿಕೆ ಇದ್ದಾಗ ಪವಾಡಗಳು ಚಮತ್ಕಾರಗಳು ಆಗುತ್ತವೆ.
ಒಂದು ರತ್ನವನ್ನು ಕಳೆದುಕೊಂಡೆವು
ಲೀ ಕೂಕಾ ಅವರು ಫೋರ್ಡ್ ಕಂಪನಿಯಲ್ಲಿ ವೈಸ್ ಪ್ರೆಸಿಡೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದರು ಇವರು ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದರು ಕೆಲವು ವರ್ಷಗಳ ನಂತರ ಇದ್ದಕ್ಕಿದ್ದ ಹಾಗೆ ಕಂಪೆನಿಂದ ಕೆಲಸಕ್ಕೆ ಬೇಡ ಎಂದು ತೆಗೆದುಹಾಕಿದರು.
ಇಲ್ಲಿಯವರೆಗೆ ಇವರು ತುಂಬಾ ಚೆನ್ನಾಗಿ ಬದುಕುತ್ತಿದ್ದರು ನಂತರ ಇವರ ಜೀವನ ತುಂಬಾ ದುಸ್ತರವಾಯಿತು ಎಷ್ಟು ಕಷ್ಟ ಬಂತು ಎಂದರೆ ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳೋಣ ಎನ್ನುವಂತಹ ಸ್ಥಿತಿಗೆ ಬಂದಿದ್ದರು ಕಂಪನಿಯ ಮಾಲೀಕನ ಮೇಲೆ ತುಂಬಾ ಕೋಪ ಬಂತು ನಂತರ ಯೋಚನೆ ಮಾಡಿದರು.
ನಾನು ಏನಾದರೂ ಸಾಧನೆ ಮಾಡಲೇಬೇಕು ಎಂದು ತನ್ನಲ್ಲಿ ಧೈರ್ಯ ತುಂಬಿಕೊಂಡರು ನಂತರ ಚಿಕ್ಕದಾಗಿ ಇದ್ದ ಒಂದು ಕ್ರಿಸ್ಟಲ್ ಮೋಟಾರ್ ಗೆ ಸೇರಿದರು ನಂತರ ಮಾಲೀಕರಿಗೆ ಒಳ್ಳೆಯ ಐಡಿಯಾಗಳು ಉಪಾಯಗಳು ಟೆಕ್ನಿಕ್ ಗಳು ಹೇಳಿಕೊಟ್ಟರು.
ಉಪಾಯಗಳನ್ನು ಬಳಸಿಕೊಂಡ ಮಾಲೀಕರು ಐದಾರು ವರ್ಷದಲ್ಲೇ ಫೋರ್ಡ್ ಕಂಪನಿ ಎಷ್ಟು ಟರ್ನವರ್ ಮಾಡುತ್ತಿತ್ತು ಅಷ್ಟೇ ಟರ್ನವರ್ ಈ ಕಂಪನಿ ಮಾಡತೊಡಗಿತು ಆಗ ಫೋರ್ಡ್ ಕಂಪನಿಯವರು ನಾವು ಒಂದು ರತ್ನವನ್ನು ಕಳೆದುಕೊಂಡೆವು ಎಂದು ಪಶ್ಚಾತಾಪ ಪಟ್ಟರು ನಮ್ಮನ್ನು ಯಾರು ತುಳಿಯುತ್ತಾರೋ ಅವರ ಮುಂದೆ ಉನ್ನತವಾಗಿ ಬದುಕಿ ತೋರಿಸೋಣ.
ಕೇಳದಿದ್ದರೆ ಬಲವಂತಾಗಿ
ಸಾಮಾನ್ಯ ವೈದ್ಯ ರೋಗಿಯನ್ನು ನೋಡಿ ತಪಾಸಣೆ ಮಾಡಿ ಯಾವ ಔಷಧಿ ನೀಡಬೇಕು ಎಂದು ಹೇಳಿ ಮಾತ್ರೆ ಬರೆದು ಕೊಡುತ್ತಾನೆ ಅಷ್ಟೆ ರೋಗಿಯು ಔಷಧಿ ಕುಡಿಯುತ್ತಾನೋ ಇಲ್ಲವೋ ಅದನ್ನು ವೈದ್ಯನು ನೋಡುವುದಿಲ್ಲ ಮಾಧ್ಯಮ ವೈದ್ಯನು ರೋಗಿಯ ನಾಡಿ ಮಿಡಿತವನ್ನು ಪರೀಕ್ಷೆ ಮಾಡಿ ಔಷಧಿಯನ್ನು ತಯಾರಿ ಮಾಡಿ ತಂದು ಕೊಡುತ್ತಾನೆ.
ಒಳ್ಳೆಯ ಮಾತುಗಳಿಂದ ಪ್ರೇರಣೆ ನೀಡಿ ಕುಡಿಯದಿದ್ದರೆ ಆರೋಗ್ಯ ಸುಧಾರಿಸುವುದಿಲ್ಲ ಎಂದು ದಯಮಾಡಿ ಕುಡಿಯಬೇಕು ಎಂದು ಪ್ರೀತಿಯಾಗಿ ನಯವಾಗಿ ಹೇಳುತ್ತಾನೆ ಉತ್ತಮ ವೈದ್ಯ ರೋಗಿಯನ್ನು ನೋಡಿ ಹೇಳುತ್ತಾನೆ ಮತ್ತೆ ಹೆದರಿಸಿ ಕೂಡ ಹೇಳುತ್ತಾನೆ ಕೇಳದಿದ್ದರೆ ಬಲವಂತಾಗಿ ಹಿಡಿದು ಕೈ ಕಟ್ಟಿ ಕಾಲುಕಟ್ಟಿ ಔಷಧಿಯನ್ನು ಕುಡಿಸುತ್ತಾನೆ.
ಇದೇ ರೀತಿ ಸಾಮಾನ್ಯ ಗುರುಗಳು ಶಿಷ್ಯರಿಗೆ ಉಪದೇಶ ನೀಡುತ್ತಾರೆ ಬಳಿಕ ಸಾಧನೆ ಮಾಡುತ್ತಿದ್ದಾನೋ ಇಲ್ಲವೋ ಗುರುಗಳು ನೋಡುವುದಿಲ್ಲ ಹೇಳುವುದಷ್ಟೆ ಇವರ ಕೆಲಸ ಮಾಧ್ಯಮ ಗುರು ಉಪದೇಶ ಕೊಡುತ್ತಾರೆ ಆ ಉಪದೇಶದಂತೆ ಆಚರಣೆ ಮಾಡುತ್ತಿದ್ದಾರೆಯೇ ಇಲ್ಲವೋ ಎಂಬುದರ ಬಗ್ಗೆ ಆಗಾಗ ಇತರರಿಂದ ಕೇಳುತ್ತಿರುತ್ತಾರೆ ಮತ್ತೆ ಪುನ ಪುನ ಮಾಡಲೇಬೇಕೆಂದು ಉಪದೇಶಗಳು ನೀಡುತ್ತಲೇ ಇರುತ್ತಾರೆ.
ಉತ್ತಮ ಗುರುವಾದವರು ಶಿಷ್ಯರು ಏನು ಮಾಡುತ್ತಿದ್ದಾರೆ ಮತ್ತು ನಿಯಮದ ಅನುಸಾರವಾಗಿ ಮಾಡುತ್ತಿದ್ದಾರೋ ಇಲ್ಲವೋ ಎಂದು ನೋಡಿ ತಾನೂ ಕೂಡ ಸಾಧನೆ ಮಾಡಿ ಅವರಿಗೂ ಕೂಡ ಸಾಧನೆ ಮಾಡಿಸುತ್ತಾರೆ. ಇಲ್ಲದಿದ್ದರೆ ಸಾಧನೆ ಮಾಡುವವರೆಗೂ ಬಿಡುವುದಿಲ್ಲ ಮತ್ತೆ ಅವರ ಗುರಿ ತಲುಪುವವರೆಗೂ ಅವರಿಗೆ ಬಿಡುಗಡೆ ಇಲ್ಲ. ಸಾಧಿಸಿದ ನಂತರ ಗುರುಗಳೆ ನಿಶ್ಚಿಂತೆಯಿಂದ ಇರುತ್ತಾರೆ
ಏನೇ ಹೇಳಿದರು ನಗುತ್ತಿದ್ದರು
ನಾಲ್ಕು ಋಷಿಗಳು ಯಾವಾಗಲೂ ಜೊತೆಯಲ್ಲಿಯೇ ಇರುತ್ತಿದ್ದರು ಎಲ್ಲಿ ಹೋದರು ಸಾಮಾನ್ಯವಾಗಿ ನಾಲ್ಕು ಜನರೇ ಹೋಗುತ್ತಿದ್ದರು ಊರಿನಲ್ಲಿ, ಹಳ್ಳಿಯಲ್ಲಿ, ಯಾರು ಸತ್ತರು ಏನೇ ಹೇಳಿದರು ನಗುತ್ತಿದ್ದರು.
ಇದನ್ನು ನೋಡುತ್ತಿದ್ದ ಕೆಲವರು ಋಷಿಗಳು ಹುಚ್ಚರೇ ಇರಬೇಕು ಎಂದು ಹೇಳುತ್ತಿದ್ದರು ಹಲವಾರು ವರ್ಷಗಳ ನಂತರ ಋಷಿಗಳಲ್ಲಿ ಒಬ್ಬ ಒಬ್ಬ ಸ್ನೇಹಿತನು ಸತ್ತು ಹೋದನು ಆಗಲೂ ಕೂಡ ಋಷಿಗಳು ನಗುವುದನ್ನು ಬಿಡಲಿಲ್ಲ.
ಋಷಿಗಳಿಗೆ ಕೇಳಿದರೆ ಹೇಳಿದರು ನಾವು ಪ್ರತಿಸಾರಿಯು ನಗುತ್ತಲೇ ಇರುತ್ತೇವೆ ಅವನು ಮೇಲಿನಿಂದ ನೋಡಿದರೂ ನಾವು ನಗುತ್ತಿದ್ದೇವೆ ಎನ್ನುವುದೇ ಅವನಿಗೆ ತಿಳಿಯಬೇಕು ಎಂದು ಹೇಳಿದರು.
ನಮ್ಮ ಬದುಕಿನಲ್ಲಿ ಯಾವಾಗ ಏನಾಗುತ್ತದೆ ಯಾರಿಗೆ ಗೊತ್ತು ಆದ್ದರಿಂದ ಇರುವಷ್ಟು ದಿನ ನಗುತ್ತಾ ನಗುತ್ತಾ ಇರೋಣ ಎಂದು ಹೇಳಿದರು.