ಅನಾಮತ್ತಾಗಿ ತೆಗೆದು ಬಿಸಾಕಿದರು

 ಒಬ್ಬ ವ್ಯಕ್ತಿ ಗಾಢವಾಗಿ ನಿದ್ರಿಸುತ್ತಿದ್ದ ಅವನಿಗೆ ಕನಸು ಬಿದ್ದಿತು ಒಂದು ಹಡಗಿನಲ್ಲಿ ಸಮುದ್ರ ಯಾನ ಮಾಡುತ್ತಿದ್ದಾನೆ ಎಲ್ಲರೂ ಏನೇನೂ ಮಾಡುತ್ತಿದ್ದರೆ ಹೇಗಿದೆ ಎಂದು ನೋಡೋಣವೆಂದು ಒಂದು ಕಡೆಯಿಂದ ತಿರುಗಾಡಲು ಶುರುಮಾಡಿದ ಮೊದಲು ಸಮುದ್ರವನ್ನು ನೋಡಿದ ಅತಿದೂಡ್ಡದಾದ ಸಮುದ್ರ ನಾಲ್ಕು ದಿಕ್ಕಿನಿಂದ ನೋಡಿದರೂ ಸಮುದ್ರ ಮತ್ತೆ ಆಕಾಶ ಸೇರಿದಂತೆಯೇ ಕಾಣಿಸುತ್ತಿದೆ ಈ ದೃಶ್ಯದಿಂದ ರೋಮಾಂಚನವಾಯಿತು.

 ನಂತರ ಎಲ್ಲರೂ ಏನು ಮಾಡುತ್ತಿದ್ದಾರೆ ಎಂದು ಒಂದೊಂದಾಗಿ ಗಮನಿಸೋಣ ಎಂದು ಗಮನಿಸುತ್ತಾ ಬಂದನು ಜನರು ಮಾತ್ರ ಗುಂಪು ಗುಂಪುಗಳಾಗಿ ಅವರೇ ಒಂದೂಂದು ಕೆಲಸಗಳಲ್ಲಿ ಮಗ್ನರಾಗಿದ್ದಾರೆ.

 ಎಲ್ಲರೂ ಕೂಡ ತಮ್ಮ ತಮ್ಮ ಕೆಲಸಗಳಲ್ಲಿ ತುಂಬಾನೇ ಮಗ್ನರಾಗಿದ್ದಾರೆ ಒಂದು ಗುಂಪಿನ ಹತ್ತಿರ ಹೋಗಿ ನೀವು ಏನು ಮಾಡುತ್ತಿದ್ದೀರಾ? ಎಂದು ಕೇಳಿದೆ ಅದರಲ್ಲಿ ಒಬ್ಬನು ಬಂದು ಇದು ನಿನಗೆ ತಿಳಿಯದು ಹೋಗು ಎಂದು ಬೈದನು ಮತ್ತೆ ಹಾಗೆ ಮುಂದೆ ಹೋದ ಅವರು ಕೂಡ ಅದೇ ರೀತಿ ಅವರವರ ಕೆಲಸಗಳನ್ನು ಮಾಡುತ್ತಿದ್ದಾರೆ.

ಇವನು ಹೋದರೆ ಯಾರು ಸೇರಿಸುತ್ತಿಲ್ಲ ಗುಂಪಿನಲ್ಲಿ ಒಬ್ಬನಿಗೆ ಆರೋಗ್ಯ ಸರಿಯಿರಲಿಲ್ಲ ಅವನನ್ನು ಆ ಕಡೆ ತಳ್ಳಿದರೂ ಮತ್ತೆ ಅವರ ಕೆಲಸ ಪ್ರಾರಂಭಿಸಿದರು. ಕೆಲಸ ಮಾತ್ರ ಯಾವುದೇ ಕಾರಣಕ್ಕೂ ನಿಲ್ಲುತ್ತಿಲ್ಲ ಗುಂಪಿನಲ್ಲಿ ಕೆಲಸ ಮಾಡುತ್ತಿದ್ದವರು.

 ಆ ವ್ಯಕ್ತಿಗೆ ಆರೋಗ್ಯ ಸರಿಯಿಲ್ಲ ನೋಡಬಹುದಲ್ಲ ಎಂದು ನಾನು ಕೇಳಿದಾಗ ಈ ರೀತಿ ಆಗಾಗ ಆಗುತ್ತಿರುತ್ತದೆ ಯಾರನ್ನು ನೋಡುವುದಕ್ಕೆ ನಮಗೆ ಸಾಧ್ಯವಿಲ್ಲ ಎಂದು ಹೇಳಿ ಮತ್ತೆ ತಮ್ಮ ಕೆಲಸಗಳನ್ನು ಮುಂದುವರೆಸುತ್ತಿದ್ದರು.

 ಹಾಗೆಯೇ ಮುಂದಕ್ಕೆ ಹೋದರೆ ಅಲ್ಲೂ ಅದೇ ರೀತಿ ಒಬ್ಬ ವ್ಯಕ್ತಿ ಸತ್ತುಹೋದ ಅವನಿಗೂ ಅಷ್ಟೆ ಸಮುದ್ರಕ್ಕೆ ಅನಾಮತ್ತಾಗಿ ತೆಗೆದು ಬಿಸಾಕಿದರು ಮತ್ತೆ ಅವರ ಕೆಲಸ ಮುಂದುವರಿಸಿದ್ದರು. ನೀವು ಈ ಕೆಲಸ ಮಾಡುತ್ತಿದ್ದಿರಲ್ಲಾ ಇದು ಎಕೆ? ಈ ಕೆಲಸ ಮಾಡಬೇಕು ಎಂದು ಕೇಳಿದೆ.

ಈ ಕೆಲಸಕ್ಕೆ ಅರ್ಥವಿದೆಯೇ? ಗುರಿ ಇದೆಯೇ? ಮತ್ತೆ ಹೋದವರು ಮತ್ತೆ ಬರುತ್ತಿಲ್ಲವಲ್ಲ ಏಕೆ ಹೀಗೆ ಎಂದು ಕೇಳಿದನು? ಅದರಲ್ಲಿ ಒಬ್ಬ ಹೇಳಿದ ನಮ್ಮ ಕೆಲಸವಂತೂ ನಿಲ್ಲಲ್ಲ ಕೆಲವು ಸಾರಿ ಒಬ್ಬರು ಬರುತ್ತಾರೆ ಇನ್ನೊಬ್ಬರು ಹೋಗುತ್ತಾರೆ.

 ಒಬ್ಬರಿಗೆ ಅನಾರೋಗ್ಯ ಕಾಡುತ್ತದೆ ಒಬ್ಬರಿಗೆ ಅಪಘಾತವಾಗುತ್ತದೆ ಒಬ್ಬರು ಅವರಾಗಿ ಹೋಗುತ್ತಾರೆ ಕೆಲವರಿಗೆ ಕೆಲವರು ಕರೆದುಕೊಂಡು ಹೋಗುತ್ತಾರೆ ಆದರೆ ಕೆಲಸವನ್ನಂತೂ ಮಗ್ನರಾಗಿ ಮಾಡುತಿರುತ್ತಾರೆ ಮತ್ತೆ ನನಗೆ ಇದು ಏನೂ ಅರ್ಥವಾಗಲಿಲ್ಲ ನಂತರ ಹಡಗಿನ ಮೇಲೆ ಬಂದು ನೋಡಿದ ಆವಾಗ ಎಲ್ಲಾ ಗುಂಪುಗಳು ಅವರವರ ಕೆಲಸಗಳನ್ನು ಮಾಡುತ್ತಲೇ ಇದ್ದಾರೆ.

 ಹಡಗು ಮಾತ್ರ ತನ್ನ ಪ್ರಯಾಣವನ್ನು ಮುಂದು ವರಿಸುತ್ತಲೇ ಇದೆ ನಾವು ಏನು ಮಾಡುತ್ತಿದ್ದೇವೆ ಏತಕ್ಕಾಗಿ ಮಾಡುತ್ತಿದ್ದೇವೆ ಇದರ ಅರ್ಥವೇನು? ಕೆಲವೊಂದು ಸಾರಿ ಒಂದೂ ಗೊತ್ತಾಗಲ್ಲ ಇದೆ ಬದುಕು ಅನ್ನಬಹುದೆ ಅಥವಾ ಇರಬಹುದೇ ಎಂದು ಯೋಚಿಸುತ್ತಿದ್ದನು ನಂತರ ಕಣ್ಣು ಬಿಟ್ಟನು ಆಗ ಇದು ಕನಸು ಎಂದು ಅರ್ಥವಾಯಿತು.

  ನೀವು ಧೈರ್ಯವಾಗಿ ಹೋಗಿ ಬನ್ನಿ

ಒಬ್ಬ ಮಧ್ಯ ವಯಸ್ಸಿನ ಯುವಕ ತಮ್ಮ ತಂದೆ ತಾಯಿಯರನ್ನು ಕರೆದುಕೊಂಡು ರೈಲ್ವೆ ನಿಲ್ದಾಣಕ್ಕೆ ಬಂದನು.  ತಂದೆ ತಾಯಿಯರ ಟಿಕೆಟ್ ಬುಕಿಂಗ್ ಆಗಿರುತ್ತದೆ ತನಗಾಗಿ ಫ್ಲಾಟ್ ಫಾರಂ ಟಿಕೆಟ್ ಅನ್ನು ಪಡೆದು ರೈಲು ಬಂದ ನಂತರ ತಂದೆ ತಾಯಿಯರ ಸೀಟ್ ಯಾವುದು ಎಂದು ಹುಡುಕಿ ಆ ಸೀಟ್ನಲ್ಲಿ ಕೂರಿಸಿ ರೈಲು ಹೋಗುವ ತನಕ ಕಾದು ನಂತರ ರೈಲ್ವೆ ನಿಲ್ದಾಣದ ಆಚೆ ಬರುತ್ತಾನೆ.

 ರೈಲ್ವೆ ನಿಲ್ದಾಣಕ್ಕೆ ಹೋಗಬೇಕಾದರೆ ಅಜ್ಜ ಅಜ್ಜಿಯರನ್ನು ನೋಡಿರುತ್ತಾನೆ ಆದರೂ ಅವರು ಅದೇ ಸ್ಥಳದಲ್ಲಿ ನಿಂತಿರುತ್ತಾರೆ. ಏಕೆ ಇವರು ನಿಂತಿದ್ದಾರೆ ಇರಲಿ ಮಾತನಾಡಿಸೋಣ ಎಂದು ಹೋಗಿ ಮಾತನಾಡಿಸುತ್ತಾನೆ ಬಹಳ ಸಮಯದಿಂದ ನೀವು ನಿಂತಿದ್ದೀರಿ ಏಕೆ ಎಂದು ಕೇಳಿದಾಗ ಅಜ್ಜ ಅಜ್ಜಿ ಹೇಳುತ್ತಾರೆ ನನ್ನ ಮಗ ಬರುತ್ತೇನೆ ಎಂದು ಹೇಳಿದನು ಆದರೆ ಮಗ ಬಂದಿಲ್ಲ ಫೋನ್ ಮಾಡುತ್ತಿದ್ದೇನೆ ಫೋನ್ ಸ್ವೀಕರಿಸುತ್ತಿಲ್ಲ ಎಂದಾಗ ಇವನು ಒಂದು ಸರಿ ಅವರ ಮೊಬೈಲ್ ನಿಂದಲೇ ಕಾಲ್ ಮಾಡುತ್ತಾನೆ.

 ಕಾಲ್ ಯಾರು ಸ್ವೀಕರಿಸುತ್ತಿಲ್ಲ ಇರಲಿ ಎಂದು ತನ್ನ ಮೊಬೈಲ್ ನಲ್ಲಿ ಆ ನಂಬರನ್ನು ಹಾಕಿ ಕಾಲ್ ಮಾಡುತ್ತಾನೆ ಹಲೋ ಎಂದು ಮಾತನಾಡುತ್ತಾರೆ ಅವರು ತುಂಬಾ ಆತಂಕದಲ್ಲಿ ಇರುವಂತೆ ತಿಳಿಯಿತು ಆಗ ಅಜ್ಜ ಅಜ್ಜಿ ಇಲ್ಲಿ ಇದ್ದಾರೆ ಮಗ ಬಂದಿಲ್ಲ ಎಂದು ಕಾಯುತ್ತಿದ್ದಾರೆ ಎಂದು ಹೇಳಿದಾಗ ಮಗನ ಹೆಂಡತಿ ಹೇಳಿದರು.

 ನಾವು ಅಜ್ಜ ಅಜ್ಜಿಗೆ ಕರೆಯಲು ಬರುತ್ತಿದ್ದೆವು ದಾರಿಯಲ್ಲಿ ಚಿಕ್ಕ ಅಪಘಾತ ಆಗಿದೆ ಆದ್ದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ ಸ್ವಲ್ಪ ಸಮಯದಿಂದ ಫೋನ್ ಬರುತ್ತಲೇ ಇದೆ ಏನು ಹೇಳಬೇಕು ಎಂದು ತಿಳಿಯುತ್ತಿಲ್ಲ.

ಬೇರೆ ನಂಬರ್ ನಿಂದ ಫೋನ್ ಬಂದಾಗ ಆಸ್ಪತ್ರೆಯಿಂದ ಯಾರಾದರೂ ಫೋನ್ ಮಾಡಿರಬಹುದು ಎಂದು ಫೋನನ್ನು ಅಟೆಂಡ್ ಮಾಡಿದೆ ಎಂದು ಹೇಳಿದರು ನನ್ನ ಗಂಡ ಆಸ್ಪತ್ರೆಯಲ್ಲಿ ಇದ್ದಾರೆ ಅವರು ರೈಲ್ವೆ ನಿಲ್ದಾಣದಲ್ಲಿ ಕಾಯುತ್ತಿದ್ದಾರೆ ನಾನು ಗೊಂದಲದಲ್ಲಿ ಸಿಲುಕಿಕೊಂಡಿದ್ದೇನೆ ಎಂದು ತನ್ನ ದುಃಖ ವ್ಯಕ್ತಪಡಿಸಿದರು.

 ಯುವಕ ಸಮಸ್ಯೆಯನ್ನು ಅರ್ಥಮಾಡಿಕೊಂಡನು ಆಗ ಯುವಕ ಅಜ್ಜ ಅಜ್ಜಿಗೆ ಹೇಳಿದ ನೀವು ಇಲ್ಲಿ ನಿಲ್ಲುವ ಬದಲು ಆ ಕಡೆ ನಿಲ್ಲಬೇಕಾಗಿತ್ತು ಸ್ವಲ್ಪ ವ್ಯತ್ಯಾಸವಾಗಿದೆ ನಿಮ್ಮ ಮಗ ನಿಮಗಾಗಿ ಬೇರೆ ಒಂದು ಕಾರನ್ನು ಕಳುಹಿಸಿದ್ದಾರೆ.

 ಅವರು ನಿಮಗಾಗಿ ಆ ಕಡೆ ಕಾಯುತ್ತಿದ್ದಾರೆ ನೀವು ಇಲ್ಲೇ ಇರಿ ನಾನು ಅವರನ್ನು ಕರೆದುಕೊಂಡು ಬರುತ್ತೇನೆ ಎಂದು ಟ್ಯಾಕ್ಸಿ ಸ್ಟಾಂಡ್ ಗೆ ಹೋಗಿ ಒಂದು ಟ್ಯಾಕ್ಸಿಯನ್ನು ಬಾಡಿಗೆಗೆ ಪಡೆದು ಟ್ಯಾಕ್ಸಿ ಡ್ರೈವರ್ ಗೆ ಹೇಳಿದನು ಅಜ್ಜ-ಅಜ್ಜಿ ಅವರ ಮಗ ಈಗಷ್ಟೇ ಅಪಘಾತದಲ್ಲಿ ಸಿಲುಕಿ ಆಸ್ಪತ್ರೆಯಲ್ಲಿ ದಾಖಲಾತಿ ಆಗಿದ್ದಾನೆ.

 ಆದ್ದರಿಂದ ದಯವಿಟ್ಟು ಅವರ ಮನೆಯ ಹತ್ತಿರ ಹೋಗಿ ಅವರ ಲಗೇಜ್ ಗಳನ್ನು ನೀವೇ ಇಟ್ಟು ಕೊಡಿ ಹಾಗೆ ಅವರು ಊಟ ಮಾಡಿಲ್ಲದಂತೆ ಕಾಣುತ್ತಿದೆ ಊಟಕ್ಕೆ ಸ್ವಲ್ಪ ದುಡ್ಡು ತೆಗೆದುಕೊಂಡು ಒಟ್ಟು ಎಷ್ಟಾಯ್ತು ಹೇಳಿ ಎಂದು ಹೇಳಿದಾಗ ಡ್ರೈವರ್ ಈ ಮಾತನ್ನು ಕೇಳಿದ ನಂತರ ಸ್ವಾಮಿ ನೀವು ಬಾಡಿಗೆಯ ಹಣವನ್ನು ಮಾತ್ರ ಕೊಡಿ ಅವರಿಗೆ ತಿಂಡಿ ಕಾಫಿಯ ಬಿಲ್ಲನ್ನು ನಾನು ಕೊಡುತ್ತೇನೆ ನೀವು ಧೈರ್ಯವಾಗಿ ಹೋಗಿ ಬನ್ನಿ ಎಂದು ಹೇಳಿದನು. 

ಇಲ್ಲಿ ನಾವು ಎರಡು ವಿಷಯಗಳನ್ನು ಗಮನಿಸಬಹುದು ಮಧ್ಯ ವಯಸ್ಸಿನ ಯುವಕ ಅವನಿಗೆ ಎಷ್ಟು ಸಾಧ್ಯವೊ ಅಷ್ಟು ಸಹಾಯ ಮಾಡಿದ ಅದೇ ಟ್ಯಾಕ್ಸಿ ಚಾಲಕನು ತನಗೆ ಎಷ್ಟು ಸಾಧ್ಯವೋ ಅಷ್ಟು ಸಹಾಯವನ್ನು ಮಾಡಿದ ಸಮಯ ಸಂದರ್ಭ ಸಿಕ್ಕಿದಾಗ ನಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಸಹಾಯ ಮಾಡೋಣ.

ನಾನೇ ಮಾಡಿದ್ದು ಸರಿ

ಒಬ್ಬ ಅಹಂಕಾರಿ ರಾಜ ಇದ್ದನು ಶಿಕ್ಷಣ, ಭಾಷೆ, ಧಾರ್ಮಿಕ ಕ್ಷೇತ್ರಗಳಲ್ಲಿ ಅಪಾರವಾದ ಪಾಂಡಿತ್ಯ ಜ್ಞಾನ ಹೊಂದಿದ್ದ ಆದರೆ ತನ್ನ ರಾಜ್ಯದ ಭದ್ರತೆ ಮತ್ತು ತನ್ನ ಸಾಮ್ರಾಜ್ಯವನ್ನು ವಿಸ್ತರಿಸಲು ಕೈಗೊಂಡ ಕೆಲವು ತಪ್ಪು ತೀರ್ಮಾನಗಳು.

ಕಾರಣ ಅವನಿಗಿದ್ದ ಒಂದೇ ಒಂದು ಮುಖ್ಯ ದೌರ್ಬಲ್ಯವೆಂದರೆ ಇತರರ ಸಲಹೆಗಳನಗನು ಕೇಳದೆ ನಾನೇ ಮಾಡಿದ್ದು ಸರಿ ಎನ್ನುವ ಮನೋಭಾವನೆ ಇತರರನ್ನು ದಿಕ್ಕರಿಸಿ ತನ್ನ ತೀರ್ಮಾನಗಳನ್ನು ಮಾತ್ರ ಚಾಲ್ತಿಗೆ ತಂದು ಮನಸಿಗೆ ಬಂದಂತೆ ದುರಂತ ಆಳ್ವಿಕೆ ನಡೆಸಿದನು.

ಮೊಟ್ಟ ಮೊದಲನೆಯದು ತನ್ನ ಸಾಮ್ರಜ್ಯದ ವ್ಯಾಪ್ತಿಯನ್ನು ವಿಸ್ತರಿಸುವುದಕ್ಕಾಗಿ ರಾಜ ತನ್ನ ರಾಜದಾನಿಯನ್ನು ದೆಹಲಿಯಿಂದ ತುಂಬ ದೂರದ ದೌಲತಾಬಾದಿಗೆ ವರ್ಗಾಯಿಸುವುದು ಎಂದು ಘೋಷಣೆ ನೀಡಿದ.

 ದೆಹಲಿಯಲ್ಲಿರುವ ಒಂದು ಭಾಗದ ಜನರನ್ನು ದೌಲತಾಬಾದಿಗೆ ಹೋಗುವಂತೆ ಹೇಳಿದ ರಾಜ ಪ್ರಬಲ ಸರ್ವಾಧಿಕಾರಿಯಾಗಿದ್ದರಿಂದ ಪ್ರಜೆಗಳು ಅವನ‌ ಕಟ್ಟಾಜ್ಞೆಗೆ ಮಣಿಯಲೇಬೇಕಾಯಿತು ಆ ಕಾಲದಲ್ಲಿ ಸಾರಿಗೆ ಸಂಪರ್ಕದ ವ್ಯವಸ್ಥೆ ಇಲ್ಲದ ಕಾರಣ ಜನರು ತುಂಬಾ ದೂರ ಕಾಲ್ನಡಿಗೆಯಲ್ಲಿ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಯಿತು.

ದೀರ್ಘಾ ಕಾಲ್ನಡಿಗೆಯ ಪ್ರಯಾಣದಲ್ಲಿ ದೌಲತಾಬಾದಿಗೆ ತಲುಪುವ ಮೊದಲೇ ಹಲವು ಜನರು ಅಸ್ವಸ್ಥಗೊಂಡು ಅನಾರೋಗ್ಯಕ್ಕೀಡಾದರು ಇನ್ನು ಹಲವರು ತಮ್ಮ ಪ್ರಾಣವನ್ನೇ ಕಳೆದುಕೊಂಡರು ಜನರ ಪರಿಸ್ಥಿತಿಯನ್ನು ಅರಿತ ರಾಜ ಯಾರ ಮಾತನ್ನು ಕೇಳದೆ ಮತ್ತೇ ಜನರನ್ನು ದೆಹಲಿಗೆ ಬರುವಂತೆ ಅಜ್ಞಾಪಿಸಿದ.

ಆಜ್ಞೆಯನ್ನು ಪಾಲಿಸಿದ ಪರಿಣಾಮದಿಂದ ಹಲವು ಜನರ ಸಾವು ನೋವುಗಳು ಕಂಡವು ಅಲ್ಲಿಗೆ ಆತನ ರಾಜ್ಯವನ್ನು ವಿಸ್ತರಿಸುವ ಎಲ್ಲಾ ಯೋಜನೆಗಳು ಕುಸಿದು ಬಿದ್ದವು. ಇಲ್ಲಿಯು ಅರ್ಥಮಾಡಿಕೊಳ್ಳದೆ ರಾಜ ನಾಣ್ಯವನ್ನು‌ ಬದಲಾಯಿಸುವ ಮಹತ್ತರವಾದ ತೀರ್ಮಾನವನ್ನು ಕೈಗೊಂಡನು.

 ಜನರಲ್ಲಿರುವ ಎಲ್ಲಾ ಚಿನ್ನ ಮತ್ತು ಬೆಳ್ಳಿಯನ್ನು ಹಿಂಪಡೆದು ರಾಜ್ಯವನ್ನು ಶ್ರೀಮಂತಗೊಳಿಸುವ ಇಚ್ಚೆಯಿಂದ ತಾಮ್ರದ ನಾಣ್ಯವನ್ನು ಚಲಾವಣೆಗೆ ತಂದು ತಾಮ್ರದ ಮೌಲ್ಯವು ಚಿನ್ನ ಮತ್ತು ಬೆಳ್ಳಿಯ ಮೌಲ್ಯಕ್ಕೆ ಸಮಾನವೆಂದು ಘೋಷಿಸಿಬಿಟ್ಟ.

 ಆದರೆ ಇಲಿ ಕಾಯುವುದಕ್ಕೆ ಬೆಕ್ಕನ್ನು ನೇಮಿಸಿದಂತೆ ಚಿನ್ನ ಮತ್ತು ಬೆಳ್ಳಿ ಜನರಿಂದ ವಾಪಾಸು ಪಡೆಯಲು ಸಾಧ್ಯವಾಗಲಿಲ್ಲ ಅದುದರಿಂದ ಈ ಯೋಜನೆಯು ಸಂಪೂರ್ಣವಾಗಿನಾಶವಾದವು. ಆ ಸಮಯದಲ್ಲಿ ಜನರಿಗೆ ತಾಮ್ರ ಬಹು ಸುಲಭವಾಗಿ ಕೈಗೆ ಸಿಗುತ್ತಿದ್ದರಿಂದ ನಕಲಿ ತಾಮ್ರದ ನಾಣ್ಯಗಳು ಅತಿ ಹೆಚ್ಚು ಶೇಖರಣೆಯಾಯಿತು.

ಜನರಲ್ಲಿರುವ ಯಾವುದೇ ಚಿನ್ನ ಮತ್ತು ಬೆಳ್ಳಿ ರಾಜನ ಖಜಾನೆ ಬರಲಿಲ್ಲ ಈ ಕಾರಣದಿಂದಾಗಿ ರಾಜನ ಖಜಾನೆ ಖಾಲಿಯಾಯಿತು ಪರಿಣಾಮ ಹಣದುಬ್ಬರ ಹೆಚ್ಚಾಗಿ ಆರ್ಥಿಕ ದುರಂತವನ್ನು ನೋಡುವಂತೆ ಆಯಿತು.

ಖಾಲಿಯಾದ ಖಜಾನೆಯನ್ನು ತುಂಬಲು ಮತ್ತು ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಲು ಜನರ ಮೇಲೆ ಹೆಚ್ಚು ಪ್ರಮಾಣದ ತೆರಿಗೆಯನ್ನು ವಿಧಿಸಿದ ಜನರು ತೆರಿಗೆ ಪಾವತಿಸಲು ಸಾಧ್ಯವಾಗದೇ ಕೃಷಿ ಮುಂತಾದ ಎಲ್ಲಾ ಕ್ಷೇತ್ರಗಳ ಉತ್ಪಾದನೆಯನ್ನು‌ ನಿಲ್ಲಿಸಿದರು.

ಆಗ ರಾಜನಿಗೆ ತನ್ನ‌ ತಪ್ಪು ಅರಿವಾಗತೊಡಗಿತು. ಆದರೆ ಪ್ರಯೋಜನವೇನು ದುರಂತದ ಆಳ್ವಿಕೆ ನಡೆದು ಹೋಗಿತ್ತು ನಿರ್ಧಾರ ತೆಗೆದು ಕೊಳ್ಳಬೇಕಾದರೆ ಅದಕ್ಕೆ ಸರಿಯಾಗಿ ಕೂಲಂಕುಷವಾಗಿ ಯೋಚಿಸಬೇಕು ಎಲ್ಲರಿಗೂ ಒಳ್ಳೆಯದಾಗಬೇಕು ಎನ್ನುವ ಉದ್ದೇಶ ಇದ್ದಾಗ ಎಲ್ಲರಿಗೂ ಒಳ್ಳೆಯದಾಗುತ್ತದೆ.

  ನಾನು ಶಾಲೆಗೆ ಹೋಗಲ್ಲ


ಕೆಲವು ಮಕ್ಕಳು ಶಾಲೆಗೆ ಹೋಗಬೇಕು ಎಂದು ಅಳುತ್ತಾರೆ ಇದೇ ರೀತಿ ಒಂದು ಹುಡುಗ ಶಾಲೆಗೆ ಹೋಗಬೇಕಾದರೆ ಅಳುತ್ತಿತ್ತು ಬಂದಾಗಲೂ ಆಳುತ್ತಿತ್ತು ನಾನು ಶಾಲೆಗೆ ಹೋಗಲ್ಲ ಎಂದಾಗ ಹಿರಿಯರು ಆ ವಿದ್ಯಾರ್ಥಿಯನ್ನು ಕರೆದು ನೀನು ಏಕೆ ಶಾಲೆಗೆ ಹೋಗಲು ಇಚ್ಛಿಸುವುದಿಲ್ಲ ಎಂದು ಕೇಳಿದರು.

 ವಿದ್ಯಾರ್ಥಿಯು ನಾನು ನನ್ನ ಶಾಲೆಯಲ್ಲಿ ಹೊಂದಿಕೊಂಡು ಹೋಗುವುದಕ್ಕೆ ಮತ್ತೆ ನನ್ನ ಸ್ನೇಹಿತರ ವರ್ತನೆಗಳು, ದುರಭ್ಯಾಸಗಳು, ನನಗೆ ಹಿಡಿಸುತ್ತಿಲ್ಲ ಆದುದರಿಂದ ನಾನು ಶಾಲೆಗೆ ಹೋಗಲು ಇಷ್ಟಪಡುವುದಿಲ್ಲಎಂದು ತನ್ನ ಮನಸ್ಸಿನ ತಳಮಳ ಹೇಳಿದನು.

 ಹಿರಿಯರು ಮಗೂ ವರ್ತನೆ ಹೇಗಾದರೂ ಇರಲಿ ನೀನು ನಿನ್ನ ಸುಖಕ್ಕಾಗಿ ನಿನ್ನ ನೆಮ್ಮದಿಯಾಗಿ ಖುಷಿಯಾಗಿ ಶಾಂತಿಯಾಗಿ ಇರಬೇಕೋ ಬೇಡವೋ ಹೇಳು? ಎಂದಾಗ ಇರಬೇಕು ಎಂದನು ಹಾಗಾದರೆ ನೀನು ಇತರರನ್ನು ಗಮಿನಿಬೇಡ ನೀನು ನಿನ್ನ ಸಂತೋಷಕ್ಕಾಗಿ ಶಾಂತಿಯಾಗಿ ಇರಬೇಕು ಎಂದು ಭಾವಿಸು.

 ಮಳೆ ಬಂದರೆ ಮಳೆಯನ್ನು ಬೈದರೆ ಏನು ಪ್ರಯೋಜನವಿಲ್ಲ ಅದರ ಬದಲಾಗಿ ಒಂದು ಛತ್ರಿಯನ್ನು ಹಿಡಿದುಕೊಂಡರೆ ಸಾಕು ಮಳೆ ಬೀಳುವುದಿಲ್ಲ. ಎಂದು ಪ್ರೀತಿಯಿಂದ ಹೇಳಿದರು ಆಗ ಹುಡುಗನಿಗೆ ಅರ್ಥವಾಯಿತು.

  ನಿನ್ನ ಉನ್ನತಿ ಅವನತಿ ನಿನ್ನ ಕೈಯಲ್ಲಿದೆ 

ಒಂದು ಸಾರಿ ಶಿಕ್ಷಕರು ಪಾಠ ಮಾಡುತ್ತಿದ್ದಾಗ ಒಬ್ಬ ಅತಿ ಬುದ್ಧಿವಂತ ವಿದ್ಯಾರ್ಥಿಯು ಬಂದು ಹೇಗಾದರೂ ಮಾಡಿ ಶಿಕ್ಷಕರನ್ನು ಸೋಲಿಸಬೇಕೆಂದು ಒಂದು ಉಪಾಯ ಹೂಡುತ್ತಾನೆ ಅದೇನೆಂದರೆ ಒಂದು ಪಕ್ಷಿಯನ್ನು ಕೈಯಲ್ಲಿ ಹಿಡಿದುಕೊಂಡು ಬಂದು ಈ ಪಕ್ಷಿ ಸತ್ತಿದೆಯೋ ಬದುಕಿದೆಯೋ ಹೇಳಿ ಎಂದು ಪ್ರಶ್ನೆ ಕೇಳುತ್ತಾನೆ.

 ಕೇಳುವಾಗಲೇ ಅವನ ಮನಸ್ಸಲ್ಲಿ ಒಂದು ವಿಚಾರ ಇಟ್ಟುಕೊಂಡಿರುತ್ತಾನೆ ಏನೆಂದರೆ ಕೈಯಲ್ಲಿದ್ದ ಪಕ್ಷಿಯು ಬದುಕಿದೆ ಎಂದರೆ ಮುಷ್ಟಿ ಬಿಗಿ ಮಾಡಿ ಸಾಯಿಸುವುದು ಸತ್ತಿದೆ ಎಂದರೆ ಹಾರಿಸಿಬಿಡುವುದು ಇವನ ಉದ್ದೇಶವಾಗಿರುತ್ತದೆ.

 ಆಗ ಶಿಕ್ಷಕರು ದೀರ್ಘವಾಗಿ ಯೋಚಿಸಿ ಪಕ್ಷಿಯನ್ನು ನೀನು ಹಿಡಿದಿದ್ದೀಯಾ ಅದರ ಬದುಕು ಸಾವು ನಿನ್ನ ಕೈಯಲ್ಲಿದೆ ನಿನ್ನ ಉನ್ನತಿ ಅವನತಿ ನಿನ್ನ ಕೈಯಲ್ಲಿದೆ 

ಯೋಚಿಸಿ ಏನು ಬೇಕೋ ಅದನ್ನು ಮಾಡು ಎನ್ನುತ್ತಾರೆ.

Leave a Comment